ನಂ-1ನಲ್ಲಿದ್ರೂ ಸೇಫ್ ಇಲ್ಲ RCB – PBKS & SRH ಪಂದ್ಯಗಳೇ ಅಗ್ನಿಪರೀಕ್ಷೆ
18+ ರೇಸ್ ನಲ್ಲಿ ಹೇಗಿದೆ ಜಿದ್ದಾಜಿದ್ದಿ?

ನಂ-1ನಲ್ಲಿದ್ರೂ ಸೇಫ್ ಇಲ್ಲ RCB – PBKS & SRH ಪಂದ್ಯಗಳೇ ಅಗ್ನಿಪರೀಕ್ಷೆ18+ ರೇಸ್ ನಲ್ಲಿ ಹೇಗಿದೆ ಜಿದ್ದಾಜಿದ್ದಿ?

ಪಾಯಿಂಟ್ಸ್ ಪಟ್ಟಿಯಲ್ಲಿ 16 ಅಂಕ.. ನೆಟ್ ರನ್ ರೇಟ್ ಬೆಂಕಿ. ಆದ್ರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್ಸ್ ಗೆ ಕ್ವಾಲಿಫೈ ಆಗಿಲ್ಲ. ಯಾಕಂದ್ರೆ ಇನ್ಮೇಲೆ ಇರೋದು ಅಸಲಿ ಆಟ. ಟಾಪ್-4 ರೇಸ್​ನಲ್ಲಿ ಇನ್ನೂ ಟಫ್ ಫೈಟ್ ಇದ್ದು 6 ತಂಡಗಳು ರೇಸ್​ನಲ್ಲಿವೆ. ಌಂಡ್ ಸ್ಟಿಲ್ ಈಗ್ಲೂ ಕೂಡ 18, 18 ಪ್ಲಸ್ ಅಂಕ ಪಡೆಯೋಕೆ 6 ತಂಡಗಳಿಗೆ ಚಾನ್ಸ್ ಇದೆ. ಇದೇ ಕಾರಣಕ್ಕೆ ಆರ್​ಸಿಬಿಗೆ ಇನ್ನೂ ಪ್ಲೇ ಆಫ್ಸ್ ಟಿಕೆಟ್ ಸಿಕ್ಕಿಲ್ಲ. ಸದ್ಯಕ್ಕೇನೋ ಆರ್​ಸಿಬಿ ಸೇಫ್ ಝೋನ್​ನಲ್ಲಿದ್ರೂ ಮುಂದಿನ ಎರಡು ಪಂದ್ಯಗಳೇ ಟಾಪ್-4 ಅಥವಾ ಟಾಪ್-2ನ ಅನ್ನೋದನ್ನ ಡಿಸೈಡ್ ಮಾಡುತ್ತೆ.

ಇದನ್ನೂ ಓದಿ : ಆರ್‌ಸಿಬಿ ಕಿಂಗ್ ವಿರಾಟ್ ಕೊಹ್ಲಿ ಭರ್ಜರಿ ಶತಕ – ರೋಹಿತ್ ಶರ್ಮಾ ಹಿಂದಿಕ್ಕಿದ ಕೊಹ್ಲಿ ಈಗ ನಂಬರ್-1

ಕೊಲ್ಕತ್ತಾ ವಿರುದ್ಧ ಗೆಲ್ಲೋ ಮೂಲಕ ಬೆಂಗಳೂರು ಟೀಂ ಮತ್ತೆ ನಂಬರ್ 1 ಪಟ್ಟಕ್ಕೇರಿದೆ. ಕ್ವಾಲಿಫೈಯರ್ 1ಗೆ ಕ್ವಾಲಿಫೈ ಆಗೋಕೆ ಇನ್ನೆರಡೇ ಹೆಜ್ಜೆ ಬಾಕಿ. ಆದ್ರೆ ಆ ಎರಡು ಹೆಜ್ಜೆಗಳು ಸುಲಭ ಇಲ್ಲ. ಯಾಕಂದ್ರೆ ಕಳೆದ ಮೂರು ಪಂದ್ಯಗಳಲ್ಲಿ ಆರ್​ಸಿಬಿ ಪ್ಲೇ ಆಫ್ ರೇಸ್​ನಲ್ಲಿ ಇಲ್ಲದೇ ಇರೋವ್ರ ಜೊತೆ ಪಂದ್ಯಗಳನ್ನ ಆಡಿತ್ತು. ಹೀಗಾಗಿ ಸೋತ್ರೂ ಗೆದ್ರೂ ದೊಡ್ಡ ಮ್ಯಾಟ್ರ್ ಆಗ್ತಿರಲಿಲ್ಲ. ಆದ್ರೆ ಮುಂದಿನ 2 ಪಂದ್ಯಗಳನ್ನ ಟಾಪ್-4 ರೇಸ್​ನಲ್ಲಿರೋ ತಂಡಗಳ ಜೊತೆ ಆಡ್ಬೇಕಿದೆ. ಹೀಗಾಗಿ ಆರ್​ಸಿಬಿ ಇಲ್ಲಿ ಎಡವಿದ್ರೆ ಅವ್ರು ಮೇಲೆ ಹೋಗ್ತಾರೆ ಆರ್​ಸಿಬಿ ಕೆಳಗೆ ಜಾರುತ್ತೆ. ಸೋ ಮುಂದಿನ ಪಂದ್ಯಗಳು ಈಗ ಮಾಡು ಇಲ್ಲವೇ ಮಡಿ ಎನ್ನುವಂತಾಗ್ತಿದೆ.

ಪಂಜಾಬ್ & ಹೈದ್ರಾಬಾದ್ ಬೇಟೆಯಾಡಿದ್ರೆ ಬೆಂಗಳೂರು ಟಾಪ್-1

ಸದ್ಯ ಕೊಲ್ಕತ್ತಾ ವಿರುದ್ಧ ಈ ಸೀಸನ್​ನಲ್ಲಿ ತನ್ನ 12ನೇ ಪಂದ್ಯ ಆಡಿ ಗೆದ್ದಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 16 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಲೀಗ್ ಹಂತದಲ್ಲಿ ಇನ್ನೆರಡು ಪಂದ್ಯಗಳು ಬಾಕಿ ಇದ್ದು ಮೇ 17ಕ್ಕೆ ಅಂದ್ರೆ ಇದೇ ಭಾನುವಾರ ಪಂಜಾಬ್ ವಿರುದ್ಧ ಹೈವೋಲ್ಟೇಜ್ ಮ್ಯಾಚ್ ಫಿಕ್ಸ್ ಆಗಿದೆ. ಈ ಸೀಸನ್​​ನಲ್ಲಿ ಉಭಯ ತಂಡಗಳು ಮೊದಲ ಬಾರಿಗೆ ಮುಖಾಮುಖಿಯಾಗಲಿವೆ. ಟಾಪ್-4 ಟಿಕೆಟ್​ನ ಟಫ್ ಕಂಟೆಂಡರ್ ಆಗಿರೋ ಪಂಜಾಬ್ ಪ್ರಸ್ತುತ 13 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಹೀಗಾಗಿ ಆರ್​ಸಿಬಿ ಪಂಜಾಬ್ ವಿರುದ್ಧ ಗೆದ್ರೆ ನಂಬರ್ 1 ಸ್ಥಾನದಲ್ಲೇ ಉಳಿಯಲಿದೆ. ಒಂದ್ವೇಳೆ ಎಡವಿದ್ರೆ ಪಂಜಾಬ್​ಗೆ ಅಡ್ವಾಂಟೇಜ್ ಆಗಲಿದೆ. ಇದಾದ ಬಳಿಕ ಮೇ 22ಕ್ಕೆ ಹೈದ್ರಾಬಾದ್ ವಿರುದ್ಧ ಆರ್​ಸಿಬಿ ಈ ಸೀಸನ್​ನ ಲೀಗ್ ಹಂತದ ಕೊನೇ ಮ್ಯಾಚ್ ಆಡಲಿದೆ. ಈ ಪಂದ್ಯ ಕೂಡ ಆರ್​ಸಿಬಿಗೆ ತುಂಬಾನೇ ಮುಖ್ಯ ಆಗುತ್ತೆ. ಯಾಕಂದ್ರೆ ಹೈದ್ರಾಬಾದ್ ಕೂಡ ಟಾಪ್-4ನಲ್ಲಿರೋ ಟಫ್ ಕಾಂಪಿಟೇಟರ್. ಹೈದ್ರಾಬಾದ್ ಪ್ರಸ್ತುತ ಅಂಕ ಪಟ್ಟಿಯಲ್ಲಿ 14 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. ಮುಂದಿನ ಎರಡೂ ಪಂದ್ಯಗಳನ್ನ ಗೆಲ್ಲೋ ಟಾರ್ಗೆಟ್​ನಲ್ಲೇ ಇರ್ತಾರೆ. ಹೀಗಾಗಿ ಆರ್​ಸಿಬಿ ಹೈದ್ರಾಬಾದ್​ನೂ ಸೋಲಿಸಿ ಮೊದಲ ಸ್ಥಾನದಲ್ಲೇ ಉಳೀಬೇಕು. ಌಂಡ್ ಇದೆಲ್ಲದ್ರ ನಡುವೆ ಟಾಪ್-4 ರೇಸ್​ಗೆ ಇನ್ನೂ ಸದ್ಯ 6 ತಂಡಗಳ ನಡುವೆ ಫೈಟ್ ಇದೆ.

ಟಾಪ್-4ಗೆ 6 ಟೀಂ ರೇಸ್!

ತಂಡ                             ಅಂಕ                     ಬಾಕಿ ಪಂದ್ಯ

ಬೆಂಗಳೂರು                       16                             2

ಗುಜರಾತ್                         16                            2

ಹೈದ್ರಾಬಾದ್                       14                          2

ಪಂಜಾಬ್                          13                           3

ಚೆನ್ನೈ                              12                                3

ರಾಜಸ್ಥಾನ                       12                             3

ಹೀಗೆ 6 ತಂಡಗಳು ಸದ್ಯ ಟಾಪ್-4 ರೇಸ್​ನಲ್ಲಿದ್ದಾರೆ. ಹಾಗೇ ಈ ಆರೂ ತಂಡಗಳಿಗೆ 18 ಅಥವಾ ಅದಕ್ಕಿಂತ ಜಾಸ್ತಿ ಅಂಕಗಳನ್ನ ಪಡೆಯೋಕೆ ಅವಕಾಶ ಇದೆ. ಹೈಯೆಸ್ಟ್ ಅಂದ್ರೆ 20 ಅಂಕ ಈ ಸೀಸನ್​ನಲ್ಲಿ ಆರ್​ಸಿಬಿ ಮತ್ತು ಗುಜರಾತ್​ಗೆ ಮಾತ್ರವೇ ಸದ್ಯಕ್ಕೆ 20 ಅಂಕ ಪಡೆಯೋಕೆ ಅವಕಾಶ ಇರುವಂಥದ್ದು. ಇನ್ನು 19 ಅಂಕ. ಪಂಜಾಬ್ ಮುಂದಿನ ಮೂರೂ ಮ್ಯಾಚ್ ಗೆದ್ರೆ 19 ಅಂಕ ಆಗುತ್ತೆ. ಉಳಿದಂತೆ ಹೈದ್ರಾಬಾದ್, ಚೆನ್ನೈ ಹಾಗೇ ರಾಜಸ್ಥಾನಕ್ಕೆ ಗರಿಷ್ಠ ಅಂದ್ರೆ 18 ಅಂಕಗಳನ್ನ ಪಡೆಯೋಕೆ ಅವಕಾಶ ಇದೆ. ಇದೇ ಕಾರಣಕ್ಕೆ ಅಂತಿಮ ರಿಸಲ್ಟ್ ಏನ್ ಬೇಕಾದ್ರೂ ಆಗೋ ಸಾಧ್ಯತೆಗಳು ಇರೋದ್ರಿಂದಲೇ ಆರ್​ಸಿಬಿ 16 ಅಂಕ ಇದ್ರೂ ಪ್ಳೇಆಫ್ಸ್​ಗೆ ಕ್ವಾಲಿಫೈ ಆಗಿಲ್ಲ. ಉಳಿದಂತೆ ಕೊಲ್ಕತ್ತಾ, ಲಕ್ನೋ, ಮುಂಬೈ ಹಾಗೇ ಡೆಲ್ಲಿ ತಂಡಗಳು ಪ್ಲೇಆಫ್ ಆಸೆ ಬಿಟ್ಟಾಗಿದೆ. ಇರೋ ಪಂದ್ಯಗಳನ್ನ ಔಪಚಾರಿಕವಾಗಿ ಮುಗಿಸಿ ನೆಕ್ಸ್​ಟ್ ಸೀಸನ್​ಗೆ ಹೇಗೆ ಸ್ಟ್ರಾಂಗ್ ಆಗಿ ಬರ್ಬೇಕು ಅಂತಾ ಪ್ಲ್ಯಾನ್​ನಲ್ಲಿದ್ದಾರೆ. ಒಟ್ನಲ್ಲಿ ಪ್ಲೇ ಆಫ್ಸ್ ರೇಸ್ ಇನ್ನೇನು ಕ್ಲೈಮ್ಯಾಕ್ಸ್ ಸ್ಟೇಜ್​ನಲ್ಲಿದ್ದು ನೆಕ್ಸ್ಟ್ ವೀಕ್​ನಲ್ಲಿ ಕಂಪ್ಲೀಟ್ ಪಿಕ್ಚರ್ ಸಿಗುತ್ತೆ.

Shantha Kumari

Leave a Reply

Your email address will not be published. Required fields are marked *