ನಿನ್ನ ಮತ್ತೆ ನೋಡುವ ತನಕ ಶಾಂತಿಯಿಲ್ಲ – ದಿಲೀಪ್ ರಾಜ್ ಅಗಲಿಕೆ ನಂತರ ಶ್ರೀವಿದ್ಯಾ ಮೊದಲ ಪೋಸ್ಟ್

ಸಾಯುವ ವಯಸ್ಸಲ್ಲ.. ಆದರೂ ವಿಧಿಯಾಟ. ನಟ, ನಿರ್ಮಾಪಕ ದಿಲೀಪ್ ರಾಜ್ ಇಹಲೋಕ ತ್ಯಜಿಸಿಯಾಗಿದೆ. ದಿಲೀಪ್ ರಾಜ್ ಪತ್ನಿ ದುಃಖದಲ್ಲಿದ್ದಾರೆ. ಈ ದುಃಖದ ನಡುವೆ ಶ್ರೀವಿದ್ಯಾ ಹಾಕಿರುವ ಪೋಸ್ಟ್ ಅಭಿಮಾನಿಗಳನ್ನು ಭಾವುಕರನ್ನಾಗಿಸಿದೆ.
ಇದನ್ನೂ ಓದಿ:ನಟ ದಿಲೀಪ್ ರಾಜ್ ಅಂತಿಮ ಕ್ಷಣಗಳು ಹೃದಯ ಹಿಂಡುವಂತಿದೆ – ಪತ್ನಿಯ ಹೋರಾಟಕ್ಕೂ ದೇವರು ಕರುಣೆ ತೋರಲೇ ಇಲ್ಲ
ಕನ್ನಡದ ಪ್ರತಿಭಾವಂತ ನಟ ದಿಲೀಪ್ ರಾಜ್ ಇನ್ನು ನೆನಪು ಮಾತ್ರ. ಸೀರಿಯಲ್ ಲೋಕದಲ್ಲಿ ನಿರ್ಮಾಪಕರಾಗಿಯೂ ಒಳ್ಳೆ ಹೆಸರು ಮಾಡಿರೋ ದಿಲೀಪ್ ಅವರನ್ನ ಕುಟುಂಬದವರು, ಸ್ನೇಹಿತರು, ಅಭಿಮಾನಿಗಳು ನೆನಪು ಮಾಡಿಕೊಳ್ಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ದಿಲೀಪ್ ರಾಜ್ ಬಗ್ಗೆ ಒಳ್ಳೊಳೆ ಪೋಸ್ಟ್‌ಗಳು ಹರಿದಾಡುತ್ತಿವೆ. ಇದೆಲ್ಲದರ ಮಧ್ಯೆ ದಿಲೀಪ್ ರಾಜ್ ಪತ್ನಿ ಶ್ರೀವಿದ್ಯಾ ಇನ್‌ಸ್ಟಾದಲ್ಲಿ ಹಾಕಿರುವ ಪೋಸ್ಟ್ ಭಾವುಕರನ್ನಾಗಿಸಿದೆ.
ದಿಲೀಪ್ ರಾಜ್ ಅಗಲಿಕೆಯ ನೋವಿನಲ್ಲೂ ಶ್ರೀವಿದ್ಯಾ ಒಂದು ಪೋಸ್ಟ್ ಹಾಕಿದ್ದಾರೆ. ದಿಲೀಪ್ ನಮ್ಮ ನಡುವೆ ಇರ್ತಾರೆ. ಅದು ಕಲೆ ಮತ್ತು ಸಿನಿಮಾಗಳ ರೂಪದಲ್ಲಿಯೇ ಇರ್ತಾರೆ. ದಿಲೀಪ್ ಅವರನ್ನ ಶಾಂತಿಯಿಂದಲೇ ಕಳಿಸಿಕೊಟ್ಟಿದ್ದೇನೆ. ಆದರೆ, ಒಂದು ವಿಷಯ ಹೇಳ್ಬೇಕು.ಇನ್ಮುಂದೆ ನಾನು ಹೊಸ ಜೀವನ ಕಟ್ಟಿಕೊಳ್ಳಲು ನಿರ್ಧರಿಸಿದ್ದೇನೆ. ಹಾಗಂತ ನನ್ನ ಮನಸ್ಸಿಗೆ ಶಾಂತಿ ಇದೆ ಅನ್ಕೋಬೇಡಿ. ದಿಲೀಪ್ ನನ್ನ ಮತ್ತೆ ನೋಡುವವರಗೂ ನನ್ನ ಮನಸ್ಸಿಗೆ ಶಾಂತಿ ಇಲ್ವೇ ಇಲ್ಲ. ದಿಲೀಪ್ ರಾಜ್ ಅವರನ್ನ ಕಳಿಸಿಕೊಡುವಲ್ಲಿ ಸಪೋರ್ಟ್ ಮಾಡಿರೋ ಪ್ರತಿಯೊಬ್ಬರಿಗೂ ನಾನು ಕೃತಜ್ಞಳಾಗಿದ್ದೇನೆ ಎಂದು ಶ್ರೀವಿದ್ಯಾ ಬರೆದುಕೊಂಡಿದ್ದಾರೆ
ದಿಲೀಪ್ ರಾಜ್ ಮತ್ತು ಶ್ರೀವಿದ್ಯಾ ಪ್ರೀತಿಸಿಯೇ ಮದುವೆ ಆದವರು. ದಿಲೀಪ್ ರಾಜ್ ಇಷ್ಟಪಡೋ ಮೊದಲೇ. ಶ್ರೀವಿದ್ಯಾ ಅವರು ದಿಲೀಪ್ ಅವರನ್ನ ತುಂಬಾನೆ ಇಷ್ಟಪಟ್ಟಿದ್ದರು. ದಿಲೀಪ್ ರಾಜ್ ಅವರನ್ನ ನಾನು ಇಷ್ಟಪಡ್ತೀನಿ ಅಂತ ಗೆಳೆತಿಯರು ಎದುರು ಕಾಲೇಜು ದಿನಗಳಲ್ಲಿಯೇ ಹೇಳಿದ್ದರು. ಆ ಪ್ರೀತಿಯನ್ನ ದಿಲೀಪ್ ರಾಜ್ ಒಪ್ಪಿಕೊಂಡಿದ್ದರು. ದಿಲೀಪ್ ರಾಜ್ ಮತ್ತು ಶ್ರೀವಿದ್ಯಾ ಮದುವೆ ಆದಾಗ ದಿಲೀಪ್‌ಗೆ 23 ವರ್ಷ ಆಗಿತ್ತು. ಶ್ರೀವಿದ್ಯಾ ಅವರಿಗೆ 21 ವರ್ಷ ಇತ್ತು. ಮದುವೆ ಆದಾಗ ಶ್ರೀವಿದ್ಯಾ ಕೆಲಸ ಮಾಡ್ತಾ ಇದ್ದರು. ದಿಲೀಪ್ ರಾಜ್ ಕಷ್ಟಪಡ್ತಾ ಇದ್ದರು. ಶ್ರೀವಿದ್ಯಾ ದುಡಿದ ದುಡ್ಡಿನಲ್ಲಿಯೇ ಜೀವನ ಸಾಗಿಸಿದ್ದೇನೆ ಅಂತಲೂ ದಿಲೀಪ್ ರಾಜ್ ಹೇಳಿಕೊಂಡಿದ್ದರು. ಒಟ್ಟಿನಲ್ಲಿ ಕಷ್ಟದಲ್ಲೂ ಸುಖದಲ್ಲೂ ಜೊತೆ ಜೊತೆಯಾಗಿ ಜೀವನ ಹಂಚಿಕೊಂಡಿರುವ ದಿಲೀಪ್ ರಾಜ್ ಮತ್ತು ಶ್ರೀವಿದ್ಯಾ ಬಾಳಲ್ಲಿ ವಿಧಿಯಾಟ ಆಡಿರುವುದು ನಿಜಕ್ಕೂ ನೋವು ನೀಡುವಂತದ್ದು.

ನೋಡಿರಿ

