ಗುಂಡಮ್ಮಗೆ ಮಾದಪ್ಪನ ರಕ್ಷೆ.. ಆಪರೇಷನ್‌ ಪಿಂಕಿ ಸಕ್ಸಸ್? – ಶಿವು ಖೆಡ್ಡಾದಲ್ಲಿ ಅಮ್ಮ – ಮಗ!

ಗುಂಡಮ್ಮಗೆ ಮಾದಪ್ಪನ ರಕ್ಷೆ.. ಆಪರೇಷನ್‌ ಪಿಂಕಿ ಸಕ್ಸಸ್? – ಶಿವು ಖೆಡ್ಡಾದಲ್ಲಿ ಅಮ್ಮ – ಮಗ!

ಜಿಮ್‌ ಸೀನಾ, ಲೀಲಾಳ ಇನ್ನೊಂದು ಮುಖ ಶಿವು ಮುಂದೆ ರಿವೀಲ್‌ ಆಗಿದೆ. ತಂಗಿಗೆ ಮೋಸ ಮಾಡಿ ಪಿಂಕಿಯನ್ನ ಮದ್ವೆಯಾಗಲು ಹೊರಟ ಸೀನಾ ಹಾಗೇ ಒಂದು ತುತ್ತು ಅನ್ನ ಕೊಡದೆ ಟಾರ್ಚರ್‌ ಕೊಡ್ತಿದ್ದ ಲೀಲಾ ವಿರುದ್ದ ಮಾರಿಗುಡಿ ಶಿವು ಕೆರಳಿ ಕೆಂಡವಾಗಿದ್ದಾನೆ. ಹೆಜ್ಜೆ ಹೆಜ್ಜೆಗೂ ಈ ಕುತಂತ್ರಿಗಳಿಗೆ ಬಿಸಿ ಮುಟ್ಟಿಸುತ್ತಿದ್ದಾನೆ. ಇದೀಗ ಪಿಂಕಿ ಜೀವನ ಸರಿ ಮಾಡಲು ಪಾರು ಸೈನ್ಯ ಕೂಡ ರೆಡಿಯಾಗಿದೆ. ಆಪರೇಷನ್‌ ಪಿಂಕಿ ಗ್ರೂಪ್‌ ಕೂಡ ಆಕ್ಟಿವ್‌ ಆಗಿದೆ.

ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ವರುಣನ ಮರಣ ಮೃದಂಗ! – ಮಳೆಯ ಆರ್ಭಟಕ್ಕೆ 74 ಮಂದಿ ಬಲಿ!

ಜೀ ಕನ್ನಡದಲ್ಲಿ ಪ್ರಸಾರವಾಗ್ತಿರುವ ಅಣ್ಣಯ್ಯ ಸೀರಿಯಲ್‌ ಈಗ ರೋಚಕ ತಿರುವು ಪಡೆದುಕೊಂಡಿದೆ. ಮುದ್ದಿನ ತಂಗಿಯಂದಿರಿಗೆ ಮದುವೆ ಮಾಡಿಸಿ ಅವರು ಖುಷಿಯಾಗಿರ್ಬೇಕು ಅಂತ ಶಿವು ಕನಸು ಕಂಡಿದ್ದ. ಆದ್ರೆ ಮೂವರ ಜೀವನವೂ ಒಂದೊಂದು ದಿಕ್ಕಲ್ಲಿದೆ. ಇದಕ್ಕೆ ಕಾರಣ ಪಾರು ತಂದೆ ವೀರಭದ್ರ. ಶಿವು ನೆಮ್ಮದಿಯಾಗಿ ಇರ್ಬಾರ್ದು ಅನ್ನೋ ಕಾರಣಕ್ಕೆ ಆತನ ತಂಗಿಯರ ಜೀವನದಲ್ಲೂ ಆಟವಾಡ್ತಿದ್ದಾನೆ. ಈತನ ಕುತಂತ್ರದಿಂದಾಗಿ ರಾಣಿ ಪೆದ್ದ ಮನುವನ್ನ ಮದುವೆಯಾಗಿ ಮಾಸ್ತಿಕೊಪ್ಪಲು ಅರಮನೆಯಲ್ಲಿ ನರಕ ಅನುಭವಿಸುತ್ತಿದ್ದಾಳೆ. ಮತ್ತೊಂದ್ಕಡೆ ರಶ್ಮಿ ಪರಶುವನ್ನ ಮದುವೆಯಾಗಿದ್ದಾಳೆ. ಪರಶು ಆಕೆಯ ಜೀವದ ಜೊತೆ ಚೆಲ್ಲಾಟವಾಡ್ತಿದ್ದಾಳೆ. ಆಕೆ ನರಳಿ ನರಳಿ ಸಾಯಬೇಕು ಅನ್ನೋದೇ ಆಕೆಯ ಗುರಿ. ಮತ್ತೊಂದ್ಕಡೆ ರಶ್ಮಿ ಸೀನಾನನ್ನ ಮದುವೆಯಾಗಿ ಮಾದಪ್ಪಣ್ಣನ ಮನೆಯಲ್ಲಿ ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿಯಲ್ಲಿದ್ದಾಳೆ. ಇದೀಗ ಮಾರಿಗುಡಿ ಶಿವುಗೆ ಗುಂಡಮ್ಮ ಜೀವನ ಕಹಿ ಸತ್ಯ ಗೊತ್ತಾಗಿದೆ. ಸೀನಾ ಪಿಂಕಿ ಲವ್‌ ಮ್ಯಾಟರ್, ಲೀಲಾ ಕೊಡ್ತಿರೋ ಟಾರ್ಚರ್‌ ಬಗ್ಗೆಯೂ ಗೊತ್ತಾಗಿದೆ.

ಹೌದು.. ರಶ್ಮಿ ಜೀವನದಲ್ಲಿ ಎಲ್ಲವೂ ಸರಿಯಿಲ್ಲ. ಜಿಮ್‌ ಸೀನಾ ಪಿಂಕಿಯನ್ನ ಮದುವೆಯಾಗಲು ಹೊರಟಿದ್ದೆಲ್ಲಾ ಶಿವುಗೆ ಗೊತ್ತಾಗಿದೆ. ಹೀಗಾಗಿ ಗುಂಡಮ್ಮನನ್ನು ಶಿವು ಮನೆಗೆ ಕರೆದುಕೊಂಡು ಹೋಗಿದ್ದ. ಆದ್ರೆ ರಶ್ಮಿ ಹಾಗೂ ಮಾದಪ್ಪಣ್ಣ ಶಿವು ಮನವೊಲಿಸಿ ಮತ್ತೆ ಗಂಡನ ಮನೆಗೆ ವಾಪಸ್ ಬಂದಿದ್ದಾಳೆ. ರಶ್ಮಿಯನ್ನ ಮಾದಪ್ಪಣ್ಣ ಅದ್ಧೂರಿಯಾಗಿ ಮನೆಗೆ ವೆಲ್‌ಕಮ್‌ ಮಾಡಿದ್ದಾನೆ. ಆದ್ರೀಗ ಶಿವುಗೆ ರಶ್ಮಿ ಒಂದು ತುತ್ತಿಗೂ ಪರದಾಡುತ್ತಿರುವ ವಿಚಾರ ಗೊತ್ತಾಗಿದೆ. ಲೀಲಾ ಗುಂಡಮ್ಮಗೆ ಊಟ ಕೊಡುತ್ತಿರಲಿಲ್ಲ ಆನ್ನೋ ವಿಚಾರ ಕೇಳಿದ್ದ ಶಿವು ರಕ್ತ ಕುದಿಯುತ್ತಿದೆ. ಸೀನಾ ಮನೆಗೆ ಮೂಟೆಯಲ್ಲಿ ಅಕ್ಕಿ, ಸಾಮಾಗ್ರಿಗಳನ್ನು ಕೊಡಿಸಿದ್ದಾನೆ. ನನ್ನ ತಂಗಿ ಉಪವಾಸದಿಂದ ಇರಬಾರದು ಅಂತ ಅಣ್ಣಯ್ಯ ಎಚ್ಚರಿಕೆ ಕೊಟ್ಟಿದ್ದಾನೆ. ಶಿವು ಸಿಟ್ಟು ನೋಡಿ ಲೀಲಾ ಭಯದಲ್ಲಿ ಗಡ ಗಡ ನಡುಗಿದ್ದಾಳೆ.

ಮತ್ತೊಂದ್ಕಡೆ ಸೀನಾ – ಪಿಂಕಿ ನಡುವಿನ ಪ್ರೇಮ ವಿಚಾರವು ಇದೀಗ ಎಲ್ಲರಿಗೂ ಗೊತ್ತಾಗಿದೆ. ಹೇಗಾದರೂ ಮಾಡಿ ಗುಂಡಮ್ಮನ ಜೀವನ ಸರಿಪಡಿಸಬೇಕು ಎಂದು ಎಲ್ಲರೂ ನಿರ್ಧರಿಸಿದ್ದಾರೆ. ಇದಕ್ಕೆ ಪಾರು ಆಪರೇಷನ್ ಪಿಂಕಿ ಶುರು ಮಾಡಿದ್ದಾಳೆ. ಗುಂಡು ಜೀವನ ಸರಿ ಮಾಡುವ ಉದ್ದೇಶದಿಂದ ರಶ್ಮಿ ಒಬ್ಬಳನ್ನು ಬಿಟ್ಟು ಉಳಿದ ನಾದಿನಿಯರೆಲ್ಲರನ್ನು ಸೇರಿಸಿಕೊಂಡು ವಾಟ್ಸ್ ಆ್ಯಪ್‌ ಗ್ರೂಪ್ ಕ್ರಿಯೆಟ್ ಮಾಡಿದ್ದಾಳೆ ಪಾರು. ಹೇಗಾದರೂ ಮಾಡಿ ಪಿಂಕಿ ಬಣ್ಣ ಬಯಲು ಮಾಡಬೇಕು, ಪಿಂಕಿ ಸೀನಾನ ಲವ್ ಮಾಡುತ್ತಿರುವುದು ನಿಜವಲ್ಲ. ಸೀನನ ಮೇಲಿ ಪಿಂಕಿಗೆ ನಿಜವಾಗಿಯೂ ಲವ್ ಇಲ್ಲ. ಸೀನ – ಮಾದಪ್ಪಣ್ಣನ ಆಸ್ತಿಗೋಸ್ಕರ ಪಿಂಕಿ ಪ್ರೀತಿಯ ನಾಟಕವಾಡುತ್ತಿದ್ದಾಳೆ. ಈ ವಿಷಯ ಮಾದಪ್ಪಣ್ಣನಿಗೂ ಗೊತ್ತಾಗಿದೆ. ಇದೀಗ ಈ ವಿಷಯದಲ್ಲಿ ಪಾರು ಆಪರೇಷನ್ ಪಿಂಕಿ ಎನ್ನುವ ಹೊಸ ಆಟ ಶುರು ಮಾಡಿದ್ದಾಳೆ. ಪಾರು ಅಖಾಡಕ್ಕೆ ಇಳಿದ್ಲು ಅಂದ್ರೆ ಈ ಆಪರೇಷನ್‌ ಸಕ್ಸಸ್‌ ಆದಂಗೆ ಲೆಕ್ಕ.

ಇನ್ನು ರಶ್ಮಿ ಗಂಡನ ಮನೆಯಲ್ಲಿ ಎಷ್ಟು ನರಕ ಅನುಭವಿಸಿದ್ರೂ ಆಕೆಗೆ ಮಾವ ಮಾದಪ್ಪಣ್ಣ ಶೀರಕ್ಷೆಯಾಗಿದ್ದಾನೆ. ಸೊಸೆಯನ್ನ ಮಗಳಾಗಿ ಕಾಣುತ್ತಿರುವ ಮಾದಪ್ಪಣ್ಣ ಆಕೆಗಾಗಿ ಮಗನನ್ನೇ ಎದುರು ಹಾಕಿಕೊಂಡಿದ್ದಾನೆ. ರಶ್ಮಿಯನ್ನ ಶಿವು ಮನೆಗೆ ವಾಪಾಸ್‌ ಕರೆದುಕೊಂಡು ಹೋಗಿದ್ದಾಗ ಮಾದಪ್ಪಣ್ಣ ಆಕೆಯನ್ನ ಮನೆಗೆ ಕಳುಹಿಸಿಕೊಡುವಂತೆ ಹೇಳಿದ್ದ. ಆಕೆಯನ್ನ ಮನೆಗೆ ಕಳುಹಿಸಿ ಕೊಡುವವರೆಗೂ ನಾನು ಇಲ್ಲಿಂದ ಹೋಗಲ್ಲ ಎಂದು ಮನೆ ಮುಂದೆ ಪ್ರತಿಭಟನೆ ಮಾಡಿದ್ದ. ಅಷ್ಟೇ ಅಲ್ಲ ಮತ್ತೆ ಬಾಗಿಲ್ಲಲ್ಲಿ ಸೇರು ಇಟ್ಟು ಸೊಸೆಯನ್ನ ಮನೆಗೆ ಕರೆಸಿಕೊಂಡಿದ್ದ. ಇದೀಗ ಮಾದಪ್ಪನನ್ನು ನೋಡಿ ವೀಕ್ಷಕರು ಖುಷಿಯಾಗಿದ್ದಾರೆ. ಇಂತಹ ಮಾವ ಎಲ್ಲರಿಗೂ ಸಿಗಬೇಕು. ಮಾವ ಎಂದರೆ ಸೊಸೆಯರ ಮುಂದೆ ಅಧಿಕಾರ ಚಲಾಯಿಸುವವರ ಮಧ್ಯೆ, ಮಾದಪ್ಪನಂತಹ ಸೊಸೆಗೆ ಸದಾ ಬೆಂಗಾವಲಾಗಿರುವ ಮಾವನನ್ನು ನೋಡಿ ವೀಕ್ಷಕರು ಸಂಭ್ರಮ ವ್ಯಕ್ತಪಡಿಸಿದ್ದಾರೆ.

Shwetha M

Leave a Reply

Your email address will not be published. Required fields are marked *