ಕಾಡಿನ ರಾಜ ಸಿಂಹ ಕಣೋ.. – ಆರ್‌ಸಿಬಿ ಕಾಲೆಳೆದು ತಾನೇ ಜಾರಿಬಿದ್ದ ಕೆಕೆಆರ್

ಕಾಡಿನ ರಾಜ ಸಿಂಹ ಕಣೋ.. – ಆರ್‌ಸಿಬಿ ಕಾಲೆಳೆದು ತಾನೇ ಜಾರಿಬಿದ್ದ ಕೆಕೆಆರ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ಪಂದ್ಯದ ಜೊತೆಗೆ ಟ್ರೋಲ್ ಕೂಡಾ ಸದ್ದು ಮಾಡುತ್ತಿದೆ. ಸೋಶಿಯಲ್ ಮೀಡಿಯಾದಲ್ಲೂ ಈ ಎರಡು ತಂಡಗಳ ಅಭಿಮಾನಿಗಳು ಹಾಗೂ ಫ್ರಾಂಚೈಸಿಗಳ ನಡುವೆ ವಾರ್ ನಡೆದಿದೆ. ಇದೀಗ ಕೆಕೆಆರ್‌ ಪಾಲಿಗೆ ಕರ್ಮ ರಿಟರ್ನ್ಸ್ ಅಂತಾರಲ್ಲ.. ಅದೇ ಆಗಿದೆ.

ಇದನ್ನೂ ಓದಿ:ಕೊಹ್ಲಿ ಕಿಚ್ಚಿಗೆ ಕೊಚ್ಚಿ ಹೋದ KKR – 49ರ ಟ್ರೋಲ್ ಗೆ RCB ರಿವೇಂಜ್

ಐಪಿಎಲ್​ನ 57ನೇ ಪಂದ್ಯಕ್ಕೂ ಮುನ್ನ ಕೊಲ್ಕತ್ತಾ ನೈಟ್ ರೈಡರ್ಸ್​ ತಂಡವು ಆರ್‌ಸಿಬಿಯನ್ನು ಕಾಲೆಳೆಯಲು ಹೈ-ಬಜೆಟ್ ಫಾರೆಸ್ಟ್ ಕಿಂಗ್ ಎಂಬ ಜಂಗಲ್ ಥೀಮ್ ಪ್ರೋಮೋ ಬಿಡುಗಡೆ ಮಾಡಿತ್ತು. ಈ ವಿಡಿಯೋದಲ್ಲಿ ಹುಲಿಯನ್ನು ಬಳಸಿಕೊಳ್ಳುವ ಮೂಲಕ ಯಾರು ಏನೇ ಹೇಳಿದರೂ, ಕಾಡಿನ ನಿಜವಾದ ರಾಜ ಯಾರು ಎಂಬುದು ಕಾಡಿಗೆ ಗೊತ್ತು ಎಂದು ಕೆಕೆಆರ್ ಕಾಲೆಳೆದಿತ್ತು. ಇಲ್ಲಿ ಹುಲಿಯನ್ನು ರೂಪಕವಾಗಿ ಬಳಸಿಕೊಂಡಿದ್ದು ಬೆಂಗಾಲ್ ಟೈಗರ್ಸ್​ ಎಂಬುದಾಗಿ. ಇನ್ನು ಕಾಡಿನ ನಿಜವಾದ ರಾಜ ಹುಲಿ ಎನ್ನಲು ಮುಖ್ಯ ಕಾರಣ ಆರ್​ಸಿಬಿ ಸಿಂಬಲ್ ಸಿಂಹ ಆಗಿರುವುದು. ಅಷ್ಟೇ ಅಲ್ಲದೆ ಈ ವಿಡಿಯೋದಲ್ಲಿ 49 ಸಂಖ್ಯೆಯನ್ನು ತೋರಿಸುವ ಮೂಲಕ ಆರ್​ಸಿಬಿಯ ಹೀನಾಯ ದಾಖಲೆಯನ್ನು ಕೂಡಾ ಕೆಕೆಆರ್ ಹೀಯಾಳಿಸಿತ್ತು. ಇಷ್ಟಕ್ಕೆ ಬಿಟ್ಟಿಲ್ಲ ಕೆಕೆಆರ್. ಎದುರಾಳಿ ತಂಡ ಎಷ್ಟೇ ಬಲಿಷ್ಠವಾಗಿದ್ದರೂ, ಅವರ ಅಬ್ಬರಕ್ಕೆ ತಾನು ಹೆದರುವುದಿಲ್ಲ. ಕಾಡಿನ ರಾಜ ಯಾರೆಂಬುದು ಗೊತ್ತಿದೆ. ಈ ಬೇಟೆಯೊಂದಿಗೆ ಪ್ಲೇಆಫ್​ಗೇರುತ್ತೇವೆ ಎಂದು ಆರ್​ಸಿಬಿಗೆ ಸವಾಲು ಹಾಕುವ ಮೂಲಕ ಜಂಭ ಕೊಚ್ಚಿಕೊಂಡಿತ್ತು.

ಇದಕ್ಕೆ ಉತ್ತರ ಆರ್‌ಸಿಬಿ ಪಂದ್ಯ ಗೆಲ್ಲುವ ಮೂಲಕ ನೀಡಿದೆ. ಆರ್‌ಸಿಬಿ ಕಿಂಗ್ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಕೆಕೆಆರ್ ಅಹಂಕಾರವನ್ನು ಧೂಳೀಪಟ ಮಾಡಿದ್ದಾರೆ. ಪಂದ್ಯ ಮುಗಿಯುತ್ತಿದ್ದಂತೆ ಆರ್‌ಸಿಬಿ ಅಭಿಮಾನಿಗಳು ಕೆಕೆಆರ್‌ಗೆ ಕರ್ಮದ ಪಾಠ ಕಲಿಸಿದ್ದಾರೆ. ಕೆಕೆಆರ್ ಮೀಡಿಯಾ ತಂಡ ಪ್ರೋಮೋ ಮಾಡುವುದರಲ್ಲಿ ಬ್ಯುಸಿಯಾಗಿದ್ದರೆ, ಆರ್‌ಸಿಬಿ ಪಂದ್ಯ ಗೆಲ್ಲುವುದರಲ್ಲಿ ಬ್ಯುಸಿಯಾಗಿದೆ ಎಂದು ಅಭಿಮಾನಿಗಳು ಕಾಲೆಳೆದಿದ್ದಾರೆ. ಅಷ್ಟೇ ಅಲ್ಲದೆ ಆರ್​ಸಿಬಿ ಸೋಷಿಯಲ್ ಮೀಡಿಯಾದಲ್ಲಿ ಸಿಂಹ ನೈಟ್ ರೈಡರ್ಸ್​ ಅನ್ನು ಭೇಟೆಯಾಡಿರುವ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಕಾಡಿನ ರಾಜ ಸಿಂಹನೇ ಎಂದು ಕೆಕೆಆರ್ ಕಾಲೆಳೆದಿದ್ದಾರೆ. ಇದರ ಜೊತೆಗೆ  “ಮುಂದಿನ ವರ್ಷವಾದರೂ ಈ ದಶಕಕ್ಕೆ ಹೊಂದುವಂತಹ ಹೊಸ ಡೈಲಾಗ್ ಅಥವಾ ಮ್ಯಾಟರ್‌ಗಳ ಜೊತೆ ಬನ್ನಿ. ಕೆಕೆಆರ್​ ಇನ್ನು ಹಳೆಯ ಇತಿಹಾಸ ಮತ್ತು ಹಳೇ ಡೈಲಾಗ್‌ಗಳನ್ನೇ ನಂಬಿಕೊಂಡಿದೆ ಎಂದು RCB ಲೇವಡಿ ಮಾಡಿದೆ.

Sulekha

Leave a Reply

Your email address will not be published. Required fields are marked *