ರೋಹಿತ್ ಹಿಂದಿಕ್ಕಿದ ಕೊಹ್ಲಿ NO-1 – DC, LSG ತಂಡಕ್ಕೆ ಹೊಸ ನಾಯಕರ ಹುಡುಕಾಟ

ರೋಹಿತ್ ಹಿಂದಿಕ್ಕಿದ ಕೊಹ್ಲಿ NO-1  –  DC, LSG ತಂಡಕ್ಕೆ ಹೊಸ ನಾಯಕರ ಹುಡುಕಾಟ
xr:d:DAFsKnoJtM8:1589,j:207587947998359394,t:24032111

ಆರ್‌ಸಿಬಿ ಕಿಂಗ್ ವಿರಾಟ್ ಕೊಹ್ಲಿ ಇದೀಗ ನಂಬರ್ ಒನ್ ಆಗಿ ಮಿಂಚಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಮತ್ತು ರೋಹಿತ್ ಶರ್ಮಾರನ್ನು ಹಿಂದಿಕ್ಕಿದ್ದಾರೆ. ಮತ್ತೊಂದೆಡೆ ಡಿಸಿ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಪ್ರಾಂಚೈಸಿ ನಾಯಕನ ಬದಲಾವಣೆಗೆ ಮುಂದಾಗಿವೆ.

ಇದನ್ನೂ ಓದಿ:

ಐಪಿಎಲ್​​ನಲ್ಲಿ ಆರ್‌ಸಿಬಿ ಕಿಂಗ್ ವಿರಾಟ್ ಕೊಹ್ಲಿ ಚರಿತ್ರೆ ಸೃಷ್ಟಿಸಿದ್ದಾರೆ. ವಿರಾಟ್ ಕೊಹ್ಲಿ ತಮ್ಮ 279ನೇ ಐಪಿಎಲ್ ಪಂದ್ಯವನ್ನು ಆಡುವ ಮೂಲಕ ಮಹೇಂದ್ರ ಸಿಂಗ್ ಧೋನಿ ಮತ್ತು ರೋಹಿತ್ ಶರ್ಮಾರನ್ನು ಹಿಂದಿಕ್ಕಿದ್ದಾರೆ. ಧೋನಿ ಮತ್ತು ರೋಹಿತ್ 278 ಪಂದ್ಯಗಳೊಂದಿಗೆ ಜಂಟಿ ಅಗ್ರಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ ಈಗ 279 ಪಂದ್ಯಗಳೊಂದಿಗೆ ಐಪಿಎಲ್‌ನ ಕಿಂಗ್ ಆಗಿ ಹೊರಹೊಮ್ಮಿದ್ದಾರೆ.

ವಿರಾಟ್ ಕೊಹ್ಲಿ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ 9,000 ರನ್ ಗಳಿಸಿದ್ದು, ಈ ಮೈಲಿಗಲ್ಲು ತಲುಪಿದ ಏಕೈಕ ಬ್ಯಾಟ್ಸ್‌ಮನ್ ಆಗಿದ್ದಾರೆ. ಬೇರೆ ಯಾವುದೇ ಆಟಗಾರ 8,000 ರನ್‌ಗಳನ್ನು ತಲುಪಿಲ್ಲ. ವಿರಾಟ್ ಕೊಹ್ಲಿ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಎಂಟು ಶತಕಗಳು ಮತ್ತು 66 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಇದರೊಂದಿಗೆ ಅತಿ ಹೆಚ್ಚು ಶತಕಗಳು ಮತ್ತು ಅರ್ಧಶತಕಗಳ ವಿಚಾರದಲ್ಲಿಯೂ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ.

KKR ವಿರುದ್ಧ ಗೆಲವಿನ ನಂತರ ಮಾತನಾಡಿದ RCB ನಾಯಕ ರಜತ್ ಪಾಟಿದಾರ್ ರನ್ ಮೆಷೀನ್ ಕೊಹ್ಲಿ ಬಗ್ಗೆ ಹೆಮ್ಮೆಯಿಂದ ಮಾತಾಡಿದ್ದಾರೆ. ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನಕ್ಕೇರಿರುವುದು ಇಡೀ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ವಿರಾಟ್ ಕೊಹ್ಲಿ ಅವರ ಆಟವನ್ನು ವರ್ಣಿಸಲು, ಹೊಗಳಲು ನನ್ನ ಬಳಿ ಪದಗಳೇ ಇಲ್ಲ. ಸದಾ ತಂಡಕ್ಕಾಗಿ ದೊಡ್ಡ ಇನಿಂಗ್ಸ್ ಆಡುವುದು ಅವರಿಗೆ ರೂಢಿ ಎಂದು ಹೇಳುವ ಮೂಲಕ ವಿರಾಟ್ ರನ್ನ ಕೊಂಡಾಡಿದ್ದಾರೆ ರಜತ್ ಪಾಟೀದಾರ್.

ಕೆಕೆಆರ್ ತಂಡದ ಮನೀಶ್ ಪಾಂಡೆ ಅವರ ಸ್ಟನ್ನಿಂಗ್ ಕ್ಯಾಚ್ ನೋಡಿ ಸ್ವತಃ ಕ್ರಿಕೆಟ್ ಕಿಂಗ್ ವಿರಾಟ್ ಕೊಹ್ಲಿಯೇ ರೋಮಾಂಚನ ಗೊಂಡಿದ್ದಾರೆ. ಮನೀಷ್ ಪಾಂಡೆ ಸೂಪರ್‌ಮ್ಯಾನ್ ಸಾಹಸಕ್ಕೆ ನಾನ್-ಸ್ಟ್ರೈಕರ್ ಎಂಡ್‌ನಲ್ಲಿದ್ದ ವಿರಾಟ್ ಕೊಹ್ಲಿ ದಿಗ್ಭ್ರಮೆಗೊಂಡರು. ಟಿಮ್ ಡೇವಿಡ್ ಅವರು ಬಾರಿಸಿದ ಚೆಂಡನ್ನು ಫೀಲ್ಡಿಂಗ್ ಮಾಡುತ್ತಿದ್ದ ಪಾಂಡೆ, ಕೇವಲ ಸೆಕೆಂಡ್ ವೊಳಗೆ ಗಾಳಿಯಲ್ಲಿ ಜಿಗಿದು ಒಂದು ಕೈಯಿಂದಲೇ ಹಿಡಿದಿದ್ದರು.

ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಮುಖಾಮುಖಿಗೆ ಕೌಂಟ್‌ಡೌನ್ ಶುರುವಾಗಿದೆ. ಸತತ ನಾಲ್ಕು ಸೋಲುಗಳಿಂದ ಕಂಗೆಟ್ಟಿರುವ ಶ್ರೇಯಸ್ ಅಯ್ಯರ್ ನೇತೃತ್ವದ ಪಂಜಾಬ್‌ಗೆ ಪ್ಲೇ-ಆಫ್ ಆಸೆ ಜೀವಂತವಾಗಿರಿಸಲು ಈ ಗೆಲುವು ಅನಿವಾರ್ಯ. ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ಮುಂಬೈ, ತಮ್ಮ ಮರ್ಯಾದೆ ಉಳಿಸಿಕೊಳ್ಳಲು ಗೆಲ್ಲಲೇಬೇಕಿದೆ. ಧರ್ಮಶಾಲಾದಲ್ಲಿ ಈ ಪಂದ್ಯ ನಡೆಯಲಿದ್ದು, ಮುಂಬೈ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಈ ಪಂದ್ಯದಿಂದಲೂ ಹೊರಗುಳಿದಿದ್ದಾರೆ.

ಪಂದ್ಯಕ್ಕೂ ಮುನ್ನ ಕೆಕೆಆರ್ ಆರ್‌ಸಿಬಿ ಕಾಲೆಳೆಯಲು ಹೈ-ಬಜೆಟ್ ‘ಫಾರೆಸ್ಟ್ ಕಿಂಗ್’ ಎಂಬ ಜಂಗಲ್ ಥೀಮ್ ಪ್ರೋಮೋ ಬಿಡುಗಡೆ ಮಾಡಿತ್ತು. ಈ ವಿಡಿಯೋದಲ್ಲಿ ಹುಲಿಯನ್ನು ಬಳಸಿಕೊಳ್ಳುವ ಮೂಲಕ ಯಾರು ಏನೇ ಹೇಳಿದರೂ, ಕಾಡಿನ ನಿಜವಾದ ರಾಜ ಯಾರು ಎಂಬುದು ಕಾಡಿಗೆ ಗೊತ್ತು ಎಂದು  ಕೆಕೆಆರ್ ಸ್ಪಷ್ಟ ಸಂದೇಶ ನೀಡಿದ್ದರು. ಈ ವಿಡಿಯೋದಲ್ಲಿ 49 ಸಂಖ್ಯೆಯನ್ನು ತೋರಿಸುವ ಮೂಲಕ ಆರ್​ಸಿಬಿಯ ಹೀನಾಯ ದಾಖಲೆಯನ್ನು ಹೀಯಾಳಿಸಿದ್ದರು. ಇದಕ್ಕೀಗ ಆರ್‌ಸಿಬಿ ತನ್ನ ಸೋಶಿಯಲ್ ಮೀಡಿಯಾದಲ್ಲಿ ಸರಿಯಾದ ತಿರುಗೇಟು ನೀಡಿದೆ.

ಇನ್ನು ಕೆಕೆಆರ್ ಸೋತ ಬಳಿಕ ಕರ್ಮ ರಿಟರ್ನ್ಸ್ ಅನ್ನೋ ಹಾಗೆ ಆರ್‌ಸಿಬಿ ಸರಿಯಾಗಿಯೇ ಕಾಲೆಳೆದಿದೆ. ಕೆಕೆಆರ್ , ತಂಡ ಎಷ್ಟೇ ಬಲಿಷ್ಠವಾಗಿದ್ದರೂ, ಅವರ ಅಬ್ಬರಕ್ಕೆ ತಾನು ಹೆದರುವುದಿಲ್ಲ. ಕಾಡಿನ ರಾಜ ಯಾರೆಂಬುದು ಗೊತ್ತಿದೆ. ಈ ಬೇಟೆಯೊಂದಿಗೆ ಪ್ಲೇಆಫ್​ಗೇರುತ್ತೇವೆ ಎಂದು ಜಂಭ ಕೊಚ್ಚಿಕೊಂಡಿತ್ತು. ಇತ್ತ ಪಂದ್ಯ ಮುಗಿಯುತ್ತಿದ್ದಂತೆ ಆರ್​ಸಿಬಿ ಸೋಷಿಯಲ್ ಮೀಡಿಯಾದಲ್ಲಿ ಸಿಂಹ ನೈಟ್ ರೈಡರ್ಸ್​ ಅನ್ನು ಭೇಟೆಯಾಡಿರುವ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಕಾಡಿನ ರಾಜ ಸಿಂಹನೇ ಎಂದು ಕೆಕೆಆರ್ ಗೆ ತಕ್ಕ ತಿರುಗೇಟು ನೀಡಿದೆ ಆರ್‌ಸಿಬಿ.

ಇನ್ನು ಕೆಕೆಆರ್‌ಗೆ ಆರ್‌ಸಿಬಿ ಫ್ಯಾನ್ಸ್ ಜೊತೆಗೆ ಆರ್‌ಸಿಬಿ ಸೋಶಿಯಲ್ ಮೀಡಿಯಾದಲ್ಲಿ ಸರಿಯಾಗಿಯೇ ಟಕ್ಕರ್ ಕೊಡಲಾಗಿದೆ. ಅಷ್ಟೇ ಅಲ್ಲ ಮುಂದಿನ ವರ್ಷಕ್ಕೂ ಯಾವ ರೀತಿ ಟ್ರೋಲ್ ಮಾಡ್ಬೇಕು ಅನ್ನೋದನ್ನು ಆರ್‌ಸಿಬಿಯೇ ಕೆಕೆಆರ್‌ಗೆ ಹೇಳಿಕೊಡುವ ಮೂಲಕ ತಕ್ಕ ಉತ್ತರ ನೀಡಿದೆ. “ಮುಂದಿನ ವರ್ಷವಾದರೂ ಈ ದಶಕಕ್ಕೆ ಹೊಂದುವಂತಹ ಹೊಸ ಡೈಲಾಗ್ ಅಥವಾ ಮ್ಯಾಟರ್‌ಗಳ ಜೊತೆ ಬನ್ನಿ. ಕೆಕೆಆರ್​ ಇನ್ನು ಹಳೆಯ ಇತಿಹಾಸ ಮತ್ತು ಹಳೇ ಡೈಲಾಗ್‌ಗಳನ್ನೇ ನಂಬಿಕೊಂಡಿದೆ ಎಂದು RCB ಲೇವಡಿ ಮಾಡಿದೆ.

ಲಕ್ನೋ ಮತ್ತು ಡಿಸಿ ತಂಡಗಳ ಮಾಲೀಕರು ಹೊಸ ನಾಯಕನ ಹುಡುಕಾಟದಲ್ಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಲಕ್ನೋ ತಂಡದ ಕ್ಯಾಪ್ಟನ್ ರಿಷಭ್ ಪಂತ್ ಗೆ ಗೇಟ್‌ಪಾಸ್ ಸಿಗಲಿದೆ ಎಂದು ಹೇಳಲಾಗ್ತಿದೆ. ಮುಂದಿನ ಸೀಸನ್‌ನಲ್ಲಿ ಲಕ್ನೋ ತಂಡಕ್ಕೆ ಹೊಸ ನಾಯಕನ ಆಯ್ಕೆ ಮಾಡಲಾಗ್ತಿದೆ. ಮತ್ತೊಂದೆಡೆ ಡೆಲ್ಲಿ ಕೂಡಾ ನಾಯಕನ ಬದಲಾವಣೆಗೆ ಮುಂದಾಗಿದೆ. ಡಿಸಿ ತಂಡದ ಕ್ಯಾಪ್ಟನ್ ಆಗಿ ಅಕ್ಷರ್ ಪಟೇಲ್ ಈ ಬಾರಿ ಕಳಪೆ ಫಾರ್ಮ್ ಪ್ರದರ್ಶನ ತೋರಿದ್ದರು.

ಸಿಎಸ್​​ಕೆ ತಂಡದಲ್ಲಿ ಕರ್ನಾಟಕದ ಕ್ರಿಕೆಟಿಗನಿಗೆ ಚಾನ್ಸ್ ಸಿಕ್ಕಿದೆ. ಗಾಯಗೊಂಡ ಯುವ ವೇಗಿ ರಾಮಕೃಷ್ಣ ಘೋಷ್ ಬದಲಿಗೆ ಕರ್ನಾಟಕದ ಆಲ್‌ರೌಂಡರ್ ಮೆಕ್‌ನೀಲ್ ಹ್ಯಾಡ್ಲಿ ನೊರೊನ್ಹಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. 24 ವರ್ಷದ ಮೆಕ್‌ನೀಲ್ ನೊರೊನ್ಹಾ ಆಲ್‌ರೌಂಡರ್ ಆಗಿದ್ದು, ಮಹಾರಾಜ ಟ್ರೋಫಿಯಲ್ಲಿ ಮಂಗಳೂರು ಡ್ರಾಗನ್ಸ್ ಮತ್ತು ಗುಲ್ಬರ್ಗಾ ಮಿಸ್ಟಿಕ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ.

 

Sulekha

Leave a Reply

Your email address will not be published. Required fields are marked *