ಆರ್‌ಸಿಬಿ ಕಿಂಗ್ ವಿರಾಟ್ ಕೊಹ್ಲಿ ಭರ್ಜರಿ ಶತಕ – ರೋಹಿತ್ ಶರ್ಮಾ ಹಿಂದಿಕ್ಕಿದ ಕೊಹ್ಲಿ ಈಗ ನಂಬರ್-1

ಐಪಿಎಲ್ನಲ್ಲಿ ಆರ್‌ಸಿಬಿ ಕಿಂಗ್ ವಿರಾಟ್ ಕೊಹ್ಲಿ ಚರಿತ್ರೆ ಸೃಷ್ಟಿಸಿದ್ದಾರೆ. ವಿರಾಟ್ ಕೊಹ್ಲಿ 58 ಎಸೆತಗಳಲ್ಲಿ ಭರ್ಜರಿ ಶತಕ ಸಿಡಿಸಿದ್ದಾರೆ. ಈ ಸೆಂಚುರಿ ಜೊತೆ ಸೆಂಚುರಿ ಸ್ಟಾರ್ ಹಲವು ದಾಖೆಲೆಗಳನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ಕೆಕೆಆರ್ ವಿರುದ್ಧ ಗೆದ್ದ ಆರ್‌ಸಿಬಿ – ನಂಬರ್ ಒನ್ ಸ್ಥಾನಕ್ಕೇರಿದ ರಜತ್ ಪಡೆ
RCB ಪರ ಕಣಕ್ಕಿಳಿದ ವಿರಾಟ್ ಕೊಹ್ಲಿ ಕೆಕೆಆರ್ ವಿರುದ್ಧದ ಪಂದ್ಯವನ್ನು ಗೆಲ್ಲಿಸಿಕೊಟ್ಟಿದ್ದಲ್ಲದೇ ಕೆಲ ದಾಖಲೆಗಳನ್ನು ತನ್ನ ಹೆಸರಿಗೆ ದಾಖಲಿಸಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಆರ್‌ಸಿಬಿ ಜೆರ್ಸಿ ಧರಿಸಿ ತಮ್ಮ 279ನೇ ಐಪಿಎಲ್ ಪಂದ್ಯವನ್ನು ಆಡಿದ್ದಾರೆ. ಈ ಸಾಧನೆ ಮೂಲಕ, ಕೊಹ್ಲಿ ಭಾರತೀಯ ಕ್ರಿಕೆಟ್ ದಂತಕಥೆಗಳಾದ ಮಹೇಂದ್ರ ಸಿಂಗ್ ಧೋನಿ ಮತ್ತು ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿದರು. ಆರ್‌ಸಿಬಿ ಐಕಾನ್ ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರನಾಗಿ ಅಗ್ರಸ್ಥಾನಕ್ಕೆ ಏರಿದರು. ಧೋನಿ ಮತ್ತು ರೋಹಿತ್ ಈ ಹಿಂದೆ ತಲಾ 278 ಪಂದ್ಯಗಳೊಂದಿಗೆ ಜಂಟಿ ಅಗ್ರಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ ಈಗ 279 ಪಂದ್ಯಗಳೊಂದಿಗೆ ಐಪಿಎಲ್‌ನ ಕಿಂಗ್ ಆಗಿ ಹೊರಹೊಮ್ಮಿದ್ದಾರೆ.
ಧೋನಿ ಸಿಎಸ್‌ಕೆ ಮತ್ತು ಪುಣೆ ಪರ ಮತ್ತು ರೋಹಿತ್ ಡೆಕ್ಕನ್ ಚಾರ್ಜರ್ಸ್ ಮತ್ತು ಮುಂಬೈ ಇಂಡಿಯನ್ಸ್ ಪರ ಆಡುತ್ತಾ ಈ ಮೈಲಿಗಲ್ಲು ತಲುಪಿದ್ದಾರೆ. ಆದರೆ, ಕೊಹ್ಲಿ ಒಂದೇ ತಂಡಕ್ಕಾಗಿ ಆಡುವಾಗ ಈ ಸಾಧನೆ ಮಾಡಿದ ಏಕೈಕ ಆಟಗಾರ.
ವಿರಾಟ್ ಕೊಹ್ಲಿ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ 9,000 ರನ್ ಗಳಿಸಿದ್ದು, ಈ ಮೈಲಿಗಲ್ಲು ತಲುಪಿದ ಏಕೈಕ ಬ್ಯಾಟ್ಸ್‌ಮನ್ ಆಗಿದ್ದಾರೆ. ಬೇರೆ ಯಾವುದೇ ಆಟಗಾರ 8,000 ರನ್‌ಗಳನ್ನು ತಲುಪಿಲ್ಲ. ವಿರಾಟ್ ಕೊಹ್ಲಿ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಎಂಟು ಶತಕಗಳು ಮತ್ತು 66 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಇದರೊಂದಿಗೆ ಅತಿ ಹೆಚ್ಚು ಶತಕಗಳು ಮತ್ತು ಅರ್ಧಶತಕಗಳ ವಿಚಾರದಲ್ಲಿಯೂ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ.

ನೋಡಿರಿ

