ಕೆಕೆಆರ್ ವಿರುದ್ಧ ಗೆದ್ದ ಆರ್‌ಸಿಬಿ – ನಂಬರ್ ಒನ್ ಸ್ಥಾನಕ್ಕೇರಿದ ರಜತ್ ಪಡೆ

ಕೆಕೆಆರ್ ವಿರುದ್ಧ ಗೆದ್ದ ಆರ್‌ಸಿಬಿ – ನಂಬರ್ ಒನ್ ಸ್ಥಾನಕ್ಕೇರಿದ ರಜತ್ ಪಡೆ

ಆರ್‌ಸಿಬಿ ಮತ್ತು ಕೆಕೆಆರ್ ವಿರುದ್ಧ ನಡೆದ ಪಂದ್ಯದಲ್ಲಿ ರಜತ್ ಪಡೆ ಗೆದ್ದು ಬೀಗಿದೆ. ಆರ್‌ಸಿಬಿ ಕಿಂಗ್ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಬೆಂಗಳೂರು ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟಿದ್ದಾರೆ.

ಇದನ್ನೂ ಓದಿ:MIಗೆ ಬೇಡವಾದ್ರಾ ಹಾರ್ದಿಕ್? – ಫಿಟ್ ಇದ್ರೂ ಇಂಜುರಿ ನೆಪ ಹೇಳಿದ್ರಾ?

ರಾಯ್‌ಪುರದಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್  ವಿರುದ್ಧ ಆರ್‌ಸಿಬಿ  6 ವಿಕೆಟ್​​​​​​​​​​​​​​​​ಗಳ ಭರ್ಜರಿ ಜಯ ಸಾಧಿಸಿದ್ದಾರೆ. ಈ ಗೆಲುವಿನ ಮೂಲಕ ಆರ್‌ಸಿಬಿ ಅಂಕಪಟ್ಟಿಯಲ್ಲಿ ಮತ್ತೆ ನಂಬರ್ 1 ಸ್ಥಾನಕ್ಕೇರಿದೆ.

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ನೈಟ್​ ರೈಡರ್ಸ್ ತಂಡ ನಿರೀಕ್ಷಿತ ಆರಂಭ ಪಡೆಯಲು ವಿಫಲವಾಯಿತು. ಕಳೆದ ಪಂದ್ಯದ ಹೀರೋ ಫಿನ್ ಅಲೆನ್  8 ಎಸೆತಗಳಲ್ಲಿ 18 ರನ್‌ಗೆ ಔಟಾದರು. ಅಜಿಂಕ್ಯಾ ರಹಾನೆ 13 ಎಸೆತಗಳಲ್ಲಿ 19 ರನ್ಗಳಿಸಿ ಪವರ್​ ಪ್ಲೇ ಒಳಗೆ ವಿಕೆಟ್ ಒಪ್ಪಿಸಿದರು. ಆ ನಂತರ ಕ್ಯಾಮರೂನ್ ಗ್ರೀನ್ 24 ಎಸೆತಗಳಲ್ಲಿ 32 ರನ್​ಗಳಿಸಿದರು. ರಘುವಂಶಿ 46 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್​ಗಳ ಸಹಿತ 71 ರನ್ ಗಳಿಸಿದರು. ರಿಂಕು ಸಿಂಗ್ 29 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್​ಗಳ ಸಹಿತ ಅಜೇಯ 49 ರನ್​ಗಳಿಸಿ ತಂಡದ ಮೊತ್ತವನ್ನ 192ಕ್ಕೆ ಕೊಂಡೊಯ್ದರು.

193 ರನ್​ಗಳ ಸವಾಲಿನ ಗುರಿ ಬೆನ್ನಟ್ಟಿದ ಆರ್​ಸಿಬಿ 19.1  ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು ಸುಲಭವಾಗಿ ಗುರಿ ತಲುಪಿತು. ಆರ್‌ಸಿಬಿ ಫ್ಯಾನ್ಸ್ ಗೆ ವಿರಾಟ್ ಕೊಹ್ಲಿ ಬ್ಯಾಟಿಂಗ್ ವೈಭವ ನೋಡುವ ಚಾನ್ಸ್ ಸಿಕ್ಕಿತು. ಅಜೇಯ 105 ರನ್ ಸಿಡಿಸುವ ಮೂಲಕ ಆರ್​ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಕನ್ನಡಿಗ ದೇವದತ್ ಪಡಿಕ್ಕಲ್ 39 ರನ್​ಗಳಿಸಿ ಕೊಹ್ಲಿಗೆ ಸಾಥ್ ನೀಡಿದರು.  ಬೆಥೆಲ್​ ಸತತ 6ನೇ ಪಂದ್ಯದಲ್ಲಿ 30ರ ಗಡಿ ದಾಟಲು ವಿಫಲರಾಗಿದ್ದಾರೆ. ಬೆಥೆಲ್ ಔಟಾದ ನಂತರ ಕೊಹ್ಲಿ ಜೊತೆ ಸೇರಿದ ಕನ್ನಡಿಗ ದೇವದತ್ ಪಡಿಕ್ಕಲ್ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿ 2ನೇ ವಿಕೆಟ್​​ಗೆ 92 ರನ್​ಗಳ ಜೊತೆಯಾಟ ನೀಡಿದರು.  ಪಡಿಕ್ಕಲ್ 27 ಎಸೆತಗಳಲ್ಲಿ 7 ಬೌಂಡರಿಗಳ ಸಹಿತ 39 ರನ್​ಗಳಿಸಿ 14ನೇ ಓವರ್​​ನಲ್ಲಿ ಕಾರ್ತಿಕ್​​​​​ ತ್ಯಾಗಿಗೆ ವಿಕೆಟ್​​​ ಒಪ್ಪಿಸಿದರು. ಈ ಜೋಡಿ ಬ್ರೇಕ್ ಆಗುತ್ತಿದ್ದಂತೆ ಆರ್​ಸಿಬಿ ಬ್ಯಾಕ್​ ಟು ಬ್ಯಾಕ್ ವಿಕೆಟ್ ಕಳೆದುಕೊಂಡಿತು. 4ನೇ ಕ್ರಮಾಂಕದಲ್ಲಿ ಬಂದ ನಾಯಕ ರಜತ್ ಪಾಟೀದಾರ್ 8 ಎಸೆತಗಳಲ್ಲಿ ಒಂದು ಸಿಕ್ಸರ್ ಸಹಿತ 11 ರನ್​​​​​​​​​​​​​ಗಳಿಸಿ ಸುನಿಲ್ ನರೈನ್​ಗೆ ವಿಕೆಟ್ ಒಪ್ಪಿಸಿದರು. ಸ್ಫೋಟಕ ಆಟಗಾರ ಟಿಮ್ ಡೇವಿಡ್ ಕೇವಲ 2 ರನ್​ಗಳಿಸಿ ಕಾರ್ತಿಕ್ ತ್ಯಾಗಿ ಬೌಲಿಂಗ್​​ನಲ್ಲಿ ಕನ್ನಡಿಗ ಮನೀಶ್ ಪಾಂಡೆ ಹಿಡಿದ ಅದ್ಭುತ ಕ್ಯಾಚ್​​​​​​​​​​ಗೆ ಬಲಿಯಾದರು. ಆದರೆ ಕೊಹ್ಲಿ ಹಾಗೂ ಜಿತೇಶ್ ಶರ್ಮಾ 18 ರನ್​​ಗಳ ಜೊತೆಯಾಟ ನಡೆಸಿ ತಂಡವನ್ನ ಗೆಲುವಿನ ಗಡಿದಾಟಿಸಿದರು.

ಆರ್​ಸಿಬಿ 8ನೇ ಗೆಲವು ಕಂಡಿದ್ದು, 12 ಪಂದ್ಯಗಳನ್ನಾಡಿರುವ ಆರ್​ಸಿಬಿ 16 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದೆ. ಇದೀಗ ಆರ್‌ಸಿಬಿ ತನ್ನ ಪ್ಲೇ ಆಫ್ ಸ್ಥಾನವನ್ನ ಖಚಿತಪಡಿಸಿಕೊಂಡಿದೆ.

Sulekha

Leave a Reply

Your email address will not be published. Required fields are marked *