MIಗೆ ಬೇಡವಾದ್ರಾ ಹಾರ್ದಿಕ್? – ಫಿಟ್ ಇದ್ರೂ ಇಂಜುರಿ ನೆಪ ಹೇಳಿದ್ರಾ?
20ನೇ ಸೀಸನ್ ಗೆ CSK ಸೇರ್ತಾರಾ?

MIಗೆ ಬೇಡವಾದ್ರಾ ಹಾರ್ದಿಕ್? – ಫಿಟ್ ಇದ್ರೂ ಇಂಜುರಿ ನೆಪ ಹೇಳಿದ್ರಾ?20ನೇ ಸೀಸನ್ ಗೆ CSK ಸೇರ್ತಾರಾ?

11 ಪಂದ್ಯಗಳನ್ನ ಆಡಿ ಮೂರರಲ್ಲಿ ಮಾತ್ರ ಗೆದ್ದು ಪಾಯಿಂಟ್ಸ್ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿರೋ ಮುಂಬೈ ಇಂಡಿಯನ್ಸ್ ಪ್ಲೇ ಆಫ್ಸ್ ರೇಸ್​ನಿಂದ ಹೊರಬಿದ್ದಾಗಿದೆ. ಇನ್ನಿರೋ 3 ಮ್ಯಾಚಸ್ ಫಾರ್ಮಲಿಟೀಸ್​ಗೆ ಅಷ್ಟೇ. ಇದ್ರ ನಡುವೆ ಎಂಐ ಕ್ಯಾಂಪ್​ನಲ್ಲಿ ಆಗ್ತಿರೋ ಕೆಲ ಡವಲಪ್​ಮೆಂಟ್ಸ್ ಹಲ್​ಚಲ್ ಎಬ್ಬಿಸಿದೆ. ಮುಂಬೈ ಫ್ರಾಂಚೈಸಿ ಹಾಗೇ ನಾಯಕ ಹಾರ್ದಿಕ್ ಪಾಂಡ್ಯ ನಡುವೆ ಎಲ್ಲವೂ ಸರಿ ಇಲ್ವಾ ಅನ್ನೋದು ಕ್ಲಿಯರ್ ಆಗಿ ಗೊತ್ತಾಗ್ತಿದೆ. ಌಂಡ್ 20ನೇ ಸೀಸನ್ ಐಪಿಎಲ್​ನಲ್ಲಿ ಅತಿದೊಡ್ಡ ಬದಲಾವಣೆಯಾಗೋ ಹಿಂಟ್ ಕೂಡ ಸಿಕ್ಕಿದೆ.

ಇದನ್ನೂ ಓದಿ  : ಗುಜರಾತ್ ದಾಳಿಗೆ ಹೈದ್ರಾಬಾದ್ ತಂಡ ಗಿರಗಿರ – 86 ರನ್‌ಗೆ ಸನ್‌ರೈಸರ್ಸ್ ಸರ್ವಪತನ

ಐಪಿಎಲ್ ಇತಿಹಾಸದಲ್ಲಿ ಐದು ಬಾರಿ ಚಾಂಪಿಯನ್ಸ್ ಆಗಿರೋ ಮುಂಬೈ ಇಂಡಿಯನ್ಸ್ ತಂಡದ ಜೀವಾಳವೇ ರೋಹಿತ್ ಶರ್ಮಾ. ಆದ್ರೆ 2024ರ ಐಪಿಎಲ್​ಗೂ ಮುನ್ನ ರೋಹಿತ್ ಶರ್ಮಾರನ್ನ ಕ್ಯಾಪ್ಟನ್ಸಿಯಿಂದ ಇಳಿಸಿ ಹಾರ್ದಿಕ್ ಪಾಂಡ್ಯರನ್ನು ನಾಯಕನಾಗಿ ಘೋಷಿಸಿದ್ರೋ ಅಲ್ಲಿಂದ ಈಚೆಗೆ ಎಂಐನಲ್ಲಿ ಯಾವುದೂ ಸರಿ ಇಲ್ಲ. ಈ ಸೀಸನ್ ಅಂತೂ ಇನ್ನೂ ಅಧ್ವಾನ ಆಗಿದೆ. ಯಾಕಂದ್ರೆ ಕ್ಯಾಪ್ಟನ್ ಪಾಂಡ್ಯ ಒಂದ್ಕಡೆಯಾದ್ರೆ ಇಡೀ ಟೀಂ ಇನ್ನೊಂದ್ಕಡೆ ಎನ್ನುವಂತಾಗಿದೆ. ಟ್ರಾವೆಲ್ಲಿಂಗ್, ಪ್ರಾಕ್ಟೀಸ್, ಆನ್ ಫೀಲ್ಡ್ ಡಿಸಿಷನ್ಸ್ ಹೀಗೆ ಎಲ್ಲದ್ರಲ್ಲೂ ಬಿರುಕು ಎದ್ದು ಕಾಣ್ತಿದೆ. ಈಗ ಪಾಂಡ್ಯ ವಿಚಾರದಲ್ಲಿ ಇಂಜುರಿ ನೆಪ ಹೇಳ್ತಿದ್ದಾರಾ ಅನ್ನೋ ಅನುಮಾನವೂ ಶುರುವಾಗಿದೆ.

ಧರ್ಮಶಾಲಾಗೆ ಏಕಾಂಗಿ ಪ್ರಯಾಣ.. ಏಕಾಂಗಿಯಾಗಿ ಪ್ರಾಕ್ಟೀಸ್!

ಆರ್​ಸಿಬಿ ವಿರುದ್ಧ ಲಾಸ್ಟ್ ಮೂಮೆಂಟ್​ನಲ್ಲಿ ಸೋತಿರುವ ಮುಂಬೈ ಈಗ ಗುರುವಾರ ಪಂಜಾಬ್ ವಿರುದ್ಧ ಕಣಕ್ಕಿಳಿಯಲಿದೆ. ಧರ್ಮಶಾಲಾದಲ್ಲಿ ನಡೆಯಲಿರೋ ಈ ಪಂದ್ಯಕ್ಕೂ ಮುನ್ನ ಹಾರ್ದಿಕ್ ಪಾಂಡ್ಯ ಅವ್ರ ಪ್ರಾಕ್ಟೀಸ್ ಬಾರೀ ಚರ್ಚೆಯಾಗ್ತಿದೆ. ಯಾಕಂದ್ರೆ ಕಳೆದ ಎರಡು ಪಂದ್ಯಗಳಲ್ಲಿ ಹಾರ್ದಿಕ್ ಪಾಂಡ್ಯ ಮುಂಬೈ ಪರ ಕಣಕ್ಕಿಳಿದಿಲ್ಲ. ಬೆನ್ನುನೋವಿನ ಕಾರಣ ಅವ್ರು ರೆಸ್ಟ್​ನಲ್ಲಿದ್ದಾರೆ ಅಂತಾ ಫ್ರಾಂಚೈಸಿ ಹೇಳಿತ್ತು. ಈಗ ತಂಡ ಧರ್ಮಶಾಲಾಗೆ ಟ್ರಾವೆಲ್ ಮಾಡುವಾಗ್ಲೂ ಹಾರ್ದಿಕ್ ಪಾಂಡ್ಯ ಅವ್ರ ಜೊತೆ ಹೋಗಿಲ್ಲ. ಏಕಾಂಗಿಯಾಗಿ ಟ್ರಾವೆಲ್ ಮಾಡಿದ್ದಾರೆ. ಏಕಾಂಗಿಯಾಗಿ ನೆಟ್ಸ್​ನಲ್ಲಿ ಪ್ರಾಕ್ಟೀಸ್ ಕೂಡ ಮಾಡಿದ್ದಾರೆ. ಎಂಐ ಜೆರ್ಸಿ ಧರಿಸಿ ಪವರ್ ಹಿಟ್ಟಿಂಗ್ ಶಾಟ್ಸ್ ಬಾರಿಸೋ ವಿಡಿಯೋಗಳನ್ನ ತಮ್ಮ ಇನ್ಸ್​ಟಾ ಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಪ್ರಾಕ್ಟೀಸ್ ವೇಳೆ ಪಾಂಡ್ಯ ಫಿಟ್ ಌಂಡ್ ಫೈನ್ ಆಗಿರೋದು ಗೊತ್ತಾಗ್ತಿದೆ. ಹೀಗಾಗಿ ಪಾಂಡ್ಯ ವಿಚಾರದಲ್ಲಿ ಇಂಜುರಿ ನೇಪ ಹೇಳಿ ಕೂರಿಸಿದ್ರಾ ಅನ್ನೋ ಅನುಮಾನ ಶುರುವಾಗಿದೆ.

ಬ್ಯಾಟಿಂಗ್ ಹಾಗೇ ಬೌಲಿಂಗ್ ನಲ್ಲಿ ಸದ್ದು ಮಾಡದ ಪಾಂಡ್ಯ!

ಒಂದ್ಕಡೆ ಕ್ಯಾಪ್ಟನ್ ಆಗಿ ಸಕ್ಸಸ್ ಸಿಗ್ತಿಲ್ಲ ಅನ್ನೋದ್ರ ಜೊತೆಗೆ ಇಂಡಿವಿಶ್ಯುಯಲ್ ಪರ್ಪಾಮೆನ್ಸ್ ಕೂಡ ಚೆನ್ನಾಗಿ ಆಗಿಲ್ಲ. ಈ ಸೀಸನ್​ನಲ್ಲಿ 8 ಪಂದ್ಯಗಳಲ್ಲಿ 146 ರನ್ ಗಳಿಸಿದ್ದಾರೆ. ಸರಾಸರಿ 20.85 ಮತ್ತು 136.44 ಸ್ಟ್ರೈಕ್ ರೇಟ್ ಇದೆ. ಬೌಲಿಂಗ್ ಅಂತೂ ತುಂಬಾನೇ ಎಕ್ಸ್​ಪೆನ್ಸಿವ್ ಆಗಿದ್ದಾರೆ. ಸರಾಸರಿ 61.50 ಮತ್ತು ಎಕಾನಮಿ ರೇಟ್ 11.90 ಇದೆ. ಹಾಗೇ ಈ ಸೀಸನ್ ಕೇವಲ ನಾಲ್ಕು ವಿಕೆಟ್‌ಗಳನ್ನು ಮಾತ್ರ ತೆಗೆದಿರುವಂಥದ್ದು. ಪಾಂಡ್ಯ ಅಷ್ಟೇ ಅಲ್ಲದೆ ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ ಕೂಡ ಬ್ಯಾಟಿಂಗ್ ಸ್ಟ್ರಗಲ್ ಎದುರಿಸಿದ್ದಾರೆ. ತಿಲಕ್​ದು ಒಂದು ಶತಕ ಬಿಟ್ರೆ ಉಳಿದ ಪಂದ್ಯಗಳಲ್ಲಿ ಇಂಪ್ಯಾಕ್ಟ್ ಮಾಡಿಲ್ಲ. ಇನ್ನು ಬೌಲಿಂಗ್ ಬ್ರಹ್ಮಾಸ್ತ್ರವಾಗಿರೋ ಜಸ್ಪ್ರೀತ್ ಬುಮ್ರಾ ಕಡೆಯಿಂದಲೂ ಬೌಲಿಂಗ್ ಸಪೋರ್ಟ್ ಸಿಕ್ಕಿಲ್ಲ. ಈಗಾಗಿ ಎಂಐ ಈ ಸೀಸನ್​ನದ್ದು ಮುಗಿದ ಅಧ್ಯಾಯವಾಗಿದೆ. ಒಂದ್ಕಡೆ ಟೀಂ ಪರ್ಫಾಮೆನ್ಸ್ ಚೆನ್ನಾಗಿಲ್ಲ ಅನ್ನೋದಾದ್ರೆ ಮತ್ತೊಂದೆಡೆ ಪಾಂಡ್ಯ ವರ್ತನೆ ಕೂಡ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಮುಂಬೈ ಟೀಂ ಅನ್ ಫಾಲೋ ಮಾಡಿದ್ರಾ ಆಲ್ ರೌಂಡರ್?

ಇದೇ ವಿಚಾರವೇ ಈಗ ಮುಂಬೈ ಕ್ಯಾಂಪ್​ನಲ್ಲಿ ಎಲ್ಲವೂ ಸರಿ ಇಲ್ವಾ ಅನ್ನೋ ಅನುಮಾನಗಳಿಗೆ ರೆಕ್ಕೆ ಪುಕ್ಕ ಬರುವಂತೆ ಮಾಡಿರೋದು. ಬೆಂಗಳೂರು ವಿರುದ್ಧದ ಪಂದ್ಯದ ಬಳಿಕ ಹಾರ್ದಿಕ್‌ ಪಾಂಡ್ಯ ಮುಂಬೈ ಇಂಡಿಯನ್ಸ್‌ ತಂಡವನ್ನ ಅನ್‌ಫಾಲೋ ಮಾಡಿದ್ದಾರೆ ಎಂಬ ಸುದ್ದಿ ಕಿಚ್ಚು ಹಚ್ಚಿತ್ತು. ಯಾಕಂದ್ರೆ ಮುಂಬೈ ಇಂಡಿಯನ್ಸ್‌ ತಂಡದ ಅಕೌಂಟ್‌ ಅವರ ಫಾಲೋವಿಂಗ್‌ ವಿಭಾಗದಲ್ಲಿ ಕಾಣುತ್ತಿರಲಿಲ್ಲ. ಹೀಗಾಗಿ ರೂಮರ್‌ ಜೋರಾಗಿ ಹರಡಿತ್ತು. ಆದ್ರೆ ಸ್ವಲ್ಪ ಸಮಯದ ನಂತರ ಮತ್ತೆ ಫಾಲೋ ಮಾಡುತ್ತಿರೋದು ಗೊತ್ತಾಗಿದೆ. ಸೋ ಅಲ್ಲಿದೆ ಇದು ಟೆಕ್ನಿಕಲ್ ಇಶ್ಯೂ ಆಗಿದ್ದಾ ಅಥವಾ ನಿಜಕ್ಕೂ ಹಾರ್ದಿಕ್‌ ಪಾಂಡ್ಯ ಅನ್‌ಫಾಲೋ ಮಾಡಿ ಮತ್ತೆ ಫಾಲೋ ಮಾಡಿದ್ರಾ ಅನ್ನೋ ಕನ್ಫ್ಯೂಷನ್ಸ್ ಇದೆ. ಹೀಗೆ ಪಾಂಡ್ಯ ಮತ್ತು ಫ್ರಾಂಚೈಸಿ ನಡುವೆ ಮುಸುಕಿನ ಗುದ್ದಾಟ ಕ್ಯಾಪ್ಟನ್ಸಿ ಬದಲಾವಣೆ ಕೂಗಿನ ನಡುವೆ ಮತ್ತೊಂದು ಬ್ರೇಕಿಂಗ್ ನ್ಯೂಸ್ ಹೊರಬಿದ್ದಿದೆ.

20ನೇ ಸೀಸನ್ ಗೆ ಚೆನ್ನೈ ಸೂಪರ್ ಕಿಂಗ್ಸ್ ಸೇರ್ತಾರಾ ಹಾರ್ದಿಕ್ ಪಾಂಡ್ಯ?

ಇದೇ ನೋಡಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗ್ತಿರೋ ಮತ್ತೊಂದು ಬಿಗ್ ಡವಲಪ್​ಮೆಂಟ್. ತಂಡದ ಇತರೆ ಆಟಗಾರರು ಹಾಗೇ ಪಾಂಡ್ಯ ನಡುವೆ ಎಲ್ಲವೂ ಸರಿ ಇಲ್ಲ ಎನ್ನುವಾಗ್ಲೇ ಮುಂದಿನ ಸೀಸನ್​ನಲ್ಲಿ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಸೇರಿಕೊಳ್ತಾರೆ ಅನ್ನೋ ಸುದ್ದಿ ಹಲ್ ಚಲ್ ಎಬ್ಬಿಸಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಬೌಂಡರಿ ಲೈನ್ ಬಳಿ ಹಾರ್ದಿಕ್ ಪಾಂಡ್ಯ ಮಾತನಾಡ್ತಿರೋದು ಸಿಎಸ್‌ಕೆ ಸಿಇಒ ಕಾಸಿ ವಿಶ್ವನಾಥನ್ ಜೊತೆ. ಸಿಎಸ್‌ಕೆ ವಿರುದ್ಧ ಮುಂಬೈ ಸೋಲಿನ ನಂತರ ಹಾರ್ದಿಕ್ ಪಾಂಡ್ಯ ಸಿಎಸ್‌ಕೆ ಸಿಇಒ ಕಾಸಿ ವಿಶ್ವನಾಥನ್ ಜೊತೆ ಕೆಲಕಾಲ ಮಾತನಾಡಿದ್ರು. ಇದೇ ಸಂಭಾವಣೆಯ ವಿಡಿಯೋವನ್ನ ಕೆಲವರು ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದಾರೆ. ಌಂಡ್ ಪಾಂಡ್ಯ ಚೆನ್ನೈ ಟೀಂ ಸೇರಿಕೊಳ್ತಾರೆ ಅಂತೆಲ್ಲಾ ಪುಕಾರು ಹಬ್ಬಿಸಿದ್ದಾರೆ. ಒಟ್ನಲ್ಲಿ ಮುಂಬೈ ಇಂಡಿಯನ್ಸ್​ನಲ್ಲಿ ಈಗ ಮನೆಯೊಂದು ಮೂರು ಬಾಗಿಲಾಗಿದೆ. ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ ಆದ ಮೇಲೆ ಡ್ರೆಸ್ಸಿಂಗ್ ರೂಂ ವಾತಾವರಣವೂ ಬದಲಾಗಿದೆ. ಈ ಬದಲಾವಣೆ ಆನ್​ಫೀಲ್ಡ್ ರಿಸಲ್ಟ್ ಮೇಲೂ ಪರಿಣಾಮ ಬೀರ್ತಿದೆ. ಇದನ್ನೆಲ್ಲಾ ದಾಟಿ ನೆಕ್ಸ್​ಟ್ ಸೀಸನ್​ಗೆ ಸ್ಟ್ರಾಂಗ್ ಆಗಿ ಬರೋದೊಂದೇ ಫ್ರಾಂಚೈಸಿ ಮುಂದಿನ ದಾರಿ.

Shantha Kumari

Leave a Reply

Your email address will not be published. Required fields are marked *