ಕೊಹ್ಲಿ ಔಟಾದ್ರೆ POWER ಇರಲ್ವಾ? – ಪ್ಲೇ ಆಫ್ಸ್ ರೇಸ್.. FINISHERS ಪ್ರಾಬ್ಲಂ
ಡೆತ್ ಓವರ್ ಡೇಂಜರ್ ಝೋನ್ ಆಯ್ತಾ?

ಬೆಂಗಳೂರು ವರ್ಸಸ್ ಕೊಲ್ಕತ್ತಾ ನಡುವಿನ ಹೈವೋಲ್ಟೇಜ್ ಮ್ಯಾಚ್ಗೆ ಕೌಂಟ್ಡೌನ್ ಸ್ಟಾರ್ಟ್ ಆಗಿದೆ. ಪ್ಲೇಆಫ್ ರೇಸ್ನಲ್ಲಿರೋ ಎರಡೂ ತಂಡಗಳಿಗೆ ಈ ಮ್ಯಾಚ್ ತುಂಬಾನೇ ಮುಖ್ಯ. ಅಟ್ ಪ್ರಸೆಂಟ್ ಟಾಪ್-2ನಲ್ಲಿರೋ ಬೆಂಗಳೂರು ಟಾಪ್1ಗೆ ಹೋಗ್ಬೇಕು ಅಂದ್ರೆ ಮಸ್ಟ್ ಌಂಡ್ ಶುಡ್ ಇಲ್ಲಿ ಗೆಲ್ಲಲೇಬೇಕು. ಌಂಡ್ ಟಾಪ್-4 ಟಿಕೆಟ್ ಬೇಕು ಅಂದ್ರೆ ಕೊಲ್ಕತ್ತಾಗೂ ಇದು ಡು ಆರ್ ಡೈ ಮ್ಯಾಚ್. ಸದ್ಯಕ್ಕೆ ಎರಡೂ ತಂಡಗಳು ವಿನ್ನಿಂಗ್ ಟ್ರ್ಯಾಕ್ನಲ್ಲೇ ಮುಖಾಮುಖಿ ಆಗ್ತಿದ್ರೂ ಕೂಡ ಆರ್ಸಿಬಿಗೆ ಟೆನ್ಷನ್ ಅಂತೂ ಇದ್ದೇ ಇದೆ. ಯಾಕಂದ್ರೆ ಕಳೆದ ಎರಡು ಪಂದ್ಯಗಳಲ್ಲಿ ಆರ್ಸಿಬಿ ಬ್ಯಾಟಿಂಗ್ ಕಂಪ್ಲೀಟ್ ಕೈಕೊಟ್ಟಿದೆ. ವಿರಾಟ್ ಕೊಹ್ಲಿ ಮೇಲೆ ಡಿಪೆಂಡ್ ಆಗಿರೋದು ಗೊತ್ತಾಗ್ತಿದೆ.
ಇದನ್ನೂ ಓದಿ : GT ಏಟಿಗೆ SRH ಶೇಪ್ ಔಟ್ – ಗುಜರಾತ್ ಪ್ಲೇ ಆಫ್ಸ್ ಪಕ್ಕನಾ?
ಒಂದ್ಕಡೆ ಸತತ ಪಂದ್ಯಗಳನ್ನ ಗೆದ್ದು ಬರ್ತಿರೋ ಕೆಕೆಆರ್.. ಇನ್ನೊಂದ್ಕಡೆ ಎರಡು ಪಂದ್ಯ ಸೋತ್ರೂ ಮೂರನೇ ಮ್ಯಾಚಲ್ಲಿ ಗೆದ್ದು ಕಂ ಬ್ಯಾಕ್ ಮಾಡಿರೋ ಆರ್ಸಿಬಿ. ಬಟ್ ಮುಂಬೈ ವಿರುದ್ಧದ ಮ್ಯಾಚ್ ಥ್ರಿಲ್ಲರ್ ಇತ್ತಾದ್ರೂ ಕನ್ವಿನ್ಸಿಂಗ್ ವಿಕ್ಟರಿ ಅಲ್ಲ. ಅಂದ್ರೆ 166 ರನ್ಗಳ ಚೇಸಿಂಗ್ನಲ್ಲಿ ಆರ್ಸಿಬಿಯ ಬ್ಯಾಟಿಂಗ್ ವೈಫಲ್ಯ ಕೂಡ ರಿವೀಲ್ ಆಗಿದೆ. ಇದೇ ಕಾರಣಕ್ಕೆ ಪೋಸ್ಟ್ ಮ್ಯಾಚ್ ಪ್ರಸೆಂಟೇಷನ್ ವೇಳೆ ನಾಯಕ ರಜತ್ ಪಾಟಿದಾರ್ ಈ ಗೆಲುವಿಗೆ ನಾವು ಅರ್ಹರಲ್ಲ ಅಂತಾ ಬೇಸರ ಹೊರ ಹಾಕಿದ್ರು. ಌಂಡ್ ಆರ್ಸಿಬಿ ಸೋತಿರುವ ನಾಲ್ಕು ಪಂದ್ಯಗಳೂ ಕೂಡ ಬ್ಯಾಟಿಂಗ್ ಕೈಕೊಟ್ಟಿದ್ದರಿಂದಲೇ ಸೋತಿರುವಂಥದ್ದು. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ಬ್ಯಾಟಿಂಗ್ ಲೈನಪ್ ಮತ್ತೆ ಬೆಂಕಿ ಆಗ್ಬೇಕಿದೆ. ಆರಂಭದಲ್ಲಿ ಇದ್ದ ಕಿಚ್ಚು ಮತ್ತೆ ಬರ್ಬೇಕಿದೆ. ಌಂಡ್ ಕೊಹ್ಲಿ ಮೇಲಿನ ಡಿಪೆಂಡೆನ್ಸಿ ಕೂಡ ಕಡಿಮೆಯಾಗ್ಬೇಕು.
ಕೊಹ್ಲಿ 50+ ರನ್ಸ್ ಹೊಡೆದಾಗಲೆಲ್ಲಾ ಗೆದ್ದಿದೆ ಬೆಂಗಳೂರು!
ಐಪಿಎಲ್ನಲ್ಲಿ 9 ಸಾವಿರ ರನ್ಗಳ ಸರದಾರನಾಗಿರೋ ಕಿಂಗ್ ವಿರಾಟ್ ಕೊಹ್ಲಿ ಇಂದಿಗೂ ಬ್ಯಾಟಿಂಗ್ಗೆ ನಿಂತ್ರೆ ರನ್ ಮಷಿನ್. ಏಜ್ ಈಸ್ ಜಸ್ಟ್ ಎ ನಂಬರ್ ಅಂತಾ ಯಂಗ್ಸ್ಟರ್ಸ್ಗೆ ಕಾಂಪಿಟೇಷನ್ ಕೊಡ್ತಿದ್ದಾರೆ. ಆರ್ಸಿಬಿ ಬ್ಯಾಟಿಂಗ್ನಲ್ಲಿ ಕೊಹ್ಲಿ ಆಡುವಾಗ ಇತರೆ ಬ್ಯಾಟರ್ಗಳು ತುಂಬಾನೇ ಕಂಫರ್ಟಬಲ್ ಆಗಿ ಆಡ್ತಾರೆ. ಒನ್ಸ್ ಕೊಹ್ಲಿ ಬೇಗ ಔಟ್ ಆದ್ರೆ ಆಮೇಲೆ ಪೆವಿಲಿಯನ್ ಪರೇಡ್ ಸ್ಟಾರ್ಟ್ ಆಗುತ್ತೆ. ಇನ್ನೊಂದು ಮೇನ್ ಥಿಂಗ್ ಅಂದ್ರೆ 2025ರ ಐಪಿಎಲ್ನಿಂದ ಈವರೆಗೆ ಕೊಹ್ಲಿ 11 ಬಾರಿ ಅರ್ಧಶತಕ ಬಾರಿಸಿದ್ದು ಈ 11 ಪಂದ್ಯಗಳಲ್ಲೂ ಬೆಂಗಳೂರು ತಂಡ ಗೆದ್ದಿದೆ. ಸೋ ಅಲ್ಲಿಗೆ ಕೊಹ್ಲಿ ಕಡೆಯಿಂದ ಬಿಗ್ ಇನ್ನಿಂಗ್ಸ್ ಬರೋದು ಎಷ್ಟು ಮುಖ್ಯ ಅನ್ನೋದು ಇಲ್ಲೇ ಗೊತ್ತಾಗ್ತಿದೆ. ಕೊಹ್ಲಿ ಚೆನ್ನಾಗಿ ಆಡಿದ್ರು ಅಂದ್ರೆ ಮ್ಯಾಚ್ ವಿನ್ ಪಕ್ಕಾ ಅಂತಾ. ಸೋ ಅಷ್ಟು ಡಿಪೆಂಡೆನ್ಸಿ ಕಾಣಿಸ್ತಿದೆ. ಇನ್ನು ಕಳೆದ ಎರಡು ಪಂದ್ಯಗಳಲ್ಲಿ ಕೊಹ್ಲಿ ಡಕ್ ಔಟ್ ಆಗಿದ್ದು ಈಗ ಕೊಲ್ಕತ್ತಾ ವಿರುದ್ಧದ ಮ್ಯಾಚಲ್ಲಿ ಹೇಗೆ ಕಂ ಬ್ಯಾಕ್ ಮಾಡ್ತಾರೆ ಅನ್ನೋದು ಕೂಡ ಮುಖ್ಯವಾಗುತ್ತೆ. ಪ್ಲೇ ಆಫ್ಸ್ ರೇಸ್ನಲ್ಲಿರೋ ಬೆಂಗಳೂರು ಮುಂದಿನ ಪಂದ್ಯಗಳಲ್ಲಿ ಏನೆಲ್ಲಾ ಇಂಪ್ರೂವ್ ಆಗ್ಬೇಕು ಅನ್ನೋದನ್ನ ನೋಡ್ತಾ ಹೋಗೋಣ.
ಕಂ ಬ್ಯಾಕ್ ಮಾಡುತ್ತಾ ಬೆಂಗಳೂರು?
ಗುಜರಾತ್ ತಂಡ 16 ಅಂಕಗಳೊಂದಿಗೆ ನಂಬರ್ 1 ಸ್ಥಾನ
ಕೆಕೆಆರ್ ವಿರುದ್ಧ ಗೆದ್ರೆ ಗುಜರಾತ್ ಹಿಂದಿಕ್ಕಿ ನಂಬರ್ 1 ಪಟ್ಟ
ಟಾಪ್-2 ಟಾರ್ಗೆಟ್ ನಲ್ಲಿರೋ ಆರ್ ಸಿಬಿ ಪ್ರತೀ ಪಂದ್ಯ ಮುಖ್ಯ
ಕೊಲ್ಕತ್ತಾ ವಿರುದ್ಧ ಎಡವಿದ್ರೆ ಮುಂದಿನ 2 ಪಂದ್ಯಗಳಲ್ಲಿ ಪ್ರೆಶರ್
ಬೌಲಿಂಗ್ ಚೆನ್ನಾಗಿದ್ರೂ ಬ್ಯಾಟಿಂಗ್ ನಲ್ಲಿ ಸ್ವಲ್ಪ ಡಲ್
ಜಿತೇಶ್ ಶರ್ಮಾ ಮತ್ತು ಶೆಫರ್ಡ್ ಕಡೆಯಿಂದ ರನ್ಸ್ ಇಲ್ಲ
ಆರ್ಸಿಬಿ ಆಡಿರೋ 11 ಮ್ಯಾಚ್ಗಳಲ್ಲಿ 6 ಸಲ 200 ಪ್ಲಸ್ ಸ್ಕೋರ್ ಮಾಡಿದೆ. ಆದ್ರೆ ಟಾಪ್ ಆರ್ಡರ್ ಚೆನ್ನಾಗಿದ್ದಾಗ ಮಿಡಲ್ ಆರ್ಡರ್ ರನ್ಸ್ ಬಂದಿರುವಂಥದ್ದು. ಬಟ್ ಟಾಪ್ ಆರ್ಡರ್ ಕೈಕೊಟ್ಟಾಗ ಮಿಡಲ್ ಆರ್ಡರ್ ಕೈಹಿಡಿತಿಲ್ಲ. ಌಂಡ್ ಡೆತ್ ಓವರ್ ಅಂತಾ ಬಂದಾಗ ಪಾಸಿಬಲ್ ಅನ್ಸೋ ನಂಬರ್ಸ್ನೂ ಚೇಸ್ ಮಾಡಿಲ್ಲ. ಡಿಫೆನ್ಸ್ ಮಾಡಿಕೊಳ್ಳೋಕೂ ಆಗಿಲ್ಲ ಚೇಸಿಂಗ್ ಮಾಡಿಕೊಳ್ಳೋಕೂ ಆಗಿಲ್ಲ. ಒನ್ ಸೈಡೆಡ್ ವಿಕ್ಟರಿ ಬಿಟ್ಟು ಕ್ಲೋಸ್ ಗೇಮ್ ಆದಾಗ ಮುಂಬೈ ವಿರುದ್ಧ ಮಾತ್ರನೇ ಗೆದ್ದಿರೋದು. ಹೀಗಾಗಿ ಆ ಡೆತ್ ಓವರ್ ಡೇಂಜರ್ ಝೋನ್ ಪ್ಯಾನಿಕ್ನಿಂದ ಹೊರ ಬರ್ಬೇಕಿದೆ. ಯಾಕಂದ್ರೆ ಮುಂದಿನ ಒಂದೊಂದು ಪಂದ್ಯಗಳೂ ಕ್ರೂಶಿಯಲ್ ಆಗೋದ್ರಿಂದ ಮಸ್ಟ್ ಌಂಡ್ ಶುಡ್ ಪರ್ಫಾಮ್ ಮಾಡ್ಲೇಬೇಕು.

ನೋಡಿರಿ

