ನನ್ನ ಬಿಟ್ಟು ಹೋಗಬೇಡ – ದಿಲೀಪ್ ರಾಜ್ ಮೃತದೇಹದ ಮುಂದೆ ಪತ್ನಿ ಶ್ರೀವಿದ್ಯಾ ಆಕ್ರಂದನ

ನನ್ನ ಬಿಟ್ಟು ಹೋಗಬೇಡ – ದಿಲೀಪ್ ರಾಜ್ ಮೃತದೇಹದ ಮುಂದೆ ಪತ್ನಿ ಶ್ರೀವಿದ್ಯಾ ಆಕ್ರಂದನ

ನಿನಗೆ ನಾನು ನನಗೆ ನೀನು ಎಂದು ಬದುಕಿರುವ ಜೋಡಿ ಜೀವಗಳು. ವೈಯಕ್ತಿಕ ಬದುಕಲ್ಲೂ, ವೃತ್ತಿ ಬದುಕಲ್ಲೂ ಜೊತೆ ಜೊತೆಯಲ್ಲೇ ಪಯಣ. ಇದೀಗ ಬಾಳಸಂಗಾತಿಯನ್ನು ಬಿಟ್ಟು ದಿಲೀಪ್ ರಾಜ್ ಬಾರದಲೋಕಕ್ಕೆ ಪಯಣಿಸಿದ್ದಾರೆ. ಇಬ್ಬರು ಹೆಣ್ಣುಮಕ್ಕಳ ಜೊತೆ ಪತ್ನಿ ಶ್ರೀವಿದ್ಯಾ ಅವರ ಆಕ್ರಂದನ ಹೃದಯಹಿಂಡುವಂತಿದೆ.

ಇದನ್ನೂ ಓದಿ:ದಿಲೀಪ್ ರಾಜ್ ಮುದ್ದಾದ ಸಂಸಾರದ ಮೇಲೆ ವಿಧಿಯ ಕಣ್ಣು – ವೃತ್ತಿ ಬದುಕು, ವೈಯಕ್ತಿಕ ಬದುಕಿನಲ್ಲೂ ಮಾದರಿ ಎಜೆ ದಂಪತಿ

25 ವರ್ಷದ ಸಂಸಾರ. ನೋವಲ್ಲೂ, ನಲಿವಲ್ಲೂ ಒಂದಾದ ಜೋಡಿ ಜೀವಗಳು. ಇವತ್ತು ಬೆಳಗಿನ ಜಾವದವರೆಗೂ ಜೊತೆಯಲ್ಲಿದ್ದ ಒಲವು ಕಣ್ಮುಂದೆಯೇ ಮೌನವಾದರೆ ಆ ಸಂಗಾತಿಯ ಮನಸು ಹೇಗಿರಬೇಡ. ಇದೀಗ ಶ್ರೀವಿದ್ಯಾ ಅವರ ಸ್ಥಿತಿಯೂ ಇದೇ. ಪ್ರೀತಿಸಿ ಮದುವೆಯಾಗಿ, ಗಂಡನ ಪ್ರತಿಹಂತದಲ್ಲೂ ಜೊತೆಯಾಗಿದ್ದ ಶ್ರೀವಿದ್ಯಾ ಈಗ ದಾರಿಕಾಣದಂತಾಗಿದ್ದಾರೆ. ಪತಿಯ ಅಗಲಿಕೆಯಿಂದ ಆಘಾತಕ್ಕೊಳಗಾಗಿದ್ದಾರೆ. ದಿಲೀಪ್ ರಾಜ್ ಪತ್ನಿ  ಶ್ರೀವಿದ್ಯಾ ರ ನೋವು ನೋಡಿ ಬಂದವರು ಕೂಡಾ ಕಣ್ಣೀರಿಡುತ್ತಿ್ದಾದರೆ.

ಬೆಂಗಳೂರು ಉತ್ತರಹಳ್ಳಿಯಲ್ಲಿರುವ ನಿವಾಸದಲ್ಲಿ ದಿಲೀಪ್ ರಾಜ್ ಪಾರ್ಥೀವ ಶರೀರವನ್ನು ಅಂತಿಮದರ್ಶನಕ್ಕೆ ಇಡಲಾಗಿತ್ತು. ಕೇವಲ 47ರ ವಯಸ್ಸಿನಲ್ಲಿ ದಿಲೀಪ್ ರಾಜ್ ಜೀವನದ ಪಯಣ ಮುಗಿಸಿರುವುದು ಅವರ ಹತ್ತಿರದವರಿಗೆ ಅದೆಷ್ಟೋ ನೋವಾಗಿದೆಯೋ , ಆದರೆ, ಜೊತೆಯಲ್ಲಿದ್ದ ಜೀವನ ಸಂಗಾತಿ ಶ್ರೀವಿದ್ಯಾರ ನೋವು ನೋಡಿದರೆ ಆ ವಿಧಿ ಎಷ್ಟು ಕ್ರೂರಿ ಅಂತಾ ಅನಿಸುತ್ತದೆ. ಗಂಡ ಈಗ ಶಾಶ್ವತ ಮೌನಕ್ಕೆ ಜಾರಿರುವುದು ನೋಡಿ ಪತ್ನಿ ಶ್ರೀವಿದ್ಯಾ ಎದ್ದೇಳು, ಕಥೆ ತಂದಿದ್ದಾರೆ ಬಾರೋ ಎದ್ದೇಳು ಅಂತಾ ದಿಲೀಪ್ ಮೃತದೇಹದ ಮುಂದೆ ಗೋಳಾಡುತ್ತಿದ್ದಾರೆ. ನನ್ನ ಬಿಟ್ಟು ನೀನು ಎಲ್ಲಿ ಹೋಗ್ತಿಯಾ ಎಂದು ಕೇಳುತ್ತಿದ್ದಾರೆ.

ನಿಜಕ್ಕೂ ಪತ್ನಿ ಮತ್ತು ಮಕ್ಕಳ ಸ್ಥಿತಿ ವಿವರಿಸಲು ಪದಗಳೇ ಸಾಕಾಗುತ್ತಿಲ್ಲ. ಅಪ್ಪನ ಮೇಲೆ ಬೆಟ್ಟದಷ್ಟು ಭರವಸೆಯಿಟ್ಟುಕೊಂಡಿದ್ದ ಹೆಣ್ಣು ಮಕ್ಕಳು ಮೌನಕ್ಕೆ ಜಾರಿದ್ದಾರೆ. ಅಮ್ಮನನ್ನು ಸಂತೈಸುವುದೋ, ಅಪ್ಪನಿಲ್ಲದ ಪ್ರಪಂಚದಲ್ಲಿ ಹೇಗೇ ಬದುಕುವುದೋ ಎಂಬ ನೋವಲ್ಲಿದ್ದಾರೆ ಮಕ್ಕಳು.

Sulekha

Leave a Reply

Your email address will not be published. Required fields are marked *