ದೇವರ ದರ್ಶನಕ್ಕೆ ಹೋದವರು ಮಸಣ ಸೇರಿದರು! – ದೇಗುಲದ ಕಾಂಪೌಂಡ್‌ ಗೋಡೆ ಕುಸಿತಕ್ಕೆ 6 ಮಂದಿ ಬಲಿ!

ದೇವರ ದರ್ಶನಕ್ಕೆ ಹೋದವರು ಮಸಣ ಸೇರಿದರು! – ದೇಗುಲದ ಕಾಂಪೌಂಡ್‌ ಗೋಡೆ ಕುಸಿತಕ್ಕೆ 6 ಮಂದಿ ಬಲಿ!

ದೇವರ ದರ್ಶನಕ್ಕೆಂದು ದೇಗುಲಕ್ಕೆ ತೆರಳಿದ್ದ 6 ಭಕ್ತರು ದುರಂತ ಅಂತ್ಯ ಕಂಡಿದ್ದಾರೆ. ದೇವಸ್ಥಾನದ ಕಾಂಪೌಂಡ್‌ ಗೋಡೆ ಕುಸಿತು 6 ಮಂದಿ ಸಾವನ್ನಪ್ಪಿದ್ದು, 15ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದಾರೆ.

ಇದನ್ನೂ ಓದಿ: ಮುಗಿದ ದಿಲೀಪ್ ರಾಜ್ ಅಧ್ಯಾಯ.. ಗೋವಾದಲ್ಲೇ ಸಿಕ್ಕಿತ್ತಾ ಮುನ್ಸೂಚನೆ? – ಸೀರಿಯಲ್ ಕಿಂಗ್ AJ ಗೆ ಆಗಿದ್ದೇನು?

ಮಹಾರಾಷ್ಟ್ರ- ಕರ್ನಾಟಕ ಗಡಿಯ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಮೋಠೆವಾಡಿ ಗ್ರಾಮದ ಮುರಗಾಬಾಯಿ ದೇವಸ್ಥಾನದಲ್ಲಿ ಈ ದುರಂತ ಸಂಭವಿಸಿದೆ. ದೇಗುಲದ ಕಾಂಪೌಂಡ್‌ ಕುಸಿದು 6 ಮಂದಿ ಸಾವನ್ನಪ್ಪಿದ್ದು, 15 ಜನರಿಗೆ ಗಂಭೀರ ಗಾಯಗಳಾಗಿದೆ. ಗೋಡೆಯ ಕೆಳಗೆ ಇನ್ನೂ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಭಾರೀ ಗಾಳಿ ಮಳೆಗೆ ಕಾಂಪೌಂಡ್‌ ಗೋಡೆ ಬಿದ್ದಿದೆ ಎನ್ನಲಾಗ್ತಿದೆ. ಇದ್ರಿಂದಾಗಿ ಭಕ್ತರ ವಾಹನಗಳು ಕೂಡ ಜಖಂಗೊಂಡಿವೆ.

ಗಾಯಗೊಂಡವರಿಗೆ ಜತ್ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಜತ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಂಗಳವಾರ ರಾತ್ರಿ ಘಟನೆ ನಡೆದಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

Shwetha M

Leave a Reply

Your email address will not be published. Required fields are marked *