ಡಬಲ್ ಡೆಕರ್ ಬಸ್​ ರಸ್ತೆಗಿಳಿಸಲು ಮುಂದಾದ KSRTC, BMTC – ಯಾವ್ಯಾವ ಜಿಲ್ಲೆಗಳಲ್ಲಿ ಸಂಚಾರ..?

ಡಬಲ್ ಡೆಕರ್ ಬಸ್​ ರಸ್ತೆಗಿಳಿಸಲು ಮುಂದಾದ KSRTC, BMTC – ಯಾವ್ಯಾವ ಜಿಲ್ಲೆಗಳಲ್ಲಿ ಸಂಚಾರ..?

ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್​ಗಳಲ್ಲಿ ಪ್ರಯಾಣ ಮಾಡೋ ಜನರಿಗೆ ಗುಡ್ ನ್ಯೂಸ್ ಇದೆ. ಆಗಸದೆತ್ತರದಲ್ಲಿ ಕುಳಿತು ನಗರ ಸುತ್ತುವ ಅವಕಾಶ ಸಿಗಲಿದೆ. ಅಂದುಕೊಂಡಂತೆ ಆದ್ರೆ ಈ ವರ್ಷದಲ್ಲೇ ನೀವು ಡಬಲ್ ಡೆಕರ್ ಬಸ್​ಗಳಲ್ಲಿ (double-decker-bus-service) ರೌಂಡ್ಸ್ ಹಾಕಬಹುದು.

ಹೌದು. ರಾಜಧಾನಿ ಬೆಂಗಳೂರಿನಲ್ಲಿ ಈ ಹಿಂದೆ ಹಲವು ವರ್ಷ ಸಂಚರಿಸಿದ್ದ ಡಬಲ್ ಡೆಕರ್ ಬಸ್​ಗಳನ್ನ ಮತ್ತೆ ಪರಿಚಯಿಸಲು ಬಿಎಂಟಿಸಿ ಪ್ಲ್ಯಾನ್ ಮಾಡಿದೆ. ಈ ಸಂಬಂಧ ಈಗಾಗಲೇ ಟೆಂಡರ್ ಪ್ರಕ್ರಿಯೆ ಆರಂಭವಾಗಿದ್ದು, ಜುಲೈ ತಿಂಗಳಲ್ಲಿ ಅತ್ಯಾಧುನಿಕ ಡಬಲ್ ಡೆಕರ್ ಇ-ಬಸ್‌ಗಳು ರಸ್ತೆಗಿಳಿಯುವ ನಿರೀಕ್ಷೆಯಿದೆ. ಈ ನಡುವೆ ಕೆಎಸ್‌ಆರ್‌ಟಿಸಿ ಸಹ ಮೈಸೂರು ಮತ್ತು ತುಮಕೂರು ನಗರಗಳ ನಗರ ಸಾರಿಗೆಗೆ (City Bus) ಡಬಲ್ ಡೆಕರ್ ಬಸ್‌ (double-decker-bus-service) ಆರಂಭಿಸಲು ನಿರ್ಧರಿಸಿದೆ.

ಇದನ್ನೂ ಓದಿ : ಭಾರತದ ಆರ್ಥಿಕ ಬೆಳವಣಿಗೆ ಕುಂಠಿತ! – ಎಕನಾಮಿಕ್ ಸರ್ವೆ ಏನ್ ಹೇಳುತ್ತೆ? 

ತುಮಕೂರು ಮತ್ತು ಮೈಸೂರು ನಗರಗಳಲ್ಲಿ ಈ ವರ್ಷಾಂತ್ಯದ ಒಳಗೆ ಡಬಲ್ ಡೆಕರ್ ಬಸ್‌ ಓಡಿಸಲು ಕೆಎಸ್‌ಆರ್‌ಟಿಸಿ ನಿರ್ಧರಿಸಿದೆ. ಇವು ಎಲೆಕ್ಟ್ರಿಕ್ ಬಸ್‌ಗಳಾಗಿದ್ದು, ಏರ್‌ಕಂಡಿಷನ್ ವ್ಯವಸ್ಥೆಯೂ ಇರುತ್ತದೆ. ಎರಡು ದೊಡ್ಡ ನಗರಗಳಲ್ಲಿ ಡಬಲ್ ಡೆಕರ್ ಬಸ್‌ ಓಡಿಸುವ ಬಗ್ಗೆ ಕೆಎಸ್‌ಆರ್‌ಟಿಸಿ ಹಲವು ದಿನಗಳಿಂದ ಚಿಂತನೆ ನಡೆಸುತ್ತಿತ್ತು. ಇದೀಗ ಪ್ರಾಯೋಗಿಕವಾಗಿ ಪರಿಶೀಲಿಸಲು ಮುಂದಾಗಿರುವುದು ಪರಿಸರ ಸ್ನೇಹಿ ಸಾರಿಗೆಯ ವಿಚಾರದಲ್ಲಿ ಹೊಸ ಭರವಸೆ ಮೂಡಿಸಿದೆ.

ತುಮಕೂರು ಮತ್ತು ಮೈಸೂರಿನಲ್ಲಿ ಪ್ರವಾಸಿಗರು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಎರಡೂ ನಗರಗಳಿಗೆ ಮೊದಲ ಹಂತದಲ್ಲಿ ತಲಾ 5 ಡಬಲ್ ಡೆಕರ್ ಎಲೆಕ್ಟ್ರಿಕ್ ಬಸ್‌ಗಳು ಸಿಗಲಿವೆ. ಈ ವರ್ಷಾಂತ್ಯದ ಒಳಗೆ ಇದು ಕಾರ್ಯಸಾಧ್ಯವಾಗಲಿದೆ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಮಾಹಿತಿ ನೀಡಿದ್ದಾರೆ. ಸದ್ಯ ಮೈಸೂರಿನಲ್ಲಿ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು(KSTDC) ಅಂಬಾರಿ ಡಬಲ್ ಡೆಕರ್ ಬಸ್‌ಗಳನ್ನು ಓಡಿಸುತ್ತಿದೆ. ಓಪನ್ ಟಾಪ್ ಮಾದರಿಯ ಈ ಬಸ್‌ಗಳು ನಗರದಲ್ಲಿ ಮೂರು ಟ್ರಿಪ್ ಸಂಚರಿಸುತ್ತಿದ್ದು, 250 ರೂಪಾಯಿ ಟಿಕೆಟ್ ದರ ನಿಗದಿಪಡಿಸಲಾಗಿದೆ.

ಕರ್ನಾಟಕದಲ್ಲಿ ಈ ಮೊದಲು ಡಬಲ್ ಡೆಕರ್ ಬಸ್‌ಗಳಿದ್ದ ಏಕೈಕ ನಗರ ಬೆಂಗಳೂರು. ಆದ್ರೆ 1990ರ ದಶಕದಲ್ಲಿಯೇ ಹಂತಹಂತವಾಗಿ ಡಬಲ್ ಡೆಕರ್ ಬಸ್‌ಗಳನ್ನು ಸೇವೆಯಿಂದ ಹಿಂಪಡೆಯಲಾಯಿತು. ಇದೀಗ ಮತ್ತೆ ಬಸ್​ಗಳನ್ನ ಪರಿಚಯಿಸಲು ಬಿಎಂಟಿಸಿ ಮುಂದಾಗಿದೆ. ಹಾಗೇ ಸದ್ಯ ಮೈಸೂರು-ತುಮಕೂರು ಮಾರ್ಗದಲ್ಲಿ ಡಬಲ್ ಡೆಕರ್ ಬಸ್‌ಗಳ ಸಂಚಾರ ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ದಾವಣಗೆರೆ, ಶಿವಮೊಗ್ಗ ಸೇರಿದಂತೆ ಹಲವು ನಗರಗಳಲ್ಲಿ ಡಬಲ್ ಡೆಕರ್ ಬಸ್‌ಗಳನ್ನು ಆರಂಭಿಸಲು ಕೆಎಸ್​ಆರ್​ಟಿಸಿ ಮುಂದಾಗಿದೆ. ತುಮಕೂರಿನಲ್ಲಿ ವಿದ್ಯಾರ್ಥಿಗಳು ಗಮನಾರ್ಹ ಸಂಖ್ಯೆಯಲ್ಲಿದ್ದು, ನಗರ ಸಾರಿಗೆಗೆ ಹೆಚ್ಚು ಬೇಡಿಕೆಯಿದೆ.

suddiyaana