GT ಏಟಿಗೆ SRH ಶೇಪ್ ಔಟ್ – ಗುಜರಾತ್ ಪ್ಲೇ ಆಫ್ಸ್ ಪಕ್ಕನಾ?
ಬ್ಯಾಟಿಂಗ್ ಕಿಕ್ ಕಳ್ಕೊಂಡ ಹೈದ್ರಾಬಾದ್

GT ಏಟಿಗೆ SRH ಶೇಪ್ ಔಟ್ – ಗುಜರಾತ್ ಪ್ಲೇ ಆಫ್ಸ್ ಪಕ್ಕನಾ?ಬ್ಯಾಟಿಂಗ್ ಕಿಕ್ ಕಳ್ಕೊಂಡ ಹೈದ್ರಾಬಾದ್

ಗುಜರಾತ್ ಟೈಟಾನ್ಸ್.. ಟಾಪ್ ಆಫ್ ದಿ ಟೇಬಲ್.. ಫಸ್ಟ್ ಆಫ್​ನಲ್ಲಿ ಹಾವು ಏಣಿಯಂತೆ ಇದ್ದ ಗುಜರಾತ್ ಈಗ ಅನ್ ಸ್ಟಾಪಬಲ್ ಟೀಂ ಆಗಿ ಮುನ್ನುಗ್ತಿದೆ. ಸತತ ಐದು ಪಂದ್ಯಗಳನ್ನ ಗೆದ್ದು ಈಗ ನಂಬರ್ 1 ಪಟ್ಟಕ್ಕೇರಿದ್ದಾರೆ. ಮತ್ತೊಂದೆಡೆ ಈ ಸೀಸನ್​ನಲ್ಲಿ 300 ರನ್ಸ್ ನಮ್ಮ ಟಾರ್ಗೆಟ್ ಅಂದಿದ್ದ ಹೈದ್ರಾಬಾದ್ ಹೀನಾಯವಾಗಿ ಸೋತಿದೆ. ಒಂದ್ಕಡೆ ಗುಜರಾತ್ ಸೇಫ್ ಜೋನ್​ನಲ್ಲಿದ್ರೆ ಹೈದ್ರಾಬಾದ್ ಪ್ರೆಶರ್​ನಲ್ಲಿದೆ.

ಇದನ್ನೂ ಓದಿ : RCB Vs KKR ನಡುವೆ ಇಂದು ಹೈವೋಲ್ಟೇಜ್ ಮ್ಯಾಚ್ – ಪ್ಲೇ ಆಫ್ಸ್ ರೇಸ್ ಬ್ಯಾಟಲ್ ಗೆಲ್ಲೋದ್ಯಾರು?

ಬ್ಯಾಟಿಂಗ್​ನಲ್ಲಿ ಬೊಂಬಾಟ್.. ಬೌಲಿಂಗ್​ನಲ್ಲಿ ಸೂಪರ್.. ಗುಜರಾತ್ ಟೈಟಾನ್ಸ್ ಸದ್ಯ ಈ ಸೀಸನ್​ನ ಮೋಸ್ಟ್ ಡೇಂಜರಸ್ ಟೀಂ ಆಗಿ ಕಾಣ್ತಿದೆ. ಮೊಹಮ್ಮದ್ ಸಿರಾಜ್ ಸಿಡಿಲು, ಕಗಿಸೋ ರಬಾಡಾ ಕಿಚ್ಚು ಎದುರಾಳಿ ಬ್ಯಾಟರ್​ಗಳನ್ನ ಧೂಳೀಪಟ ಮಾಡ್ತಿದ್ದಾರೆ. ಅದ್ರಲ್ಲೂ ಬಲಿಷ್ಠ ಬ್ಯಾಟಿಂಗ್ ಲೈನಪ್​ನೇ ಹೊಂದಿರೋ ಹೈದ್ರಾಬಾದ್​ನ ಬೆನ್ನು ಮುರಿದು ಜಿಟಿ ನಂಬರ್ 1 ಪಟ್ಟಕ್ಕೇರಿದೆ. ಅಹಮದಾಬಾದ್​ನಲ್ಲಿ ನಡೆದ ಜಿಟಿ ವರ್ಸಸ್ ಎಸ್​ಆರ್​ಹೆಚ್ ನಡುವಿನ ಮ್ಯಾಚಲ್ಲಿ ಟಾಸ್ ಸೋತ ಗುಜರಾತ್ ಫಸ್ಟ್ ಬ್ಯಾಟಿಂಗ್ ಮಾಡಿತು. ಗಿಲ್ ಮತ್ತು ಬಟ್ಲರ್ ಸಿಂಗಲ್ ಡಿಜಿಟ್​ಗೆ ಔಟ್ ಆದ್ರೂ ಕುಡ ಸಾಯಿ ಸುದರ್ಶನ್ 61 ರನ್​ಗಳ ಇನ್ನಿಂಗ್ಸ್ ಆಡಿದ್ರು. ಌಂಡ್ ವಾಷಿಂಗ್ಟನ್ ಸುಂದರ್ ಅರ್ಧಶತಕದ ನೆರವಿನಿಂದ 168 ರನ್​ಗಳನ್ನ ಕಲೆ ಹಾಕಿತು. ಟಾರ್ಗೆಟ್ ಬೆನ್ನತ್ತಿದ ಹೈದ್ರಾಬಾದ್​ ಎಲ್ಲಿಯೂ ಕೂಡ ಫೈಟ್ ಕೊಡಲೇಇಲ್ಲ. ಪ್ಯಾಟ್ ಕಮಿನ್ಸ್ 19 ರನ್ ಗಳಿಸಿದ್ದೇ ಹೈಯೆಸ್ಟ್ ಇಂಡಿವಿಶ್ಯುಯಲ್ ಸ್ಕೋರ್. ಈ ಮೂಲಕ 14.5 ಓವರ್​ಗಳಲ್ಲೇ 86ಕ್ಕೆ ಹೈದ್ರಾಬಾದ್ ಆಲೌಟ್ ಆಯ್ತು. 82 ರನ್​ಗಳ ಬಿಗ್ ಮಾರ್ಜಿನ್​ನಿಂದ ಗುಜರಾತ್ ಗೆದ್ದು ಬೀಗಿತು. ಹಾಗೇ ಪಾಯಿಂಟ್ಸ್ ಪಟ್ಟಿಯಲ್ಲಿ ಟ್ವಿಸ್ಟ್ ಕೂಡ ಸಿಕ್ಕಿದೆ.

16 ಅಂಕಗಳೊಂದಿಗೆ ಸೇಫ್ ಝೋನ್ ನಲ್ಲಿದೆ ಗುಜರಾತ್!

ಗುಜರಾತ್ ಈಗ ಪಾಯಿಂಟ್ಸ್ ಪಟ್ಟಿಯಲ್ಲಿ ನಂಬರ್ 1ಪಟ್ಟಕ್ಕೇರಿದೆ. ಪಂಜಾಬ್, ಬೆಂಗಳೂರು ಹಾಗೇ ಹೈದ್ರಾಬಾದ್ ಬಳಿಕ ನಂಬರ್ 1 ಸ್ಥಾನಕ್ಕೇರಿದೆ. ಪ್ಲೇ ಆಫ್ಸ್ ಲೆಕ್ಕಾಚಾರ ಅಂತಾ ಬಂದಾಗ 16 ನಂಬರ್ ಸೇಫ್ ಜೋನ್. ಇಷ್ಟು ವರ್ಷಗಳ ಆವೃತ್ತಿಗಳಲ್ಲಿ 16 ಅಂಕ ಪಡೆದ ಯಾವುದೇ ಟೀಂ ಪ್ಲೇ ಆಫ್ಸ್ ಮಿಸ್ ಮಾಡ್ಕೊಂಡಿಲ್ಲ. ಈ ಸಲ 7 ತಂಡಗಳ ನಡುವೆ ರೇಸ್ ಇರೋದ್ರಿಂದ ಹೇಳೋಕ್ಕಾಗಲ್ಲ. ಹೀಗಿದ್ರೂ ಗುಜರಾತ್​ಗೆ ಇನ್ನೂ ಎರಡು ಮ್ಯಾಚ್ ಬಾಕಿ ಇದ್ದು ಅದ್ರಲ್ಲಿ ಒಂದು ಪಂದ್ಯ ಗೆದ್ರೂ ಕೂಡ ಸೀದಾ ಪ್ಲೇಆಫ್​ಗೆ ಕ್ವಾಲಿಫೈ ಆಗ್ತಾರೆ. ಅತ್ತ ಹೈದ್ರಾಬಾದ್ ತಂಡಕ್ಕೆ ಇನ್ನೆರಡು ಮ್ಯಾಚ್ ಇದ್ದು ಮುಂದಿನ ಪಂದ್ಯಗಳಿಗೆ ಪ್ರೆಶರ್ ಅಂತೂ ಇದ್ದೇ ಇದೆ. ಬಟ್ ಬ್ಯಾಟಿಂಗ್ ಫೇಲ್ಯೂರ್ ಆಗಿರೋದನ್ನ ನೆಕ್ಸ್​ಟ್ ಹೇಗೆ ಕಂ ಬ್ಯಾಕ್ ಮಾಡ್ತಾರೆ ಅನ್ನೋದು ಕೂಡ ಮುಖ್ಯ.

Shantha Kumari

Leave a Reply

Your email address will not be published. Required fields are marked *