ಮುಲಾಯಂ ಸಿಂಗ್ ಯಾದವ್ ಪುತ್ರ ನಿಗೂಢ ಸಾವು – ಬಿಜೆಪಿ ಲೀಡರ್ ಅಪರ್ಣಾ ಯಾದವ್ ಗಂಡ ಸಾವನ್ನಪ್ಪಿದ್ದು ಹೇಗೆ?

ಮುಲಾಯಂ ಸಿಂಗ್ ಯಾದವ್ ಪುತ್ರ ನಿಗೂಢ ಸಾವು – ಬಿಜೆಪಿ ಲೀಡರ್ ಅಪರ್ಣಾ ಯಾದವ್ ಗಂಡ ಸಾವನ್ನಪ್ಪಿದ್ದು ಹೇಗೆ?

ಭಾರತೀಯ ಜನತಾ ಪಕ್ಷದ ನಾಯಕಿ ಮತ್ತು ಉತ್ತರ ಪ್ರದೇಶ ಮಹಿಳಾ ಆಯೋಗದ ಉಪಾಧ್ಯಕ್ಷೆ ಅಪರ್ಣಾ ಯಾದವ್ ಅವರ ಪತಿ ಪ್ರತೀಕ್ ಯಾದವ್ ನಿಧನರಾಗಿದ್ದಾರೆ. ಪ್ರತೀಕ್ ಯಾದವ್ ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರ ಪುತ್ರ.

ಇದನ್ನೂ ಓದಿ:ದಿಲೀಪ್ ರಾಜ್ ಮುದ್ದಾದ ಸಂಸಾರದ ಮೇಲೆ ವಿಧಿಯ ಕಣ್ಣು – ವೃತ್ತಿ ಬದುಕು, ವೈಯಕ್ತಿಕ ಬದುಕಿನಲ್ಲೂ ಮಾದರಿ ಎಜೆ ದಂಪತಿ

ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರ ಪುತ್ರ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ಅವರ ಮಲಸಹೋದರ ಪ್ರತೀಕ್ ಯಾದವ್ ಸಾವನ್ನಪ್ಪಿದ್ದಾರೆ. 38 ವರ್ಷದ ಪ್ರತೀಕ್ ಯಾದವ್ ಸಾವು ನಿಗೂಢವಾಗಿದೆ. ಫಿಟ್ನೆಸ್ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಪ್ರತೀಕ್‌, ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದರು. ಬುಧವಾರ ಬೆಳಗ್ಗೆ ಲಖ್ನೋದ ಸಿವಿಲ್ ಆಸ್ಪತ್ರೆಯಲ್ಲಿ ಪ್ರತೀಕ್ ಕೊನೆಯುಸಿರೆಳೆದರು. ಪ್ರತೀಕ್ ಯಾದವ್ ಅವರ ಪತ್ನಿ ಅಪರ್ಣಾ ಯಾದವ್ ಬಿಜೆಪಿ ನಾಯಕಿಯಾಗಿದ್ದಾರೆ. ಪ್ರತೀಕ್‌ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಸಮಾಜವಾದಿ ಪಕ್ಷ, ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದೆ. ಪ್ರತೀಕ್ ಯಾದವ್ ಅವರ ನಿಧನವು ತೀವ್ರ ದುಃಖ ತಂದಿದೆ. ಭಗವಂತನು ಅಗಲಿದ ಆತ್ಮಕ್ಕೆ ಶಾಂತಿ ನೀಡಲಿ ಎಂದು ಬರೆದುಕೊಂಡಿದೆ.

ಪ್ರತೀಕ್ ಯಾದವ್ ಅವರ ಸಾವಿನ ಬಗ್ಗೆ ಹಲವು ಅನುಮಾನ ಸೃಷ್ಟಿಯಾಗಿದೆ. ವೈದ್ಯರ ಪ್ರಕಾರ, ಅವರು ಕರೆತರುವ ಮೊದಲೇ ಮೃತಪಟ್ಟಿದ್ದರು. ಸುಮಾರು 20 ಹುಡುಗರು ಪ್ರತೀಕ್ ಯಾದವ್ ಅವರನ್ನು ಸಿವಿಲ್ ಆಸ್ಪತ್ರೆಗೆ ಕರೆದೊಯ್ದರು. ಆಸ್ಪತ್ರೆ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದೆ ಎಂದು ವೈದ್ಯರು ತಿಳಿಸಿದ್ದಾರೆ. ಪ್ರತೀಕ್ ಯಾದವ್ ಅವರ ಮರಣೋತ್ತರ ಪರೀಕ್ಷೆಯನ್ನು ಈಗ ಹತ್ತಿರದ ಕೆಜಿಎಂಯುನಲ್ಲಿ ನಡೆಸಲಾಗುತ್ತಿದೆ. ಸಿಎಂಒ ಮೇಲ್ವಿಚಾರಣೆಯಲ್ಲಿ ಮೂರರಿಂದ ನಾಲ್ಕು ವೈದ್ಯರ ತಂಡವು ಮರಣೋತ್ತರ ಪರೀಕ್ಷೆ ನಡೆಸುವ ನಿರೀಕ್ಷೆಯಿದೆ.

ಅಪರ್ಣಾ ಮತ್ತು ಪ್ರತೀಕ್ ನಡುವೆ ಇತ್ತೀಚೆಗೆ ಜಗಳವಾಗಿತ್ತು, ಆದರೆ ಕೆಲವು ದಿನಗಳ ನಂತರ ವಿವಾದ ಕಡಿಮೆಯಾಯಿತು. ಇಬ್ಬರೂ ಒಟ್ಟಿಗೆ ಇರುವ ಫೋಟೋವನ್ನು ಹಂಚಿಕೊಂಡಿದ್ದು, ಎಲ್ಲವೂ ಚೆನ್ನಾಗಿದೆ ಎಂದು ಹೇಳಿಕೊಂಡರು. ಮಾಧ್ಯಮ ವರದಿಗಳ ಪ್ರಕಾರ, ಅವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ಚಿಕಿತ್ಸೆ ಪಡೆಯುತ್ತಿದ್ದರು.

Sulekha

Leave a Reply

Your email address will not be published. Required fields are marked *