ಪಂಜಾಬ್ ಕಿಂಗ್ ಕ್ಯಾಪ್ಟನ್ ಶ್ರೇಯಸ್ ಎಡವಿದ್ದೆಲ್ಲಿ? – ಐಪಿಎಲ್‌ನಲ್ಲಿ ಕಳಪೆ ಬ್ಯಾಟಿಂಗ್‌ಗೆ ಸೂರ್ಯ ನಾಯಕತ್ವ ಕೈತಪ್ಪುತ್ತಾ?

ಪಂಜಾಬ್ ಕಿಂಗ್ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಸತತ ಸೋಲಿಗೆ ಕಾರಣವೇನು? – ಕೃನಾಲ್ ಪಾಂಡ್ಯ ಕೆಣಕಿದ ಬದ್ರಿನಾಥ್ ವಜಾ ಗೊಳ್ತಾರಾ?, ಬ್ಯಾಟಿಂಗ್‌ನಲ್ಲಿ ಕಳಪೆ ಫಾರ್ಮ್ ಪ್ರದರ್ಶಿಸುತ್ತಿರುವ ಸೂರ್ಯ ಟಿ20 ನಾಯಕತ್ಸ ಕಳೆದುಕೊಳ್ತಾರಾ?, ಈ ಎಲ್ಲಾ ಸುದ್ದಿಗಳ ಹೈಲೆಟ್ಸ್ ಇಲ್ಲಿದೆ.
ಇದನ್ನೂ ಓದಿ:ಮಿಡಲ್ ಫಿಂಗರ್ ತೋರಿಸಿ ಕೆಟ್ರಾ ಟಿಮ್ ಡೇವಿಡ್ ?– ಅಶ್ಲೀಲ ಸನ್ನೆಗೆ ಬ್ಯಾನ್ ಭೀತಿ
ಮುಂಬೈ ಇಂಡಿಯನ್ಸ್ ವಿರುದ್ಧ ಆರ್‌ಸಿಬಿ ಆಟಗಾರ ಟಿಮ್ ಡೇವಿಡ್ ಮಿಡಲ್ ಫಿಂಗರ್ ತೋರಿಸಿ ಅನಗತ್ಯ ವಿವಾದ ಮಾಡಿಕೊಂಡಿದ್ದರು. ಇದೀಗ ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಕಾರಣಕ್ಕೆ ಅವರಿಗೆ ದಂಡ ವಿಧಿಸಲಾಗಿದೆ. ಐಪಿಎಲ್ ನಿಯಮ 2.6 ರ ಅಡಿಯಲ್ಲಿ ‘ಅಸಭ್ಯ, ಆಕ್ಷೇಪಾರ್ಹ ಅಥವಾ ಅವಮಾನಕರ’ ವರ್ತನೆ ಎಂದು ಪರಿಗಣಿಸಲಾಗಿದೆ. ಪಂದ್ಯದ ಸಂಭಾವನೆಯಲ್ಲಿ ಶೇ. 30ರಷ್ಟು ದಂಡ ಮತ್ತು ಎರಡು ಡಿಮೆರಿಟ್ ಪಾಯಿಂಟ್‌ಗಳನ್ನು ನೀಡಲಾಗಿದೆ. ಟಿಮ್ ಡೇವಿಡ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ವಿಧಿಸಲಾದ ದಂಡಕ್ಕೆ ಸಮ್ಮತಿಸಿದ್ದಾರೆ.
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಗೆಲುವಿನ ರೂವಾರಿಯಾದ ಆರ್‌ಸಿಬಿ ಆಲ್-ರೌಂಡರ್ ಕೃನಾಲ್ ಪಾಂಡ್ಯ, ಪಂದ್ಯದ ನಂತರ ತಮ್ಮ ಗಾಯದ ಗುರುತುಗಳನ್ನು ಫೋಟೋ ಮೂಲಕ ಶೇರ್ ಮಾಡಿಕೊಂಡಿದ್ದಾರೆ. ‘ಕೆಲವು ಗಾಯದ ಗುರುತುಗಳು ನಾವು ನಡೆಸಿದ ಹೋರಾಟಕ್ಕೆ ಯೋಗ್ಯವಾದ ಪುರಾವೆಗಳಾಗಿವೆ’ ಎಂದು ಬರೆಯುವ ಮೂಲಕ ತಮ್ಮ ಹೋರಾಟದ ಹಾದಿಯನ್ನು ವಿವರಿಸಿದ್ದಾರೆ. ದೀಪಕ್ ಚಹರ್ ಎಸೆದ ವೇಗದ ಚೆಂಡು ನೇರವಾಗಿ ಕೃನಾಲ್ ಅವರ ಹೊಟ್ಟೆಯ ಭಾಗಕ್ಕೆ ಬಡಿದಿತ್ತು. ,ಸ್ವಲ್ಪ ಹೊತ್ತು ಕೃನಾಲ್ ಪಾಂಡ್ಯ ನೋವಿನಿಂದ ಒದ್ದಾಡಿದ್ದರು. ಇದೀಗ ಕೃನಾಲ್ ತನ್ನ ಗಾಯ ತೋರಿಸುವ ಮೂಲಕ ತನಗಾದ ನೋವನ್ನು ಹಂಚಿಕೊಂಡಿದ್ದಾರೆ.
ಮತ್ತೊಂದೆಡೆ ಕ್ರುನಾಲ್ ಪಾಂಡ್ಯ ವಿರುದ್ಧ ತನ್ನ ಕೆಟ್ಟ ನಾಲಗೆ ಹರಿಬಿಟ್ಟ ಬದ್ರಿನಾಥ್ ಅವರನ್ನು ವಜಾ ಮಾಡಿ ಎಂಬ ಒತ್ತಾಯ ಕೇಳಿಬಂದಿದೆ. ಆರ್‌ಸಿಬಿ ಗೆಲುವು ಕಾಣುತ್ತಿದ್ದಂತೆ ತಮಿಳು ಕಮೆಂಟೇಟರ್ ಎಸ್ ಬದ್ರಿನಾತ್ ವಿಷ ಕಕ್ಕಿದ್ದಾರೆ. ಕ್ರುನಾಲ್ ಪಾಂಡ್ಯ ಇಂಜುರಿಯಿದ್ದ ಪಿಚ್ ಮೇಲೆ ಬಿದ್ದಾಗ, ಆತ ಅಲ್ಲೆ ಸಾಯಲಿ, ಆರ್‌ಸಿಬಿ ಸೋಲಲಿ ಎಂದು ಕಮೆಂಟ್ರಿ ಹೇಳಿದ್ದಾರೆ. ಹೀಗಾಗಿ ತಮಿಳು ಕಮೆಂಟೇಟರ್, ಮಾಜಿ ಕ್ರಿಕೆಟಿಗ ಎಸ್ ಬದ್ರಿನಾಥ್ ಅವರಿಗೆ ಯಾವುದೇ ಕ್ರಿಕೆಟಿಂಗ್ ಹುದ್ದೆ ನೀಡಬಾರದು. ಕ್ರೀಡಾಸ್ಪೂರ್ತಿಯೇ ಇಲ್ಲದ ಎಸ್ ಬದ್ರಿನಾಥ್ ಅವರನ್ನು ವಜಾ ಮಾಡಿ ಎಂಬ ಆಗ್ರಹ ಹೆಚ್ಚಾಗಿದೆ.
ಪಂಜಾಬ್ ಕಿಂಗ್ಸ್ ಸತತ ನಾಲ್ಕು ಸೋಲುಗಳಿಂದ ಕೆಂಗಟ್ಟಿದೆ. ಇತ್ತ ಆರ್‌ಸಿಬಿ ಫ್ಯಾನ್ಸ್ ಮಾತ್ರ ಪಂಜಾಬ್ ಸೋಲಿಗೆ ತಮ್ಮದೇ ಆದ ಕಾರಣ ನೀಡಿದ್ದಾರೆ. ಐಪಿಎಲ್‌ನಲ್ಲಿ ಆರ್‌ಸಿಬಿ 49 ರನ್‌ಗಳಿಗೆ ಆಲೌಟ್ ಆದ ಘಟನೆಯನ್ನು ಪಂಜಾಬ್ ತಂಡ ಟ್ರೋಲ್ ಮಾಡಿತ್ತು. ಆದರೆ ಈಗ ಪಂಜಾಬ್ ಕಿಂಗ್ಸ್ ಸತತ ಸೋಲು ಕಂಡಿದೆ. ಇದನ್ನು ಆರ್‌ಸಿಬಿ ಅಭಿಮಾನಿಗಳು ’49ರ ಶಾಪ’ ಎಂದು ಬಣ್ಣಿಸುತ್ತಿದ್ದು, ತಮ್ಮ ತಂಡವನ್ನು ಕೆಣಕಿದವರಿಗೆ ಕರ್ಮ ತಿರುಗಿ ಬೀಳುತ್ತಿದೆ ಎಂದು ಹೇಳುತ್ತಿದ್ದಾರೆ.
ಡಿಸಿ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಯುಜ್ವೇಂದ್ರ ಚಹಲ್ರಿಂದ ಒಂದೇ ಒಂದು ಓವರ್ ಮಾಡಿಸದೆ ಅಚ್ಚರಿ ಮೂಡಿಸಿದರು. ಇದು ತಂಡದ ಸೋಲಿಗೆ ಕಾರಣ ಎಂದು ಕ್ರಿಕೆಟ್ ದಿಗ್ಗಜರು ಬಣ್ಣಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಶ್ರೇಯಸ್, ‘ಚಹಾಲ್‌ಗೆ ಬೌಲಿಂಗ್ ನೀಡುವುದರ ಬಗ್ಗೆ ನನ್ನ ಮನಸ್ಸಿನಲ್ಲಿ ಖಂಡಿತವಾಗಿ ಯೋಚನೆ ಇತ್ತು. ಆದರೆ ಚೆಂಡು ತುಂಬಾ ಸೀಮ್ ಆಗುತ್ತಿತ್ತು ಮತ್ತು ಸೀಮರ್‌ಗಳಿಗೆ ಚೆನ್ನಾಗಿ ಸಹಾಯ ಮಾಡುತ್ತಿತ್ತು. ಹೀಗಾಗಿ ಚಹಲ್‌ಗೆ ಬಾಲ್ ಕೊಡಲಿಲ್ಲ ಎಂದು ಹೇಳಿದ್ದಾರೆ.
ಅಂಕಪಟ್ಟಿಯಲ್ಲಿ ನಂಬರ್ ಒನ್ ಪಟ್ಟಕ್ಕೇರಿದ ಪಂಜಾಬ್ ಕಿಂಗ್ಸ್ ಈಗ ನಾಲ್ಕನೇ ಸ್ಥಾನದಲ್ಲಿ ತಟಸ್ಥವಾಗಿದೆ. ಈಗಾಗಲೇ ಪಂಜಾಬ್ ರಾಜಸ್ಥಾನ್, ಗುಜರಾತ್ ಹಾಗೂ ಹೈದರಾಬಾದ್ ವಿರುದ್ಧ ಸೋಲು ಕಂಡಿತ್ತು. ಇದೀಗ ಡೆಲ್ಲಿ ವಿರುದ್ಧವೂ ಸೋಲು ಕಂಡಿದೆ. ಇನ್ನೂ ಲೀಗ್ನಲ್ಲಿ 3 ಪಂದ್ಯಗಳನ್ನಾಡಲಿದ್ದು, ಕನಿಷ್ಠ ಎರಡು ಪಂದ್ಯಗಳನ್ನ ಗೆದ್ದರೆ ಮಾತ್ರ ಪ್ಲೇ ಆಫ್ ಪ್ರವೇಶಿಸಲಿದೆ. ಇಲ್ಲವಾದರೆ ಪ್ಲೇ ಆಫ್ರೇಸ್ನಿಂದ ಪಂಜಾಬ್ ಔಟ್ ಆಗಲಿದೆ.
ಪಂಜಾಬ್ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಆರ್‌ಸಿಬಿ ಕಿಂಗ್ ವಿರಾಟ್ ಕೊಹ್ಲಿ ದಾಖಲೆಯನ್ನು ಸರಿಗಟ್ಟಿದ್ದಾರೆ.. ಐಪಿಎಲ್ 2025 ರಿಂದೀಚೆಗೆ, ಅತ್ಯಧಿಕ ಅರ್ಧಶತಕಗಳನ್ನು ಬಾರಿಸಿದವರ ಪಟ್ಟಿಯಲ್ಲಿ ಶ್ರೇಯಸ್ ಅಯ್ಯರ್ 11 ಅರ್ಧಶತಕಗಳೊಂದಿಗೆ ವಿರಾಟ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಈ ಸಾಧನೆಯನ್ನು 12 ಬಾರಿ ಮಾಡಿರುವ ಸಾಯಿ ಸುದರ್ಶನ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಐಪಿಎಲ್ ಅಂಗಳದಲ್ಲಿ ಬಲಿಷ್ಠ ತಂಡಗಳ ಮುಖಾಮುಖಿಗೆ ಕೌಂಟ್‌ಡೌನ್ ಶುರುವಾಗಿದೆ. ಗುಜರಾತ್ ಟೈಟಾನ್ಸ್ ಮತ್ತು ಸನ್‌ರೈಸರ್ಸ್ ಹೈದ್ರಾಬಾದ್ ತಂಡಗಳ ನಡುವೆ ಸೆಣಸಾಟ ನಡೆಯಲಿದೆ. ಜಿಟಿ ತಂಡ 8ನೇ ಗೆಲುವು ದಾಖಲಿಸುವ ಜೋಶ್‌ನಲ್ಲಿದೆ. ಮತ್ತೊಂದೆಡೆ ಹೈದ್ರಾಬಾದ್ ತಂಡ ಕೂಡಾ ಗೆಲ್ಲುವ ಫೆವರೇಟ್ ತಂಡವಾಗಿದ್ದು, ಮಂಗಳವಾರದ ಈ ಪಂದ್ಯ ಹೈವೋಲ್ಟೇಜ್ ಪಂದ್ಯವಾಗಿದೆ.
ಕೊನೆಯ ಎಸೆತದಲ್ಲಿ ಹೆಚ್ಚು ಪಂದ್ಯಗಳನ್ನು ಗೆದ್ದ ತಂಡಗಳ ಪಟ್ಟಿಯಲ್ಲಿ ಆರ್‌ಸಿಬಿ ನಾಲ್ಕನೇ ಸ್ಥಾನಕ್ಕೇರಿದೆ. ರಾಯ್‌ಪುರದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕೊನೆಯ ಎಸೆತದಲ್ಲಿ ಆರ್‌ಸಿಬಿ ರೋಚಕ ಜಯ ಸಾಧಿಸಿತ್ತು. ಈ ಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 9 ಗೆಲುವುಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್ 7 ಗೆಲುವುಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ರಾಜಸ್ಥಾನ ರಾಯಲ್ಸ್ 5 ಗೆಲುವುಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.
ಟೀಂ ಇಂಡಿಯಾ ಟಿ20 ನಾಯಕತ್ವದ ರೇಸ್‌ನಲ್ಲಿ ಸಂಜು ಸ್ಯಾಮ್ಸನ್ ಹೆಸರು ಮುಂಚೂಣಿಗೆ ಬಂದಿದೆ. ಕಳಪೆ ಫಾರ್ಮ್‌ನಿಂದ ಬಳಲುತ್ತಿರುವ ಸೂರ್ಯಕುಮಾರ್ ಯಾದವ್ ಬದಲು ಸಂಜುಗೆ ನಾಯಕತ್ವದ ಪಟ್ಟ ಸಿಗುವ ಸಾಧ್ಯತೆ ಇದೆ. ಐಪಿಎಲ್ ನಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ಸಂಜು ಸ್ಯಾಮ್ಸನ್, ಶೀಘ್ರದಲ್ಲೇ ಟೀಂ ಇಂಡಿಯಾ ಟಿ20 ತಂಡದ ನಾಯಕತ್ವ ವಹಿಸಿಕೊಳ್ಳುವ ಸಾಧ್ಯತೆ ಇದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಸಂಜು ನಾಯಕತ್ವದ ಗುಣಗಳನ್ನು ಮೆಚ್ಚಿಕೊಂಡಿದೆ ಎನ್ನಲಾಗಿದೆ.

ನೋಡಿರಿ

