ತಂಡಕ್ಕಾಗಿ ಆಡಲ್ವಾ ಸೂರ್ಯವಂಶಿ? – 2 ಸೀಸನ್‌ಗೇ ವಂಡರ್ ಕಿಡ್ ಸೈಡ್‌ಲೈನ್?
ಬೇಬಿ ಬಾಸ್ ಆಟ ಕಂಡ್ರೆ ಉರಿ ಯಾಕೆ?

ವೈಭವ್ ಸೂರ್ಯವಂಶಿ.. ಈ 15ವರ್ಷದ ಪೋರನ ವೈಭವದ ಆಟಕ್ಕೆ ಇಡೀ ಕ್ರಿಕೆಟ್ ಜಗತ್ತೇ ಬೆರಗಾಗಿದೆ.. ಬ್ಯಾಟ್ ಹಿಡಿದು ಬೀಸೋದಿಕ್ಕೆ ಶುರು ಮಾಡಿದ್ರೆ ಬರೀ ಸಿಕ್ಸ್, ಫೋರ್ ಸುರಿಮಳೆ ಫಿಕ್ಸ್.. ಈ ಬಾರಿಯ ಐಪಿಎಲ್ ಸೀಸನ್ 19ರಲ್ಲೂ RR ತಂಡದ ಭಾಗವಾಗಿರುವ ವೈಭವ್ ಸೂರ್ಯವಂಶಿ ಗೋಲ್ಡನ್ ಫಾರ್ಮ್ನಲ್ಲಿದ್ದು, ಬೌಲರ್‌ಗಳನ್ನು ಬೆಂಡುತ್ತಿದ್ದಾರೆ. ಸ್ಟೇಡಿಯಂನ ದಶದಿಕ್ಕುಗಳಲ್ಲಿ ಬೌಂಡರಿ, ಸಿಕ್ಸರ್ ಬಾರಿಸುವ ಮೂಲಕ ಅದ್ಭುತ ಪ್ರದರ್ಶನ ನೀಡ್ತಿದ್ದಾರೆ. ತನ್ನ ಆಟದ ಮೂಲಕವೇ ಸಾಕಷ್ಟು ರೆಕಾರ್ಡ್‌ಗಳನ್ನ ಬ್ರೇಕ್ ಮಾಡಿದ್ದಾರೆ. ಐಪಿಎಲ್‌ನಲ್ಲಿ ಮಿಂಚುತ್ತಿರೋ ವೈಭವ್‌ನ ಟೀಂ ಇಂಡಿಯಾಗೂ ಸೆಲೆಕ್ಟ್ ಮಾಡ್ಬೇಕು ಅನ್ನೋ ಅಭಿಪ್ರಾಯ ಕೂಡ ವ್ಯಕ್ತವಾಗ್ತಿದೆ. ಆದ್ರೀಗ ಅದ್ಯಾಕೋ ಸೂರ್ಯವಂಶಿ ಆಟದ ಬಗ್ಗೆ ಪರವಿರೋಧ ಚರ್ಚೆ ಶುರುವಾಗಿದೆ.
ಇದನ್ನೂ ಓದಿ: ಅಸ್ಸಾಂ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಹಿಮಂತ ಬಿಸ್ವಾ ಶರ್ಮಾ!
ಐಪಿಎಲ್ 2026ರಲ್ಲಿ RR ತಂಡದಲ್ಲಿ ಆಡ್ತಿರೋ ವೈಭವ್ ತನ್ನ ಸ್ಫೋಟಕ ಬ್ಯಾಟಿಂಗ್ ಮೂಲಕ ವಿಶ್ವ ಕ್ರಿಕೆಟ್ ಲೋಕವನ್ನೇ ಬೆರಗುಗೊಳಿಸಿದ್ದಾರೆ. ಪ್ರತಿದಿನ ಹೊಸ ಹೊಸ ದಾಖಲೆಗಳನ್ನ ಬರಿತಾ ಇದ್ದಾರೆ. ಈಗಾಗ್ಲೇ ಐಪಿಎಲ್‌ನಲ್ಲಿ 100 ಸಿಕ್ಸ್ ಬಾರಿಸೋ ಮೂಲಕ ಅತ್ಯಂತ ವೇಗವಾಗಿ ಶತಕ ಸಿಡಿಸಿದ ಭಾರತೀಯ ಕಿರಿಯ ಆಟಗಾರ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ವೈಭವ್ ಬಾಟ್ ಮೂಲಕ ಸದ್ದು ಮಾಡ್ತಿದ್ದಂತೆ ಈ ಫೋರನ ಆಟದ ಬಗ್ಗೆ ದೇಶ ವಿದೇಶಗಳಲ್ಲೂ ಪಾಸಿಟಿವ್, ನೆಗೆಟಿವ್ ಚರ್ಚೆ ಶುರುವಾಗಿದೆ. ವೈಭವ್ ತಂಡಕ್ಕಾಗಿ ಆಡ್ತಿಲ್ಲ.. ಹೆಚ್ಚು ಸ್ಕೋರ್ ಮಾಡೋದಕ್ಕಷ್ಟೇ ಫೋಕಸ್ ಮಾಡ್ತಿದ್ದಾರೆ ಅನ್ನೋ ಮಾತು ಕೇಳಿಬಂದಿದೆ. ಮತ್ತೊಂದ್ಕಡೆ ಸೂರ್ಯವಂಶಿಯನ್ನ ಸೈಡ್ ಲೈನ್ ಮಾಡಲಾಗ್ತಿದೆ ಅನ್ನೋ ಚರ್ಚೆ ಕೂಡ ಶುರುವಾಗಿದೆ.
ಹೌದು.. ವೈಭವ್ ಸೂರ್ಯವಂಶಿಗೆ ಐಪಿಎಲ್ ಟೂರ್ನಿಯಲ್ಲಿ 2ನೇ ಸೀಸನ್.. ಕಳೆದ ವರ್ಷ ಐಪಿಎಲ್ ಡೆಬ್ಯೂ ಮ್ಯಾಚಲ್ಲಿ ರಾಜಸ್ಥಾನ ರಾಯಲ್ಸ್ ಪರ ಸಿಕ್ಸ್ ಬಾರಿಸೋ ಮೂಲಕ ಕೆರಿಯರ್ ಸ್ಟಾರ್ಟ್ ಮಾಡಿದ್ದ ವೈಭವ್ 35 ಬಾಲ್ಗಳಲ್ಲೇ ಸೆಂಚುರಿ ಹೊಡೆದಿದ್ರು. ಈ ಸೀಸನ್‌ನಲ್ಲಿ ಎಸ್‌ಆರ್‌ಹೆಚ್ ವಿರುದ್ಧದ ಪಂದ್ಯದಲ್ಲಿ 37 ಎಸೆತಗಳಲ್ಲೇ ಆಫ್ ಸೆಂಚುರಿ ಬಾರಿಸಿದ್ರು. 15 ನೇ ವಯಸ್ಸಿನಲ್ಲೇ ಅಂತರರಾಷ್ಟ್ರೀಯ ಮಟ್ಟದ ಬೌಲರ್‌ಗಳನ್ನೂ ಕೇರ್ ಮಾಡದೆ ಫಿಯರ್ಲೆಸ್ ಆಗಿ ಬ್ಯಾಟಿಂಗ್ ಮಾಡ್ತಿದ್ದಾರೆ. ವೈಭವ್ ವೈಭವದ ಆಟವನ್ನ ಕ್ರಿಕೆಟ್ ಜಗತ್ತಿನ ದಿಗ್ಗಜ ಆಟಗಾರರು ಹೊಗಳ್ತಿದ್ದಾರೆ. ಐಪಿಎಲ್, ಅಂಡರ್-19 ವಿಶ್ವಕಪ್ ಫೈನಲ್, ಅಂಡರ್-19 ಯೂತ್ ಟೆಸ್ಟ್ , ಅಂಡರ್-19 ಏಷ್ಯಾ ಕಪ್ , ಸೈಯದ್ ಮುಷ್ತಾಕ್ ಅಲಿ ಟಿ20, ವಿಜಯ್ ಹಜಾರೆ ಟ್ರೋಫಿ ಹೀಗೆ ಎಲ್ಲಾ ಫಾರ್ಮೆಟ್ಗಳಲ್ಲೂ ಶತಕದ ಮೂಲಕವೇ ಕ್ರಿಕೆಟ್ ಜಗತ್ತಿಗೆ ಅತಿದೊಡ್ಡ ಮೆಸೆಜ್ ಪಾಸ್ ಮಾಡ್ತಿದ್ದಾರೆ. ಬುಮ್ರಾ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್‌ನಂತಹ ಬೌಲರ್‌ಗಳನ್ನು ಧ್ವಂಸ ಮಾಡುತ್ತಿದ್ದಾರೆ. ಆದ್ರೀಗ ವೈಭವ್‌ಗೆ ಕೆಲ ದಿಗ್ಗಜರು ಕೆಲ ಕಿವಿಮಾತು ಹೇಳ್ತಿದ್ದಾರೆ.
ಹೌದು ಐಪಿಎಲ್‌ನಲ್ಲಿ ಅಬ್ಬರಿಸ್ತಿರುವ ವೈಭವ್ ಸೂರ್ಯವಂಶಿಗೆ ಗುಜರಾತ್ ಟೈಟನ್ಸ್ ತಂಡದ ಬ್ಯಾಟಿಂಗ್ ಕೋಚ್ ಮ್ಯಾಥ್ಯೂ ಹೇಡನ್ ಕಠಿಣ ಸಂದೇಶ ನೀಡಿದ್ದಾರೆ. ಕೇವಲ ಆಕ್ರಮಣಕಾರಿಯಾಗಿ ಆಡುವುದಕ್ಕಿಂತ ತಂಡದ ಗೆಲುವಿನ ಕಡೆಗೂ ಗಮನ ಕೊಡಬೇಕು. ಪವರ್‌ಪ್ಲೇ ಸಮಯದಲ್ಲಿ ಆಕ್ರಮಣಕಾರಿಯಾಗಿ ಆಡಿ ನಿನ್ನನ್ನ ನೀನು ಸಮರ್ಥಿಸಿಕೊಳ್ಳೊದು ಮಾತ್ರವಲ್ಲ ತಂಡದ ಗೆಲ್ಲಿಸೋದ್ರ ಕಡೆಗೂ ಗಮನಹರಿಸ್ಬೇಕು. ಕ್ರೂಷಿಯಲ್ ಟೈಮ್‌ನಲ್ಲಿ ತಂಡಕ್ಕೆ ನೆರವಾಗೋದು ಕೂಡ ಮುಖ್ಯ ಅಂತ ಹೇಳಿದ್ದಾರೆ. ಮತ್ತೊಂದ್ಕಡೆ ಇಂಗ್ಲೆಂಡ್ ತಂಡದ ಮಾಜಿ ನಾಯಕರಾದ ಮೈಕೆಲ್ ವಾಘನ್ ಸೂರ್ಯವಂಶಿಗೆ ಆಟದ ಸ್ಪೀಡ್ ನೋಡಿ ಭಯ ವ್ಯಕ್ತಪಡಿಸಿದ್ದಾರೆ. ವೈಭವ್ ಕ್ರಿಕೆಟ್ ಆಡುತ್ತಿರುವ ವೇಗವನ್ನು ನೋಡಿದ್ರೆ ಆತ 21ನೇ ವಯಸ್ಸಿನಲ್ಲೇ ಸುಸ್ತಾಗಬಹುದು ಹೇಳಿದ್ದಾರೆ. ಅಂದ್ರೆ ವೈಭವ್ ಹೊಡಿ ಬಡಿ ಆಟ ಆಡೋದ್ರ ಜೊತೆ ತನ್ನ ಕೆರಿಯರ್ ಬಗ್ಗೆ ಕೂಡ ಗಮನಹರಿಸ್ಬೇಕು. ದೀರ್ಘಕಾಲ ಕ್ರಿಕೆಟ್ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವತ್ತ ಯೋಚಿಸ್ಬೇಕು ಎಂದಿದ್ದಾರೆ.
ಇನ್ನು ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ವೈಭವ್ ಅವರ ಬ್ಯಾಟಿಂಗ್ನಲ್ಲಿನ ಕೆಲ ಸಮಸ್ಯೆಗಳನ್ನು ಬಹಿರಂಗಪಡಿಸಿದ್ದಾರೆ. ವೈಭವ್ ಅಪ್ಪಟ ಆಧುನಿಕ ಟಿ20 ಬ್ಯಾಟರ್. ಚೆಂಡಿನಿಂದ ಸ್ವಲ್ಪ ದೂರ ನಿಂತು ಮಿಡಲ್ ಸ್ಟಂಪ್ ಮೇಲಿರುವ ಚೆಂಡನ್ನು ಪಾಯಿಂಟ್ ದಿಕ್ಕಿನತ್ತ ಬಾರಿಸುವುದು ಇವರ ಶೈಲಿ. ಇದು ಟಿ20 ಕ್ರಿಕೆಟ್‌ನಲ್ಲಿ ರನ್ ಗಳಿಸಲು ಸಹಕಾರಿ. ಆದ್ರೆ, ಟೆಸ್ಟ್ ಕ್ರಿಕೆಟ್‌ನಲ್ಲಿ ಇಂತಹ ಬ್ಯಾಟಿಂಗ್ ಅಸಾಧ್ಯ. ಇಂಗ್ಲೆಂಡ್, ಆಸ್ಟ್ರೇಲಿಯಾ ಅಥವಾ ಸೌತ್ ಆಫ್ರಿಕಾದಂತಹ ದೇಶಗಳಲ್ಲಿ ಚೆಂಡಿನಿಂದ ದೂರ ನಿಂತು ಬ್ಯಾಟ್ ಮಾಡಿದ್ರೆ 20 ರನ್ ಗಳಿಸುವುದು ಕೂಡ ಕಷ್ಟ. ಈ ತಪ್ಪುಗಳನ್ನು ತಿದ್ದಿಕೊಳ್ಳದಿದ್ದರೆ 3 ಸ್ವರೂಪಗಳಲ್ಲಿ ಆಡಲು ಸಾಧ್ಯವಾಗುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಇನ್ನು ಕೆಲ ಕ್ರಿಕೆಟ್ ದಿಗ್ಗಜರು ವೈಭವ್ ಕೆರಿಯರ್ ಗ್ರೋಥ್‌ಗಾಗಿ ಸಲಹೆಗಳನ್ನ ನೀಡ್ತಾ ಇದ್ರೆ, ಮತ್ತೊಂದ್ಕಡೆ ಸೂರ್ಯವಂಶಿ ಆಟದ ಬಗ್ಗೆ ಕೂಡ ತಕರಾರು ಎತ್ತುತ್ತಿದ್ದಾರೆ. ಮೊನ್ನೆಯಷ್ಟೇ ಪಾಕ್ ಕ್ರಿಕೆಟ್ ವಿಶ್ಲೇಷಕರೊಬ್ಬರು ವೈಭವ್ ಬ್ಯಾಟ್ ನಲ್ಲಿ ಎಐ ಚಿಪ್ ಇದೆ ಅಂತ ಹೇಳಿದ್ರು. ಇದಕ್ಕೆ ಬೇಬಿ ಬಾಸ್ ಕೂಡ ತನ್ನದೇ ಸ್ಟೈಲ್‌ನಲ್ಲಿ ಕೌಂಟರ್ ಕೊಟ್ಟಿದ್ರು. ವೈಭವ್‌ಗೆ ಎಷ್ಟೇ ಕಮೆಂಟ್ಸ್ ಬಂದ್ರೂ ಆತ ತಾನಾಯ್ತು.. ತನ್ನ ಆಟ ಆಯ್ತು ಅಂತ ಇದ್ದಾರೆ. ತನ್ನ ಎದುರಾಳಿ ಯಾರು? ಎದುರು ಯಾವ ಬೌಲರ್ಸ್ ಇದ್ದಾರೆ ಅನ್ನೋದನ್ನ ಯೋಚನೆ ಮಾಡದೇ ಆಟದ ಮೇಲಷ್ಟೇ ಫೋಕಸ್ ಮಾಡ್ತಿದ್ದಾರೆ. ವೈಭವ್ ಅಬ್ಬರ ಆಟ ಹೀಗೆ ಮುಂದುವರಿಯಲಿ.. ಟೀಂ ಇಂಡಿಯಾದಲ್ಲಿ ಚಾನ್ಸ್ ಸಿಗುವಂತಾಗಲಿ ಅನ್ನೋದೇ ಎಲ್ಲರ ಆಶಯ.

ನೋಡಿರಿ

