ಬಾಲಕನ ಚಿರತೆ ಕೊಂದ ಪ್ರಕರಣಕ್ಕೆ ಎಚ್ಚೆತ್ತ ಅರಣ್ಯಇಲಾಖೆ – ನಾಗಮಲೆ ಕ್ಷೇತ್ರದ ಭಕ್ತರಿಗೆ ಹೊಸ ರೂಲ್ಸ್

ಬಾಲಕನ ಚಿರತೆ ಕೊಂದ ಪ್ರಕರಣಕ್ಕೆ ಎಚ್ಚೆತ್ತ ಅರಣ್ಯಇಲಾಖೆ – ನಾಗಮಲೆ ಕ್ಷೇತ್ರದ ಭಕ್ತರಿಗೆ ಹೊಸ ರೂಲ್ಸ್

ಚಾಮರಾಜನಗರದ ನಾಗಮಲೆ ಮಾರ್ಗದಲ್ಲಿ ಚಿರತೆ ದಾಳಿಯಿಂದ ಬಾಲಕ ಸಾವು ಪ್ರಕರಣದಿಂದ ಅರಣ್ಯ ಇಲಾಖೆ ಎಚ್ಚೆತ್ತುಕೊಂಡಿದೆ. ನಾಗಮಲೆ ಕ್ಷೇತ್ರಕ್ಕೆ ಈಗ ಅರಣ್ಯ ಇಲಾಖೆ ದಿಢೀರ್ ಬ್ರೇಕ್ ಹಾಕಿದೆ.

ಇದನ್ನೂ ಓದಿ:ಪೋಷಕರ ಕಣ್ಣೆದುರಲ್ಲೇ ಮಗನನ್ನು ಕೊಂದ ಚಿರತೆ! – ಮೃತ ಬಾಲಕನ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರ

ಮಲೆ ಮಹದೇಶ್ವರ ಬೆಟ್ಟದ ದಟ್ಟ ಅರಣ್ಯದ ನಡುವೆ ಇರುವ ನಾಗಮಲೆಗೆ ಹೋಗುವ ಭಕ್ತರಿಗೆ ಅರಣ್ಯ ಇಲಾಖೆ ಶಾಕ್ ಕೊಟ್ಟಿದೆ. ಇಲಾಖೆಯ ಪ್ರಕಾರ, ಇನ್ಮುಂದೆ ನಾಗಮಲೆಗೆ ಹೋಗಬೇಕೆಂದರೆ ಆನ್‍ಲೈನ್ ನೋಂದಣಿ ಕಡ್ಡಾಯವಾಗುವ ಸಾಧ್ಯತೆಯಿದೆ. ಈಗ ಆನ್‍ಲೈನ್ ಸಿಸ್ಟಮ್ ಇದ್ದರೂ ಯಾರೂ ಪಾಲಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅರಣ್ಯದ ತುಂಬೆಲ್ಲಾ ಸಿಸಿಟಿವಿ ಕ್ಯಾಮೆರಾಗಳು, ಹೆಚ್ಚಿನ ಭದ್ರತಾ ಸಿಬ್ಬಂದಿ ಮತ್ತು ಅಧಿಕೃತ ಗೈಡ್‍ಗಳನ್ನು ನೇಮಿಸಲು ಸಿದ್ಧತೆ ನಡೆಯುತ್ತಿದೆ. ಅಲ್ಲಿಯವರೆಗೆ ಭಕ್ತರಿಗೆ ಪ್ರವೇಶವಿಲ್ಲ ಎಂದು ಅರಣ್ಯ ಇಲಾಖೆ ಸೂಚಿಸಿದೆ.

ಕಾಡುಪ್ರಾಣಿಗಳು ಹೊಂಚು ಹಾಕಿ ಕುಳಿತಿರುವ ಈ ಸಮಯದಲ್ಲಿ ಅನಗತ್ಯ ರಿಸ್ಕ್ ತೆಗೆದುಕೊಳ್ಳುವುದು ಬೇಡ ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ. ಸಂಪೂರ್ಣ ಭದ್ರತಾ ವ್ಯವಸ್ಥೆ ಮುಗಿದ ನಂತರವೇ ಪವಿತ್ರ ಬೆಟ್ಟಕ್ಕೆ ಭಕ್ತರು ಬರಬಹುದು ಎಂದು ಅರಣ್ಯ ಇಲಾಖೆ ಸೂಚಿಸಿದೆ.

ಮತ್ತೊಂದೆಡೆ ನರಹಂತಕ ಚಿರತೆಯನ್ನು ಹಿಡಿಯುವ ಕಾರ್ಯಾಚರಣೆ ಕೂಡಾ ಭರದಿಂದ ಸಾಗಿದೆ. ನಾಲ್ಕು ಕಡೆ ಬೋನ್ ಇಟ್ಟು ಚಿರತೆ ಹಿಡಿಯುವ ಕಾರ್ಯಾಚರಣೆ ಸಾಗಿದೆ.

Sulekha

Leave a Reply

Your email address will not be published. Required fields are marked *