ತಮಿಳುನಾಡಿನಲ್ಲಿ ದಳಪತಿ ದರ್ಬಾರ್! – ವಿಜಯ್‌ ಸಿಎಂ ಆಗುತ್ತಿದ್ದಂತೆ 717 ಮದ್ಯದ ಅಂಗಡಿ ಕ್ಲೋಸ್!‌

ತಮಿಳುನಾಡಿನಲ್ಲಿ ದಳಪತಿ ದರ್ಬಾರ್! – ವಿಜಯ್‌ ಸಿಎಂ ಆಗುತ್ತಿದ್ದಂತೆ 717 ಮದ್ಯದ ಅಂಗಡಿ ಕ್ಲೋಸ್!‌

ತಮಿಳುನಾಡಿನಲ್ಲಿ ದಳಪತಿ ವಿಜಯ್‌ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಬೆನ್ನಲ್ಲೇ ದಳಪತಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ತಮಿಳುನಾಡಿನಲ್ಲಿ 717 ಮದ್ಯದ ಅಂಗಡಿಗಳನ್ನ ಮುಚ್ಚುವಂತೆ ಆದೇಶ ನೀಡಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ ಮಿತವ್ಯಯ ಸಂದೇಶ ಬೆನ್ನಲ್ಲೇ ಕುಸಿದ ಅಡುಗೆ ಎಣ್ಣೆ ದರ! – ಅಕ್ಕಿ ಬೆಲೆ ಹೆಚ್ಚಳ!

ತಮಿಳುನಾಡಿನಾದ್ಯಂತ ದೇವಾಲಯಗಳು, ಶಾಲೆಗಳು ಮತ್ತು ಬಸ್ ನಿಲ್ದಾಣಗಳ 500 ಮೀಟರ್ ವ್ಯಾಪ್ತಿಯೊಳಗೆ ಇರುವ 717 ಸರ್ಕಾರಿ ಮದ್ಯದಂಗಡಿಗಳನ್ನು ಎರಡು ವಾರಗಳೊಳಗೆ ಮುಚ್ಚಲು ಅವರು ಆದೇಶ ನೀಡಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೇರಿದ ತಕ್ಷಣವೇ ವಿಜಯ್ ಈ ಮಹತ್ವದ ಆದೇಶ ಹೊರಡಿಸಿರುವುದು ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿದೆ. ಸಾರ್ವಜನಿಕರ ಹಿತ ಹಾಗೂ ಯುವಜನರನ್ನು ವ್ಯಸನದಿಂದ ದೂರವಿಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ವ್ಯಸನ ಮುಕ್ತ ತಮಿಳುನಾಡು ನಿರ್ಮಿಸುವುದು ಸರ್ಕಾರದ ಗುರಿಯಾಗಿದೆ ಎಂದು ತಿಳಿಸಲಾಗಿದೆ.

ರಾಜ್ಯ ಸರ್ಕಾರದ ಅಧೀನದಲ್ಲಿರುವ TASMAC (ತಮಿಳುನಾಡು ಸ್ಟೇಟ್ ಮಾರ್ಕೆಟಿಂಗ್‌ ಕಾರ್ಪೋರೇಷನ್) ಮೂಲಕ ಈ ಮದ್ಯದಂಗಡಿಗಳು ಕಾರ್ಯನಿರ್ವಹಿಸುತ್ತಿವೆ. ಸರ್ಕಾರದ ಮಾಹಿತಿ ಪ್ರಕಾರ, ಪ್ರಸ್ತುತ ರಾಜ್ಯದಲ್ಲಿ ಒಟ್ಟು 4,765 ಟಿಎಎಸ್‌ಎಮ್‌ಎಸಿ ಅಂಗಡಿಗಳಿದ್ದು, ಅವುಗಳಲ್ಲಿ 276 ದೇವಾಲಯಗಳ ಸಮೀಪ, 186 ಶಿಕ್ಷಣ ಸಂಸ್ಥೆಗಳ ಬಳಿ ಹಾಗೂ 255 ಬಸ್ ನಿಲ್ದಾಣಗಳ ಬಳಿ ಇವೆ.

ಅಂದ್ಹಾಗೆ ತಮಿಳುನಾಡು ರಾಜ್ಯದ ಆದಾಯದಲ್ಲಿ TASMAC ಮದ್ಯ ಮಾರಾಟ ದೊಡ್ಡ ಪಾತ್ರವಹಿಸುತ್ತಿದೆ. 2025ರಲ್ಲಿ ಮದ್ಯ ಮಾರಾಟದಿಂದ ತಮಿಳುನಾಡು ಸರ್ಕಾರಕ್ಕೆ 48,000 ಕೋಟಿ ರೂ.ಗೂ ಹೆಚ್ಚು ಆದಾಯ ಬಂದಿತ್ತು. ಆದರೂ ಜನಹಿತದ ದೃಷ್ಟಿಯಿಂದ ಮದ್ಯದಂಗಡಿಗಳ ಸಂಖ್ಯೆ ಕಡಿಮೆ ಮಾಡುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ

Shwetha M

Leave a Reply

Your email address will not be published. Required fields are marked *