ಪ್ರಧಾನಿ ಮೋದಿ ಮಿತವ್ಯಯ ಸಂದೇಶ ಬೆನ್ನಲ್ಲೇ ಕುಸಿದ ಅಡುಗೆ ಎಣ್ಣೆ ದರ! – ಅಕ್ಕಿ ಬೆಲೆ ಹೆಚ್ಚಳ!

ಪ್ರಧಾನಿ ಮೋದಿ ಮಿತವ್ಯಯ ಸಂದೇಶ ಬೆನ್ನಲ್ಲೇ ಕುಸಿದ ಅಡುಗೆ ಎಣ್ಣೆ ದರ! – ಅಕ್ಕಿ ಬೆಲೆ ಹೆಚ್ಚಳ!

ಮಧ್ಯಪ್ರಾಚ್ಯ ಯುದ್ಧದಿಂದಾಗಿ ಹಲವು ದೇಶಗಳು ತತ್ತರಿಸಿವೆ. ಈ ಸಂಘರ್ಷ ಭಾರತದ ಮೇಲೂ ಪರಿಣಾಮ ಬೀರಿದೆ. ಇದೀಗ ದೇಶದ ಜನತೆಗೆ ಪ್ರಧಾನಿ ಮೋದಿ ಕೆಲ ಮನವಿಗಳನ್ನ ಮಾಡಿದ್ದಾರೆ. ಅವುಗಳಲ್ಲಿ ಜನ ಅಡುಗೆ ಎಣ್ಣೆಯ ಬಳಕೆಯನ್ನು ಮಿತಿಗೊಳಿಸುವ ಮನವಿ ಸಹ ಒಂದಾಗಿದೆ. ಈ ಮೋದಿ ಕರೆ ಬೆನ್ನಲ್ಲೇ ಬೆಂಗಳೂರಲ್ಲಿ ಅಡುಗೆ ಎಣ್ಣೆ ದರ ಇಳಿಕೆಯಾಗಿದೆ. ಆದ್ರೆ ಅಕ್ಕಿ  ದರ ಗಗನಕ್ಕೇರಿದೆ.

ಇದನ್ನೂ ಓದಿ: RCBಗೆ HAT-TRICK ಟಾರ್ಗೆಟ್ – SRH & PBKS ಪಂದ್ಯಗಳ ಸವಾಲೇನು?

ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ಅಡುಗೆ ಎಣ್ಣೆ ಬೆಲೆ ಕಡಿಮೆಯಾಗಿದೆ. ಎಲ್ಲಾ ಬ್ರ್ಯಾಂಡ್‌ನ ಅಡುಗೆ ಎಣ್ಣೆಗಳಲ್ಲೂ 1  ಲೀಟರ್‌ಗೆ 3 ರೂಪಾಯಿಯಿಂದ 5 ರೂಪಾಯಿವರೆಗೂ ಕಡಿಮೆಯಾಗಿದೆ. 1 ಟಿನ್ ಅಡುಗೆ ಎಣ್ಣೆಯಲ್ಲಿ 30-40 ರೂಪಾಯಿವರೆಗೂ ಇಳಿಕೆಯಾಗಿದೆ. ಅಡುಗೆ ಎಣ್ಣೆಯ ಆಮದು ಪ್ರಮಾಣ ಸುಧಾರಣೆ, ಪೂರೈಕೆ ಹೆಚ್ಚಳ ಹಾಗೂ ಮೋದಿ ಕರೆಯೂ ಈ ದರ ಇಳಿಕೆಗೆ ಕಾರಣ ಎಂದು ವ್ಯಾಪಾರಿಗಳು ಹೇಳಿದ್ದಾರೆ.

ಅಡುಗೆ ಎಣ್ಣೆ – ಹಳೆಯ ದರ (1 ಲೀ.) – ಹೊಸ ದರ (1 ಲೀ.)

  • ಫಾಮ್ ಆಯಿಲ್ – 143 ರೂ. – 141 ರೂ.
  • ಸನ್ ಪ್ಯೂರ್ – 170 ರೂ. – 167 ರೂ.
  • ಕಡಲೆಕಾಯಿ – 190 ರೂ. – 185 ರೂ.

ಇದರ ನಡುವೆ ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಅಕ್ಕಿ ದರ ಜಿಗಿತವಾಗುತ್ತಿದೆ. ಎಲ್ಲಾ ವಿಧದ ಅಕ್ಕಿ ಬೆಲೆಯಲ್ಲಿ 10% ನಷ್ಟು ಏರಿಕೆಯಾಗಿದೆ. ಪ್ರಮುಖವಾಗಿ ಈ ಬೆಲೆ ಏರಿಕೆಗೆ ಪ್ರಮುಖ ಕಾರಣಗಳೆಂದರೆ ಬೇರೆ ದೇಶಗಳಿಗೆ ನಮ್ಮ ರಾಜ್ಯದ ಅಕ್ಕಿ ಹೆಚ್ಚಿನ ಪ್ರಮಾಣದಲ್ಲಿ ರಪ್ತು ಆಗುತ್ತಿದೆ. ಜೊತೆಗೆ ಹಳೆಯ ಅಕ್ಕಿ ಸಪ್ಲೈ ಕಡಿಮೆಯಾಗಿರೋದೇ ಕಾರಣವೆನ್ನಲಾಗಿದೆ. ಬಾಸ್ಮತಿ ಹಾಗೂ ಜೀರಾ ರೈಸ್‌ನಲ್ಲಿ ಕೆ.ಜಿಗೆ 40 ರೂಪಾಯಿಯಷ್ಟು ಏರಿಕೆಯಾಗಿದೆ.

 ಅಕ್ಕಿ – ಹಳೆಯ ದರ (1 ಕೆ.ಜಿಗೆ) – ಹೊಸ ದರ (1 ಕೆ.ಜಿಗೆ)

  • ಬಾಸ್ಮತಿ ರೈಸ್ – 90 ರೂ. – 115 ರೂ.
  • ಜೀರಾ ರೈಸ್ – 180 ರೂ. – 220 ರೂ.
  • ಸೋನಾಮಸೂರಿ – 40 ರೂ. – 45 ರೂ.
  • ಬುಲೆಟ್ ರೈಸ್ – 65 ರೂ. – 75 ರೂ.

ಒಟ್ಟಿನಲ್ಲಿ ಮೋದಿ ಕರೆ ಬೆನ್ನಲ್ಲೇ ಅಡುಗೆ ಎಣ್ಣೆ ಬೆಲೆ ಕಡಿಮೆಯಾಗಿರೋದು ಗೃಹಿಣಿಯರ ಸಂತಸಕ್ಕೆ ಕಾರಣವಾಗಿದ್ದರೆ, ಅಕ್ಕಿ ದರ ಬೆಲೆ ಏರಿಕೆ ಜೇಬು ಸುಡುತ್ತಿದೆ.

Shwetha M

Leave a Reply

Your email address will not be published. Required fields are marked *