ಪಂಜಾಬ್ ವಿರುದ್ದ ಗೆದ್ದ ಅಕ್ಷರ್ ಪಡೆ – ಸತತ ನಾಲ್ಕು ಪಂದ್ಯಗಳಲ್ಲಿ ಸೋತ ಪಂಜಾಬ್ ಕಿಂಗ್ಸ್

ಡೆಲ್ಲಿ ಕ್ಯಾಪಿಟಲ್ಸ್ ತಂಡ ಪಂಜಾಬ್ ವಿರುದ್ಧ ರೋಚಕ ಜಯ ಸಾಧಿಸಿದೆ. ಪಂಜಾಬ್ ಕಿಂಗ್ಸ್ಗೆ ಇದು ಸತತ 4ನೇ ಸೋಲು. ಡೆಲ್ಲಿ ಕ್ಯಾಪಿಟಲ್ಸ್ ಗೆಲುವು ಸಾಧಿಸುವ ಮೂಲಕ ಪ್ಲೇಆಫ್ ರೇಸ್ ಆಸೆಯನ್ನು ಇನ್ನೂ ಇಟ್ಟುಕೊಂಡಿದೆ.
ಇದನ್ನೂ ಓದಿ:ಶೆಫರ್ಡ್ ಈಗ ಭೀಮನಲ್ಲ ಬಲಹೀನ – ಪದೇಪದೆ ಚಾನ್ಸ್ ಕೊಟ್ಟಿದ್ದೇ ತಪ್ಪಾ?
ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಡಿಸಿ ಗೆದ್ದು ಬೀಗಿದೆ.. ಟಾಸ್ ಸೋತು ತನ್ನ 2ನೇ ತವರು ಮೈದಾನದಲ್ಲಿ ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 210 ರನ್ ಗಳಿಸಿತ್ತು. 211 ರನ್ಗಳ ಸವಾಲಿನ ಗುರಿ ಬೆನ್ನಟ್ಟಿದ ಡೆಲ್ಲಿ ತಂಡ ಕೊನೆಗೂ ಜಯ ಸಾಧಿಸಿದೆ. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 210 ರನ್ಗಳಿಸಿತ್ತು. ಶ್ರೇಯಸ್ ಅಯ್ಯರ್ 36 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್ಗಳ ಸಹಿತ ಅಜೇಯ 59, ಪ್ರಿಯಾಂಶ್ ಆರ್ಯ 33 ಎಸೆತಗಳಲ್ಲಿ 2 ಬೌಂಡರಿ, 6 ಸಿಕ್ಸರ್ಗಳ ಸಹಿತ 56, ಕೂಪರ್ ಕೊನೊಲಿ 27 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ಗಳ ಸಹಿತ 38 ಹಾಗೂ ಸೂರ್ಯಾಂಶ್ ಶೆಡ್ಗೆ 8 ಎಸೆತಗಳಲ್ಲಿ ಅಜೇಯ 21 ರನ್ಗಳಿಸಿ ಉತ್ತಮ ಆಟವಾಡಿದರು. ಪಂಜಾಬ್ ಕಿಂಗ್ಸ್ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 210 ರನ್ಗಳಿಸಿತ್ತು.
211 ರನ್ಗಳ ಟಾರ್ಗೆಟ್ ಪಡೆದ ಡಿಸಿ ಟೀಮ್ ಮತ್ತೊಮ್ಮೆ ಆರಂಭಿಕ ಆಘಾತಕ್ಕೊಳಗಾಯಿತು. 4.3 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ಆರಂಭಿಕರಾದ ಅಭಿಷೇಕ್ ಪೊರೆಲ್ (5), ಕೆಎಲ್ ರಾಹುಲ್ (9) ಹಾಗೂ ಸಾಹಿಲ್ ಪರಾಕ್ (13) ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ರಾಹುಲ್ ಹಾಗೂ ಪರಾಕ್ ಅರ್ಶದೀಪ್ಗೆ ವಿಕೆಟ್ ಒಪ್ಪಿಸಿದರೆ, ಯಶ್ ಠಾಕೂರ್ ಅಭಿಷೇಕ್ ಪೊರೆಲ್ ವಿಕೆಟ್ ಪಡೆದರು. ಪವರ್ ಪ್ಲೇ ಮುಗಿಯುತ್ತಿದ್ದಂತೆ ಟ್ರಿಸ್ಟಾನ್ ಸ್ಟಬ್ಸ್ ಇಲ್ಲದ ರನ್ ಕದಿಯುವ ಯತ್ನದಲ್ಲಿ ರನ್ಔಟ್ ಆದರು. ಸ್ಟಬ್ಸ್ 17 ಎಸೆತಗಳಲ್ಲಿ 12 ರನ್ಗಳಿಸಿ ಔಟ್ ಆದರು. ಡೆಲ್ಲಿ ತಂಡ 74 ರನ್ಗಳಾಗುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಯಲ್ಲಿ ಸಿಲುಕಿತ್ತು. ಆದರೆ ಅಕ್ಷರ್ ಪಟೇಲ್ ಹಾಗೂ ಡೇವಿಡ್ ಮಿಲ್ಲರ್ 41 ರನ್ ಸೇರಿಸಿದರು. ಟೂರ್ನಿಯಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಅಕ್ಷರ್ ಪಟೇಲ್ 30 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ಗಳ ಸಹಿತ 56 ರನ್ಗಳಿಸಿ 14ನೇ ಓವರ್ನಲ್ಲಿ ಸ್ಟೋಯ್ನಿಸ್ಗೆ ವಿಕೆಟ್ ಒಪ್ಪಿಸಿದರು. ಅಕ್ಷರ್ ವಿಕೆಟ್ ಬಳಿಕ ಮಿಲ್ಲರ್ ಹಾಗೂ ಅಶುತೋಷ್ ಶರ್ಮಾ ತಮ್ಮ ಅಬ್ಬರ ಮುಂದುವರಿಸಿದರು. ಈ ಜೋಡಿ 34 ಎಸೆತಗಳಲ್ಲಿ 64 ರನ್ಗಳ ಜೊತೆಯಾಟ ನಡೆಸಿದರು. ಗೆಲುವಿಗೆ 41 ರನ್ಗಳ ಅಗತ್ಯವಿದ್ದಾಗ ಡೇವಿಡ್ ಮಿಲ್ಲರ್ ಬೆನ್ ದ್ವಾರ್ಶುಯಿಸ್ ಬೌಲಿಂಗ್ನಲ್ಲಿ ಪ್ರವೀಣ್ ದುಬೆಗೆ ಕ್ಯಾಚ್ ನೀಡಿ ಔಟ್ ಆದರು. ಮಿಲ್ಲರ್ 28 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್ಗಳ 51 ರನ್ಗಳಿಸಿದರು ಅಶುತೋಷ್ ಶರ್ಮಾ 10 ಎಸೆತಗಳಲ್ಲಿ ತಲಾ 2 ಬೌಂಡರಿ, 2 ಸಿಕ್ಸರ್ಗಳ ನೆರವಿನಿಂದ 24 ರನ್ಗಳಿಸಿ ಗೆಲುವಿಗೆ 6 ರನ್ಗಳ ಅಗತ್ಯವಿದ್ದಾಗ ವಿಕೆಟ್ ಒಪ್ಪಿಸಿದರು. ಮೊದಲ ಪಂದ್ಯವನ್ನಾಡಿದ ಮಾಧವ್ ತಿವಾರಿ ಕೇವಲ 8 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ ಅಜೇಯ 18 ರನ್ಗಳಿಸಿದರೆ, ಆಕಿಬ್ ನಬಿ 2 ಎಸೆತಗಳಲ್ಲಿ ತಲಾ 1 ಬೌಂಡರಿ, ಸಿಕ್ಸರ್ ಸಿಡಿಸಿ ಅಜೇಯ 10 ರನ್ಗಳಿಸಿ ತಂಡವನ್ನ ಗೆಲುವಿನ ಗಡಿ ದಾಟಿಸಿದರು.
ಶ್ರೇಯಸ್ ಅಯ್ಯರ್ ಯುಜ್ವೇಂದ್ರ ಚಹಲ್ರಿಂದ ಒಂದೇ ಒಂದು ಓವರ್ ಮಾಡಿಸದೆ ಅಚ್ಚರಿ ಮೂಡಿಸಿದರು. ಇದು ತಂಡದ ಸೋಲಿಗೆ ಒಂದು ಕಾರಣವಾಯಿತು. ಸತತ 6 ಗೆಲುವು ಸಾಧಿಸಿದ್ದ ಪಂಜಾಬ್ ಕಿಂಗ್ಸ್ ತಂಡಕ್ಕೆ ಇದು ಸತತ 4ನೇ ಸೋಲಾಗಿದೆ. ಕಳೆದ ಮೂರು ಪಂದ್ಯಗಳಲ್ಲಿ ಕ್ರಮವಾಗಿ ರಾಜಸ್ಥಾನ್, ಗುಜರಾತ್ ಹಾಗೂ ಹೈದರಾಬಾದ್ ವಿರುದ್ಧ ಸೋಲು ಕಂಡಿತ್ತು. ಇದೀಗ ಡೆಲ್ಲಿ ವಿರುದ್ಧವೂ ಸೋಲು ಕಂಡಿದೆ. ಇನ್ನೂ ಲೀಗ್ನಲ್ಲಿ 3 ಪಂದ್ಯಗಳನ್ನಾಡಲಿದ್ದು, ಕನಿಷ್ಠ ಎರಡು ಪಂದ್ಯಗಳನ್ನ ಗೆದ್ದರೆ ಮಾತ್ರ ಪ್ಲೇ ಆಫ್ ಪ್ರವೇಶಿಸಲಿದೆ. ಇಲ್ಲವಾದರೆ ಪ್ಲೇ ಆಫ್ನಿಂದ ನಿರ್ಗಮಿಸಬೇಕಾಗಬಹುದು. ಈ ಪಂದ್ಯ ಸೋತರೂ ಪಂಜಾಬ್ ತಂಡ 4ನೇ ಸ್ಥಾನದಲ್ಲಿ ತಟಸ್ಥವಾಗಿದೆ.

ನೋಡಿರಿ

