ಶೆಫರ್ಡ್ ಈಗ ಭೀಮನಲ್ಲ ಬಲಹೀನ – ಪದೇಪದೆ ಚಾನ್ಸ್ ಕೊಟ್ಟಿದ್ದೇ ತಪ್ಪಾ?
RCB ನಂಬಿಕೆ ಕಳ್ಕೊಂಡ ರೊಮ್ಯಾರಿಯೋ

ಭೀಮನಂತೆ ಕಟ್ಟುಮಸ್ತಾದ ಮೈಕಟ್ಟು.. ತೋಳುಗಳಲ್ಲಿ ಅಸಾಧ್ಯವಾದ ಬಲ.. ಬ್ಯಾಟ್ ಹಿಡಿದು ನಿಂತ್ರೆ ದೈತ್ಯದಾಂಡಿಗ. ನಿಮಿಷಗಳಲ್ಲೇ ಎದುರಾಳಿ ಬೌಲರ್ಗಳನ್ನ ಚೆಂಡಾಡಿಬಿಡಬಲ್ಲ ಶಕ್ತಿಶಾಲಿ. ಹೀಗೆ ಆರ್ಸಿಬಿ ಅಭಿಮಾನಿಗಳ ಪಾಲಿಗೆ ಪರಾಕ್ರಮಿಯಾಗಿದ್ದ ರೊಮ್ಯಾರಿಯೋ ಶೆಫರ್ಡ್ ಈಗ ಬಲಹೀನನಂತೆ ನಿಲ್ಲುತ್ತಿದ್ದಾನೆ. ತೋಳುಗಳಲ್ಲಿ ಶಕ್ತಿಯೇ ಇಲ್ಲದಂತಾಗಿದೆ. ಸಿಕ್ಸ್, ಫೋರ್ಸ್ ಇರಲಿ ಸಿಂಗಲ್ಸ್ ಕೂಡ ಇಲ್ಲ.
ಇದನ್ನೂ ಓದಿ : LSG ವಿರುದ್ಧ ಗೆದ್ದು ಪ್ಲೇಆಪ್ಗೆ ಮತ್ತಷ್ಟು ಹತ್ತಿರವಾದ CSK – ಟೂರ್ನಿಯಿಂದ ಹೊರಬಿದ್ದ ಮೊದಲ ತಂಡ ಲಕ್ನೋ ಸೂಪರ್ ಜೈಂಟ್ಸ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಸೀಸನ್ನಲ್ಲಿ ಸಕ್ಸಸ್ಫುಲ್ ಜರ್ನಿಯನ್ನೇ ಕಂಡಿದೆ. ಫಸ್ಟ್ ಮ್ಯಾಚ್ನಿಂದ ಸ್ಟಿಲ್ ಈವರೆಗೂ ಅಂಕಪಟ್ಟಿಯಲ್ಲಿ ಟಾಪ್-4 ನಿಂದ ಕೆಳಗೆ ಇಳಿದಿಲ್ಲ. ಈಗ ಪ್ಲೇಆಫ್ಸ್ಗೆ ಇನ್ನೊಂದೇ ಹೆಜ್ಜೆ ದೂರದಲ್ಲಿದೆ. ಆರ್ಸಿಬಿಯ ಈ ಯಶಸ್ಸಿನ ಹಿಂದೆ ಟೀಂ ಎಫರ್ಟ್ ತುಂಬಾ ದೊಡ್ಡದಿದೆ. ಎಲ್ಲರೂ ಒಂದೊಂದು ಪಂದ್ಯಗಳಲ್ಲಿ ದಿ ಬೆಸ್ಟ್ ಅನ್ನೋ ಥರ ಪರ್ಫಾಮ್ ಮಾಡಿದ್ದಾರೆ. ಹೀಗಿದ್ರೂ ರೊಮ್ಯಾರಿಯೋ ಶೆಫರ್ಡ್ ಕಡೆಯಿಂದ ಒಂದೇ ಒಂದು ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ಇರ್ಲಿ ಸ್ಯಾಟಿಸ್ಫೈಡ್ ಅನ್ನೋ ಇನ್ನಿಂಗ್ಸ್ ಕೂಡ ಬಂದಿಲ್ಲ. ಇದೇ ಈಗ ಆರ್ಸಿಬಿ ಫ್ರಾಂಚೈಸಿಗೆ ದೊಡ್ಡ ತಲೆಬಿಸಿಯಾಗಿದೆ.
ಫ್ರಾಂಚೈಸಿ ಇಟ್ಟ ನಂಬಿಕೆ ಕಳ್ಕೊಂಡ್ರಾ ರೊಮ್ಯಾರಿಯೋ ಶೆಫರ್ಡ್
2025ರ ಸೀಸನ್ನಲ್ಲಿ ರೊಮ್ಯಾರಿಯೋ ಶೆಫರ್ಡ್ರನ್ನು ಆರ್ಸಿಬಿಯ ಬೆಸ್ಟ್ ಪಿಕ್ ಅಂತಿದ್ರು. ಯಾಕಂದ್ರೆ ಅವ್ರ ಪರ್ಫಾಮೆನ್ಸ್ ಹಂಗೇ ಇತ್ತು. ಆದ್ರೆ ಈಗ ಯಾಕಾದ್ರೂ ಪ್ಲೇಯಿಂಗ್ 11ನಲ್ಲಿ ಆಡಿಸ್ತಾರೋ ಅಂತಾ ಅಭಿಮಾನಿಗಳು ಕಿಡಿ ಕಾರ್ತಿದ್ದಾರೆ. ಅದಕ್ಕೆ ಕಾರಣ ಈ ಸೀಸನ್ನಲ್ಲಿ ಅವ್ರ ಕಳಪೆ ಪ್ರದರ್ಶನ. ಅದ್ರಲ್ಲೂ ಕ್ರೂಶಿಯಲ್ ಟೈಮಲ್ಲೂ ಕೈಕೊಡ್ತಿರೋದು. ಬ್ಯಾಟಿಂಗ್ ಹಾಗೇ ಬೌಲಿಂಗ್ ಎರಡೂ ಕೂಡ ಚೆನ್ನಾಗಿ ಆಗಿಲ್ಲ. ಈ ಸೀಸನ್ನಲ್ಲಿ ಈವರೆಗೆ 11 ಪಂದ್ಯಗಳ 9 ಇನ್ನಿಂಗ್ಸ್ಗಳಲ್ಲಿ 83 ರನ್ ಗಳಿಸಿದ್ದಾರೆ. 23 ರನ್ಸ್ ಬಂದಿರೋದೇ ಹೈಯೆಸ್ಟ್ ಇಂಡಿವಿಶ್ಯುಯಲ್ ಸ್ಕೋರ್. ಸ್ಟ್ರೈಕ್ರೇಟ್ ಅಂತೂ 125 ಇದೆ. ಇನ್ನು ಬೌಲಿಂಗ್ ಕೂಡ ತುಂಬಾನೇ ಎಕ್ಸ್ಪೆನ್ಸಿವ್ ಆಗಿದ್ದಾರೆ. ಇನ್ನು ಡೆತ್ಓವರ್ನಲ್ಲಿ ರನ್ಸ್ಗಿಂತ ಬಾಲ್ನೇ ಜಾಸ್ತಿ ವೇಸ್ಟ್ ಮಾಡ್ತಿರೋದೇ ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದೆ. ಹೀಗಿದ್ರೂ ಕೋಚ್ ಸೇರಿದಂತೆ ಇಡೀ ಫ್ರಾಂಚೈಸಿ ಶೆಫರ್ಡ್ ಬೆನ್ನಿಗೆ ನಿಂತಿದೆ. ಪದೇಪದೆ ಚಾನ್ಸ್ ಕೊಡ್ತಿದ್ದಾರೆ. ಅದಕ್ಕೆ ಕಾರಣವೂ ಇದೆ.
ಶೆಫರ್ಡ್ ಬದಲಿ ಯಾಕಿಲ್ಲ?
ಬ್ಯಾಟಿಂಗ್ ಹಾಗೇ ಬೌಲಿಂಗ್ ಆಪ್ಶನ್ ಇರೋದ್ರಿಂದ ಶೆಫರ್ಡ್ ಗೆ ಮಣೆ
ಒಂದು ಸಲ ಹೊಡಿಯೋಕೆ ನಿಂತ್ರೆ ಪಂದ್ಯದ ದಿಕ್ಕನ್ನೇ ಬದಲಿಸೋ ಇನ್ನಿಂಗ್ಸ್
6ನೇ ಬೌಲರ್ ಕೈಗೆ ಬಾಲ್ ಕೊಡ್ಬೇಕು ಅಂದ್ರೆ ಶೆಫರ್ಡ್ ಕಡೆ ಒಲವು
ಆಲ್ ರೌಂಡರ್ ಕೋಟಾದಲ್ಲಿ ಸದ್ಯಕ್ಕೆ ಶೆಫರ್ಡ್ ಮಾತ್ರವೇ ಚಾಯ್ಸ್
ಕಳೆದ ಸೀಸನ್ ನಲ್ಲಿ ಅದ್ಭುತ ಪ್ರದರ್ಶನ ಇದ್ದಿದ್ದರಿಂದ ಮತ್ತೆ ನಂಬಿಕೆ
ಇಲ್ಲಿ ಶೆಫರ್ಡ್ ಕಡೆಯಿಂದ ಅಂದುಕೊಂಡಂತ ಪ್ರದರ್ಶನ ಬರ್ತಿಲ್ಲ. ಡೆಲ್ಲಿ ವಿರುದ್ಧದ ಲಾಸ್ಟ್ ಓವರ್, ಲಕ್ನೋ ವಿರುದ್ಧದ ಡೆತ್ ಓವರ್ನಲ್ಲಿ ಆರ್ಸಿಬಿ ಫೇಲ್ಯೂರ್ಗೆ ಶೆಫರ್ಡ್ ಅವ್ರ ಕಳಪೆ ಪ್ರದರ್ಶನವೂ ಕಾರಣವೇ. ಹೀಗಿದ್ರೂ ಆರ್ಸಿಬಿ ಫ್ರಾಂಚೈಸಿ ಅವ್ರ ಮೇಲೆ ನಂಬಿಕೆ ಇಡೋಕೆ ಕಾರಣ ಅವ್ರು ಒನ್ಸ್ ಫಾರ್ಮ್ಗೆ ಬಂದ್ರೆ ಅವ್ರನ್ನ ತಡೆಯೋರು ಯಾರೂ ಇಲ್ಲ ಅಂತಾ. ಬಟ್ ಅದ್ಯಾವಾಗ ಫಾರ್ಮ್ಗೆ ಬರ್ತಾರೆ ಅನ್ನೋದೇ ಈಗಿರೋ ಮಿಲಿಯನ್ ಡಾಲರ್ ಪ್ರಶ್ನೆ. ಆದ್ರೆ ಪ್ಲೇ ಆಫ್ಸ್ ಹೊತ್ತಲ್ಲಿ ಶೆಫರ್ಡ್ರನ್ನೇ ನಂಬಿಕೊಂಡು ಕೂರೋದೂ ಕೂಡ ದಡ್ಡತನವೇ ಆಗಬಹುದು. ಯಾಕಂದ್ರೆ ಮುಂದಿನ ಒಂದೊಂದು ಪಂದ್ಯಗಳು ಕ್ರೂಶಿಯಲ್ ಆಗ್ತಾ ಹೋಗುತ್ತೆ. ಹೀಗಾಗಿ ಮಾಡು ಇಲ್ಲದೇ ಮಡಿ ಎನ್ನುವಂಥ ಹಂತದಲ್ಲಿ ಫ್ರಾಂಚೈಸಿ ಯಾವ ನಿರ್ಧಾರ ತಗೊಳ್ಳುತ್ತೆ ನೋಡ್ಬೇಕು.

ನೋಡಿರಿ

