ಕೃನಾಲ್‌ ಪಾಂಡ್ಯ ಅಲ್ಲೇ ಬಿದ್ದು ಸಾಯಬೇಕಿತ್ತು! – ಆಟಗಾರನಾಗಿ ಮಾನವೀಯತೆ ಮರೆತ CSK ಮಾಜಿ ಪ್ಲೇಯರ್!

ಕೃನಾಲ್‌ ಪಾಂಡ್ಯ ಅಲ್ಲೇ ಬಿದ್ದು ಸಾಯಬೇಕಿತ್ತು! – ಆಟಗಾರನಾಗಿ ಮಾನವೀಯತೆ ಮರೆತ CSK ಮಾಜಿ ಪ್ಲೇಯರ್!

ಆರ್‌ಸಿಬಿ ಹಾಗೂ ಮುಂಬೈ ಇಂಡಿಯನ್ಸ್‌ ನಡುವಿನ ಹೈವೋಲ್ಟೇಜ್‌ ಮ್ಯಾಚ್‌ ವೇಳೆ ಸಿಎಸ್‌ಕೆ ಮತ್ತು ಭಾರತದ ಮಾಜಿ ಬ್ಯಾಟ್ಸ್‌ಮನ್ ಸುಬ್ರಮಣಿಯಂ ಬದ್ರಿನಾಥ್ ನೀಡಿರುವ ಹೇಳಿಗೆ ಭಾರಿ ಟೀಕೆಗೆ ಗುರಿಯಾಗಿದೆ. ಮ್ಯಾಚ್‌ ವೇಳೆ ಕೃನಾಲ್‌ ಪಾಂಡ್ಯ ಕಾಲು ಸೆಳೆತದಿಂದಾಗಿ ಮೈದಾನದಲ್ಲಿ ಬಿದ್ದಿದ್ದರು. ಈ ವೇಳೆ ನಾನಾದ್ರೆ ಕೃನಾಲ್‌ ಪಾಂಡ್ಯ ಹಾಗೇ ಬಿದ್ದು ಸಾಯಲಿ ಎಂದು ಬಿಡುತ್ತಿದ್ದೆ ಎಂದು ಹೇಳಿದ್ದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಪೋಷಕರ ಕಣ್ಣೆದುರಲ್ಲೇ ಮಗನನ್ನು ಕೊಂದ ಚಿರತೆ! – ಮೃತ ಬಾಲಕನ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರ 

ಆರ್‌ಸಿಬಿ ಆಲ್‌ರೌಂಡರ್ ಕೃನಾಲ್ ಪಾಂಡ್ಯ ಬ್ಯಾಟಿಂಗ್ ಮಾಡುತ್ತಿದ್ದಾಗ, ಅವರಿಗೆ ಕಾಲು ಸೆಳೆತ ಉಂಟಾಗಿತ್ತು. ಈ ವೇಳೆ ಕೃನಾಲ್‌ ಕಾಲು ಹಿಡಿದುಕೊಂಡು ನೆಲಕ್ಕೆ ಬಿದ್ದರು. ಆಗ ಎಂಐ ವಿಕೆಟ್ ಕೀಪರ್ ಬ್ಯಾಟರ್ ರಿಯಾನ್ ರಿಕಲ್ಟನ್ ಅವರಿಗೆ ಸಹಾಯ ಮಾಡಲು ಧಾವಿಸಿದ್ದಾರೆ. ಇದನ್ನ ನೋಡಿದ  ಸುಬ್ರಮಣಿಯಂ ಬದ್ರಿನಾಥ್, ಪಂದ್ಯದ ಸಮಯದಲ್ಲಿ ಮುಂಬೈ ಇಂಡಿಯನ್ಸ್ ಸ್ಥಾನದಲ್ಲಿ ನಾನು ಇದ್ದಿದ್ದರೆ, ಕೃನಾಲ್ ಪಾಂಡ್ಯ ಅವರಿಗೆ ನೋವು ಕಾಣಿಸಿಕೊಂಡಾಗ ಸಹಾಯ ಮಾಡಲು ಧಾವಿಸುತ್ತಿರಲಿಲ್ಲ. ಅವರು ಹಾಗೆ ಸಾಯಲಿ ಎಂದು ಬಿಡುತ್ತಿದ್ದೆ ಎಂದು ತಮಾಷೆಯಾಗಿ ಹೇಳಿದ್ದಾರೆ.

ಬದ್ರಿನಾಥ್ ಅವರು ರಿಕಲ್ಟನ್ ಅವರು ಸಹಾಯವನ್ನು ಹೈಲೈಟ್ ಮಾಡುವ ಬರದಲ್ಲಿ ಈ ಮಾತನ್ನ ಹೇಳಿದ್ದಾರೆ. ಎದುರಾಳಿ ತಂಡದ ದೃಷ್ಟಿಕೋನ ಹೇಗಿರುತ್ತದೆ ಎಂಬುದನ್ನು ತಮಾಷೆಯಾಗಿ ಹೇಳಿದರು. ಆದ್ರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಬ್ಯಾಟ್ಸ್‌ಮನ್ ಆ ರೀತಿಯ ಹೇಳಿಕೆ ನೀಡಿದ್ದು ಸರಿಯಲ್ಲ ಎಂದು ಅಭಿಮಾನಿಗಳು ಕಿಡಿಕಾರಿದರು. ಇದೀಗ ಬದ್ರಿನಾಥ್  ಹೇಳಿಕೆ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಕಾಮೆಂಟ್ರಿ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದ್ದಂತೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಮಾಜಿ ಆಟಗಾರನ ವಿರುದ್ಧ ಕಿಡಿಕಾರಿದ್ದಾರೆ.  ಒಬ್ಬ ಕ್ರೀಡಾಪಟುವಾಗಿ ಮತ್ತೊಬ್ಬ ಆಟಗಾರನ ನೋವಿನ ಬಗ್ಗೆ ಇಷ್ಟು ಕೀಳಾಗಿ ಮಾತನಾಡುವುದು ಸರಿಯಲ್ಲ. ಒಬ್ಬ ಆಟಗಾರನನ್ನು ಅಲ್ಲೇ ಸಾಯಬೇಕಿತ್ತು ಎಂದೇಳುವ ನೀನೆಷ್ಟು ನೀಚ ಎಂದು ಸಿಎಸ್​ಕೆ ತಂಡದ ಮಾಜಿ ಆಟಗಾರನನ್ನು ಕ್ರಿಕೆಟ್ ಪ್ರೇಮಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ, ಇನ್ಸ್ಟಾಗ್ರಾಮ್ ಮತ್ತು ಎಕ್ಸ್ (ಟ್ವಿಟ್ಟರ್) ನಲ್ಲಿ ಅನೇಕರು ಬಿಸಿಸಿಐ ಮತ್ತು ಸ್ಟಾರ್ ಸ್ಪೋರ್ಟ್ಸ್ ಸಂಸ್ಥೆಗಳನ್ನು ಟ್ಯಾಗ್ ಮಾಡಿ, ಇಂತಹ “ಟಾಕ್ಸಿಕ್” ಕಾಮೆಂಟೇಟರ್‌ಗಳನ್ನು ಪ್ಯಾನಲ್‌ನಿಂದ ತೆಗೆದುಹಾಕಬೇಕೆಂದು ಒತ್ತಾಯಿಸಿದ್ದಾರೆ.

Shwetha M

Leave a Reply

Your email address will not be published. Required fields are marked *