ಲಾಸ್ಟ್ ಬಾಲ್ MAGIC ಗೆದ್ದ RCB.. ಭುವಿ ಬೆಂಕಿ.. ಕೃನಾಲ್ ಕಮಾಲ್! – ಬೆಂಗಳೂರು ವೀಕ್ ನೆಸ್ ಬಯಲಾಯ್ತಾ?

ಎಂಥಾ ಥ್ರಿಲ್ಲಿಂಗ್ ಮ್ಯಾಚ್.. ಅವ್ರು ಗೆಲ್ತಾರೋ ಇಲ್ಲ ಇವ್ರು ಗೆಲ್ತಾರೋ.. ಒಂದೊಂದು ಬಾಲ್ ಬಿದ್ದಾಗ್ಲೂ ಎದೆಬಡಿತ ಜೋರಾಗ್ತಿತ್ತು. ಆರ್ ಸಿಬಿ ಫ್ಯಾನ್ಸ್ ಗಂತೂ ಅಂತೂ ಟೆನ್ಷನ್ ಮೇಲೆ ಟೆನ್ಷನ್. ಬಟ್ ಫೈನಲಿ ಆರ್ ಸಿಬಿ ಮ್ಯಾಚ್ ವಿನ್ ಆಯ್ತು. ಹಾಗೇ ಟಾಪ್ ಆಫ್ ದಿ ಟೇಬಲ್ ನಲ್ಲಿದೆ.
ಇದನ್ನೂ ಓದಿ: ತಮಿಳುನಾಡು ಹೊಸ ಸಿಎಂಗೆ ಕರ್ನಾಟಕದ ಮುಖ್ಯಮಂತ್ರಿ ವಿಶ್! – ನೀವು ಇತಿಹಾಸ ಸೃಷ್ಟಿಸಿದ್ದೀರಿ ಎಂದ ಸಿದ್ದರಾಮಯ್ಯ!
ರಾಯ್ಪುರದಲ್ಲಿ ನಡೆದ ಬೆಂಗಳೂರು ವರ್ಸಸ್ ಮುಂಬೈ ನಡುವಿನ ಮ್ಯಾಚಲ್ಲಿ ಬೆಂಗಳೂರು ಗೆದ್ದಿದೆ. ಈ ಗೆಲುವಿನ ರೂವಾರಿಗಳೇ ಭುವನೇಶ್ವರ್ ಕುಮಾರ್ ಮತ್ತು ಕೃನಾಲ್ ಪಾಂಡ್ಯ. ಬಹುಶಃ ಇವ್ರಿಬ್ಬರಲ್ಲಿ ಒಬ್ಬರು ಕೈಕೊಟ್ಟಿದ್ದಿದ್ರೂ ಬಹುಶಃ ಇವತ್ತು ಆರ್ಸಿಬಿ ಟೇಬಲ್ ಟಾಪರ್ ಆಗ್ತಿರಲಿಲ್ಲ. ಇನ್ನು ಪಂದ್ಯದ ಬಗ್ಗೆ ಹೇಳೋದಾದ್ರೆ ಮೊದ್ಲಿಗೆ ಟಾಸ್ ಗೆದ್ದ ಬೆಂಗಳೂರು ಫೀಲ್ಡಿಂಗ್ ಚೂಸ್ ಮಾಡಿಕೊಳ್ಳುತ್ತೆ. ಹೀಗಾಗಿ ಬ್ಯಾಟಿಂಗ್ ಆರಂಭಿಸಿದ ಮುಂಬೈಗೆ ಭುವನೇಶ್ವರ್ ತಮ್ಮ ಮೊದಲ ಎರಡು ಓವರ್ಗಳಲ್ಲೇ ಓಪನರ್ಗಳನ್ನ ಪೆವಿಲಿಯನ್ಗೆ ಕಳಿಸಿದ್ರು. ಹೀಗಿದ್ರೂ ನಮನ್ ಧೀರ್ ಮತ್ತು ತಿಲಕ್ ವರ್ಮಾ ಅದ್ಭುತ ಆಟದಿಂದ ಮುಂಂಬೈ 166 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಆರ್ಸಿಬಿ ಕೂಡ ಬ್ಯಾಟಿಂಗ್ ಸ್ಟ್ರಗಲ್ ಪಟ್ರೂ ಅಂತಿಮವಾಗಿ ಗೆದ್ರು. ಸೋತೇ ಬಿಟ್ರು ಅನ್ಕೊಂಡಿದ್ದ ಈ ಪಂದ್ಯ ಆರ್ಸಿಬಿ ಗೆದ್ದಿದ್ದೇಗೆ ಅನ್ನೋ ವಿವರ ಇಲ್ಲಿದೆ.
ಲಾಸ್ಟ್ ಬಾಲ್ ಗೆದ್ದ ಬೆಂಗಳೂರು!
- ಕ್ರೂಶಿಯಲ್ ಪಂದ್ಯದಲ್ಲೇ ಟಾಸ್ ಗೆದ್ದ ಬೆಂಗಳೂರು ತಂಡಕ್ಕೆ ಪ್ಲಸ್
- ಓಪನರ್ ಗಳಿಗೆ ಪೆವಿಲಿಯನ್ ಹಾದಿ ತೋರಿಸಿದ ಭುವನೇಶ್ವರ್
- 166 ರನ್ ಗಳಿಸಿದ ಮುಂಬೈಗೆ ಬೌಲಿಂಗ್ ನಲ್ಲಿಯೂ ಸಿಕ್ಕ ಸಪೋರ್ಟ್
- ಕೊಹ್ಲಿ 0, ಪಡಿಕ್ಕಲ್ 12, ಪಾಟಿದಾರ್ 8, ಬೆಥೆಲ್ 27 ರನ್ ಗೆ ಔಟ್
- ಸ್ನಾಯು ಸೆಳೆತದಲ್ಲೂ ಕೃನಾಲ್ 73(46) ರನ್ ಗಳಿಸಿ ಔಟ್
- 12 ಬಾಲಲ್ಲಿ 18 ರನ್ ಬೇಕಿದ್ದಾಗ ಶೆಫರ್ಡ್ ಕಡೆಯಿಂದ ಮತ್ತೆ ನಿರಾಸೆ
- ಕೊನೇ ಓವರ್ ನಲ್ಲಿ 15 ರನ್.. ಲಾಸ್ಟ್ ಬಾಲ್ 2 ರನ್ ಓಡಿ ಗೆದ್ದ ಆರ್ ಸಿಬಿ
- ಭುವನೇಶ್ವರ್, ಕೃನಾಲ್ ಹಾಗೂ ರಸಿಕ್ ಆಟದಿಂದಲೇ ಗೆದ್ದ ಬೆಂಗಳೂರು
ಇನ್ನೇನು ಬೆಂಗಳೂರು ಸೋತೇ ಬಿಡುತ್ತೆ ಅನ್ಕೊಂಡಾಗ ರಣರೋಚಕವಾಗಿ ಗೆದ್ದಿದೆ. ಹಾಗೇ ನಂಬರ್ 1ಕ್ಕೇರಿದೆ. ಇದೇ ವೇಳೆ ಆರ್ಸಿಬಿಯ ಮಿಡಲ್ ಆರ್ಡರ್ ವೀಕ್ನೆಸ್ ಮತ್ತೆ ಬಯಲಾಗಿದೆ. ಮುಂದಿನ ಪಂದ್ಯಗಳಿಗೆ ಹೇಗೆ ಕಂ ಬ್ಯಾಕ್ ಮಾಡ್ತಾರೆ ನೋಡ್ಬೇಕು.

ನೋಡಿರಿ

