ಅರ್ಧಶತಕ ಸಿಡಿಸಿ ಚೀಟಿ ತೋರಿಸಿದ ಉರ್ವಿಲ್ ಪಟೇಲ್- ತಂದೆಯ ಕನಸು ನನಸು ಮಾಡಿದ ಚೆನ್ನೈ ಆಟಗಾರ

ಅರ್ಧಶತಕ ಸಿಡಿಸಿ ಚೀಟಿ ತೋರಿಸಿದ ಉರ್ವಿಲ್ ಪಟೇಲ್- ತಂದೆಯ ಕನಸು ನನಸು ಮಾಡಿದ ಚೆನ್ನೈ ಆಟಗಾರ

ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಗೆದ್ದು ಬೀಗಿದೆ. ಇದೇ ಸಂದರ್ಭದಲ್ಲಿ ಚೆನ್ನೈ ಆಟಗಾರ ಉರ್ವಿಲ್ ಪಟೇಲ್ ಅವರ ಭಾವುಕ ಕ್ಷಣಗಳು ಫ್ಯಾನ್ಸ್ ಮನಗೆದ್ದಿದೆ.

ಇದನ್ನೂ ಓದಿ:LSG ವಿರುದ್ಧ ಗೆದ್ದು ಪ್ಲೇಆಪ್‌ಗೆ ಮತ್ತಷ್ಟು ಹತ್ತಿರವಾದ CSK – ಟೂರ್ನಿಯಿಂದ ಹೊರಬಿದ್ದ ಮೊದಲ ತಂಡ ಲಕ್ನೋ ಸೂಪರ್ ಜೈಂಟ್ಸ್

ಲಕ್ನೋ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಉರ್ವಿಲ್ ಪಟೇಲ್ ಅಬ್ಬರಿಸಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಈ ಪಂದ್ಯದಲ್ಲಿ ಕೇವಲ 13 ಎಸೆತಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ ಐಪಿಎಲ್ ಇತಿಹಾಸದ ಅತಿ ವೇಗದ ಅರ್ಧಶತಕದ ದಾಖಲೆಯನ್ನು ಸರಿಗಟ್ಟಿದ್ದಾರೆ. ಆದರೆ, ಈ ಐತಿಹಾಸಿಕ ಸಾಧನೆಗಿಂತ ಹೆಚ್ಚಾಗಿ ಮೈದಾನದಲ್ಲಿ ಉರ್ವಿಲ್ ಸಂಭ್ರಮಿಸಿದ ರೀತಿ ಮತ್ತು ಅವರು ಪ್ರದರ್ಶಿಸಿದ ಒಂದು ಸಣ್ಣ ಚೀಟಿ ಅಭಿಮಾನಿಗಳ ಮನಗೆದ್ದಿದೆ.

ಉರ್ವಿಲ್ ಪಟೇಲ್ ಅರ್ಧಶತಕದ ಸಂಭ್ರಮದ ವೇಳೆ ಚೀಟಿಯನ್ನು ತೋರಿಸಿದರು. ಈ ಚೀಟಿಯಲ್ಲಿ ಉರ್ವಿಲ್ ಪಟೇಲ್ ತನ್ನ ತಂದೆ ಮುಖೇಶ್ ಪಟೇಲ್ ಅವರಿಗಾಗಿ ಬರೆದ ಸಾಲುಗಳಿದ್ದವು. ಇಂಗ್ಲಿಷ್ ಮತ್ತು ಗುಜರಾತಿ ಭಾಷೆಯಲ್ಲಿದ್ದ ಆ ಸಂದೇಶದಲ್ಲಿ ಇಂದು ನಾನು ದೊಡ್ಡ ಕ್ರಿಕೆಟಿಗನಾಗಿ ನಿಮ್ಮ ಕನಸನ್ನು ನನಸು ಮಾಡಿ ತೋರಿಸಿದ್ದೇನೆ ಎಂಬ ಸಾಲುಗಳಿದ್ದವು. ಅಲ್ಲದೆ, ಅದರಲ್ಲಿ ತಮ್ಮ ಕುಲದೇವತೆಗಳ ಹೆಸರನ್ನು ಉಲ್ಲೇಖಿಸಿ, ಅವರ ಆಶೀರ್ವಾದದಿಂದಲೇ ಈ ಸಾಧನೆ ಸಾಧ್ಯವಾಯಿತು ಎಂದು ಬರೆದುಕೊಂಡಿದ್ದರು. ಈ ಪಂದ್ಯದಲ್ಲಿ ಉರ್ವಿಲ್ ಪಟೇಲ್ ಕೇವಲ ಚೀಟಿಯಿಂದ ಮಾತ್ರವಲ್ಲ, ಬ್ಯಾಟಿಂಗ್ ಮೂಲಕವೂ ಇತಿಹಾಸ ಸೃಷ್ಟಿಸಿದರು.

13 ಎಸೆತಗಳಲ್ಲಿ 50 ರನ್ ಪೂರೈಸುವ ಮೂಲಕ ಐಪಿಎಲ್‌ನ ಸಾರ್ವಕಾಲಿಕ ದಾಖಲೆಯನ್ನು ಸರಿಗಟ್ಟಿದರು. ಐಪಿಎಲ್​ ಇನಿಂಗ್ಸ್‌ನ ಮೊದಲ 8 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಮಧ್ಯಮ ವರ್ಗದ ಕುಟುಂಬದಿಂದ ಬಂದ ಉರ್ವಿಲ್ ಪಟೇಲ್ ಅವರನ್ನು ಕ್ರಿಕೆಟಿಗನನ್ನಾಗಿ ಮಾಡಲು ಅವರ ತಂದೆ ಸಾಕಷ್ಟು ಕಷ್ಟಪಟ್ಟಿದ್ದರು. ಐಪಿಎಲ್‌ನಂತಹ ದೊಡ್ಡ ವೇದಿಕೆಯಲ್ಲಿ ಮಗ ಅಬ್ಬರಿಸುವುದನ್ನು ನೋಡುವುದು ಅವರ ದೊಡ್ಡ ಕನಸಾಗಿತ್ತು. ಹೀಗಾಗಿಯೇ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ದಾಖಲೆಯ ಅರ್ಧಶತಕವನ್ನು ಉರ್ವಿಲ್ ಪಟೇಲ್ ತಮ್ಮ ತಂದೆಗೆ ಅರ್ಪಿಸಿದ್ದರು.

Sulekha

Leave a Reply

Your email address will not be published. Required fields are marked *