LSG ವಿರುದ್ಧ ಗೆದ್ದು ಪ್ಲೇಆಪ್‌ಗೆ ಮತ್ತಷ್ಟು ಹತ್ತಿರವಾದ CSK – ಟೂರ್ನಿಯಿಂದ ಹೊರಬಿದ್ದ ಮೊದಲ ತಂಡ ಲಕ್ನೋ ಸೂಪರ್ ಜೈಂಟ್ಸ್

LSG ವಿರುದ್ಧ ಗೆದ್ದು ಪ್ಲೇಆಪ್‌ಗೆ ಮತ್ತಷ್ಟು ಹತ್ತಿರವಾದ CSK – ಟೂರ್ನಿಯಿಂದ ಹೊರಬಿದ್ದ ಮೊದಲ ತಂಡ ಲಕ್ನೋ ಸೂಪರ್ ಜೈಂಟ್ಸ್

ಚೆಪಾಕ್​ನಲ್ಲಿ ಮಹತ್ವದ ಪಂದ್ಯ ಗೆದ್ದು ಬೀಗಿದೆ ಚೆನ್ನೈ ಸೂಪರ್ ಕಿಂಗ್ಸ್. ಗೆಲ್ಲಲೇಬೇಕಾದ ಪಂದ್ಯದಲ್ಲಿ ಲಕ್ನೋ ತಂಡವನ್ನು ಸೋಲಿಸಿದ ಚೆನ್ನೈ ತಂಡ ಪ್ಲೇಆಪ್‌ಗೆ ಮತ್ತಷ್ಟು ಹತ್ತಿರವಾಗಿದೆ.

ಇದನ್ನೂ ಓದಿ:ಭುವಿ ಮ್ಯಾಜಿಕ್..‌ ಆರ್‌ಸಿಬಿಗೆ 2 ವಿಕೆಟ್‌ಗಳ ರೋಚಕ ಜಯ- ಪ್ಲೇ ಆಫ್‌ ರೇಸ್‌ನಿಂದ ಮುಂಬೈಗೆ ಗೇಟ್‌ಪಾಸ್!

ಚೆಪಾಕ್​ನಲ್ಲಿ ಭಾನುವಾರ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್  ಮುಖಾಮುಖಿಯಾಗಿದ್ದವು. ಚೆ್ನ್ನೈಗೆ ಇದು ಗೆಲ್ಲಲೇಬೇಕಾದ ಪಂದ್ಯವಾಗಿತ್ತು. ಹೀಗಾಗಿ ಲಕ್ನೋ ವಿರುದ್ಧ ಸಂಘಟಿತ ದಾಳಿ ಮಾಡಿದ ಸಿಎಸ್‌ಕೆ ತಂಡ 5 ವಿಕೆಟ್​ಗಳ ರೋಚಕ ಜಯ ಸಾಧಿಸಿದೆ. ಇದು ಐಪಿಎಲ್​​ನಲ್ಲಿ 6ನೇ ಜಯವಾಗಿದ್ದು, ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. ಈ ಗೆಲುವಿನ ಮೂಲಕ ಸಿಎಸ್​ಕೆ ಪ್ಲೇ ಆಫ್ ಸ್ಥಾನವನ್ನ ಮತ್ತಷ್ಟು ಬಲಪಡಿಸಿಕೊಂಡಿದೆ. ಲಕ್ನೋ ತಂಡ ಟೂರ್ನಿಯಿಂದ ಹೊರಬಿದ್ದಿದೆ.

ಮೊದಲು ಬ್ಯಾಟಿಂಗ್ ಮಾಡಿದ ಲಖನೌ ಸೂಪರ್ ಜೈಂಟ್ಸ್ ಕೂಡ ಉತ್ತಮ ಆರಂಭ ಪಡೆದಿತ್ತು. ಆದರೆ ಮಧ್ಯಮ ಕ್ರಮಾಂಕದ ವೈಫಲ್ಯದಿಂದ 230-240 ರನ್​ಗಳಿಸುವ ಅವಕಾಶ ಕಳೆದುಕೊಂಡಿತು. ಜೋಶ್ ಇಂಗ್ಲಿಸ್ 33 ಎಸೆತಗಳಲ್ಲಿ 10 ಬೌಂಡರಿ, 3 ಸಿಕ್ಸರ್ ಸೇರಿ  85 ರನ್​ಗಳಿಸಿದ್ದರು. ಶಹ್ಬಾಜ್ ಅಹ್ಮದ್ 25 ಎಸೆತಗಳಲ್ಲಿ ತಲಾ 3 ಬೌಂಡರಿ, 3 ಸಿಕ್ಸರ್​ಗಳ ಸಹಿತ 43 ರನ್​ಗಳಿದರು. ಇವರಿಬ್ಬರನ್ನ ಬಿಟ್ಟರೆ, ಉಳಿದ ಯಾವ ಬ್ಯಾಟರ್ 20 ರನ್​ಗಳ ಗಡಿ ದಾಟಿಲಿಲ್ಲ. ಮಿಚೆಲ್ ಮಾರ್ಷ್ 10, ಪಂತ್ 15, ಪೂರನ್ 1, ಐಡೆನ್ ಮಾರ್ಕ್ರಮ್ 6, ಅಕ್ಷತ್ ರಘುವಂಶಿ 18, ಹಿಮ್ಮತ್ ಸಿಂಗ್ 17 ರನ್​ಗಳಿಸಿದರು. ಲಖನೌ ತಂಡ ಈ ಸೋಲಿನ ಬಳಿಕ ಇನ್ನೂ 3 ಪಂದ್ಯಗಳಿರುವಂತೆ ಟೂರ್ನಿಯಿಂದ ಹೊರಬಿದ್ದಿತು. 2026ರ ಐಪಿಎಲ್​​ ಪ್ಲೇ ಆಫ್ ರೇಸ್​ನಿಂದ ಹೊರಬಿದ್ದ ಮೊದಲ ತಂಡ ಎನಿಸಿಕೊಂಡಿತು.

ಲಕ್ನೋ ಸೂಪರ್ ಜೈಂಟ್ಸ್ ಮೊದಲು ಬ್ಯಾಟಿಂಗ್ ಮಾಡಿ 203 ರನ್​ಗಳ ಗುರಿ ನೀಡಿತು. ಬ್ಯಾಟಿಂಗ್ ಗೆ ಬಂದ ಸಿಎಸ್​ಕೆ ಉತ್ತಮ ಆರಂಭ ಪಡೆದುಕೊಂಡಿತು. 3.4 ಓವರ್​​ಗಳಲ್ಲಿ 45 ರನ್​ಗಳಿಸಿತು. ಸಂಜು ಸ್ಯಾಮ್ಸನ್ 14 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್​ ಸಹಿತ 28 ರನ್​ಗಳಿಸಿ ದಿಗ್ವೇಶ್ ರಾಠಿ ಬೌಲಿಂಗ್​ನಲ್ಲಿ ಔಟ್ ಆದರು. ಸಂಜು ವಿಕೆಟ್ ನಂತರ ಬಂದ ಉರ್ವಿಲ್ ಪಟೇಲ್ ವಿಧ್ವಂಸ ಸೃಷ್ಟಿಸಿದರು. ಕೇವಲ 13 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಅವರು 23 ಎಸೆತಗಳಲ್ಲಿ 2 ಬೌಂಡರಿ, 8 ಸಿಕ್ಸರ್​ಗಳ ಸಹಿತ 65 ರನ್​ಗಳಿಸಿದರು. 2ನೇ ವಿಕೆಟ್ ಜೊತೆಯಾಟದಲ್ಲಿ 34 ಎಸೆತಗಳಲ್ಲಿ 81 ರನ್​ ಸೇರಿಸಿದರು. ಗಾಯಕ್ವಾಡ್ 28 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್​ಗಳ ಸಹಿತ 42 ರನ್​ಗಳಿಸಿ ನೂರ್ ಅಹ್ಮದ್​ ಬೌಲಿಂಗ್​​ನಲ್ಲಿ ಬೌಲ್ಡ್ ಆದರು. ಗಾಯಕ್ವಾಡ್ ವಿಕೆಟ್ ನಂತರ ಸಿಎಸ್​ಕೆ ಬ್ಯಾಟಿಂಗ್ ನಿಧಾನವಾಯಿತು. ರನ್​ಗಳಿಸಲು ಪರದಾಡಿದರು. ಉರ್ವಿಲ್ ಕ್ರೀಸ್​ನಲ್ಲಿರುವವರೆಗೂ ಈ ಗುರಿಯನ್ನ 15 ಓವರ್​ಗಳಲ್ಲಿ ಮುಗಿಸಬಹುದು ಎನ್ನುವ ಸ್ಥಿತಿಯಲ್ಲಿತ್ತು. ಆದರೆ ಲಖನೌ ತಂಡ ಅದ್ಭುತವಾಗಿ ಕಮ್​ಬ್ಯಾಕ್ ಮಾಡಿ ಕೊನೆಯ ಓವರ್​ವರೆಗೆ ಕೊಂಡೊಯ್ಯಿತು. ಕಾರ್ತಿಕ್ ಶರ್ಮಾ 20 ಎಸೆತಗಳಲ್ಲಿ 20 ರನ್, ಡೆವಾಲ್ಡ್ ಬ್ರೆವಿಸ್ 12 ಎಸೆತಗಳಲ್ಲಿ 1 ಬೌಂಡರಿ, 10 ರನ್​ಗಳಿಸಿದರು. ಆದರೆ ಶಿವಂ ದುಬೆ 7 ಎಸೆತಗಳಲ್ಲಿ 2 ಸಿಕ್ಸರ್​ಗಳ ಸಹಿತ 15, ಪ್ರಶಾಂತ್ ವೀರ್ 12 ಎಸೆತಗಳಲ್ಲಿ 2 ಸಿಕ್ಸರ್​ಗಳ ಸಹಿತ ಅಜೇಯ 17 ರನ್​ಗಳಿಸಿ ತಂಡವನ್ನ ಗೆಲುವಿನ ಗಡಿ ದಾಟಿಸಿದರು. 7 ವರ್ಷಗಳ ನಂತರ 200 ರನ್​ಗಳನ್ನ ಚೇಸ್ ಮಾಡಿ ಗೆದ್ದ ಸಿಎಸ್​ಕೆ ಚೆನ್ನೈ ಸೂಪರ್ ಕಿಂಗ್ಸ್ 2019ರ ಬಳಿಕ 180ಕ್ಕಿಂತ ಹೆಚ್ಚು ಮೊತ್ತವನ್ನ ಚೇಸ್ ಮಾಡಿರಲಿಲ್ಲ. ಬರೋಬ್ಬರಿ 7 ವರ್ಷಗಳ ಬಳಿಕ 180+ ಹಾಗೂ 8 ವರ್ಷಗಳ ಬಳಿಕ 200+ ಸ್ಕೋರ್ ಚೇಸ್ ಮಾಡಿ ಗೆದ್ದಂತಾಗಿದೆ.

Sulekha

Leave a Reply

Your email address will not be published. Required fields are marked *