ಭುವಿ ಮ್ಯಾಜಿಕ್..‌ ಆರ್‌ಸಿಬಿಗೆ 2 ವಿಕೆಟ್‌ಗಳ ರೋಚಕ ಜಯ- ಪ್ಲೇ ಆಫ್‌ ರೇಸ್‌ನಿಂದ ಮುಂಬೈಗೆ ಗೇಟ್‌ಪಾಸ್!

ಭುವಿ ಮ್ಯಾಜಿಕ್..‌ ಆರ್‌ಸಿಬಿಗೆ 2 ವಿಕೆಟ್‌ಗಳ ರೋಚಕ ಜಯ- ಪ್ಲೇ ಆಫ್‌ ರೇಸ್‌ನಿಂದ ಮುಂಬೈಗೆ ಗೇಟ್‌ಪಾಸ್!

RCB ಹಾಗೂ ಮುಂಬೈ ವಿರುದ್ದದ ಹೈವೋಲ್ಟೇಜ್ ಪಂದ್ಯದಲ್ಲಿ ಆರ್‌ಸಿಬಿ 2 ವಿಕೆಟ್‌ಗಳಿಂದ ರೋಚಕ ಜಯ ಸಾಧಿಸಿದೆ. ಕೊನೆ ಓವರ್‌ನಲ್ಲಿ ಭುವನೇಶ್ವರ್‌ ಕುಮಾರ್‌ ಒಂದು ಸಿಕ್ಸರ್‌ ಸಿಡಿಸುವ ಮೂಲಕ ಬೆಂಗಳೂರು ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ.

ಇದನ್ನೂ ಓದಿ: ಅಮೃತಧಾರೆ ಸೀರಿಯಲ್‌ ಎಂಡ್? – NO.1 ಧಾರಾವಾಹಿ ಜಾಗಕ್ಕೆ ಜಗದ್ದಾತ್ರೀ.. ರಗಡ್‌ ಲುಕ್‌ನಲ್ಲಿ ಮೋಕ್ಷಿತಾ ಪೈ!

ರಾಯ್ಪುರದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಬ್ಯಾಟಿಂಗ್‌ ಆರಂಭಿಸಿದ ಮುಂಬೈ ಇಂಡಿಯನ್ಸ್‌ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತು. ತಂಡದ ಮೊತ್ತ ಕೇವಲ 28 ರನ್‌ ಇರುವಾಗಲೇ ಪ್ರಮುಖ ಮೂರು ವಿಕೆಟ್‌ ಕಳೆದುಕೊಂಡು ಮುಂಬೈ ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ನಮನ್‌ ಧೀರ್‌ ಮತ್ತು ತಿಲಕ್‌ ವರ್ಮಾ ಜವಾಬ್ದಾರಿಯುತ ಆಟವಾಡಿ ತಂಡದ ರನ್ 150ರ ಗಡಿ ದಾಟಲು‌ ನೆರವಾದರು. ಅಂತಿಮವಾಗಿ ಮುಂಬೈ 7 ವಿಕೆಟ್‌ ನಷ್ಟಕ್ಕೆ 166 ರನ್‌ ಗಳಿಸಿತು.

ನಂತರ ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ಆರಂಭದಲ್ಲಿ ಫ್ಯಾನ್ಸ್‌ಗೆ ಆಘಾತ ನೀಡಿತು. ವಿರಾಟ್‌ ಕೊಹ್ಲಿ ಇಂದು ಕೂಡ ಡಕೌಟ್‌ ಆಗಿ ಪೆವಿಲಿಯನ್‌ ಸೇರಿದ್ದು ನಿರಾಸೆ ಮೂಡಿಸಿತು. ದೇವದತ್‌ ಪಡಿಕ್ಕಲ್‌ 12, ಕ್ಯಾಪ್ಟನ್‌ ರಜತ್‌ ಪಾಟೀದಾರ್‌ 8 ರನ್‌ಗೆ ಔಟಾಗಿ ಶಾಕ್‌ ಕೊಟ್ಟರು. ಜಾಕೋಬ್ ಬೆಥೆಲ್ 27 ರನ್‌ ಗಳಿಸಿ ಔಟಾದರು. ಈ ನಡುವೆ ಕೃಣಾಲ್‌ ಪಾಂಡ್ಯ ಜವಾಬ್ದಾರಿಯುತ ಆಟವಾಡಿದರು. 46 ಬಾಲ್‌ಗೆ 73 ರನ್‌ ಗಳಿಸಿ ತಂಡದ ಗೆಲುವಿಗೆ ಕೊಡುಗೆ ನೀಡಿದರು. ಜಿತೇಶ್‌ ಶರ್ಮಾ 18 ರನ್‌ ಗಳಿಸಿದರು. ಟಿಮ್‌ ಡೇವಿಡ್‌ ಶೂನ್ಯ ಸುತ್ತಿ ಹೊರ ನಡೆದಿದ್ದು, ಫ್ಯಾನ್ಸ್‌ಗೆ ಆಘಾತ ನೀಡಿತು. ಕೊನೆ ಮೂರು ಬಾಲ್‌ಗೆ 9 ರನ್‌ ಬೇಕಿತ್ತು. ಶೆಫರ್ಡ್‌ ಔಟಾದ ಬಳಿಕ ಕ್ರೀಸ್‌ಗೆ ಬಂದ ಭುವನೇಶ್ವರ್‌ ಕುಮಾರ್‌ ಸಿಕ್ಸರ್‌ ಸಿಡಿಸಿದರು. ಎರಡು ಬಾಲ್‌ಗೆ ಮೂರು ರನ್‌ ಬೇಕಿತ್ತು. ಈ ವೇಳೆ ಒಂದು ಸಿಂಗಲ್‌ ತೆಗೆದುಕೊಂಡರು. ಕೊನೆ ಬಾಲ್‌ಗೆ ರಸಿಕ್ ಸಲಾಂ ಎರಡು ರನ್‌ ಪಡೆದು ತಂಡವನ್ನು ಗೆಲುವಿನ ದಡ ಸೇರಿಸಿದರು.

ಆರ್‌ಸಿಬಿ ಪರ ಬೌಲಿಂಗ್‌ನಲ್ಲಿ ಭುವನೇಶ್ವರ್‌ ಕುಮಾರ್‌ ಕಮಾಲ್‌ ಮಾಡಿದರು. ನಾಲ್ಕು ವಿಕೆಟ್‌ ಕಿತ್ತು ಭುವಿ ಮಿಂಚಿದರು. ಜೋಶ್‌ ಹ್ಯಾಜಲ್‌ವುಡ್‌, ರಾಶಿಕ್‌ ಸಲಾಂ, ರೊಮಾರಿಯೋ ಶೆಫರ್ಡ್‌ ತಲಾ 1 ವಿಕೆಟ್‌ ಪಡೆದರು.

Shwetha M

Leave a Reply

Your email address will not be published. Required fields are marked *