ಬೌಲಿಂಗ್ ಬೆಂಕಿಚೆಂಡು ಭುವನೇಶ್ವರ್ – ಪವರ್ ಪ್ಲೇ & ಡೆತ್ ನಲ್ಲಿ DEVIL
MIನೂ ಕಾಡ್ತಾರಾ ಸ್ವಿಂಗ್ ಕಿಂಗ್?

19ನೇ ಸೀಸನ್ ಐಪಿಎಲ್ನಲ್ಲಿ ಸದ್ಯ 10 ಪಂದ್ಯಗಳನ್ನ ಮುಗಿಸಿ ಪ್ಲೇ ಆಫ್ ರೇಸ್ನ ಹಾಟ್ ಫೇವರೆಟ್ ಟೀಂ ಆಗಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಂದಿನ ಟಾರ್ಗೆಟ್ ಮುಂಬೈ ಇಂಡಿಯನ್ಸ್. ಸೂಪರ್ ಸಂಡೇಯ ಡಬಲ್ ಹೆಡರ್ನ ಎರಡನೇ ಮ್ಯಾಚ್ನಲ್ಲಿ ಹೈವೋಲ್ಟೇಜ್ ಫೈಟ್ ಶೆಡ್ಯೂಲ್ ಆಗಿದೆ. ರಾಯ್ಪುರದಲ್ಲಿ ನಡೆಯಲಿರೋ ಈ ಪಂದ್ಯಕ್ಕೆ ಎರಡೂ ತಂಡಗಳು ರೆಡಿಯಾಗಿವೆ. ಅದ್ರಲ್ಲೂ ಆರ್ಸಿಬಿಯ ಬೌಲಿಂಗ್ ಬ್ರಹ್ಮಾಸ್ತ್ರ ಭುವನೇಶ್ವರ್ ಕುಮಾರ್ ಮೇಲೆ ಎಲ್ಲರ ಕಣ್ಣಿದೆ. ಮುಂಬೈ ಬೇಟೆಯಾಡ್ಬೇಕು ಅಂದ್ರೆ ಭುವಿ ಪಾತ್ರ ತುಂಬಾನೇ ಮುಖ್ಯ.
ಇದನ್ನೂ ಓದಿ : RCBಗಿಲ್ಲ ಜೋಶ್.. DCಗಿಲ್ಲ ಸ್ಟಾರ್ಕ್ – ಪ್ಲೇ ಆಫ್ಸ್ ಟೈಮಲ್ಲೇ ಕೈಕೊಡ್ತಾರಾ?
ಒಂದ್ಕಡೆ ಸ್ಟಾರ್ ಪ್ಲೇಯರ್ಗಳ ದಂಡೇ ತುಂಬಿರೋ ಮುಂಬೈ ಇಂಡಿಯನ್ಸ್.. ಮತ್ತೊಂದ್ಕಡೆ ಸಾಲಿಡ್ ಪರ್ಫಾಮೆನ್ಸ್ ನೀಡ್ತಿರೋ ರಾಯಲ್ ಚಾಲೆಂಜರ್ಸ್ ಬೆಂಗಳೂರು. ಬಹುದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿರೋ ಎರಡೂ ತಂಡಗಳ ಮುಖಾಮುಖಿಗೆ ವೇದಿಕೆ ಸಿದ್ಧವಾಗಿದೆ. ಇನ್ನು ಬೌಲಿಂಗ್ ಸ್ಟ್ರೆಂಥ್ ಅಂತಾ ಬಂದಾಗ ಮುಂಬೈ ಪರ ಸ್ಟಾರ್ ಬೌಲರ್ ಜಸ್ಪ್ರೀತ್ ಬುಮ್ರಾ ಇದ್ರೂ ಈ ಸೀಸನ್ ಅಷ್ಟೇನು ಚೆನ್ನಾಗಿ ಆಗಿಲ್ಲ. ಇನ್ನು ಆರ್ಸಿಬಿಯಲ್ಲಿ ಸ್ವಿಂಗ್ ಕಿಂಗ್ ಭುವನೇಶ್ವರ್ ಕುಮಾರ್ ಕಡೆಯಿಂದ ಎಕ್ಸ್ಟ್ರಾರ್ಡಿನರಿ ಪರ್ಫಾಮೆನ್ಸ್ ಬಂದಿದೆ. ಪರ್ಪಲ್ ಕ್ಯಾಪ್ ರೇಸ್ನ ಲೀಡ್ನಲ್ಲಿದ್ದಾರೆ. ಪ್ರಸ್ತುತ ಸೀಸನ್ನಲ್ಲಿ ವಿಕೆಟ್ಸ್ ಜೊತೆಗೆ ಎಕಾನಮಿ ಕೂಡ ತುಂಬಾ ಚೆನ್ನಾಗಿ ಮೇಂಟೇನ್ ಮಾಡ್ತಿದ್ದಾರೆ. ಲಕ್ನೋ ವಿರುದ್ಧದ ಮ್ಯಾಚಲ್ಲಿ 4 ಓವರ್ ಬೌಲ್ ಮಾಡಿದ್ದ ಭುವಿ 34 ರನ್ಸ್ ಬಿಟ್ಟು ಕೊಟ್ರು. ಯಾವುದೇ ವಿಕೆಟ್ಸ್ ಬರಲಿಲ್ಲ. ವಿಕೆಟ್ ಚಾನ್ಸ್ ಏನೋ ಕ್ರಿಕೆಟ್ ಮಾಡಿದ್ರು. ಬಟ್ ಫೀಲ್ಡರ್ ಅದನ್ನ ಕಂಪ್ಲೀಟ್ ಮಾಡಲಿಲ್ಲ. ಸದ್ಯ ಈ ಸೀಸನ್ನಲ್ಲಿ ಎಲ್ಲಾ 10 ಪಂದ್ಯಗಳಲ್ಲೂ ಬೌಲಿಂಗ್ ಮಾಡಿರೋ ಭುವಿ 17 ವಿಕೆಟ್ಸ್ ಬೇಟೆಯಾಡಿದ್ದಾರೆ. ಒಟ್ಟಾರೆ ಈ ಆವೃತ್ತಿಯಲ್ಲಿ 234 ಬಾಲ್ಗಳನ್ನ ಹಾಕಿರೋ ಭುವನೇಶ್ವರ್ ಕುಮಾರ್ 7.64ರ ಅದ್ಭುತ ಎಕಾನಮಿಯಲ್ಲಿ 298 ರನ್ಸ್ ಮಾತ್ರ ಕೊಟ್ಟಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ರಿವೇಂಜ್ ಮ್ಯಾಚಲ್ಲಿ 3 ಓವರ್ಗಳಲ್ಲಿ ಕೇವಲ 5 ರನ್ ನೀಡಿ 3 ವಿಕೆಟ್ ಬೇಟೆಯಾಡಿದ್ದು ಅವ್ರ ಬೆಸ್ಟ್ ಸ್ಪೆಲ್ ಆಗಿದೆ. ಇನ್ನು ಕೆಲ ಪಂದ್ಯಗಳಲ್ಲಿ ಜೋಶ್ ಹೇಜಲ್ವುಡ್ ಎಕ್ಸ್ಪೆನ್ಸಿವ್ ಆಗಿದ್ರೂ ಭುವಿ ಮಾತ್ರ ತಮ್ಮ ಲೈನ್ ಌಂಡ್ ಲೆಂಗ್ತ್ ತಪ್ಪಿಲ್ಲ. ಹೀಗಾಗಿ ಈ ಸೀಸನ್ನಲ್ಲಿ ಆರ್ಸಿಬಿಯ ಮುಂದಿನ ಜರ್ನಿಯಲ್ಲಿ ಭುವಿ ಅವ್ರ ಪಾತ್ರ ತುಂಬಾನೇ ಮುಖ್ಯವಾಗುತ್ತೆ. ಅಲ್ದೇ ಐಪಿಎಲ್ ಇತಿಹಾಸದಲ್ಲಿ ಅತಿದೊಡ್ಡ ಸಾಧನೆ ಕೂಡ ಮಾಡಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ 200 ಪಂದ್ಯಗಳನ್ನಾಡಿದ ಮೊದಲ ವೇಗಿ!
ಅನುಭವಿ ಸೀಮರ್ ಭುವನೇಶ್ವರ್ ಕುಮಾರ್ ಲಕ್ನೋ ವಿರುದ್ಧದ ಪಂದ್ಯದ ಮೂಲಕ ಐಪಿಎಲ್ ಇತಿಹಾಸದಲ್ಲಿ 200 ಪಂದ್ಯಗಳನ್ನು ಆಡಿದ ಮೊದಲ ವೇಗದ ಬೌಲರ್ ಆಗಿದ್ದಾರೆ. ಏಪ್ರಿಲ್ 5ರಂದು ನಡೆದಿದ್ದ ಮ್ಯಾಚ್ನಲ್ಲಿ 200 ವಿಕೆಟ್‌ಗಳನ್ನು ಪಡೆದ ಮೊದಲ ವೇಗಿ ಮತ್ತು ಯುಜೇಂದ್ರ ಚಾಹಲ್ ನಂತರ ಒಟ್ಟಾರೆಯಾಗಿ ಎರಡನೇ ಅತೀ ಹೆಚ್ಚು ವಿಕೆಟ್ಸ್ ಪಡೆದ ಬೌಲರ್ ಆಗಿದ್ದಾರೆ. ಸ್ವಿಂಗ್ ಸ್ಪೆಷಲಿಸ್ಟ್ ಭುವನೇಶ್ವರ್ ಕುಮಾರ್ ಈ ಸೀಸನ್ನಲ್ಲಿ ಅತ್ಯುತ್ತಮ ಫಾರ್ಮ್ನಲ್ಲಿದ್ದು ಪರ್ಪಲ್ ಕ್ಯಾಪ್ ರೇಸ್ನಲ್ಲಿ ಲೀಡ್ನಲ್ಲಿದ್ದಾರೆ. ಅಷ್ಟಕ್ಕೂ ಭುವಿ ಸಾಲಿಡ್ ಪರ್ಫಾಮೆನ್ಸ್ ಹಿಂದಿನ ಸೀಕ್ರೆಟ್ ಅಂದ್ರೆ ಅವ್ರಲ್ಲಿರೋ ಬೌಲಿಂಗ್ ಸ್ಕಿಲ್. ಭುವಿ ಬೌಲಿಂಗ್ ರೇರ್ ಸ್ವಿಂಗ್ ಎಬಿಲಿಟಿ ಇದೆ. ಌಂಡ್ ನ್ಯೂ ಬಾಲ್ ಓಲ್ಡ್ ಬಾಲ್.. ಅಂದ್ರೆ ಪವರ್ ಪ್ಲೇ ಹಾಗೇ ಡೆತ್ ಓವರ್ನಲ್ಲಿ ಬಿಗ್ ಬ್ರೇಕ್ ಥ್ರ್ಯೂಗಳನ್ನ ತಂದುಕೊಡೋ ಟೆಕ್ನಿಕ್ ಅವ್ರಲ್ಲಿದೆ. ಲೈನ್ ಌಂಡ್ ಲೆಂಗ್ತ್ ಇರ್ಬೋದು, ಅಕ್ಯೂರೆಸಿ ಇರ್ಬೋದು, ಡಾಟ್ ಬಾಲ್ಸ್ ಪ್ರೆಶರ್, ರನ್ ಕಂಟ್ರೋಲ್ ಸ್ಕಿಲ್, ಎಕಾನಮಿ, ಌಂಡ್ ಯಾವ ಬ್ಯಾಟರ್ಗೆ ಯಾವ ಥರ ಬೌಲಿಂಗ್ ಹಾಕ್ಭೇಕು ಅನ್ನೋ ಮೆಂಟರ್ ಟಫ್ನೆಸ್ ಇರ್ಬೋದು ಎಲ್ಲದ್ರಲ್ಲೂ ದಿ ಬೆಸ್ಟ್ ಅನ್ನೋ ತರ ಇದ್ದಾರೆ. ತಮ್ಮ ಬೌಲಿಂಗ್ ಸ್ಟ್ರೆಂಥ್ ಜೊತೆಗೆ ಜೀರೋ ಹೇಟರ್ಸ್ ಌಟಿಟ್ಯೂಡ್ ಇರೋದೇ ಪ್ಲಸ್ ಆಗಿರುವಂಥದ್ದು. ಹೀಗಾಗೇ ಭುವಿ ಅಂದ್ರೆ ಫ್ಯಾನ್ಸ್ಗೂ ಕೂಡ ಸ್ವಲ್ಪ ಜಾಸ್ತಿನೇ ಪ್ರೀತಿ.
ದಾಖಲೆಗಳ ಸರದಾರ ಭುವಿ!
2009 & 2010ರಲ್ಲಿ ಬೆಂಗಳೂರು ತಂಡದಲ್ಲಿದ್ರೂ ಡೆಬ್ಯೂ ಮಾಡಲಿಲ್ಲ
2011ರಲ್ಲಿ ಪುಣೆ ವಾರಿಯರ್ಸ್ ಮೂಲಕ ಐಪಿಎಲ್ ಗೆ ಪದಾರ್ಪಣೆ
2014ರಿಂದ 2024ರವರೆಗೆ ಹೈದ್ರಾಬಾದ್ ಪರ 11 ವರ್ಷ ಬೌಲಿಂಗ್
2016 & 2017ರಲ್ಲಿ ಸತತ ಪರ್ಪಲ್ ಕ್ಯಾಪ್ ಗೆದ್ದ ಏಕೈಕ ಬೌಲರ್
ಬ್ರಾವೋ, ಹರ್ಷಲ್ ಪಟೇಲ್ ಜೊತೆ 2 ಸಲ ಕ್ಯಾಪ್ ಗೆದ್ದಿರೋ ಭುವಿ
ಹೈದ್ರಾಬಾದ್ ಮತ್ತು ಬೆಂಗಳೂರು ಪರ 2 ಟ್ರೋಫಿ ಗೆದ್ದಿರೋ ಭುವಿ
ಐಪಿಎಲ್ ಇತಿಹಾಸದಲ್ಲೇ ಹೈಯೆಸ್ಟ್ ಡಾಟ್ ಬಾಲ್ಸ್ (1,800+ )
ಐಪಿಎಲ್ ನ 200 ಪಂದ್ಯಗಳಲ್ಲಿ ಬೌಲಿಂಗ್ ಮಾಡಿದ ಮೊದಲ ಬೌಲರ್
2025ರ ಐಪಿಎಲ್ಗೂ ಮುನ್ನ ಮೆಗಾ ಹರಾಜಿನಲ್ಲಿ ಆರ್ಸಿಬಿ 10.75 ಕೋಟಿಗೆ ಭುವಿಯವ್ರನ್ನ ಖರೀದಿ ಮಾಡಿತ್ತು. ಲಾಸ್ಟ್ ಸೀಸನ್ನಲ್ಲಿ 17 ವಿಕೆಟ್‌ಗಳನ್ನು ಕಬಳಿಸಿ ಬೆಂಗಳೂರು ತಂಡ ಮೊದಲ ಐಪಿಎಲ್ ಪ್ರಶಸ್ತಿಯನ್ನು ಎತ್ತಿ ಹಿಡಿಯಲು ಪ್ರಮುಖ ಪಾತ್ರ ವಹಿಸಿದ್ರು. ಅಲ್ದೇ ಭುವನೇಶ್ವರ್ ಕುಮಾರ್ ಎಂಥಾ ಕ್ವಾಲಿಟಿ ಪ್ಲೇಯರ್ ಅನ್ನೋದು ಜಗತ್ತಿಗೇ ಗೊತ್ತಿದೆ. ಇದೇ ಕಾರಣಕ್ಕೆ ಕಿಂಗ್ ವಿರಾಟ್ ಕೊಹ್ಲಿ ಕೂಡ ಭುವಿಯನ್ನ ಹಾಡಿ ಹೊಗಳಿದ್ದಾರೆ. ಐಪಿಎಲ್ನಲ್ಲಿ ಸಾರ್ವಕಾಲಿಕ ಟಾಪ್-3 ವೇಗಿಗಳಲ್ಲಿ ಭುವಿ ಕೂಡ ಒಬ್ರು ಎಂದಿದ್ದಾರೆ. ಕೊಹ್ಲಿನೇ ಕೊಂಡಾಡಿದ್ದಾರೆ ಅಂದ್ರೆ ಭುವಿ ಸಾಮರ್ಥ್ಯವನ್ನ ಪ್ರಶ್ನೆ ಮಾಡೋ ಹಂಗೇ ಇಲ್ಲ.

ನೋಡಿರಿ

