ಕೋಟೆನಾಡಲ್ಲಿ ಬಿಎಸ್ ವೈ ರಾಜಕೀಯ ಪಯಣದ ಅಭಿಮಾನೋತ್ಸವ – ರಾಜಾಹುಲಿ ರಾಜಕಾರಣದ ಹಾದಿಯೇ ರಣರೋಚಕ

ಕರ್ನಾಟಕದಲ್ಲಿ ಬಿಜೆಪಿಯ ಶಕ್ತಿಯಾಗಿ ವರ್ಷಗಟ್ಟಲೆ ಊರೂರು ಸುತ್ತಾಡಿ ಕಮಲ ಅರಳಲು ಭದ್ರ ಬುನಾದಿ ಹಾಕಿದ ಬಿಜೆಪಿಯ ಸರ್ವಶಕ್ತ ನಾಯಕ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಸುದೀರ್ಘ ರಾಜಕೀಯ ಪಯಣಕ್ಕೆ 50 ವರ್ಷ ತುಂಬಿದೆ. ಹೀಗಾಗಿ ಚಿತ್ರದುರ್ಗದಲ್ಲಿಂದು ಅಭಿಮಾನಿಗಳು, ಆಪ್ತರು ಅಭಿಮಾನೋತ್ಸ ನಡೆಸಿದ್ದಾರೆ. ಬಿಎಸ್ ವೈ ರಾಜಕೀಯ ಸಾಧನೆಯ ಅನಾವರಣ ಮಾಡುವುದು ಇದರ ಉದ್ದೇಶವಾಗಿದೆ.
ಇದನ್ನೂ ಓದಿ : ಮಳೆ ಜೊತೆ ಮುಳುವಾದ ಮಾರ್ಷ್ – ಕೈಯಲ್ಲಿದ್ದ ಮ್ಯಾಚ್ ಬಿಟ್ಟ RCB
ಮಾದಾರ ಚನ್ನಯ್ಯ ಮಠದ ಆವರಣದಲ್ಲಿ ನಿರ್ಮಿಸಲಾಗಿರುವ ಬೃಹತ್ ವೇದಿಕೆಯು ಏಳುಸುತ್ತಿನ ಕೋಟೆಯ ಮಾದರಿಯಲ್ಲಿದ್ದು, ಬಿಎಸ್ ವೈ ಮತ್ತು ಅಮಿತ್ ಶಾ ಅವರ ಬೃಹತ್ ಭಾವಚಿತ್ರಗಳಿಂದ ಕಂಗೊಳಿಸುತ್ತಿದೆ. ಈ ಸಮಾರಂಭದ ವಿಶೇಷ ಆಕರ್ಷಣೆಯೆಂದರೆ ಯಡಿಯೂರಪ್ಪನವರು ತಮ್ಮ ಆರಂಭಿಕ ರಾಜಕೀಯ ದಿನಗಳಲ್ಲಿ ಬಳಸುತ್ತಿದ್ದ ಅಂಬಾಸಿಡರ್ ಕಾರು ಪ್ರದರ್ಶನಕ್ಕೆ ಇಟ್ಟಿರುವುದು. ರೈತ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ರಾಜಕೀಯ ಜೀವನದಲ್ಲಿ ಬಳಸಿದ ಸಿಕೆಆರ್ 45 ನಂಬರಿನ ಹಿಂದೂಸ್ತಾನ್ ಅಂಬಾಸಿಡರ್ ಕಾರನ್ನು ಇಡೀ ರಾಜ್ಯದ ಜನ ಗುರುತಿಸಿದ್ದಾರೆ. ಆ ಕಾಲದಲ್ಲಿ ಕೇವಲ ನಗರಕ್ಕೆ ಸೀಮಿತವಾಗಿದ್ದ ಬಿಜೆಪಿಯನ್ನು ಹಳ್ಳಿಹಳ್ಳಿಗೆ ತೆಗೆದುಕೊಂಡು ಹೋಗಿ ಪಕ್ಷದ ಸಂಘಟನೆ ಬಲಪಡಿಸಲು ಬಿಎಸ್‍ವೈ ಸಾಕಷ್ಟು ಶ್ರಮಿಸಿದ್ದರು. ಪಕ್ಷ ಸಂಘಟನೆಯಲ್ಲಿ ಯಡಿಯೂರಪ್ಪ ಅವರ ಪಾತ್ರ ಎಷ್ಟಿದೆಯೋ ಈ ಕಾರಿನ ಪಾತ್ರವೂ ಅಷ್ಟೇ ಇದೆ. ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಅತಿದೊಡ್ಡ ಶಕ್ತಿಯಾಗಿ ಬೆಳೆದಿರುವ ಬಿಎಸ್ ಯಡಿಯೂರಪ್ಪರ ರಾಜಕೀಯ ಹಾದಿಯೇ ರಣರೋಚಕವಾಗಿದೆ.
ಬಿಎಸ್ ಯಡಿಯೂರಪ್ಪ ರಾಜಕೀಯ ಹಾದಿ
- ಮಂಡ್ಯ ಜಿಲ್ಲೆ ಕೆ.ಅರ್.ಪೇಟೆ ತಾಲ್ಲೂಕಿನ ಬೂಕನಕೆರೆಯಲ್ಲಿ ಸಿದ್ದಲಿಂಗಪ್ಪ, ಪುಟ್ಟತಾಯಮ್ಮ ಅವರ ಮಗನಾಗಿ 1943 ಫೆಬ್ರವರಿ 27ರಂದು ಜನನ.
- 1965ರಲ್ಲಿ ಬೆಂಗಳೂರಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾಗಿ ಸಾರ್ವಜನಿಕ ಜೀವನಕ್ಕೆ ಪಾದಾರ್ಪಣೆ.
- ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರ ಜೊತೆ ಸಂಪರ್ಕಕ್ಕೆ ಬಂದಿದ್ದು, ಇವರ ಹೋರಾಟದ ಕೆಚ್ಚು, ನಿಷ್ಠೆ, ಸಮಾಜಮುಖಿ ಬದುಕಿಗೆ ನಾಂದಿಯಾಯಿತು.
- ಕಾರ್ಯಕ್ಷೇತ್ರವಾಗಿ ಶಿಕಾರಿಪುರವನ್ನು ಆರಿಸಿಕೊಂಡ ಯಡಿಯೂರಪ್ಪನವರು ಶಿಕಾರಿಪುರದ ದಿವಂಗತ ವೀರಭದ್ರಶಾಸ್ತ್ರಿ ಅವರ ಪುತ್ರಿ ಮೈತ್ರಾದೇವಿಯೊಂದಿಗೆ ವಿವಾಹ.
- 1972ರಲ್ಲಿ ಶಿಕಾರಿಪುರ ತಾಲ್ಲೂಕಿನ ಜನಸಂಘದ ಅಧ್ಯಕ್ಷರಾಗಿ ಸಕ್ರಿಯ ರಾಜಕಾರಣ ಪ್ರವೇಶ. 1975ರಲ್ಲಿ ಶಿಕಾರಿಪುರ ಪುರಸಭಾ ಸದಸ್ಯರಾಗಿ, ಮಾರ್ಚ್ 1977 ರಿಂದ ಫೆಬ್ರವರಿ 1981ರವರೆಗೆ ಶಿಕಾರಿಪುರ ಪುರಸಭಾ ಅಧ್ಯಕ್ಷರಾಗಿ, ಶಿಕಾರಿಪುರದ ನೀರು,ವಿದ್ಯುತ್, ರಸ್ತೆ, ಸ್ವಚ್ಛತೆ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ನಿರಂತರ ಹೋರಾಟ. ಅಧಿಕಾರ ಸಿಕ್ಕಾಗ ಶಿಕಾರಿಪುರ ನಗರದ ಚಿತ್ರಣವನ್ನೇ ಬದಲಾಯಿಸಿದ ಕೀರ್ತಿ. ಬಡವರ ಬದುಕಿಗೆ ಸ್ಪಂದಿಸುವ ಸದಾ ಕ್ರಿಯಾಶೀಲರಾಗಿರುವ ರಾಜಕಾರಣಿ ಎಂಬ ಹೆಗ್ಗಳಿಕೆ. ಕುಮುದ್ವತಿ ನೀರನ್ನು ಮನೆ ಮನೆಗೆ ತಲುಪಿಸುವ ಸಂಕಲ್ಪ ತೊಟ್ಟು, ಅದರಲ್ಲಿ ಯಶಸ್ಸು ಗಳಿಕೆ.
- 1983ರಲ್ಲಿ ಪ್ರಥಮ ಬಾರಿಗೆ ಕರ್ನಾಟಕದ ವಿಧಾನಸಭೆಗೆ ಪ್ರವೇಶ. ಶಿವಮೊಗ್ಗದಲ್ಲಿ ರೈತರ, ಬಡ ಜನರ ಹೋರಾಟಕ್ಕೆ ಇನ್ನಷ್ಟು ಚುರುಕುತನ. ನಿರಂತರ ಹೋರಾಟದಿಂದ ಬಿಜೆಪಿ ಜನಸಾಮಾನ್ಯರ ಪಕ್ಷವೆಂಬ ಮಾನ್ಯತೆ. ವಿಧಾನಸಭೆಯಲ್ಲಿ ಬಿಜೆಪಿಯ 18 ಸದಸ್ಯರಿದ್ದರೂ ಅಧಿಕಾರಕ್ಕೆ ಆಸೆ ಪಡದೆ, ರೈತರ ಸಾಲಮನ್ನಾ ಮಾಡಲು ಒತ್ತಾಯ. ಹೋರಾಟದ ಪ್ರತಿಫಲ-ರೈತರ ಸಾಲ ಮನ್ನಾ.
- ತುರ್ತು ಪರಿಸ್ಥಿತಿಯ ವಿರುದ್ಧ ಕೆಚ್ಚೆದೆಯ ಹೋರಾಟ. ಭೂಗತರಾಗಿದ್ದುಕೊಂಡೇ ಜನ ಸಂಘಟನೆಯಲ್ಲಿ ತೊಡಗಿ, ಸಾಗರ ಮತ್ತು ಬಳ್ಳಾರಿಯಲ್ಲಿ ಜೈಲುವಾಸ. ಜೈಲಿನಲ್ಲಿದ್ದುಕೊಂಡು ಖೈದಿಗಳಿಗಾಗುತ್ತಿದ್ದ ಅನ್ಯಾಯದ ವಿರುದ್ಧ ಹೋರಾಟ. ಹೋರಾಟದ ವಿಶೇಷತೆ ಖೈದಿಗಳಿಗೆ ನ್ಯಾಯ ದೊರೆತದ್ದು. ಶಿಕಾರಿಪುರ ಕ್ಷೇತ್ರದಿಂದ ಐದು ಬಾರಿ ವಿಧಾನಸಭೆಗೆ ಆಯ್ಕೆ. ಒಂದು ಬಾರಿ ವಿಧಾನ ಪರಿಷತ್ತಿಗೆ ಆಯ್ಕೆ. 1994ರಲ್ಲಿ ಮತ್ತು 2004ರಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿ ಪ್ರಭಾವಿ ಹೋರಾಟ.
- 1988 ರಿಂದ 1991, 1995 ರಿಂದ 2000ರವರೆಗೆ 9 ವರ್ಷಗಳ ಕಾಲ ಭಾರತೀಯ ಜನತಾ ಪಾರ್ಟಿಯ ಅಧ್ಯಕ್ಷರಾಗಿ ಪಕ್ಷದ ಸರ್ವತೋಮುಖ ಬೆಳವಣಿಗೆಗೆ ಕಾರಣಕರ್ತ, ಬಿಜೆಪಿ ಕೇವಲ ನಗರ ಜನತೆಯ ಪಾರ್ಟಿ ಎನ್ನುತ್ತಿದ್ದವರಿಗೆ, ಬಿಜೆಪಿ ರೈತರ ಪಾರ್ಟಿ, ದೀನದಲಿತರ ಪಾರ್ಟಿ, ಕೃಷಿ ಕೂಲಿ ಕಾರ್ಮಿಕರ ಪಾರ್ಟಿ ಎನ್ನುವಂತೆ ಮಾಡಿದ ಕೀರ್ತಿ.
- 1991ರಲ್ಲಿ ಕಾಶ್ಮೀರದಲ್ಲಿ ಭಯೋತ್ಪಾದಕರು ರಾಷ್ಟ್ರಧ್ವಜ ಹಾರಿಸಲು ಸವಾಲೊಡ್ಡಿದಾಗ ಡಾ: ಮುರಳಿ ಮನೋಹರ ಜೋಷಿ ನೇತೃತ್ವದಲ್ಲಿ ಶ್ರೀನಗರದ ಲಾಲ್ ಚೌಕದಲ್ಲಿ ರಾಷ್ಟ್ರಧ್ವಜಾರೋಹಣ.
- ಜೀತಮುಕ್ತರ ಪರಿಹಾರಕ್ಕಾಗಿ ಶಿಕಾರಿಪುರ ಬಿಡಿಒ ಕಛೇರಿ ಮುಂದೆ ಒಂದು ತಿಂಗಳ ಕಾಲ ನಿರಂತರ ಹಗಲು ರಾತ್ರಿ ಧರಣಿ. ಸರ್ಕಾರ ಸ್ಪಂದಿಸದ ಕಾರಣ ಶಿವಮೊಗ್ಗಕ್ಕೆ ಸಾವಿರಾರು ರೈತರೊಂದಿಗೆ ಪಾದಯಾತ್ರೆ. ಜಿಲ್ಲಾಧಿಕಾರಿ ಕಛೇರಿ ಎದುರು ಧರಣಿ.
- 1998ರಲ್ಲಿ ಕಾವೇರಿ ಸಮಸ್ಯೆ ಮತ್ತೆ ಉಲ್ಬಣ. ಕಾವೇರಿ ಹುಟ್ಟೂರಿನಲ್ಲಿ ನೀರಿಗಾಗಿ ರೈತರ ಪರದಾಟ. ಸಾವಿರಾರು ರೈತರೊಂದಿಗೆ ತಲಕಾವೇರಿಯಿಂದ ಕೃಷ್ಣರಾಜಸಾಗರದವರೆಗೆ ರೈತಜಾಥಾ. ಸರ್ಕಾರದ ಗಮನ ಸೆಳೆತ.
- 1999ರಲ್ಲಿ ಪಕ್ಷದ ಸಂಘಟನೆಗಾಗಿ, ಜನಜಾಗೃತಿಗಾಗಿ ಐತಿಹಾಸಿಕ ಸಂಕಲ್ಪಯಾತ್ರೆ. ಒಂದೂವರೆ ತಿಂಗಳ ಕಾಲ ನಿರಂತರ ಪ್ರವಾಸ.
- 2002ರಲ್ಲಿ ಬಗರ್ ಹುಕುಂ ಸಾಗುವಳಿ ಮಾಡುತ್ತಿದ್ದ ರೈತರನ್ನು ಸರ್ಕಾರ ಒಕ್ಕಲೆಬ್ಬಿಸಲು ಮುಂದಾದಾಗ ಬಗರ್ ಹುಕುಂ ಸಾಗುವಳಿದಾರರ ಪರವಾಗಿ ಶಿಕಾರಿಪುರದಿಂದ ಶಿವಮೊಗ್ಗಕ್ಕೆ ಪಾದಯಾತ್ರೆ. ಶಿವಮೊಗ್ಗದಲ್ಲಿ ಒಂದು ವಾರ ಕಾಲ ಹಗಲು ರಾತ್ರಿ ಧರಣಿ. ಸರ್ಕಾರದ ಕಣ್ಣು ತೆರೆಸಿದ ಕೀರ್ತಿ.
- 2002ರಲ್ಲಿ ಮೆಕ್ಕೆಜೋಳ ಬೆಂಬಲ ಬೆಲೆ ನೀಡಲು ಆಗ್ರಹಿಸಿ ಸಾವಿರಾರು ರೈತರೊಂದಿಗೆ ಶಿಕಾರಿಪುರ ಮತ್ತು ಶಿವಮೊಗ್ಗದ ಎಪಿಎಂಸಿ ಎದುರು ಧರಣಿ. ಹೋರಾಟದ ಪ್ರತೀಕವಾಗಿ ಸರ್ಕಾರದಿಂದ ಜೋಳ ಖರೀದಿ.
- ಕಾವೇರಿ ಹೋರಾಟದಿಂದ ರಾಮಜನ್ಮ ಭೂಮಿ ಹೋರಾಟದವರೆಗೆ, ಜೀತಮುಕ್ತರ ಸಮಸ್ಯೆಯಿಂದ ಬಗರ್ ಹುಕುಂ ಸಮಸ್ಯೆಯವರೆಗೆ ನಿರಂತರ ಸೌಲಭ್ಯಗಳನ್ನು ನೀಡಲು ಮುಂದಾಗಿದ್ದು ಒಂದು ದಾಖಲೆ. ಹೋರಾಟಕ್ಕೆ ಅಟಲ್ ಬಿಹಾರಿ ವಾಜಪೇಯಿಯವರಿಂದ ಮುಕ್ತ ಶ್ಲಾಘನೆ, ಶುಭಾಶಯ. ಗುಂಡೂರಾಯರ ಅಧಿಕಾರ ಅವಧಿಯಲ್ಲಿ ಕೂಲಿಗಾಗಿ ಕಾಳು ಯೋಜನೆ ದುರುಪಯೋಗದ ವಿರುದ್ಧ ತೀವ್ರ ಪ್ರತಿಭಟನೆ.
- ಸಿ ಮತ್ತು ಡಿ ವರ್ಗದ ಜಮೀನನ್ನು ರೈತರಿಂದ ಅರಣ್ಯ ಇಲಾಖೆಗೆ ವರ್ಗಾಯಿಸಲು ಮುಂದಾದಾಗ ರೈತರ ಪರ ಟೊಂಕ ಕಟ್ಟಿನಿಂತ ಧೀಮಂತ. ಜಾಥಾ, ಚಳುವಳಿ, ಧರಣಿ ಮೂಲಕ ಪ್ರತಿಭಟನೆ.
- 1988ರಲ್ಲಿ ವಿಧಾನಸಭೆಯಲ್ಲಿ ವಿಧೇಯಕ ಮಂಡನೆ ವಿರೋಧಿಸಿ ತೀವ್ರ ಏಕಾಂಗಿ ಹೋರಾಟ ಪ್ರತಿಭಟನೆ, ಧರಣಿ ಆಕ್ರೋಶಗಳಿಗೆ ಮಣಿಯದ ಸರ್ಕಾರ.ಸದನದಲ್ಲೇ ರೈತರ ಪರ ಕಣ್ಣೀರು ಸುರಿಸಿದ ನೇಗಿಲಯೋಗಿ, ಸರ್ಕಾರದ ಕಣ್ಣು ತೆರೆಸಿ, ವಿಧೇಯತ ವಾಪಸ್. ಅರಣ್ಯ ಸಚಿವರಾದ ಶ್ರೀ ಬಿ. ರಾಚಯ್ಯನವರಿಂದ ಪ್ರಶಂಸೆ. ಏಕಾಂಗಿ ವೀರನ ಸಾಹಸಗಾಥೆಯಿಂದ ಇಡೀ ನಾಡಿಗೆ ಅಚ್ಚರಿ. ರೈತರಿಂದ ಸಂಭ್ರಮ. ರೈತ ನಾಯಕ ಯಡಿಯೂರಪ್ಪ ಎಂಬ ಪ್ರಶಂಸೆ. ವಿಧಾನಮಂಡಲದ ಇತಿಹಾಸದಲ್ಲಿ ಸರ್ಕಾರ ವಿಧೇಯಕ ವಾಪಸ್ ಪಡೆದ ದಾಖಲೆ ನಿರ್ಮಾಣ.
- 1974ರಲ್ಲಿ ಗ್ರಾಮ ರಾಜ್ಯ ಉಳಿಸಿ ರೈತರನ್ನು ರಕ್ಷಿಸಿ ಎಂಬ ಘೋಷಣೆಯೊಂದಿಗೆ ಶಿವಮೊಗ್ಗದಿಂದ ಬೆಂಗಳೂರಿಗೆ ಸಾವಿರಾರು ರೈತರೊಂದಿಗೆ ಪಾದಯಾತ್ರೆ. ವಿಧಾನಸೌಧಕ್ಕೆ ಮುತ್ತಿಗೆ. ಪಂಚಾಯತ್ ಚುನಾವಣೆ ನಡೆಸಲು ಒತ್ತಾಯ. ಬಿಜೆಪಿ ನಾಯಕ ಶ್ರೀ ಲಾಲ್‌ಕೃಷ್ಣ ಅಡ್ಡಾಣಿಯವರಿಂದ ರೈತನಾಯಕ ಯಡಿಯೂರಪ್ಪನವರಿಗೆ ಶುಭಾಶಯ.
- 1988ರಲ್ಲಿ ರೈತರ ಸಮಸ್ಯೆಗಳನ್ನು ತೆಗೆದುಕೊಂಡು ಬಸವನ ಬಾಗೇವಾಡಿಯಿಂದ ಬೆಂಗಳೂರಿಗೆ ರೈತ ಜಾಥಾ. ರಾಜ್ಯದಾದ್ಯಂತ ಸಾವಿರಕ್ಕೂ ಹೆಚ್ಚು ಸಾರ್ವಜನಿಕ ಸಭೆಗಳಲ್ಲಿ ಭಾಷಣ. ಬಸವಕಲ್ಯಾಣದಿಂದ ರೈತ ಜಾಗೃತಿಯನ್ನು ಮೂಡಿಸಲು ಇನ್ನೊಂದು ಬಾರಿ ರೈತ ಜಾಥಾ. ಲಕ್ಷಾಂತರ ರೈತರ ಪಾಲ್ಗೊಳ್ಳುವಿಕೆಯಿಂದ ಒಂದು ಐತಿಹಾಸಿಕ ದಾಖಲೆ.
- ಮೂರನೇ ಬಾರಿಗೆ ಬನವಾಸಿಯಿಂದ ಬೆಂಗಳೂರಿಗೆ ರೈತ ಜಾಥಾ. ಕೃಷ್ಣರಾಜಸಾಗರಕ್ಕೆ ಮತ್ತೊಂದು ಬಾರಿ ರೈತ ಜಾಥಾ. ಹೀಗೆ ರೈತ ಜಾಥಾದಲ್ಲಿ ರೈತರನ್ನು ಜಾಗೃತಗೊಳಿಸಿ, ಬಡಿದೆಬ್ಬಿಸಿ, ವಿಶ್ವಾಸ ಮೂಡಿಸಿದ ಹೋರಾಟ, ಜನಪರ ಕಾಳಜಿ ಹೊಂದಿದ ಧೀರೋದಾತ. ದಿನಂಪ್ರತಿ ಬೆಳಿಗ್ಗೆ ದೇವರ ಪೂಜೆ ಮಾಡದಿದ್ದರೂ ಪರವಾಗಿಲ್ಲ, ದೀನದಲಿತರ ಸೇವೆಯಿಂದ ಪೂಜೆಗೈಯಲು ಕಾರ್ಯಕರ್ತರಿಗೆ ಕಿವಿಮಾತು ಹೇಳಿದ ಧರ್ಮದಾತ.
- ಜೀವ ಬೆದರಿಕೆಗೆ ಬಗ್ಗದೆ ಆರ್ಥಿಕ ವ್ಯವಸ್ಥೆಯನ್ನು ಬುಡಮೇಲು ಮಾಡಿದ ಭೂಗತ ದೊರೆ ದಾವುದ್ ಇಬ್ರಾಹಿಂನೊಂದಿಗೆ ಶಾಮೀಲಾಗಿದ್ದ ನಕಲಿ ಛಾಪಾ ಕಾಗದ ಹಗರಣದ ರೂವಾರಿ ಕರೀಂ ಲಾಲಾ ತೆಲಗಿ ಮತ್ತು ಆತನ ಸಹಚರರ ವಿವರಗಳನ್ನು ಬಯಲು ಮಾಡಿ, ಸದನದ ಒಳಗೆ ಮತ್ತು ಹೊರಗೆ ಹೋರಾಟ ಮಾಡಿ, ಅವರ ಬಂಧನಕ್ಕೆ ಕಾರಣಕರ್ತ.
- ಕೂಲಿಗಾಗಿ ಕಾಳು ಯೋಜನೆ ದುರುಪಯೋಗ ಆದಾಗ ಜನತಾ ಅದಾಲತ್ ಕಾರ್ಯಕ್ರಮವನ್ನು ರೂಪಿಸಿ ಬರಗಾಲ ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ ಈ ಭ್ರಷ್ಠಾಚಾರದ ಹಗರಣವನ್ನು ಬಯಲು ಮಾಡಿದ ಕೀರ್ತಿ.
- ಕಾವೇರಿ ತಟದ ಬೂಕನಕೆರೆಯಲ್ಲಿ ಹುಟ್ಟಿ, ಆರ್,ಎಸ್.ಎಸ್. ಆಶ್ರಯದಲ್ಲಿ ಪಳಗಿ, ನಾಡಿನ ರೈತ, ದೀನ ದಲಿತರ ನಾಯಕನಾಗಿ ಬೆಳೆದ ದಣಿವರಿಯದ ಹೋರಾಟಗಾರ.
- ಕಾವೇರಿ ತಟದ ಬೂಕನಕೆರೆಯಲ್ಲಿ ಹುಟ್ಟಿ, ಆರ್,ಎಸ್.ಎಸ್. ಆಶ್ರಯದಲ್ಲಿ ಪಳಗಿ, ನಾಡಿನ ರೈತ, ದೀನ ದಲಿತರ ನಾಯಕನಾಗಿ ಬೆಳೆದ ದಣಿವರಿಯದ ಹೋರಾಟಗಾರ.
- ರಾಜ್ಯ ಕಂಡ ಅಪರೂಪದ ರಾಜಕಾರಣಿ, ರೈತ ನಾಯಕ, ದೀನದಲಿತರ ಧುರೀಣರ ಮುಂದುವರಿಯಲಿ. ಶೋಷಿತರ ಪರ ಇನ್ನಷ್ಟು ಹೋರಾಟ, ಸಂಘಟಿಸುವ ಕಸುವನ್ನು ಆ ಭಗವಂತ ಅವರಿಗೆ ನೀಡಲೆಂದು ನಾಡಿನ ಜನತೆಯ ಆಶಯ.
- 2004ರಲ್ಲಿ 5ನೇ ಬಾರಿ ವಿಧಾನಸಭೆಗೆ ಪ್ರವೇಶ, ಪ್ರತಿಪಕ್ಷದ ನಾಯಕನಾಗಿ ಆಯ್ಕೆ.
- 2006 ಉಪಮುಖ್ಯಮಂತ್ರಿ, ಹಣಕಾಸು ಮತ್ತು ಅಬಕಾರಿ ಖಾತೆ ನಿರ್ವಹಣೆ.
- 2007ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ, ಜೆಡಿಎಸ್ ನಿಂದ ಅಧಿಕಾರ ನಿರಾಕರಣೆ. 2008 ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ.
- 2011 ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ. 2014 ಶಿವಮೊಗ್ಗ ಕ್ಷೇತ್ರದಿಂದ ಲೋಕಸಭೆ ಪ್ರವೇಶ.
- 2014ರಲ್ಲಿ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾಗಿ ನೇಮಕ.
- 2016ರಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷರಾಗಿ ನೇಮಕ.
- 2017 ನವಂಬರ್ 2ರಿಂದ 2018ರ ಜನವರಿ 28ರ ವರೆಗೆ ನವ ಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆ. ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರದಲ್ಲಿ ವ್ಯಾಪಕ ಪ್ರವಾಸ.
- 2018ರಲ್ಲಿ ಮೇ 13ರಂದು 3ನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ.
- 2018ರಲ್ಲಿ ಮೇ 25ರಿಂದ 2019ರ ಜುಲೈ 25ರವರೆಗೆ ವಿಧಾನಸಭೆ ವಿಪಕ್ಷ ನಾಯಕರಾಗಿದ್ದರು.
- 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು 104 ಸ್ಥಾನಗಳನ್ನು ಗೆಲ್ಲುವಂತೆ ಮುನ್ನೆಡೆಸಿದ ಬಿಎಸ್‌ವೈ, ಸಿಎಂ ಆಗಿ ಬಹುಮತ ಸಾಬೀತುಪಡಿಸುವುದಕ್ಕೂ ಮುಂಚೆಯೇ ರಾಜೀನಾಮೆ ನೀಡಿದ್ದರು. ಇದರಿಂದ ಮೂರೇ ದಿನಕ್ಕೆ ಅವರ ಸರಕಾರ ಪತನವಾಯಿತು.
- ಬಳಿಕ 2019ರಲ್ಲಿ 26 ಜುಲೈರಂದು ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದರು.
- 2021ರ ಜುಲೈ 26ರಂದು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ.

ನೋಡಿರಿ

