ಸೀತಾ ಸ್ವಯಂವರಕ್ಕೆ ರಾವಣನಾಗಿ ಬಂದ ಯಶ್ – ಅದ್ಧೂರಿ ಸೆಟ್ ನಲ್ಲಿ ರಾಕಿಂಗ್ ಸ್ಟಾರ್ ಶೂಟಿಂಗ್

ಕೆಜಿಎಫ್ ಚಿತ್ರಗಳ ಮೂಲಕ ಜಗತ್ತಿನಾದ್ಯಂತ ಸದ್ದು ಮಾಡಿದ್ದ ರಾಕಿಂಗ್ ಸ್ಟಾರ್ ಯಶ್ ಆ ನಂತ್ರ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ಪದೇಪದೆ ಟಾಕ್ಸಿಕ್ ಸಿನಿಮಾ ರಿಲೀಸ್ ಡೇಟ್ ಮುಂಡೂಡಿಕೆ ಆಗ್ತಾನೇ ಮತ್ತೊಂದೆಡೆ ಬಹುಕೋಟಿ ಪ್ರಾಜೆಕ್ಟ್ ನ ಬಾಲಿವುಡ್ ಸಿನಿಮಾ ರಾಮಾಯಣ ಶೂಟಿಂಗ್ ಭರ್ಜರಿಯಾಗಿ ನಡೀತಿದೆ. ರಾವಣನಾಗಿ ಕಾಣಿಸಿಕೊಳ್ತಿರೋ ಯಶ್ ಈಗ ಸೀತಾ ಸ್ವಯಂವರದಲ್ಲಿ ಭಾಗಿಯಾಗಿದ್ದು ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ : ಆಗ HERO.. ಈಗ VILLAIN! – RCBಗೆ ಜಿತೇಶ್ & ಶೆಫರ್ಡ್ ಭಾರ
ಯಶ್ ಸಿನಿಮಾಗಳಂದ್ರೆ ಈಗ ಬಹಿನಿರೀಕ್ಷಿತ ಚಿತ್ರಗಳಾಗಿವೆ. 2022ರಲ್ಲಿ ಬಿಡುಗಡೆಯಾದ ಕೆಜಿಎಫ್ 2 ಸಿನಿಮಾವೇ ಕೊನೆ. ಈಗ ಭಾರತೀಯ ಚಿತ್ರರಂಗದ ಅತ್ಯಂತ ಕುತೂಹಲ ಮೂಡಿಸಿರೋ ಸಿನಿಮಾಗಳ ಸಾಲಿನಲ್ಲಿ ಈಗ ರಾಮಾಯಣ ಕೂಡ ಇದೆ. ಸಿನಿಮಾದ ಶೂಟಿಂಗ್ ಭರ್ಜರಿಯಾಗಿ ಸಾಗುತ್ತಿದ್ದು ಸಿನಿಮಾದ ಬಗ್ಗೆ ಒಂದು ದೊಡ್ಡ ಅಪ್ಡೇಟ್ ಹೊರಬಿದ್ದಿದೆ. ರಾವಣನ ಪಾತ್ರಧಾರಿ ಯಶ್ ಅವರು ಮುಂಬೈನಲ್ಲಿ ಬೀಡುಬಿಟ್ಟಿದ್ದಾರೆ. ಅದ್ದೂರಿಯಾಗಿ ನಿರ್ಮಿಸಲಾಗಿರುವ ಮಿಥಿಲಾ ನಗರದ ಸೆಟ್ನಲ್ಲಿ ಯಶ್ ಪ್ರಮುಖ ದೃಶ್ಯಗಳ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಸೀತಾ ಸ್ವಯಂವರದ ದೃಶ್ಯಕ್ಕಾಗಿ ಮುಂಬೈನಲ್ಲಿ ಬೃಹತ್ ಸೆಟ್ ನಿರ್ಮಿಸಲಾಗಿದೆ. ಅರಮನೆಯ ಪ್ರಾಂಗಣ, ಸುಂದರವಾದ ಬಾಲ್ಕನಿಗಳು ಹಾಗೂ ಹೂವುಗಳಿಂದ ಅಲಂಕೃತವಾದ ರಂಗೋಲಿ ವಿನ್ಯಾಸ ಈ ಸೆಟ್ನ ಹೈಲೈಟ್. ಮಿಥಿಲಾ ಸಾಮ್ರಾಜ್ಯದ ವೈಭವವನ್ನು ಮರುಸೃಷ್ಟಿಸಲು ನೂರಾರು ಜೂನಿಯರ್ ಆರ್ಟಿಸ್ಟ್ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಈ ದೃಶ್ಯದಲ್ಲಿ ಯಶ್ (ರಾವಣ) ಅವರ ಎಂಟ್ರಿ ಅತ್ಯಂತ ಪವರ್ಫುಲ್ ಆಗಿರಲಿದೆ ಎನ್ನಲಾಗಿದೆ. ಸೀತಾ ಸ್ವಯಂವರಕ್ಕೆ ರಾವಣನ ಆಗಮನ ಹಾಗೂ ಆತ ‘ಶಿವಧನುಸ್ಸು’ ಎತ್ತಲು ಪ್ರಯತ್ನಿಸಿ ವಿಫಲವಾಗುವ ದೃಶ್ಯವನ್ನು ಈಗ ಚಿತ್ರೀಕರಿಸಲಾಗುತ್ತಿದೆ. ರಾವಣ ಸಭೆಗೆ ಪ್ರವೇಶಿಸುತ್ತಿದ್ದಂತೆ ಅಲ್ಲಿನ ವಾತಾವರಣವೇ ಬದಲಾಗುವ ರೀತಿಯಲ್ಲಿ ಈ ಸೀನ್ ವಿನ್ಯಾಸ ಮಾಡಲಾಗಿದೆಯಂತೆ. ಸೀತೆಯ ಪಾತ್ರ ಮಾಡುತ್ತಿರುವ ಸಾಯಿ ಪಲ್ಲವಿ ಶೀಘ್ರದಲ್ಲೇ ಈ ಶೆಡ್ಯೂಲ್ಗೆ ಲಭ್ಯವಾಗಲಿದ್ದಾರೆ. ಆದರೆ, ಈ ಶೆಡ್ಯೂಲ್ನಲ್ಲಿ ರಾಮನ ಪಾತ್ರಧಾರಿ ರಣಬೀರ್ ಕಪೂರ್ ಭಾಗಿಯಾಗುತ್ತಿಲ್ಲ ಎನ್ನಲಾಗಿದೆ.
ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಮೊದಲ ಭಾಗ 2026ರ ದೀಪಾವಳಿ ಹಬ್ಬಕ್ಕೆ ಬಂದರೆ, ಎರಡನೇ ಭಾಗ 2027ರ ದೀಪಾವಳಿಗೆ ರಿಲೀಸ್ ಆಗಲಿದೆ. ರಾಮನಾಗಿ ರಣಬೀರ್, ಸೀತೆಯಾಗಿ ಸಾಯಿ ಪಲ್ಲವಿ ಹಾಗೂ ಪವರ್ಫುಲ್ ರಾವಣನಾಗಿ ಯಶ್ ನಟಿಸುತ್ತಿದ್ದಾರೆ. ಉಳಿದಂತೆ ಸನ್ನಿ ಡಿಯೋಲ್ (ಹನುಮಂತ), ಅರುಣ್ ಗೋವಿಲ್ (ದಶರಥ), ರಾಕುಲ್ ಪ್ರೀತ್ ಸಿಂಗ್ (ಶೂರ್ಪನಖಿ) ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ನಮಿತ್ ಮಲ್ಹೋತ್ರಾ ಅವರ ‘ಪ್ರೈಮ್ ಫೋಕಸ್ ಸ್ಟುಡಿಯೋಸ್ ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸುತ್ತಿದೆ.
ಇನ್ನು ಸಿನಿಮಾ ಮೇಕಿಂಗ್ ಜೊತೆಗೆ ಬಜೆಟ್ ಕೂಡ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. 4,000 ಕೋಟಿ ರೂಪಾಯಿ ಬಜೆಟ್ನಲ್ಲಿ ನಿರ್ಮಿಸಲಾಗಿರುವ ಈ ಮೂವಿ ಭಾರತೀಯ ಚಿತ್ರರಂಗದ ಅತ್ಯಂತ ಅದ್ದೂರಿ ಚಿತ್ರಗಳಲ್ಲಿ ಒಂದಾಗುತ್ತಿದೆ.ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ರಣಬೀರ್ ಕಪೂರ್ ರಾಮಾಯಣ 1, ರಾಮಾಯಣ 2 ಸಿನಿಮಾದಲ್ಲಿ ಪ್ರತಿ ಮೂವಿಗೆ 75 ಕೋಟಿ ರೂಪಾಯಿಗಳನ್ನು ಪಡೆಯಲಿದ್ದಾರಂತೆ. ಎರಡೂ ಸಿನಿಮಾ ಸೇರಿ ಒಟ್ಟು 150 ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ ಎನ್ನಲಾಗಿದೆ. ಇದು ಅವರ ಹಿಂದಿನ ಸಂಭಾವನೆ ದಿನಗಳಿಗಳಿಗೆ ಹೋಲಿಸಿದರೆ ಬಿಗ್ ಜಂಪ್. ರಾಮಾಯಣ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದ್ದು, ಮೊದಲ ಭಾಗವು ದೀಪಾವಳಿಗೆ ಮುಂಚಿತವಾಗಿ ಅಕ್ಟೋಬರ್ 2026 ರಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಮುಂದಿನ ಭಾಗ 2027 ರ ದೀಪಾವಳಿಗೆ ಬಿಡುಗಡೆಯಾಗಲಿದೆ.

ನೋಡಿರಿ

