ರಾಜಸ್ಥಾನ & ಗುಜರಾತ್ ನಡುವೆ ಇಂದು ಹೈವೋಲ್ಟೇಜ್ ಫೈಟ್ – ಜೈಪುರದಲ್ಲಿ ಗೆದ್ದವರಿಗೆ ಟಾಪ್-2 ಸ್ಥಾನ ಫಿಕ್ಸ್!

ರಾಜಸ್ಥಾನ & ಗುಜರಾತ್ ನಡುವೆ ಇಂದು ಹೈವೋಲ್ಟೇಜ್ ಫೈಟ್ – ಜೈಪುರದಲ್ಲಿ ಗೆದ್ದವರಿಗೆ ಟಾಪ್-2 ಸ್ಥಾನ ಫಿಕ್ಸ್!

ಐಪಿಎಲ್ ಈಗ ರಣರೋಚಕ ಘಟ್ಟದಲ್ಲಿದ್ದು ಪ್ಲೇ ಆಫ್ ಲೆಕ್ಕಾಚಾರ ಭರ್ಜರಿಯಾಗಿದೆ. ಅದರಲ್ಲೂ ಇವತ್ತಿನ ಪಂದ್ಯದಲ್ಲಿ ಗೆದ್ದವರಿಗೆ ಬಂಪರ್ ಅವಕಾಶ ಇದೆ. 19ನೇ ಆವೃತ್ತಿಯ ಐಪಿಎಲ್ ನ 52ನೇ ಪಂದ್ಯದಲ್ಲಿಂದು ರಾಜಸ್ಥಾನ್ ರಾಯಲ್ಸ್​ ಮತ್ತು ಗುಜರಾತ್​ ಟೈಟಾನ್ಸ್​ ತಂಡಗಳು ಮುಖಾಮುಖಿ ಆಗುತ್ತಿವೆ. ಜೈಪುರದ ಸವಾಯಿ ಮಾನ್ಸಿಂಗ್​ ಮೈದಾನದಲ್ಲಿ ಮ್ಯಾಚ್ ಶೆಡ್ಯೂರ್ ಆಗಿದೆ. ಎರಡೂ ತಂಡಗಳು ಉತ್ತಮ ಪ್ರದರ್ಶನ ನೀಡುತ್ತಿದ್ದು ಪ್ಲೇಆಫ್​ಗೆ ಹತ್ತಿರವಾಗಿವೆ. ಇವತ್ತಿನ ಪಂದ್ಯ ಗೆದ್ದವರು ಟಾಪ್-2ನಲ್ಲಿ ಕಾಣಿಸಿಕೊಳ್ತಾರೆ.

ಇದನ್ನೂ ಓದಿ : ಅಲೆನ್ ಶತಕದ ಆರ್ಭಟ.. ಸತತ ನಾಲ್ಕನೇ ಪಂದ್ಯ ಗೆದ್ದ ಕೊಲ್ಕತ್ತಾ – ಡೆಲ್ಲಿ ಪ್ಲೇ ಆಫ್ ಕನಸು ನುಚ್ಚು ನೂರು

ಪ್ರಸ್ತುತ ಸೀಸನ್ ನಲ್ಲಿ ಗುಜರಾತ್​ ತಂಡ ಇದುವರೆಗೆ ಆಡಿರುವ 10 ಪಂದ್ಯಗಳಲ್ಲಿ 6 ರಲ್ಲಿ ಗೆದ್ದು 4ರಲ್ಲಿ ಸೋಲನುಭವಿಸಿದೆ. ಪ್ರಸ್ತುತ 12 ಅಂಕಗಳನ್ನು ಪಡೆದುಕೊಂಡಿದ್ದು ನಿವ್ವಳ ರನ್​ ರೇಟ್ ​-0.147 ಆಗಿದೆ. ಅಂಕಪಟ್ಟಿಯಲ್ಲಿ 5ನೇ ಸ್ಥಾನ ಪಡೆದುಕೊಂಡಿದೆ. ರಾಜಸ್ಥಾನ್​ ರಾಯಲ್ಸ್ ತಂಡ ಸಹ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದು, ಇದು ಸಹ 6 ಪಂದ್ಯಗಳ ಗೆಲುವಿನೊಂದಿಗೆ 12 ಅಂಕಗಳನ್ನು ಹೊಂದಿದ್ದು ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸುವ ತಂಡ ಎರಡನೇ ಅಥವಾ ಮೊದಲ ಸ್ಥಾನಕ್ಕೆ ತಲುಪುವ ಅವಕಾಶ ಹೊಂದಿವೆ. ಈ ಸೀಸನ್‌ನಲ್ಲಿ ಉಭಯ ತಂಡಗಳ ನಡುವಿನ ಎರಡನೇ ಪಂದ್ಯ ಇದಾಗಿದೆ, ರಾಜಸ್ಥಾನ ತಂಡವು ಹಿಂದಿನ ಪಂದ್ಯವನ್ನು 6 ರನ್‌ಗಳಿಂದ ಗೆದ್ದುಕೊಂಡಿತ್ತು. ಹೀಗಾಗಿ, ಗುಜರಾತ್ ಟೈಟಾನ್ಸ್ ಈ ಪಂದ್ಯವನ್ನು ಗೆಲ್ಲುವ ಮೂಲಕ ತಮ್ಮ ಸೋಲಿಗೆ ಸೇಡು ತೀರಿಸಿಕೊಳ್ಳಲು ಸಜ್ಜಾಗುತ್ತಿದೆ. ಎರಡೂ ತಂಡಗಳು ಉತ್ತಮ ಲಯದಲ್ಲಿ ಇರೋದ್ರಿಂದ ಇವತ್ತಿನ ಪಂದ್ಯ ಹೈವೋಲ್ಟೇಜ್ ನಿಂದ ಕೂಡಿರಲಿದೆ.

ಇನ್ನು ಐಪಿಎಲ್ ನಲ್ಲಿ ಇದುವರೆಗೆ ಈ ಎರಡು ತಂಡಗಳ ಮುಖಾಮುಖಿಯೂ ಕುತೂಹಲಕಾರಿಯಾಗಿದೆ.  ಐಪಿಎಲ್‌ನಲ್ಲಿ ಇದುವರೆಗೆ ಎರಡೂ ತಂಡಗಳ ನಡುವೆ ಒಟ್ಟು 9 ಪಂದ್ಯಗಳು ನಡೆದಿದ್ದು, ರಾಜಸ್ಥಾನ್ ರಾಯಲ್ಸ್ ಕೇವಲ ಮೂರು ಪಂದ್ಯಗಳನ್ನು ಗೆದ್ದಿದ್ದರೆ, ಗುಜರಾತ್ ಟೈಟಾನ್ಸ್ 6 ಪಂದ್ಯಗಳನ್ನು ಗೆದ್ದುಕೊಂಡಿದೆ. ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಎರಡೂ ತಂಡಗಳ ನಡುವೆ ಒಟ್ಟು ಮೂರು ಪಂದ್ಯಗಳು ನಡೆದಿದ್ದು, ರಾಜಸ್ಥಾನ್ ರಾಯಲ್ಸ್ ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದಿದ್ದರೆ, ಗುಜರಾತ್ ಟೈಟಾನ್ಸ್ ಎರಡು ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಈ ಪಂದ್ಯದಲ್ಲೂ ಗುಜರಾತ್ ಗೆಲ್ಲುತ್ತಾ ಅನ್ನೋ ಕುತೂಹಲ ಇದೆ.  ಹಾಗೇ ಪಂದ್ಯ ನಡೆಯಲಿರುವ ಸವಾಯಿ ಮಾನ್ಸಿಂಗ್ ಪಿಚ್ ಬ್ಯಾಟಿಂಗ್​ ಸ್ನೇಹಿ ಪಿಚ್​ ಆಗಿರಲಿದೆ. ಹೊಸ ಚೆಂಡಿನೊಂದಿಗೆ ವೇಗದ ಬೌಲರ್‌ಗಳು ಲಾಭ ಪಡೆಯಲಿದ್ದಾರೆ. ಒಮ್ಮೆ ಬ್ಯಾಟರ್​ಗಳು ಸೆಟ್ ಆದರೇ ನಂತರ ಸುಲಭವಾಗಿ ರನ್​ಗಳನ್ನು ಕಲೆಹಾಕುತ್ತಾರೆ. ಐಪಿಎಲ್‌ನಲ್ಲಿ ಈ ಮೈದಾನದಲ್ಲಿನ ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ 166 ಆಗಿದ್ದರೆ, ಎರಡನೇ ಇನ್ನಿಂಗ್ಸ್ 150 ಮತ್ತು 160 ರ ನಡುವೆ ಇರಲಿದೆ. ಆದಾಗ್ಯೂ, ಈ ವರ್ಷ ಆಡಿದ ಕೊನೆಯ ಎರಡು ಪಂದ್ಯಗಳು ಹೆಚ್ಚಿನ ಸ್ಕೋರಿಂಗ್ ದಾಖಲಾಗಿದ್ದು, 220 ಕ್ಕಿಂತ ಹೆಚ್ಚಿನ ಸ್ಕೋರ್‌ಗಳನ್ನು ಸುಲಭವಾಗಿ ಬೆನ್ನಟ್ಟಲಾಗಿದೆ. ಇಂದಿನ ಪಂದ್ಯದಲ್ಲಿ ಎರಡೂ ಕಡೆಯಿಂದಲೂ ಬಿಗ್ ಸ್ಕೋರ್ ನಿರೀಕ್ಷೆ ಮಾಡಬಹುದು.

Shantha Kumari

Leave a Reply

Your email address will not be published. Required fields are marked *