ವೈಡ್ ಬಾಲ್ ಓಕೆ.. ನೋ ಬಾಲ್ ಯಾಕೆ? – ಬುಮ್ರಾ ಕಳಪೆ ಬೌಲಿಂಗ್‌ಗೆ ಕ್ರಿಕೆಟ್ ದಿಗ್ಗಜರು ಶಾಕ್

ವೈಡ್ ಬಾಲ್ ಓಕೆ.. ನೋ ಬಾಲ್ ಯಾಕೆ? – ಬುಮ್ರಾ ಕಳಪೆ ಬೌಲಿಂಗ್‌ಗೆ ಕ್ರಿಕೆಟ್ ದಿಗ್ಗಜರು ಶಾಕ್

ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ ತಂಡಗಳಲ್ಲಿ ಬಲಿಷ್ಠ ತಂಡ. ಈ ಟೀಮ್‌ನಲ್ಲಿರೋದು ದಿಗ್ಗಜ ಬ್ಯಾಟರ್ಸ್.. ನಂಬರ್ ಒನ್ ಬೌಲರ್ಸ್.. ಅರ್ಧ ಟೀಮ್ ಇಂಡಿಯಾನೇ ಮುಂಬೈ ತಂಡದಲ್ಲಿದೆ. ಅದರಲ್ಲೂ ಮುಂಬೈ ಬಲವೇ ಜಸ್ತ್ಪೀತ್ ಬುಮ್ರಾ. ಆದ್ರೆ ಯಾಕೋ ಈ ಬಾರಿ ಜಸ್ಪ್ರೀತ್ ಮ್ಯಾಜಿಕ್ ವರ್ಕ್ ಆಗ್ತಿಲ್ಲ. ಬುಮ್ರಾ ಕಳಪೆ ಬೌಲಿಂಗ್ ಬಗ್ಗೆ ಕ್ರಿಕೆಟ್ ದಿಗ್ಗಜರು ಕೂಡಾ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಬೆಥೆಲ್ ಬೇಡ.. ವೆಂಕಿ ಓಪನರ್? – MI ಬೇಟೆಗೆ ಕಾಕ್ಸ್ ವಿಕೆಟ್ ಕೀಪರ್?

ವಿಶ್ವದ ನಂಬರ್ ಒನ್ ಬೌಲರ್.. ಜಸ್ಪ್ರೀತ್ ಬುಮ್ರಾ ಕೈಯಲ್ಲಿ ಚೆಂಡು ಕಂಡರೆ ಸಾಕು ಎದುರಾಳಿ ಬ್ಯಾಟರ್ ಸೈಲೆಂಟ್.. ಆದರೆ, ಈಗ ಏನಾಗುತ್ತಿದೆ.. ಒಂದು ಓವರ್‌ನಲ್ಲಿ ನೋ ಬಾಲ್.. ವೈಡ್.. ಸಿಕ್ಸ್.. ಫೋರ್.. ನೋ ವಿಕೆಟ್.. ಇದು ಐಪಿಎಲ್‌ನಲ್ಲಿ ಬುಮ್ರಾ ಸಾಧನೆ. ಬುಮ್ರಾ ಕಳಪೆ ಬೌಲಿಂಗ್ ನೋಡಿ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಬೇಸರ ವ್ಯಕ್ತಪಡಿಸಿದ್ದಾರೆ. ಜೊತೆಗೆ ಭಾರತದ ಹಿರಿಯ ವೇಗಿ ಉಮೇಶ್ ಯಾದವ್ ಕೂಡಾ ಬುಮ್ರಾ ಬೌಲಿಂಗ್ ಶೈಲಿಯ ಬಗ್ಗೆ ಮಾತಾಡಿದ್ದಾರೆ. ಮೇ 4 ರಂದು ನಡೆದ ಲಕ್ನೋ ಸೂಪರ್ ಜೈಂಟ್ಸ್‌ ವಿರುದ್ಧದ ಪಂದ್ಯದಲ್ಲಿ ಬುಮ್ರಾ ಮೂರು ನೋಬಾಲ್‌ ಎಸೆದಿದ್ದು, ಈ ಬಗ್ಗೆ ಭಾರತೀಯ ಕ್ರಿಕೆಟ್‌ನ ದಂತಕಥೆ ಸುನಿಲ್ ಗವಾಸ್ಕರ್ ತೀವ್ರ ಅಸಮಾಧನ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಬುಮ್ರಾ ನೋ-ಬಾಲ್ ತಪ್ಪುಗಳ ಬಗ್ಗೆ ಸುನಿಲ್ ಗವಾಸ್ಕರ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಂದ್ಯದ ವೇಳೆ ಕಾಮೆಂಟರಿ ಮಾಡುತ್ತಿದ್ದ ಸುನಿಲ್ ಗವಾಸ್ಕರ್, ಇದು ಒಪ್ಪಿಕೊಳ್ಳಲು ಸಾಧ್ಯವಿಲ್ಲ, ನೀವು ಒಬ್ಬ ವೃತ್ತಿಪರ ಕ್ರಿಕೆಟಿಗ. ವೈಡ್ ಎಸೆದರೆ ತಪ್ಪೇನಿಲ್ಲ. ಆದರೆ ಪದೇ ಪದೇ ನೋ-ಬಾಲ್ ಹಾಕುವುದು ಸರಿಯಲ್ಲ, ಎಂದು ನೇರವಾಗಿಯೇ ಬುಮ್ರಾ ವಿರುದ್ಧ ಆಕ್ರೋಶ ಹೊರಹಾಕಿದರು.

ಇನ್ನು ಭಾರತದ ಹಿರಿಯ ವೇಗಿ ಉಮೇಶ್ ಯಾದವ್ ಬುಮ್ರಾ ಬೌಲಿಂಗ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಜಸ್ಪ್ರೀತ್ ಬುಮ್ರಾ ಈ ಆವೃತ್ತಿಯಲ್ಲಿ ಕಷ್ಟಪಡುತ್ತಿದ್ದಾರೆ. ಈ ಆವೃತ್ತಿಯಲ್ಲಿ ಮುಂಬೈ ಪರ ಬುಮ್ರಾ ಸ್ಥಿರ ಪ್ರದರ್ಶನ ನೀಡುತ್ತಿಲ್ಲ. ಕೆಲವೊಮ್ಮೆ ಪವರ್‌ಪ್ಲೇನಲ್ಲಿ ಬೌಲಿಂಗ್ ಮಾಡಲು ಅವರನ್ನು ಕೇಳಲಾಗುತ್ತದೆ ಮತ್ತು ಕೆಲವೊಮ್ಮೆ ಒತ್ತಡವಿಲ್ಲದ ಸಂದರ್ಭಗಳಲ್ಲಿ ಬೌಲಿಂಗ್ ಮಾಡಲು ಬರುತ್ತಾರೆ. ಅದು ಅವರ ಮೇಲೆ ಪರಿಣಾಮ ಬೀರುತ್ತಿದೆ. ಬುಮ್ರಾ ದಾಳಿ ಮಾಡಲು ಮತ್ತು ವಿಕೆಟ್ ಪಡೆಯಲು ಅವಕಾಶಗಳನ್ನು ನೀಡಲು ಮುಂಬೈ ಅವಕಾಶಗಳನ್ನು ಸೃಷ್ಟಿಸಬೇಕಾಗಿದೆ ಎಂದು  ಉಮೇಶ್ ಯಾದವ್ ಹೇಳಿದ್ದಾರೆ.

ಇನ್ನು ಐಪಿಎಲ್‌ನಲ್ಲಿ ವಿಕೆಟ್ ಟೇಕರ್ ಗಳಲ್ಲಿ ಬುಮ್ರಾ ಕೂಡಾ ಫೆವರೇಟ್ ಲಿಸ್ಟ್ ನಲ್ಲಿ ಯಾವಾಗಲೂ ಇರ್ತಾರೆ. ಈ ಬಾರಿ ಆ ಮ್ಯಾಜಿಕ್ ಕೂಡಾ ನಡೆದಿಲ್ಲ. 10 ಪಂದ್ಯಗಳನ್ನು ಆಡಿರುವ ಬುಮ್ರಾ ಪಡೆದಿದ್ದು ಕೇವಲ 3 ವಿಕೆಟ್ ಗಳನ್ನು ಮಾತ್ರ. ಮುಂಬೈ ತಂಡದ ಬೌಲಿಂಗ್ ವಿಭಾಗದ ಜೀವಾಳ ಎನಿಸಿಕೊಂಡಿರುವ ಜಸ್ಪ್ರೀತ್ ಬುಮ್ರಾ ಈ ಆವೃತ್ತಿಯಲ್ಲಿ ವಿಕೆಟ್ ಬರ ಎದುರಿಸುತ್ತಿದ್ದಾರೆ ಅಂದ್ರೆ ಫ್ಯಾನ್ಸ್ ಗೆ ಅರಗಿಸಿಕೊಳ್ಳೋಕೂ ಕೂಡಾ ಕಷ್ಟವಾಗ್ತಿದೆ. ಈ ಸೀಸನ್‌ನಲ್ಲಿ ಬುಮ್ರಾ ಲಯ ಕಳೆದುಕೊಂಡಿರುವುದು ಗೊತ್ತಾಗ್ತಿದೆ. ನಿರ್ಣಾಯಕ ವಿಕೆಟ್ ಟೇಕಿಂಗ್ ಪ್ರದರ್ಶನಕ್ಕೆ ಹೆಸರುವಾಸಿಯಾದ ಜಸ್ಪ್ರೀತ್ ಬುಮ್ರಾ ವಿಕೆಟ್ ಬರ ಎದುರಿಸುತ್ತಿರುವುದು ಯಾಕೆ? ಈ ಆವೃತ್ತಿಯಲ್ಲಿ ಬುಮ್ರಾ ಅವರ ಎಕಾನಮಿ ರೇಟ್​ ಕೂಡ ಪ್ರತಿ ಓವರ್‌ಗೆ ಸುಮಾರು 9 ರನ್‌ಗಳಷ್ಟು ಇರೋದು ಯಾಕೆ? ಅಂತಾ ನೋಡೋದಾದರೆ ಇಲ್ಲೂ ಬುಮ್ರಾ ಸ್ಟ್ರಾಟಜಿ ಕಾಣಿಸುತ್ತಿದೆ. ಐಪಿಎಲ್‌ನಲ್ಲಿ ವಿದೇಶಿ ಬ್ಯಾಟರ್ಸ್ ಇರ್ತಾರೆ. ಇವರಿಗೇನಾದರೂ ಬುಮ್ರಾ ಬೌಲಿಂಗ್ ಸೀಕ್ರೆಟ್ ಗೊತ್ತಾದರೆ ಅಂತರಾಷ್ಟ್ರೀಯ ಪಂದ್ಯಗಳನ್ನಾಡುವಾಗ ಟೀಮ್ ಇಂಡಿಯಾಕ್ಕೆ ಕಷ್ಟವಾಗಬಹುದು. ಹೀಗಾಗಿ ಯಾರ್ಕರ್ ಕಿಂಗ್ ಐಪಿಎಲ್ ಪಂದ್ಯಗಳಲ್ಲಿ ತನ್ನ ಬೌಲಿಂಗ್ ಸೀಕ್ರೆಟ್ ಬಿಟ್ಟುಕೊಡಲು ಇಷ್ಟಪಡ್ತಿಲ್ಲ. ತನ್ನ ಬೌಲಿಂಕ್ ಸೀಕ್ರೆಟ್ ರಿವೀಲ್ ಮಾಡಲಾಗದೆ, ತನ್ನ ಬೌಲಿಂಗ್ ಬಲ ತೋರಿಸಲಾಗದೇ ಬುಮ್ರಾ ಕೂಡಾ ಕಷ್ಟಪಡ್ತಿದ್ದಾರೆ. ಇದ್ರಿಂದಾಗಿ ಮುಂಬೈ ಇಂಡಿಯನ್ಸ್ ಬೌಲಿಂಗ್ ವಿಭಾಗ ವೀಕ್ ಆಗ್ತಿದೆ. ಅದೇನೇ ಇರಲಿ, ಮುಂಬೈನ ಯಾರ್ಕರ್ ಕಿಂಗ್ ಎದುರಾಳಿಗಳನ್ನ ಕಾಡೋದನ್ನು ನೋಡೋದೇ ಫ್ಯಾನ್ಸ್ ಗೆ ಇಷ್ಟ.

Sulekha

Leave a Reply

Your email address will not be published. Required fields are marked *