ಮಧ್ಯಾಹ್ನದ ಬಿಸಿಯೂಟದಲ್ಲಿ ಹಾವಿನ ಮರಿ ಪತ್ತೆ! – ಊಟ ಸೇವಿಸಿದ ನೂರಾರು ಮಕ್ಕಳು ಅಸ್ವಸ್ಥ!

ಮಧ್ಯಾಹ್ನದ ಬಿಸಿಯೂಟದಲ್ಲಿ ಹಾವಿನ ಮರಿ ಪತ್ತೆ! – ಊಟ ಸೇವಿಸಿದ ನೂರಾರು ಮಕ್ಕಳು ಅಸ್ವಸ್ಥ!

ಬಿಹಾರದಲ್ಲಿ ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. ಮಧ್ಯಾಹ್ನದ ಬಿಸಿಯೂಟದಲ್ಲಿ ಹಾವಿನ ಮರಿ ಪತ್ತೆಯಾಗಿದೆ. ಇದನ್ನು ಸೇವಿಸಿದ ನೂರಾರು ಮಕ್ಕಳು ಅಸ್ಪಸ್ಥಗೊಂಡಿರುವ ಘಟನೆ ನಡೆದಿದೆ.

ಇದನ್ನೂ ಓದಿ: ಮಳೆ ಜೊತೆ ಮುಳುವಾದ ಮಾರ್ಷ್ – ಕೈಯಲ್ಲಿದ್ದ ಮ್ಯಾಚ್ ಬಿಟ್ಟ RCB

ಈ ಬೆಚ್ಚಿಬೀಳಿಸುವ ಘಟನೆ ಬಿಹಾರದ ಸಹರ್ಸಾ ಜಿಲ್ಲೆಯಲ್ಲಿ ನಡೆದಿದೆ. ಮಧ್ಯಾಹ್ನದ ಬಿಸಿಯೂಟ  ಸೇವಿಸಿ ನೂರಾರು ಮಕ್ಕಳು ಅಸ್ವಸ್ಥರಾಗಿದ್ದರು. ಮಕ್ಕಳು ಹೊಟ್ಟೆ ನೋವಿನಿಂದ ಬಳಲಿದ್ದಾರೆ. ಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಹರ್ಸಾದ ಮಹಿಷಿ ಬ್ಲಾಕ್‌ನಲ್ಲಿರುವ ಮಿಡಲ್ ಸ್ಕೂಲ್ ಬಲುಹಾದಲ್ಲಿ ಈ ಘಟನೆ ನಡೆದಿದೆ.

ದಿನನಿತ್ಯದಂತೆ ಗುರುವಾರವೂ (ಮೇ 7) ಎನ್‌ಜಿಒವೊಂದು ಪೂರೈಸಿದ ಮಧ್ಯಾಹ್ನದ ಊಟವನ್ನು ಶಾಲಾ ಮಕ್ಕಳಿಗೆ ನೀಡಲಾಗಿತ್ತು. ಆಹಾರವನ್ನು ಬಡಿಸಿ ಮಕ್ಕಳು ತಿನ್ನಲು ಪ್ರಾರಂಭಿಸುತ್ತಿದ್ದಂತೆ, ಒಬ್ಬ ವಿದ್ಯಾರ್ಥಿಗೆ ಮರಿ ಹಾವು ಕಂಡುಬಂದಿದೆ. ಶೀಘ್ರದಲ್ಲೇ, ಬಹುತೇಕ ಎಲ್ಲಾ ಮಕ್ಕಳು ಒಬ್ಬರ ನಂತರ ಒಬ್ಬರು ಹೊಟ್ಟೆ ನೋವಿನ ಬಗ್ಗೆ ದೂರು ನೀಡಲು ಪ್ರಾರಂಭಿಸಿದರು.

ಸ್ವಲ್ಪ ಹೊತ್ತಿನಲ್ಲೇ, ನೂರಾರು ಮಕ್ಕಳು ನೋವಿನಿಂದ ನರಳಾಡುತ್ತಿದ್ದರು. ಶಾಲಾ ಆಡಳಿತ ಮಂಡಳಿಯು ತಕ್ಷಣವೇ ಪೊಲೀಸರಿಗೆ ಮತ್ತು ಆಸ್ಪತ್ರೆಗೆ ಮಾಹಿತಿ ನೀಡಿತು. ಪೊಲೀಸರು ಸ್ವಲ್ಪ ಹೊತ್ತಿನಲ್ಲೇ ಆಗಮಿಸಿ ಕೆಲವು ಮಕ್ಕಳನ್ನು ಅವರ ಸ್ವಂತ ವಾಹನಗಳಲ್ಲಿ ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ಸಾಗಿಸಿದರು. ನಂತರ, ಆಸ್ಪತ್ರೆಯಿಂದ ಕಳುಹಿಸಲಾದ ಆಂಬ್ಯುಲೆನ್ಸ್‌ಗಳು ಉಳಿದ ಮಕ್ಕಳನ್ನು ದಾಖಲಿಸಲಾಯಿತು. ಕೆಲವರ ಸ್ಥಿತಿ ಗಂಭೀರವಾಯಿತು.

ಅಸ್ವಸ್ಥಗೊಂಡ ಹಲವಾರು ಮಕ್ಕಳನ್ನು ನಂತರ ಸದರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ನಂತರ, ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ತನಿಖೆಗೆ ಆದೇಶಿಸಿದೆ. ಸ್ಥಳೀಯ ಶಾಲೆಗಳಿಗೆ ಮಧ್ಯಾಹ್ನದ ಬಿಸಿಯೂಟವನ್ನು ತಯಾರಿಸುವ ಎನ್ಜಿಒ ಕ್ಲಸ್ಟರ್‌ಗೆ ತನಿಖಾ ತಂಡವನ್ನು ಕಳುಹಿಸಲಾಗಿದೆ.

Shwetha M