ಮಳೆ ಜೊತೆ ಮುಳುವಾದ ಮಾರ್ಷ್ – ಕೈಯಲ್ಲಿದ್ದ ಮ್ಯಾಚ್ ಬಿಟ್ಟ RCB
ಕೃನಾಲ್, ಡೇವಿಡ್ ಗೊಂದು ಸಲಾಂ!

ಲಕ್ನೋ ವಿರುದ್ಧ ಈಸಿಯಾಗಿ ಗೆದ್ದು ಟೇಬಲ್ ಟಾಪರ್ ಆಗ್ತಾರೆ ಅನ್ಕೊಂಡ್ರೆ ಗೆಲ್ಲೋ ಮ್ಯಾಚ್ ಕೈಚೆಲ್ಲಿದ್ರು. ಒಂದ್ಕಡೆ ಮಳೆ ಕಾಟ ಇನ್ನೊಂದ್ಕಡೆ ಮಾರ್ಶ್ ಬ್ಯಾಟಿಂಗ್ ಆರ್ಭಟ.. ಬ್ಯಾಕ್ ಟು ಬ್ಯಾಕ್ ಬ್ರೇಕ್ ಅನ್ನೋ ಕಿರಿಕಿರಿ ನಡುವೆ ವಿಕೆಟ್ ಬೀಳ್ತಿಲ್ವಲ್ಲ ಅನ್ನೋ ಟೆನ್ಷನ್ ಬೇರೆ. ಹಂಗೂ ಹಿಂಗೂ ಮಾಡಿ ಬೌಲಿಂಗ್ ಮುಗೀತು ಅನ್ಕೊಂಡ್ರೆ ಬ್ಯಾಟಿಂಗ್ ಫಸ್ಟ್ 2 ಓವರ್ನಲ್ಲೇ ಹಾರ್ಟ್ಬ್ರೇಕ್. ಲಾಸ್ಟ್ ಮೂಮೆಂಟ್ನಲ್ಲಿ ಗೆದ್ದೇ ಬಿಡ್ತೀವಿ ಅನ್ಕೊಂಡ್ರೆ ಅಲ್ಲೊಂಥರಾ ಟ್ವಿಸ್ಟ್ ಹೀಗೆ ಇಡೀ ಪಂದ್ಯದುದ್ದಕ್ಕೂ ಬೆಂಗಳೂರು ಟೀಂ ಫ್ಯಾನ್ಸ್ ಡಿಸಪಾಯಿಂಟ್ ಆಗಿದ್ದೇ ಆಯ್ತು.
ಇದನ್ನೂ ಓದಿ : ನಂಬರ್ 1 ಆಗುತ್ತಾ RCB? – ಮುಂಬೈನಿಂದ ಫ್ಲಾಪ್ ಸೂರ್ಯ OUT.. ವೈಭವ್ ಸೂರ್ಯವಂಶಿ ಬಾಲಕಾರ್ಮಿಕನಾ?
ಲಕ್ನೋದ ಏಕಾನಾ ಸ್ಟೇಡಿಯಮ್ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಅದರಂತೆ ಬ್ಯಾಟಿಂಗ್ ಆರಂಭ ಆದಾಗ ಮಳೆ ಕಾರಣಕ್ಕೆ ಮೂರು ಸಲ ಪಂದ್ಯವನ್ನ ಪೋಸ್ಟ್ ಪೋನ್ ಮಾಡಿದ್ರು. ಹೀಗಿದ್ರೂ ಲಕ್ನೋ ಪರ ಅಬ್ಬರಿಸಿದ ಮಿಚೆಲ್ ಮಾರ್ಷ್ ಶತಕ ಸಿಡಿಸಿದ್ರು. ಮಳೆಯಿಂದಾಗಿ ಪಂದ್ಯವನ್ನು ತಲಾ 19 ಓವರ್ಗಳಿಗೆ ಇಳಿಸಲಾಯಿತು. 19 ಓವರ್ಗಳಲ್ಲಿ 3 ವಿಕೆಟ್ಗಳಿಗೆ 209 ರನ್ ಗಳಿಸಿತು. ಆದರೆ ಡಕ್ವರ್ತ್-ಲೂಯಿಸ್ ನಿಯಮದ ಆಧಾರದ ಮೇಲೆ, ಆರ್ಸಿಬಿ ಗೆಲ್ಲಲು 213 ರನ್ಗಳ ಗುರಿಯನ್ನು ನೀಡಿತು. ಈ ಟಾರ್ಗೆಟ್ ಬೆನ್ನಟ್ಟಿದ ಆರ್ಸಿಬಿ 19 ಓವರ್ಗಳಲ್ಲಿ 6 ವಿಕೆಟ್ಗಳಿಗೆ 203 ರನ್ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು.
ಬೆಂಗಳೂರು ಸೋಲಿಗೆ ಕಾರಣಗಳು!
ಪದೇಪದೇ ಮಳೆ.. ರೆಸ್ಟ್ ತಗೊಂಡು ಮಾರ್ಷ್ ಬ್ಯಾಟಿಂಗ್
ಆರಂಭದಿಂದಲೇ ಅಗ್ರೆಸ್ಸಿವೆ ಬ್ಯಾಟಿಂಗ್ ಮಾಡಿ 111(56) ರನ್ಸ್
ಬೌಲಿಂಗ್ ನಲ್ಲಿ ಭುವಿ & ಕೃನಾಲ್ ಬಿಟ್ಟು ಎಲ್ಲರೂ ದುಬಾರಿ
ನಾಯಕ ಪಂತ್ 10 ಎಸೆತಗಳಲ್ಲಿ 32 ರನ್ ಗಳಿಸಿ ಅಜೇಯ
19 ಓವರ್ ಗಳಲ್ಲಿ 213 ರನ್ ಹೊಡೆಯೋ ಪ್ರೆಶರ್
ಬಿಗ್ ಟಾರ್ಗೆಟ್ ಬೆನ್ನಟ್ಟಿ ಬೆಥೆಲ್ 4 ರನ್ ಕೊಹ್ಲಿ 0ಗೆ ಔಟ್
ಪಾಟಿದಾರ್ & ಪಡಿಕ್ಕಲ್ ಜೊತೆಯಾಟ ಬಂದ್ರೂ ನಂತರ ಇಲ್ಲ
ಟಿಮ್ ಡೇವಿಡ್ 40(17), ಕೃನಾಲ್ 28(16) ರನ್ಸ್
ಜಿತೇಶ್ 1(3) ಶೆಫರ್ಡ್ 15(23) ಕಡೆಯಿಂದ ಸಿಗದ ಸಾಥ್

ನೋಡಿರಿ

