ಹೆಣ್ಣು ಮಗುವಿನ ತಂದೆಯಾದ ಸೂರ್ಯಕುಮಾರ್ – 10 ವರ್ಷಗಳ ನಂತರ ಮನೆಗೆ ಬಂದ ಮಹಾಲಕ್ಷ್ಮಿ

ಟೀಮ್ ಇಂಡಿಯಾ ಟಿ20 ನಾಯಕ ಸೂರ್ಯಕುಮಾರ್ ಯಾದವ್ ತಂದೆಯಾದ ಸಂಭ್ರಮದಲ್ಲಿದ್ದಾರೆ. ಸೂರ್ಯನ ಮುದ್ದಿನ ಮಡದಿ ದೇವಿಶಾ ಶೆಟ್ಟಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಇದನ್ನೂ ಓದಿ:KL ಆಟ ಬದಲಿಸಿದ ಮಗಳು – ಭಾರತದ ಪರ ಟಿ-20ಗೂ ಬರ್ತಾರಾ?
ಸೂರ್ಯಕುಮಾರ್ ಯಾದವ್ ಮತ್ತು ದೇವಿಶಾ ದಂಪತಿ ಮನೆಗೆ ಮಹಾಲಕ್ಷ್ಮಿಯನ್ನು ಸ್ವಾಗತಿಸಿದ್ದಾರೆ. ಮದುವೆಯಾದ 10 ವರ್ಷಗಳ ಬಳಿಕ ದೇವಿಶಾ ಶೆಟ್ಟಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಂದೆಯಾದ ಖುಷಿಯಲ್ಲಿರುವ ಸೂರ್ಯಕುಮಾರ್ ಯಾದವ್ ಅವರು ತಮ್ಮ ಮಗಳೊಂದಿಗಿನ ಮೊದಲ ಫೋಟೋವನ್ನು ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ‘ನಮ್ಮ ಮಗಳನ್ನು ನಗು ಮತ್ತು ಕನಸುಗಳೊಂದಿಗೆ ಸ್ವಾಗತಿಸುತ್ತೇವೆ’ ಎಂಬ ಶೀರ್ಷಿಕೆಯೊಂದಿಗೆ ಸೂರ್ಯಕುಮಾರ್ ಯಾದವ್ ಈ ಮುದ್ದಾದ ಫೋಟೋವನ್ನು ಶೇರ್ ಮಾಡಿದ್ದಾರೆ.
ಕ್ರಿಕೆಟರ್ ಸೂರ್ಯಕುಮಾರ್ ಯಾದವ್ ಮತ್ತು ದೇವಿಶಾ ಶೆಟ್ಟಿ ಮಧ್ಯೆ ಕಾಲೇಜಿನಲ್ಲಿ ಓದುತ್ತಿರುವ ಸಮಯದಲ್ಲಿ ಭೇಟಿಯಾಗಿದ್ದರು. ಅಂದಿನಿಂದ ಇವರಿಬ್ಬರ ಸ್ನೇಹ, ಪ್ರೀತಿಗೆ ತಿರುಗಿತ್ತು. ಬಳಿಕ 2016ರಲ್ಲಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ 10 ವರ್ಷಗಳ ಹೆಣ್ಣು ಮಗುವನ್ನು ಸ್ವಾಗತಿಸಿದ್ದಾರೆ. ಸೂರ್ಯಕುಮಾರ್ ಯಾದವ್ ಇದೀಗ ಪತ್ನಿ ಮತ್ತು ಮುದ್ದಾದ ಮಗಳ ಜೊತೆ ಕಾಲಕಳೆಯುತ್ತಿದ್ದಾರೆ. ಮೇ 10ರಂದು ರಾಯ್‌ಪುರದಲ್ಲಿ ನಡೆಯುವ ಪಂದ್ಯಕ್ಕೆ ತಂಡವನ್ನು ಸೇರಿಕೊಳ್ಳುತ್ತಾರೋ ಇಲ್ಲವೋ ಇನ್ನೂ ದೃಢಪಡಿಸಿಲ್ಲ.

ನೋಡಿರಿ

