ರಾಜಮೌಳಿಗೆ 15 ಲಕ್ಷ ಲೀಟರ್ ನೀರು ಬೇಕಂತೆ – ಖ್ಯಾತ ನಿರ್ದೇಶಕನಿಗೆ ನೀರು ಕೊಡಲ್ಲ ಅಂದ್ರು ಹೈದ್ರಾಬಾದ್ ಅಧಿಕಾರಿಗಳು

ಭಾರತೀಯ ಚಿತ್ರರಂಗ ಕಂಡ ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ವಾರಾಣಾಸಿ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಮೇಲೆ ಭಾರತೀಯ ಚಿತ್ರರಂಗ ಭಾರೀ ನಿರೀಕ್ಷೆಯಿಟ್ಟುಕೊಂಡಿದೆ. ಇದೀಗ ಈ ಸಿನಿಮಾ ಶೂಟಿಂಗಾಗಿ ರಾಜಮೌಳಿ ನೀರು ಕೇಳಿದ್ದು ಅಧಿಕಾರಿಗಳು ಕೊಡಲು ನಿರಾಕರಿಸಿದ್ದಾರೆ.
ಇದನ್ನೂ ಓದಿ:ಧನುಷ್ಗೆ ಕೈ ಕೊಟ್ಟ ಕಾರ – ಕುಬೇರ ನಂತರ ಕಾರಾ ಸಿನಿಮಾದಲ್ಲೂ ಸೋಲು
ಎಸ್.ಎಸ್. ರಾಜಮೌಳಿ ನಿರ್ದೇಶನದ ವಾರಾಣಾಸಿ ಸಿನಿಮಾವನ್ನು ತುಂಬಾ ಅದ್ಭುತವಾಗಿ, ಅದ್ದೂರಿಯಾಗಿ ತೆರೆ ಮೇಲೆ ತರಲು ತಯಾರಿ ನಡೆಯುತ್ತಿದೆ. ಈ ಸಿನಿಮಾದ ಶೂಟಿಂಗ್ ಹೈದರಾಬಾದ್ನಲ್ಲಿ ನಡೆಯುತ್ತಿದೆ. ಹೈದರಾಬಾದ್ ಫಿಲ್ಮ್ ಸಿಟಿ ಸ್ಟುಡಿಯೋದಲ್ಲಿ ನೀರೊಳಗಿನ ದೃಶ್ಯಗಳನ್ನು ಶೂಟಿಂಗ್ ಮಾಡಲಾಗುತ್ತಿದೆ. ಚಿತ್ರದ ನಿರ್ಮಾಪಕರು ಚಿತ್ರೀಕರಣಕ್ಕಾಗಿ ನಗರದ ಜಲಮೂಲದಿಂದ 150 ನೀರಿನ ಟ್ಯಾಂಕರ್ಗಳನ್ನು ಕೇಳಿದ್ದಾರಂತೆ. ಆದರೆ ತೆಲಂಗಾಣ ರಾಜಧಾನಿಯಲ್ಲಿ ಬೇಸಿಗೆಯಲ್ಲಿ ನೀರಿನ ಬೇಡಿಕೆ ಹೆಚ್ಚಾದ ಕಾರಣ ರಾಜಮೌಳಿ ಅವರ ಸಿನಿಮಾ ವಾರಣಾಸಿ ಚಿತ್ರೀಕರಣಕ್ಕೆ ನೀರನ್ನು ಕೊಡಲು ಅಧಿಕಾರಿಗಳು ನಿರಾಕರಿಸಿದ್ದಾರೆ.
ತೆಲಂಗಾಣ ಟುಡೇ ವರದಿಯ ಪ್ರಕಾರ, ವಾರಣಾಸಿಯ ನಿರ್ಮಾಪಕರಲ್ಲಿ ಒಬ್ಬರಾದ ಶ್ರೀ ದುರ್ಗಾ ಆರ್ಟ್ಸ್ ಪ್ರತಿನಿಧಿಗಳು ಹೈದರಾಬಾದ್ ಮೆಟ್ರೋಪಾಲಿಟನ್ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (HMWSSB)ಯನ್ನು ಸಂಪರ್ಕಿಸಿ ತಲಾ 10,000 ಲೀಟರ್ಗಳ 150 ನೀರಿನ ಟ್ಯಾಂಕರ್ಗಳನ್ನು ಕೋರಿದ್ದಾರೆ. ನೀರೊಳಗಿನ ದೃಶ್ಯಗಳಿಗೆ ಒಂದು ಕೊಳವನ್ನು ತುಂಬಲು ನೀರು ಅಗತ್ಯವಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. HMWSSB ವ್ಯವಸ್ಥಾಪಕ ನಿರ್ದೇಶಕ ಕೆ. ಅಶೋಕ್ ರೆಡ್ಡಿ ಅವರನ್ನು ಉದ್ದೇಶಿಸಿ ಬರೆದ ಪತ್ರದಲ್ಲಿ, ಚಿತ್ರೀಕರಣದ ಗುಣಮಟ್ಟದ ಮಾನದಂಡಗಳನ್ನು ಪೂರೈಸಲು ನೀರನ್ನು ಶುದ್ಧೀಕರಿಸಬೇಕಾಗಿದೆ ಎಂದು ಹೇಳಲಾಗಿದೆ. ಗಗನ್ಪಹಾಡ್ನಲ್ಲಿರುವ ಶೂಟಿಂಗ್ ಸ್ಥಳಕ್ಕೆ ಸರಬರಾಜು ಸ್ಥಳದಿಂದ ಟ್ಯಾಂಕರ್ ಶುಲ್ಕವನ್ನು ಪಾವತಿಸುವುದಾಗಿ ನಿರ್ಮಾಣ ಸಂಸ್ಥೆ ಭರವಸೆ ನೀಡಿತು. ಆದರೂ, HMWSSB ಅಧಿಕಾರಿಗಳು ವಿನಂತಿಯನ್ನು ನಿರಾಕರಿಸಿದ್ದಾರೆ.
ಮೇ ತಿಂಗಳವರೆಗೆ ಚಿತ್ರೀಕರಣ ಮುಂದುವರಿಯಲಿದೆ. ಚಿತ್ರದ ತಂಡವು ಈಗ ಇತರ ಮೂಲಗಳಿಂದ ನೀರನ್ನು ವ್ಯವಸ್ಥೆ ಮಾಡಲು ಪರದಾಡುತ್ತಿದೆ.ವಾರಣಾಸಿಯು ಎಸ್ಎಸ್ ರಾಜಮೌಳಿ ಅವರ ಜಾಗತಿಕ ಬ್ಲಾಕ್ಬಸ್ಟರ್ ಸಿನಿಮಾ ಆರ್ಆರ್ಆರ್ ನಂತರ ಅವರ ಮೊದಲ ಚಿತ್ರವಾಗಿದೆ. ಈ ಚಿತ್ರದಲ್ಲಿ ಮಹೇಶ್ ಬಾಬು ರಾಮಾಯಣ ಯುಗದ ಪ್ರಾಚೀನ ಕಲಾಕೃತಿಯನ್ನು ಹುಡುಕುತ್ತಿರುವ ಟೈ ಟ್ರಾವೆಲರ್ ಸಾಹಸಿಗನಾಗಿ ನಟಿಸಿದ್ದಾರೆ. ಈ ಚಿತ್ರದ ಮೂಲಕ ಪ್ರಿಯಾಂಕಾ ಚೋಪ್ರಾ ಸುಮಾರು ಒಂದು ದಶಕದ ನಂತರ ಭಾರತೀಯ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ಚಿತ್ರದಲ್ಲಿ ಸಲಾರ್ ನಟ ಪೃಥ್ವಿರಾಜ್ ಸುಕುಮಾರನ್ ವಿಲನ್ ಪಾತ್ರ ನಿರ್ವಹಿಸಿದ್ದಾರೆ. ಚಿತ್ರದ ನಿರೂಪಣೆಯು ಖಂಡಗಳು ಮತ್ತು ಯುಗಗಳನ್ನು ವ್ಯಾಪಿಸಿದೆ ಎಂಬುದನ್ನು ತೋರಿಸಿದ್ದಾರೆ. ಈ ಚಿತ್ರದ ಚಿತ್ರೀಕರಣ ಭಾರತ, ಅಂಟಾರ್ಕ್ಟಿಕಾ, ಶ್ರೀಲಂಕಾ ಮತ್ತು ಆಫ್ರಿಕಾದಾದ್ಯಂತ ನಡೆಯುತ್ತದೆ. 5000 ವರ್ಷಗಳ ಹಿಂದಿನ ತ್ರೇತಾಯುಗದ ದೃಶ್ಯಗಳನ್ನು ಸಹ ಹೊಂದಿದೆ.

ನೋಡಿರಿ

