ಧನುಷ್‌ಗೆ ಕೈ ಕೊಟ್ಟ ಕಾರ – ಕುಬೇರ ನಂತರ ಕಾರಾ ಸಿನಿಮಾದಲ್ಲೂ ಸೋಲು

ತಮಿಳು ಚಿತ್ರರಂಗದ ಸ್ಟಾರ್ ಧನುಷ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಕಾರ ಹೇಳಿಕೊಳ್ಳುವಂತಾ ಪ್ರದರ್ಶನ ಕಾಣುತ್ತಿಲ್ಲ. ಚಿತ್ರ ರಿಲೀಸ್ ಆಗಿರುವ ದಿನದಿಂದ ಇವತ್ತಿನವರೆಗೂ ಅಭಿಮಾನಿಗಳನ್ನು ಹಿಡಿದಿಟ್ಟುಕೊಂಡಿಲ್ಲ. ಚಿತ್ರದ ವಿಚಾರದಲ್ಲೂ ಕೂಡಾ ಪ್ರೇಕ್ಷಕರಿಂದ ಮಿಶ್ರ ವಿಮರ್ಶೆ ಸಿಕ್ಕಿದೆ.
ಇದನ್ನೂ ಓದಿ:ಸು ಫ್ರಮ್ ಸೋ ನಿರ್ದೇಶಕ ಜೆಪಿ ತುಮಿನಾಡು ಮದುವೆ – ರಶ್ಮಿಕಾ ಜೊತೆ ತುಮಿನಾಡು ವಿವಾಹ ಸಂಭ್ರಮ
ಬಹುನಿರೀಕ್ಷಿತ ತಮಿಳು ಸಿನಿಮಾ ಕಾರ ಪ್ರೇಕ್ಷಕರಿಗೆ ಹಿಡಿಸಿಲ್ಲ. ಅದರಲ್ಲೂ ಈ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆಯಿಟ್ಟುಕೊಂಡಿದ್ದ ನಟ ಧನುಶ್ ಸಿನಿಮಾ ಸೋಲಿಗೆ ಬೇಸರ ವ್ಯಕ್ತಪಡಿಸಿದ್ದಾರೆ. ನಟ ಧನುಷ್ ಅಭಿನಯದ ಬಹುನಿರೀಕ್ಷಿತ ಕಾರ ಚಿತ್ರವು ಏಪ್ರಿಲ್ 30 ರಂದು ರಿಲೀಸ್ ಆಗಿತ್ತು. ನಿರ್ದೇಶಕ ವಿಘ್ನೇಶ್ ರಾಜ ನಿರ್ದೇಶನದ ಈ ಚಿತ್ರದಲ್ಲಿ ಮಮಿತಾ ಬೈಜು ಕೆ.ಎಸ್. ರವಿಕುಮಾರ್ ಕರುಣಾಸ್, ಜಯರಾಮ್ ಮತ್ತು ಇತರ ಅನೇಕರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಚಿತ್ರ ಬಿಡುಗಡೆಯಾಗಿ 6 ದಿನಗಳು ಕಳೆದಿವೆ ಮತ್ತು ಇದುವರೆಗೂ ಬಜೆಟ್‌ನ ಅರ್ಧದಷ್ಟು ಕೂಡ ಕಲೆಕ್ಷನ್ ಮಾಡಿಲ್ಲ ಎಂದು ಹೇಳಲಾಗುತ್ತಿದೆ. 90 ರ ದಶಕದಲ್ಲಿ ನಡೆದ ಬ್ಯಾಂಕ್ ದರೋಡೆಯನ್ನು ಆಧರಿಸಿದ ಈ ಚಿತ್ರ ಪ್ರೇಕ್ಷಕರಿಗೆ ಹಿಡಿಸಿದಂತೆ ಕಾಣುತ್ತಿಲ್ಲ. ಹೀಗಾಗಿ ಕಾರ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ನಷ್ಟ ಅನುಭವಿಸುತ್ತಿದೆ. ಚುನಾವಣಾ ಸಮಯದಲ್ಲಿ ರಿಲೀಸ್ ಆಗಿರುವುದರಿಂದ ಸಿನಿಮಾಕ್ಕೆ ಹೊಡೆತ ಬಿದ್ದಿದೆ ಎಂದು ಹೇಳಲಾಗುತ್ತಿದೆ. ಆದರೆ, ಚಿತ್ರದ ಕಥೆ, ಚಿತ್ರ ಇಷ್ಟವಾದರೆ ಪ್ರೇಕ್ಷಕರು ಬಂದೇ ಬರುತ್ತಾರೆ ಅನ್ನೋದು ಕೂಡಾ ಅಷ್ಟೇ ಸತ್ಯ. ಈ ಸಿನಿಮಾದ ಕಥೆಯಲ್ಲಿ ಹಿಡಿತವಿಲ್ಲ ಎಂದು ಹೇಳಲಾಗುತ್ತಿದೆ. ಆದರೆ, ಚಿತ್ರದಲ್ಲಿ ಧನುಷ್ ಅವರ ಅಭಿನಯವನ್ನು ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ. 80 ಕೋಟಿ ರೂ.ಗಳಿಗೂ ಹೆಚ್ಚು ಬಜೆಟ್‌ನಲ್ಲಿ ಈ ಸಿನಿಮಾ ರೆಡಿಯಾಗಿದ್ದು, ಇಲ್ಲಿಯವರೆಗೆ 41 ಕೋಟಿ ರೂ.ಗಳನ್ನು ಸಂಗ್ರಹಿಸಿದೆ.

ನೋಡಿರಿ

