ನಂಬರ್ 1 ಪಟ್ಟಕ್ಕೇರಿದ SRH – ಶ್ರೇಯಸ್ ಪಡೆಗೆ ಹ್ಯಾಟ್ರಿಕ್ ಸೋಲು
ಕಿರಿಯ ಶತಕವೀರ ಕೊನೊಲಿ

ಸತತ 8 ಪಂದ್ಯಗಳಲ್ಲಿ ಗೆದ್ದು ಟೇಬಲ್ ಟಾಪರ್ ಆಗಿ ಮೆರೀತಿದ್ದ ಪಂಜಾಬ್ ಕಿಂಗ್ಸ್ ಈಗ ಅಕ್ಷರಶಃ ಪಂಕ್ಚರ್ ಆಗಿದೆ. ಒಂದಲ್ಲ ಎರಡಲ್ಲ ಸತತ ಮೂರು ಸೋಲು. ಮತ್ತೊಂದೆಡೆ ಸೂಪರ್ ಡೂಪರ್ ಪ್ರದರ್ಶನ ನೀಡ್ತಿರೋ ಸನ್ ರೈಸರ್ಸ್ ಹೈದ್ರಾಬಾದ್ ಈಗ ಪಾಯಿಂಟ್ಸ್ ಪಟ್ಟಿಯಲ್ಲೂ ನಂಬರ್ 1 ಪಟ್ಟಕ್ಕೇರಿದೆ. ಅಂಕಪಟ್ಟಿಯ ಅಸಲಿ ಆಟವೂ ಸ್ಟಾರ್ಟ್ ಆಗಿದೆ.
ಇದನ್ನೂ ಓದಿ : ಐಪಿಎಲ್ ಪ್ಲೇ ಆಫ್ ವೇಳಾಪಟ್ಟಿ ಪ್ರಕಟ! – ಚಿನ್ನಸ್ವಾಮಿ ಕೈ ತಪ್ಪಿದ IPL ಫೈನಲ್
ರಾಜೀವ್ಗಾಂಧಿ ನ್ಯಾಷನಲ್ ಸ್ಟೇಡಿಯಮ್ನಲ್ಲಿ ನಡೆದ ಪಂಜಾಬ್ ವರ್ಸಸ್ ಹೈದ್ರಾಬಾದ್ ನಡುವಿನ ಮ್ಯಾಚಲ್ಲಿ ಹೈದ್ರಾಬಾದ್ ಭರ್ಜರಿ ಗೆಲುವು ಸಾಧಿಸಿದೆ. ಟಾಸ್ ಗೆದ್ದ ಪಿಬಿಕೆಎಸ್ ಬೌಲಿಂಗ್ ಚೂಸ್ ಮಾಡಿಕೊಳ್ತಾರೆ. ಹೀಗಾಗಿ ಬ್ಯಾಟಿಂಗ್ಗೆ ಬಂದ ಹೈದ್ರಾಬಾದ್ ಆರಂಭದಿಂದಲೇ ಅಗ್ರೆಸ್ಸಿವ್ ಆಗಿ ಬ್ಯಾಟಿಂಗ್ ಆರಂಭಿಸಿದ್ರು. ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ 3.3ನೇ ಓವರ್ನಲ್ಲೇ 50+ ರನ್ಸ್ ಜೊತೆಯಾಟವಾಡಿದ್ರು. ಈ ವೇಳೆ ಅಭಿಷೇಕ್ 35 ರನ್ಸ್ಗೆ ಔಟ್ ಆದ್ರೆ ಹೆಡ್ 38 ರನ್ಸ್ಗೆ ವಿಕೆಟ್ ಒಪ್ಪಿಸಿದ್ರು. ಆ ನಂತ್ರ ಇಶಾನ್ ಕಿಶನ್ ಹಾಗೇ ಹೆನ್ರಿಕ್ ಕ್ಲಾಸೆನ್ ಕೂಡ ತಲಾ ಅರ್ಧಶತಕ ಬಾರಿಸಿ ಮಿಂಚಿದ್ರು. ನಿತೀಶ್ ರೆಡ್ಡಿ ಕೂಡ ಒಂದೊಳ್ಳೆ ಸಾಥ್ ಕೊಟ್ಟಿದ್ರಿಂದ 20 ಓವರ್ನಲ್ಲಿ 3 ವಿಕೆಟ್ ಕಳ್ಕೊಂಡು 235 ರನ್ಸ್ ಕಲೆ ಹಾಕಿದ್ರು. ಆದ್ರೆ ಈ ಟಾರ್ಗೆಟ್ ಬೆನ್ನಟ್ಟಿದ ಪಂಜಾಬ್ ಚೇಸಿಂಗ್ ರೇಸ್ನಲ್ಲಿ ಇರಲೇಇಲ್ಲ. ಹೈದ್ರಾಬಾದ್ ಬೌಲಿಂಗ್ನಲ್ಲಿ ಫಸ್ಟ್, ಸೆಕೆಂಡ್ ಓವರ್ನಲ್ಲೇ ಓಪನರ್ಗಳಿಗೆ ಪೆವಿಲಿಯನ್ ಹಾದಿ ತೋರಿಸಿದ್ರು. ಶ್ರೇಯಸ್ 5 ರನ್ಗೆ ಸುಸ್ತಾದ್ರು. ಕೂಪರ್ ಕೊನೊಲಿ ಏಕಾಂಗಿಯಾಗಿ ಹೋರಾಡಿ ಶತಕ ಬಾರಿಸಿದ್ರೂ ಗೆಲುವಿನ ದಡ ಮುಟ್ಟಿಸೋಕೆ ಆಗ್ಲಿಲ್ಲ. 202 ರನ್ ಅಷ್ಟೇ ಗಳಿಸಿ 33 ರನ್ಗಳಿಂದ ಸೋಲೊಪ್ಪಿಕೊಂಡ್ರು.
ಪಂಜಾಬ್ ಸೋಲಿಗೆ ಕಾರಣಗಳು!
ಬೌಲಿಂಗ್ ನಲ್ಲಿ ದುಬಾರಿಯಾದ ಪಂಜಾಬ್ ಬೌಲರ್ಸ್
ಕಳಪೆ ಫೀಲ್ಡಿಂಗ್ ಮತ್ತು ಸಾಲು ಸಾಲು ಕ್ಯಾಚ್ ಡ್ರಾಪ್
ಬಿಗ್ ಚೇಸಿಂಗ್ ಬೆನ್ನತ್ತಿದ ಪಂಜಾಬ್ಗೆ ಆರಂಭದಲ್ಲೇ ಆಘಾತ
ಸ್ಫೋಟಕ ಓಪನರ್ಸ್ ಪ್ರಿಯಾನ್ಶ್ (1) & ಪ್ರಭ್ ಸಿಮ್ರಾನ್ (3) ಔಟ್
ಶ್ರೇಯಸ್ ಅಯ್ಯರ್ 5(5)ಕೂಡ ಬೇಗ ವಿಕೆಟ್ ಒಪ್ಪಿಸಿದ್ದು
ಅಜೇಯ 107 ರನ್ ಗಳಿಸಿದ ಕಿರಿಯ ಶತಕವೀರ ಕೊನೊಲಿ
ಬ್ಯಾಟಿಂಗ್, ಬೌಲಿಂಗ್ ಡಾಮಿನೇಷನ್ ಮಾಡಿ ಗೆದ್ದ ಹೈದ್ರಾಬಾದ್
ಹೀಗೆ ಪಂಜಾಬ್ ಬ್ಯಾಕ್ ಟು ಬ್ಯಾಕ್ 3 ಮ್ಯಾಚ್ ಸೋತು ಒದ್ದಾಡ್ತಿದೆ. ಹೈದ್ರಾಬಾದ್ ನಂಬರ್ 1 ಪಟ್ಟಕ್ಕೇರಿದೆ. ಪಂಜಾಬ್ 2ನೇ ಸ್ಥಾನಕ್ಕೆ ಕುಸಿದಿದ್ರೆ ಆರ್ಸಿಬಿ 3ನೇ ಸ್ಥಾನಕ್ಕೆ ಜಾರಿದೆ. ಹೀಗಾಗಿ ಇನ್ಮುಂದಿನ ಒಂದೊಂದು ಪಂದ್ಯಗಳ ಸೋಲು ಗೆಲುವು ಪಾಯಿಂಟ್ಸ್ ಪಟ್ಟಿಯಲ್ಲಿ ಬಿಗ್ ವೇರಿಯೇಷನ್ಸ್ ಮಾಡುತ್ತೆ.

ನೋಡಿರಿ

