ತಮಿಳುನಾಡಿನದಲ್ಲಿ ವಿಜಯ್‌ಗೆ ಶಾಕ್! – ಡಿಎಂಕೆ-ಎಐಎಡಿಎಂಕೆ ಮೈತ್ರಿ ಆಗುತ್ತಾ?

ತಮಿಳುನಾಡಿನಲ್ಲಿ ದಳಪತಿ ವಿಜಯ್ ಟಿವಿಕೆ ಪಕ್ಷ ಭರ್ಜರಿ ಜಯಗಳಿಸಿದ್ದು, ಈಗಾಗಲೇ ಸರ್ಕಾರ ರಚನೆಗೆ ಕಸರತ್ತು ನಡೆಸುತ್ತಿದೆ. ಇದೀಗ ಮಿತ್ರಪಕ್ಷಗಳನ್ನು ಭದ್ರಪಡಿಸಿಕೊಳ್ಳಲು ತಮಿಳಗ ವೆಟ್ರಿ ಕಳಗಂ ಪರದಾಡುತ್ತಿರುವಾಗ ವಿಜಯ್‌ಗೆ ಶಾಕ್ ಎದುರಾಗಿದೆ.ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ತನ್ನ ದೀರ್ಘಕಾಲದ ಪ್ರತಿಸ್ಪರ್ಧಿ ಎಐಎಡಿಎಂಕೆ ಜೊತೆ ಹಿಮ್ಮುಖ ಮಾತುಕತೆ ಆರಂಭಿಸಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಪಂಜಾಬ್ ವಿರುದ್ದ ಸೇಡು ತೀರಿಸಿಕೊಂಡ ಸನ್‌ರೈಸರ್ಸ್ ಹೈದ್ರಾಬಾದ್ – ಕೊನೇವರೆಗೂ ಹೋರಾಡಿ ಶತಕ ಸಿಡಿಸಿದ ಕೊನೊಲಿ
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ನೇತೃತ್ವದ ಟಿವಿಕೆ 108 ಸ್ಥಾನಗಳನ್ನು ಜಯಿಸಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಡಿಎಂಕೆ 59, ಎಐಎಡಿಎಂಕೆ 47, ಕಾಂಗ್ರೆಸ್ 5, ಪಿಎಂಕೆ 4, ಐಯುಎಂಎಲ್ 2, ಸಿಪಿಐ 2, ಸಿಪಿಐ (ಎಂ) 2, ಮತ್ತು ಬಿಜೆಪಿ, ಡಿಎಂಡಿಕೆ ಮತ್ತು ಎಎಂಎಂಕೆ ತಲಾ ಒಂದು ಸ್ಥಾನವನ್ನು ಗೆದ್ದಿವೆ. ಟಿವಿಕೆ ಸರ್ಕಾರ ರಚಿಸಲು ಕಸರತ್ತು ನಡೆಸುತ್ತಿದೆ. ವಿಜಯ್ ಇಂದು ತಮಿಳುನಾಡು ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ಆದರೆ, ಮೌಖಿಕ ಮನವೊಲಿಕೆಯಲ್ಲಿ ವಿಫಲರಾದರು. ಇದರಿಂದ ಸರ್ಕಾರ ರಚನೆ ಹಕ್ಕು ಮಂಡನೆಗೆ ಅವಕಾಶ ಸಿಕ್ಕಿಲ್ಲ. 118 ಸ್ಥಾನಗಳ ಬಹುಮತವನ್ನು ಸಾಧಿಸಲು ಟಿವಿಕೆಗೆ ಕನಿಷ್ಠ 10 ಸ್ಥಾನಗಳು ಬೇಕಾಗಿವೆ. ಕಾಂಗ್ರೆಸ್‌ನ ಐದು ಸ್ಥಾನಗಳೊಂದಿಗೆ, ವಿಜಯ್ ಗೆದ್ದ ಎರಡು ಸ್ಥಾನಗಳಲ್ಲಿ ಒಂದನ್ನು ಹೊರತುಪಡಿಸಿ, ಈ ಸಂಖ್ಯೆ 112 ಕ್ಕೆ ಏರಿದೆ. ಆದರೆ, ಬಹುಮತ ಸಾಬೀತಿಗೆ ಟಿವಿಕೆಗೆ ಆರು ಸ್ಥಾನಗಳ ಅಗತ್ಯವಿದೆ. ಆದ್ರೆ ವಿಜಯ್ ಬಹುಮತ ಸಾಬೀತುಪಡಿಸಲು ವಿಫಲರಾಗಿದ್ದಾರೆ.
ಇತ್ತ ಟಿವಿಕೆ ಮುಖ್ಯಸ್ಥ ವಿಜಯ್ ಬಹುಮತ ಸಾಬೀತುಪಡಿಸಲು ವಿಫಲರಾದ ಬೆನ್ನಲ್ಲೇ ಇತ್ತ ಡಿಎಂಕೆ ಮತ್ತು ಎಐಎಡಿಎಂಕೆ ಮೈತ್ರಿ ಸಾಧಿಸಲು ಮುಂದಾಗಿವೆ ಎನ್ನಲಾಗಿದೆ. ಮೈತ್ರಿ ಸಾಧಿಸುವ ವಿಚಾರದಲ್ಲಿ ಎಐಎಡಿಎಂಕೆ ಜೊತೆ ಮಾತುಕತೆ ನಡೆಸಲಾಗುತ್ತಿದೆ ಎಂದು ಡಿಎಂಕೆ ಮೂಲಗಳು ತಿಳಿಸಿವೆ. ಈ ಬೆಳವಣಿಗೆ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಟಿವಿಕೆಗೆ ಶಾಕ್ ನೀಡಿದೆ. ಅತಂತ್ರ ಜನಾದೇಶವನ್ನೇ ದಾಳವಾಗಿ ಬಳಸಿಕೊಂಡಿರುವ ಎಐಎಡಿಎಂಕೆ, ಟಿವಿಕೆಗೆ ಬೆಂಬಲ ನೀಡಲ್ಲ ಎಂದು ಸ್ಪಷ್ಟಪಡಿಸಿದೆ. ಇತ್ತ ಡಿಎಂಕೆ ಜೊತೆಗೆ ಮೈತ್ರಿ ಮಾತುಕತೆಗೆ ಮುಂದಾಗಿದೆ ಎನ್ನಲಾಗಿದೆ.

ನೋಡಿರಿ

