ಸೋತ್ರೂ ಪಾಂಡ್ಯನೇ MI ಕ್ಯಾಪ್ಟನ್.. ಚಾನ್ಸ್ ಕೊಟ್ರೂ ಆಡ್ತಿಲ್ಲ ಕರುಣ್! – IPLನಿಂದ ವೈಭವ್ ಬ್ಯಾನ್?

ಇಂದು ಪಂಜಾಬ್ ಕಿಂಗ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಭರ್ಜರಿ ಲಯದಲ್ಲಿದ್ದ ಪಂಜಾಬ್ ಸತತ 2 ಸೋಲುಗಳನ್ನು ಕಂಡಿದ್ದು, ಇಂದಿನ ಪಂದ್ಯದಲ್ಲಿ ಗೆಲ್ಲುವ ಕನಸು ಕಾಣ್ತಿದೆ. IPL ಸೀಸನ್-19ರ ಪ್ಲೇಆಫ್ ಹಂತದ ಪಂದ್ಯಗಳ ವೇಳಾಪಟ್ಟಿ ಪ್ರಕಟವಾಗಿದೆ. ಪ್ಲೇಆಫ್ ಹಂತದ 4 ಪಂದ್ಯಗಳನ್ನು ಧರ್ಮಶಾಲಾ, ಚಂಡೀಗಢ್ ಮತ್ತು ಅಹಮದಾಬಾದ್ ನಗರಗಳಲ್ಲಿ ಆಯೋಜಿಸಲಿದೆ. ಈ ಕುರಿತ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಐಪಿಎಲ್ ಪ್ಲೇ ಆಫ್ ವೇಳಾಪಟ್ಟಿ ಪ್ರಕಟ! – ಚಿನ್ನಸ್ವಾಮಿ ಕೈ ತಪ್ಪಿದ IPL ಫೈನಲ್
- CSK ಹಾಗೂ DC ಪಂದ್ಯದ ವೇಳೆ ನಿತೀಶ್ ರಾಣಾ ಒಂದೇ ಚೆಂಡಿನಲ್ಲಿ 2 ರೀತಿಯಲ್ಲಿ ಔಟ್ ಆಗಿದ್ದಾರೆ. 3 ನೇ ಕ್ರಮಾಂಕಕ್ಕೆ ಬ್ಯಾಟಿಂಗ್‌ಗೆ ಬಂದ ರಾಣಾ, ನೂರ್ ಅಹ್ಮದ್ ಎಸೆತದಲ್ಲಿ ಶಾಟ್ ಹೊಡೆಯಲು ಪ್ರಯತ್ನಿಸುತ್ತಿದ್ದಾಗ, ಸ್ಪಂಪ್ಸ್‌ನಿಂದ ಬೇಲ್ಸ್ ಬಿದ್ದಿದೆ. ಮತ್ತೊಂದೆಡೆ ಚೆಂಡು ಗಾಳಿಯಲ್ಲಿ ಹಾರಿ ಕಾರ್ತಿಕ್ ಶರ್ಮಾಗೆ ಕ್ಯಾಚ್ ಸಿಕ್ಕಿದೆ. ಬ್ಯಾಟ್ ಸ್ಟಂಪ್ಸ್‌ಗೆ ತಗುಲಿ ಹಿಟ್ ವಿಕೆಟ್ ಆಗಿ ಔಟ್ ಆದ್ರೋ ಅಥವಾ ಅವರ ಕಾಲು ವಿಕೆಟ್ಗೆ ತಾಗಿದೆಯೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಬ್ಯಾಟ್ ಮತ್ತು ಚೆಂಡು ಸಂಪರ್ಕಕ್ಕೆ ಬರುವ ಮೊದಲೇ ಬೇಲ್ಸ್ ಬಿದ್ದಿದ್ರೆ, ಅಂಪೈರ್ ಡೆಡ್ ಬಾಲ್ ಎಂದು ಘೋಷಿಸಬೇಕಿತ್ತು, ಆದ್ರೆ ಅವರು ಹಾಗೆ ಮಾಡಿಲ್ಲ. ಇದು ಚರ್ಚೆಗೆ ಗ್ರಾಸವಾಗಿದೆ.
- IPL 2026 ರಲ್ಲಿ ಆರೆಂಜ್ ಕ್ಯಾಪ್ ಗಾಗಿ ಆಟಗಾರರ ಮಧ್ಯೆ ಪೈಪೋಟಿ ನಡಿತಾ ಇದೆ. ಇದೀಗ ಕನ್ನಡಿಗ ಕೆಎಲ್ ರಾಹುಲ್ ಮತ್ತೆ ಆರೆಂಜ್ ಕ್ಯಾಪ್‌ನ ತನ್ನ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಚೆನ್ನೈ ವಿರುದ್ಧದ ಪಂದ್ಯದಲ್ಲಿ ಅಲ್ಪ ಮೊತ್ತಕ್ಕೆ ರಾಹುಲ್ ಔಟ್ ಆಗಿದ್ರೂ ಅಭಿಷೇಕ್ ಶರ್ಮಾ ಅವರಿಂದ ನಂಬರ್-1 ಸ್ಥಾನವನ್ನು ಕಸಿದುಕೊಂಡಿದ್ದಾರೆ. ರಾಹುಲ್ ಈ ಸೀಸನ್‌ನಲ್ಲಿ 445 ರನ್ ಗಳಿಸಿ ಮೊದಲ ಸ್ಥಾನದಲ್ಲಿದ್ರೆ, ಅಭಿಷೇಕ್ ಶರ್ಮಾ 440 ರನ್ ಗಳಿಸಿ ಎರಡನೇ ಸ್ಥಾನಕ್ಕೆ ಜಾರಿದ್ದಾರೆ.
- IPL 2026 ರಲ್ಲಿ ಡೆಲ್ಲಿ ಪರ ಆಡುತ್ತಿರುವ ಕನ್ನಡಿಗ ಕರುಣ್ ನಾಯರ್ ಕಳಪೆ ಫಾರ್ಮ್‌ನಿಂದ ಕಂಗೆಟ್ಟಿದ್ದಾರೆ. ಈ ಸೀಸನ್‌ನಲ್ಲಿ 2 ಪಂದ್ಯಗಳಲ್ಲಿ ಗಳಿಸಿದ್ದು ಕೇವಲ 18 ರನ್ ಮಾತ್ರ. ಏ.16ರಂದು ನಡೆದ RCB ವಿರುದ್ದದ ಪಂದ್ಯದಲ್ಲಿ 5 ಬಾಲ್‌ಗೆ 5 ರನ್ ಗಳಿಸಿದ್ದರು, ಇನ್ನು CSK ವಿರುದ್ದದ ಪಂದ್ಯದಲ್ಲೂ 13 ಬಾಲ್‌ಗೆ 13 ರನ್ ಬಾರಿಸಿ ಔಟ್ ಆಗಿದ್ದಾರೆ. ಇದೀಗ ಸಿಕ್ಕ ಅವಕಾಶ ಸದುಪಯೋಗ ಪಡಿಸಿಕೊಳ್ಳದ ಕರುಣ್‌ಗೆ ಇನ್ನೆಷ್ಟು ಚಾನ್ಸ್ ಕೊಡಬೇಕು ಎಂದು ಕ್ರಿಕೆಟ್ ಪ್ರೇಮಿಗಳು ಪ್ರಶ್ನೆ ಮಾಡ್ತಿದ್ದಾರೆ.
- RR ತಂಡದ ವಿರುದ್ಧ ಸಾಮಾಜಿಕ ಕಾರ್ಯಕರ್ತ ಸಿಎಂ ಶಿವಕುಮಾರ್ ನಾಯಕ್ ಎಂಬುವವರು ಗಂಭೀರ ಆರೋಪ ಮಾಡಿದ್ದಾರೆ. ವೈಭವ್ ಸೂರ್ಯವಂಶಿಗೆ ಕೇವಲ 15 ವರ್ಷ. ಅಪ್ರಾಪ್ತ ಬಾಲಕನನ್ನು ಈ ರೀತಿಯ ದೊಡ್ಡ ಲೀಗ್‌ನಲ್ಲಿ ಆಡಿಸೋದು ಸರಿಯಲ್ಲ. ಇದು ಬಾಲ ಕಾರ್ಮಿಕ ಪದ್ಧತಿಯಲ್ಲದೆ ಬೇರೇನೂ ಅಲ್ಲ. ಮಕ್ಕಳ ಹಕ್ಕುಗಳು ಮತ್ತು ಬಾಲಕಾರ್ಮಿಕ ಕಾನೂನುಗಳನ್ನು ಉಲ್ಲಂಘಿಸಿದ್ದಕ್ಕಾಗಿ RR ಆಡಳಿತ ಮಂಡಳಿಯ ವಿರುದ್ಧ ದೂರು ನೀಡುತ್ತೇನೆ ಎಂದಿದ್ದಾರೆ. ಈ ಆರೋಪದಿಂದ ವೈಭವ್ IPL ಜೀವನಕ್ಕೆ ಕಂಟಕವಾಗುವ ಸಾಧ್ಯತೆ ಇದೆ.
- 5 ಬಾರಿ ಚಾಂಪಿಯನ್ ಆಗಿದ್ದ ಮುಂಬೈ ಇಂಡಿಯನ್ಸ್ ಈ ಸೀಸನ್‌ನಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡುತ್ತಿದೆ. ಆಡಿರುವ 10 ಪಂದ್ಯಗಳಲ್ಲಿ ಕೇವಲ 3ರಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಪಾತಾಳಕ್ಕೆ ಕುಸಿದಿದೆ. ಟೀಂ ಬ್ಯಾಕ್ ಟು ಬ್ಯಾಕ್ ಸೋತ್ರೂ MI ಮ್ಯಾನೇಜ್‌ಮೆಂಟ್ ನಾಯಕತ್ವದ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ. ಹಾರ್ದಿಕ್ ವೈಯಕ್ತಿಕ ಪ್ರದರ್ಶನ, ನಾಯಕತ್ವದ ನಿರ್ಧಾರಗಳು ಟೀಕೆಗೆ ಗುರಿಯಾಗಿದ್ದರೂ MI ಅವರ ಅಚಲ ವಿಶ್ವಾಸ ವ್ಯಕ್ತಪಡಿಸಿದೆ. ಹಾರ್ದಿಕ್‌ರನ್ನೇ ನಾಯಕನಾಗಿ ಮುಂದುವರಿಸಲು ಮ್ಯಾನೇಜ್ಮೆಂಟ್ ನಿರ್ಧರಿಸಿದೆ ಎನ್ನಲಾಗ್ತಿದೆ.
- ತಂಡದ ಕಳಪೆ ಪ್ರದರ್ಶನದ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ಸ್ಟಾರ್ ಬ್ಯಾಟರ್‌ಗಳಾದ ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾಗೆ ಎಚ್ಚರಿಕೆ ನೀಡಿದೆ. ಸೂರ್ಯಕುಮಾರ್ ಪ್ರತಿ ಪಂದ್ಯದಲ್ಲೂ ಕಣಕ್ಕಿಳಿದಿದ್ದು, ಕೇವಲ 19.50 ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಪಾಂಡ್ಯ ಅನುಪಸ್ಥಿತಿಯಲ್ಲಿ ಸೂರ್ಯ ಟೀಂನ ಮುನ್ನಡೆಸಿದ್ರೂ, ಬ್ಯಾಟಿಂಗ್‌ನಲ್ಲಿ ಫೈಲ್ ಆಗಿದ್ದಾರೆ. ಇನ್ನು ತಿಲಕ್ ಈ ಬಾರಿ MI ಪರ ಶತಕ ಸಿಡಿಸಿದ್ದರು. ಈ ಶತಕದ ಹೊರತಾಗಿಯೂ ತಿಲಕ್ 10 ಪಂದ್ಯಗಳಿಂದ ಕಲೆಹಾಕಿದ್ದು 204 ರನ್ಗಳು ಮಾತ್ರ. ಹೀಗಾಗಿಯೇ ತಿಲಕ್ ಕೂಡ ಮ್ಯಾನೇಜ್ಮೆಂಟ್ನ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
- ಇಂದು ಪಂಜಾಬ್ ಕಿಂಗ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಭರ್ಜರಿ ಲಯದಲ್ಲಿದ್ದ ಪಂಜಾಬ್ ಸತತ 2 ಸೋಲುಗಳನ್ನು ಕಂಡಿದ್ದು, ಇಂದಿನ ಪಂದ್ಯದಲ್ಲಿ ಗೆಲ್ಲುವ ಕನಸು ಕಾಣ್ತಿದೆ. ಇನ್ನು SRH ಸಹ ಕಳೆದ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಸೋಲು ಕಂಡಿದೆ. ಹೀಗಾಗಿ ಉಭಯ ತಂಡಗಳು ಗೆಲುವಿನ ಟ್ರ್ಯಾಕ್‌ಗೆ ಮರಳಲು ಪ್ಲ್ಯಾನ್ ಮಾಡಿಕೊಂಡಿವೆ. ಪಂಜಾಬ್ 13 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಸನ್ ತಂಡ 12 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.
- IPL ಅಂಗಳದಲ್ಲಿ ಅಬ್ಬರಿಸಿದ್ದ ದಿನೇಶ್ ಕಾರ್ತಿಕ್, ಆಟಗಾರನಾಗಿ ನಿವೃತ್ತಿ ಹೊಂದಿದ ಬೆನ್ನಲ್ಲೇ RCB ಬ್ಯಾಟಿಂಗ್ ಕೋಚ್ ಮತ್ತು ಮೆಂಟರ್ ಆಗಿ ಎರಡನೇ ಇನಿಂಗ್ಸ್ ಆರಂಭಿಸಿದ್ದರು. ಇದಕ್ಕೆ ಕಾರಣ ವಿರಾಟ್ ಕೊಹ್ಲಿ ಎಂಬ ಕುತೂಹಲಕಾರಿ ವಿಷಯವನ್ನು DK ಬಹಿರಂಗಪಡಿಸಿದ್ದಾರೆ. IPLಗೆ ನಿವೃತ್ತಿ ಘೋಷಿಸಿದ ಬಳಿಕ ನಾನು ಗೊಂದಲದಲ್ಲಿದ್ದೆ. ಈ ವೇಳೆ ನಾನು ಕೊಹ್ಲಿಯನ್ನು 2 ಬಾರಿ ಭೇಟಿಯಾಗಿದ್ದೆ. ಈ ವೇಳೆ ಕೊಹ್ಲಿ ನೀಡಿದ ಸಲಹೆಯು ನಾನು ಸೆಕೆಂಡ್ ಇನಿಂಗ್ಸ್ ಆರಂಭಿಸಲು ಕಾರಣವಾಯ್ತು ಎಂದಿದ್ದಾರೆ.
- IPL ಸೀಸನ್-19ರ ಪ್ಲೇಆಫ್ ಹಂತದ ಪಂದ್ಯಗಳ ವೇಳಾಪಟ್ಟಿ ಪ್ರಕಟವಾಗಿದೆ. ಪ್ಲೇಆಫ್ ಹಂತದ 4 ಪಂದ್ಯಗಳನ್ನು ಧರ್ಮಶಾಲಾ, ಚಂಡೀಗಢ್ ಮತ್ತು ಅಹಮದಾಬಾದ್ ನಗರಗಳಲ್ಲಿ ಆಯೋಜಿಸಲಿದೆ. ಮೊದಲ ಕ್ವಾಲಿಫೈಯರ್ ಪಂದ್ಯವು ಧರ್ಮಶಾಲಾದಲ್ಲಿ ನಡೆದ್ರೆ, ಎಲಿಮಿನೇಟರ್ ಹಾಗೂ 3ನೇ ಕ್ವಾಲಿಫೈಯರ್ ಪಂದ್ಯಗಳು ಚಂಡೀಗಢ್ನಲ್ಲಿ ನಡೆಯಲಿದೆ. ಇನ್ನು ಮೇ 31ರಂದು ಫೈನಲ್ ಮ್ಯಾಚ್ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಹಿಂದೆ IPLನ ಫೈನಲ್ ಪಂದ್ಯವನ್ನು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಯೋಜಿಸಲು ನಿರ್ಧರಿಸಲಾಗಿತ್ತು. ಆದ್ರೆ ಇತ್ತೀಚಿನ ಕೆಲ ಬೆಳವಣಿಗೆಗಳಿಂದಾಗಿ BCCI ಫೈನಲ್ ಪಂದ್ಯವನ್ನು ನರೇಂದ್ರ ಮೋದಿ ಸ್ಟೇಡಿಯಂಗೆ ಸ್ಥಳಾಂತರಿಸಿದೆ.
- ಟಿ20 ವಿಶ್ವಕಪ್‌ನಲ್ಲಿ ಸತತ ಎರಡನೇ ಬಾರಿಗೆ ಚಾಂಪಿಯನ್ ಆಗಿರುವ ಭಾರತ ತಂಡ, ಐಸಿಸಿ ಬಿಡುಗಡೆ ಮಾಡಿದ ವಾರ್ಷಿಕ ಟಿ20 ಶ್ರೇಯಾಂಕದಲ್ಲಿ 275 ರೇಟಿಂಗ್ ಅಂಕಗಳೊಂದಿಗೆ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ಏಷ್ಯಾದ ನೆರೆ ರಾಷ್ಟ್ರಗಳ ಪೈಕಿ ಪಾಕಿಸ್ತಾನ 6ನೇ ಹಾಗೂ ಶ್ರೀಲಂಕಾ 9ನೇ ಸ್ಥಾನಕ್ಕೆ ಕುಸಿದಿವೆ. ಕನಿಷ್ಠ ಪಂದ್ಯಗಳನ್ನಾಡದ ಕಾರಣ ಒಟ್ಟು ತಂಡಗಳ ಸಂಖ್ಯೆ 102 ರಿಂದ 98ಕ್ಕೆ ಇಳಿಕೆಯಾಗಿದೆ.

ನೋಡಿರಿ

