ಮರೋಳಿ ಸೂರ್ಯದೇವಸ್ಥಾನದ ವತಿಯಿಂದ ಭಕ್ತರಿಗೆ ಸಿಹಿಸುದ್ದಿ – ಭಕ್ತರಿಗಾಗಿ ವಿಶೇಷ ಸೇವೆ ಆರಂಭ

ಮರೋಳಿ ಸೂರ್ಯದೇವಸ್ಥಾನದ ವತಿಯಿಂದ ಭಕ್ತರಿಗೆ ಸಿಹಿಸುದ್ದಿ – ಭಕ್ತರಿಗಾಗಿ ವಿಶೇಷ ಸೇವೆ ಆರಂಭ

ಸೂರ್ಯದೇವಸ್ಥಾನ ಕಾಣಲು ಸಿಗುವುದೇ ಅಪರೂಪ. ಅದರಲ್ಲೂ ಭಾರತದಲ್ಲಿ ಸೂರ್ಯ ದೇವಾಲಯಗಳು ಇರುವುದು ಕೂಡಾ ಅಪರೂಪ. ನಮ್ಮ ಕರಾವಳಿಯಲ್ಲಿ ಅದರಲ್ಲೂ ಮಂಗಳೂರಿನಲ್ಲಿ ಸೂರ್ಯದೇವಸ್ಥಾನವಿದೆ. ಈಗ ಆ ದೇಗುಲದಲ್ಲಿ ಭಕ್ತರಿಗಾಗಿ ವಿಶೇಷ ಸೇವೆ ಆರಂಭವಾಗಿದೆ.

ಇದನ್ನೂ ಓದಿ:ಸುಖ, ನೆಮ್ಮದಿ, ಸಂತೋಷ ಬೇಕಾ? – ನಮ್ಮ ರಾಜ್ಯದಲ್ಲಿರೋ ಈ ಎರಡು ದೇಗುಲಕ್ಕೆ ಒಮ್ಮೆ ಭೇಟಿ ನೀಡಿ

ಮಂಗಳೂರಿನಲ್ಲಿರುವ  1200 ವರ್ಷ ಹಳೆಯ ಸೂರ್ಯ ದೇವಸ್ಥಾನ ನೋಡಲು ಭಕ್ತರು, ಪ್ರವಾಸಿಗರು ಬರುತ್ತಿರುತ್ತಾರೆ. ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನ ತುಂಬಾ ಪ್ರಸಿದ್ಧಿ ಪಡೆದ ದೇವಸ್ಥಾನ ಕೂಡಾ ಹೌದು. ಈಗ ಈ ದೇವಸ್ಥಾನ  ಜೀರ್ಣೋದ್ಧಾರಗೊಂಡಿದೆ. ಜೊತೆಗೆ ಪ್ರಮುಖ ಧಾರ್ಮಿಕ ಪ್ರವಾಸಿ ಕೇಂದ್ರವಾಗಿದೆ. ಇದೀಗ ದೇವಸ್ಥಾನದ ವತಿಯಿಂದ ಭಕ್ತರಿಗೆ ಪ್ರತಿದಿನ ಮಧ್ಯಾಹ್ನ ಮತ್ತು ರಾತ್ರಿ ಉಚಿತ ಅನ್ನಪ್ರಸಾದ ಆರಂಭವಾಗಿದೆ.

ಇನ್ನು ಈ ದೇವಾಲಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಜೈನ ರಾಣಿ ಕಟ್ಟಿಸಿದ ಸುಂದರ ದೇಗುಲವಿದು. ಸುಮಾರು 1200 ವರ್ಷಗಳ ಸುದೀರ್ಘ ಇತಿಹಾಸವಿರುವ ಈ ದೇವಸ್ಥಾನವನ್ನು ಹಿಂದೆ ಜೈನ ರಾಣಿಯೊಬ್ಬರು ಮರುನಿರ್ಮಾಣ ಮಾಡಿಸಿದ್ದರು. ಇತ್ತೀಚೆಗೆ ಈ ದೇವಸ್ಥಾನ ಜೀರ್ಣೋದ್ಧಾರಗೊಂಡಿದೆ. ಈ ದೇಗುಲ ಈಗ ಮಂಗಳೂರಿನ ಪ್ರಮುಖ ಪ್ರವಾಸಿ ಹಾಗೂ ಧಾರ್ಮಿಕ ಕೇಂದ್ರವಾಗಿದೆ. ಈ ದೇವಸ್ಥಾನದ ಸೌಂದರ್ಯವನ್ನು ನೋಡುವುದೇ ಚೆಂದ.

ದೂರದ ಊರುಗಳಿಂದ ಬರುವ ಭಕ್ತರಿಗೆ ಇಲ್ಲಿ ಅನ್ನಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ದೇವಸ್ಥಾನದ ಆಡಳಿತ ಮಂಡಳಿ ಈಗ ಪ್ರತಿದಿನ ಮಧ್ಯಾಹ್ನ ಮತ್ತು ರಾತ್ರಿ ಎರಡು ಹೊತ್ತು ಭರ್ಜರಿ ಅನ್ನಪ್ರಸಾದ ವ್ಯವಸ್ಥೆಯನ್ನು ಆರಂಭಿಸಿದೆ. ಇನ್ನು ಮುಂದೆ ದೇವಸ್ಥಾನಕ್ಕೆ ಬರುವ ಭಕ್ತರು ದೇವರ ದರ್ಶನದ ಜೊತೆಗೆ ಹೊಟ್ಟೆ ತುಂಬ ಪ್ರಸಾದವನ್ನು ಸ್ವೀಕರಿಸಬಹುದು.

Sulekha