ಮಲೆ ಮಹದೇಶ್ವರನ ಬೆಟ್ಟದಲ್ಲಿ ಶ್ವೇತ ಜಿಂಕೆಯ ದರ್ಶನ – ಸಫಾರಿಗೆ ಬಂದವರಿಗೆ ಸಂಭ್ರಮವೋ ಸಂಭ್ರಮ

ಮಲೆ ಮಹದೇಶ್ವರನ ಬೆಟ್ಟದಲ್ಲಿ ಶ್ವೇತ ಜಿಂಕೆಯ ದರ್ಶನ – ಸಫಾರಿಗೆ ಬಂದವರಿಗೆ ಸಂಭ್ರಮವೋ ಸಂಭ್ರಮ

ಮಲೆ ಮಹದೇಶ್ವರನ ಸನ್ನಿಧಿಯಲ್ಲಿ ಈಗ ಬಿಳಿ ಬಣ್ಣದ ಜಿಂಕೆಯದ್ದೇ ಮಾತು. ಶ್ವೇತವರ್ಣದ ಜಿಂಕೆಯನ್ನು ನೋಡಲು ಪ್ರವಾಸಿಗರು ಕೂಡಾ ಬರುತ್ತಿದ್ದಾರೆ. ಜೊತೆಗೆ ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಕರಿ ಚಿರತೆ ಕೂಡಾ ದರ್ಶನ ನೀಡುತ್ತಿದೆ.

ಇದನ್ನೂ ಓದಿ:ಸಿಲಿಕಾನ್‌ ಸಿಟಿ ಮಂದಿಗೆ ಬಿಗ್‌ ಶಾಕ್!‌ – ಇನ್ಮುಂದೆ ಆಟೋ ಪ್ರಯಾಣ ಫುಲ್‌ ಕಾಸ್ಟ್ಲಿ!

ಮಲೆ ಮಹದೇಶ್ವರ ವನ್ಯಜೀವಿಧಾಮಕ್ಕೆ ಬರುವ ಪ್ರವಾಸಿಗರು ಸಂಭ್ರಮದಲ್ಲಿದ್ದಾರೆ. ಅದರಲ್ಲೂ ಸಫಾರಿಗೆ ಬರುವ ಪ್ರವಾಸಿಗರು ತುಂಬಾ ಖುಷಿಯಾಗಿದ್ದಾರೆ. ಇದಕ್ಕೆ ಕಾರಣ ಅಪರೂಪದಲ್ಲಿ ಅಪರೂಪಕ್ಕೆ ಕಾಣ ಸಿಗುವ ಶ್ವೇತವರ್ಣದ ಜಿಂಕೆ.ಜೊತೆಗೆ ಕರಿ ಚಿರತೆ. ಸಫಾರಿಯಲ್ಲಿ ಹುಲಿ ಮತ್ತು ಮೂರು ಮರಿಗಳು ಕೂಡಾ ಕಾಣಿಸಿಕೊಂಡಿದ್ದು ಪ್ರವಾಸಿಗರು ಥ್ರಿಲ್ ಆಗಿದ್ದಾರೆ. ಬಿಳಿ ಜಿಂಕೆಯ ದರ್ಶನದ ನಡುವೆಯೇ ಕಾಡಿನ ರಾಜ ಹುಲಿ ಕೂಡಾ ಕುಟುಂಬದೊಂದಿಗೆ ರಸ್ತೆಗೆ ಇಳಿದಿರುವ ದೃಶ್ಯ ಪ್ರವಾಸಿಗರ ಮನಸೆಳೆದಿದೆ. ತಾಯಿ ಹುಲಿ ತನ್ನ ಮೂರು ಮುದ್ದಾದ ಮರಿಗಳೊಂದಿಗೆ ಆಟವಾಡುತ್ತಾ ಸಫಾರಿ ವಾಹನಗಳ ಸಮೀಪವೇ ಕಾಣಿಸಿಕೊಂಡಿದ್ದು ಪ್ರವಾಸಿಗರಿಗೆ ಖುಷಿ ನೀಡಿದೆ.

ಎಂ.ಎಂ ಹಿಲ್ಸ್ ಸಫಾರಿ ಈಗ ಪ್ರವಾಸಿಗರ ಫೇವರೆಟ್ ಆಗಿದೆ. ಪ್ರಕೃತಿಯ ಈ ಅಪರೂಪದ ಸಮಾಗಮವನ್ನು ಕಣ್ಣಾರೆ ಸವಿಯಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಒಂದು ಕಡೆ ಕಪ್ಪು ಚಿರತೆಯ ಗತ್ತು, ಮತ್ತೊಂದೆಡೆ ಬಿಳಿ ಜಿಂಕೆಯ ವೈಯ್ಯಾರ.. ಮತ್ತೊಂದೆಡೆ ರಾಜಾಹುಲಿ ಸಂಸಾರ.. ಈ ಪ್ರಾಣಿ ಪ್ರಪಂಚ ನೋಡೋದೇ ಕಣ್ಣಿಗೆ ಹಬ್ಬ.

Sulekha