REVENGEನಲ್ಲೂ ಗೆಲ್ಲುತ್ತಾ RCB? – ಪಂತ್ ಪಡೆಗೆ RED ALERT
LSGಯಲ್ಲಿನ ಚಾಲೆಂಜ್ ಗಳೇನು?

ಗುಜರಾತ್ ವಿರುದ್ಧದ ಮ್ಯಾಚ್ ಬಳಿಕ ಲಾಂಗ್ ಬ್ರೇಕ್ನಲ್ಲಿರೋ ಆರ್ಸಿಬಿ ನಾಳೆ ಲಕ್ನೋ ವಿರುದ್ಧದ ಪಂದ್ಯದ ಮೂಲಕ ಮತ್ತೆ ಅಖಾಡಕ್ಕಿಳಿಯಲಿದೆ. ಲೀಗ್ ಹಂತದಲ್ಲಿ ಎರಡೂ ತಂಡಗಳಿಗೆ ಇದು 10ನೇ ಪಂದ್ಯ. ಌಂಡ್ ಕಳೆದ ಪಂದ್ಯಗಳಲ್ಲಿ ಎರಡೂ ಟೀಮ್ಸ್ ಸೋತು ಬರ್ತಿದ್ದು ಈ ಮ್ಯಾಚ್ ತುಂಬಾನೇ ಇಂಟ್ರೆಸ್ಟಿಂಗ್ ಆಗಿರುತ್ತೆ.
ಇದನ್ನೂ ಓದಿ : ಮುಂಬೈ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಓಕೆ – ಸೂರ್ಯ, ತಿಲಕ್ ಯಾಕೆ? – ಮುಂಬೈ ಮ್ಯಾನೇಜ್ಮೆಂಟ್ ಖಡಕ್ ಎಚ್ಚರಿಕೆ
ಬೆಂಗಳೂರು ಮತ್ತು ಲಕ್ನೋ ತಂಡಗಳಿಗೆ ಈ ಸೀಸನ್ನಲ್ಲಿ ಇದು ರಿವೇಂಜ್ ಮ್ಯಾಚ್. ಆಲ್ರೆಡಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಮ್ನಲ್ಲಿ ಏಪ್ರಿಲ್ 15ರಂದು ನಡೆದಿದ್ದ ಪಂದ್ಯದಲ್ಲಿ ಬೆಂಗಳೂರು ವಿನ್ ಆಗಿತ್ತು. ಈಗ ಏಕನಾ ಸ್ಟೇಡಿಯಮ್ನಲ್ಲಿ ಪಂದ್ಯ ನಡೀತಾ ಇದೆ. ಌಂಡ್ ಲಕ್ನೋ ರಿವೇಂಜ್ ತೀರಿಸಿಕೊಳ್ಳೋ ಮೈಂಡ್ಸೆಟ್ನಲ್ಲಿ ಇರ್ತಾರೆ. ಆದ್ರೆ ಆರ್ಸಿಬಿ ವಿರುದ್ಧ ಗೆಲ್ಲೋದು ಅಷ್ಟು ಸುಲಭ ಕೂಡ ಇಲ್ಲ.
ಟಾಪ್ ನಲ್ಲಿ ಬೆಂಗಳೂರು.. ಬಾಟಮ್ ನಲ್ಲಿ ಲಕ್ನೋ!
ಪ್ರಸ್ತುತ ಸೀಸನ್ನಲ್ಲಿ 9 ಪಂದ್ಯಗಳನ್ನ ಆಡಿರೋ ಬೆಂಗಳೂರು 6ರಲ್ಲಿ ಗೆದ್ದು 12 ಅಂಕಗಳನ್ನ ಪಡೆದಿದೆ. ಌಂಡ್ ಉಳಿದೆಲ್ಲಾ ತಂಡಗಳಿಗಿಂತ ಹೆಚ್ಚಿನ ನೆಟ್ ರನ್ ರೇಟ್ ಹೊಂದಿದೆ. ಪ್ರಸ್ತುತ ಟಾಪ್ 2 ಪೊಸಿಷನ್ನಲ್ಲಿ ಇದೆ. ಎಲ್ಎಸ್ಜಿ ವಿರುದ್ಧದ ಮ್ಯಾಚ್ ಕೂಡ ಸೇರಿ ಇನ್ನೂ 5 ಪಂದ್ಯಗಳು ಬಾಕಿ ಇರೋದ್ರಿಂದ ಇನ್ನೆರಡು ಗೆದ್ರೂ ಪ್ಲೇ ಆಫ್ ಕನ್ಫರ್ಮ್ ಆಗುತ್ತೆ. 4 ಪಂದ್ಯ ಗೆದ್ರು ಅಂದ್ರೆ ಸೀದಾ ಟಾಪ್ 1 ಅಥವಾ ಟಾಪ್ 2ನಲ್ಲಿರ್ತಾರೆ. ಆದ್ರೆ ಲಕ್ನೋ ಪರಿಸ್ಥಿತಿ ಹಾಗಿಲ್ಲ. ಬೆಂಗಳೂರು ತಂಡ ಟಾಪ್-1 ರೇಸ್ನಲ್ಲಿದ್ರೆ ಲಕ್ನೋ ಟೀಂ 10ನೇ ಸ್ಥಾನದಲ್ಲಿದೆ. ಸೀಸನ್ ಎಂಡ್ ಅಷ್ಟ್ರಲ್ಲಿ ಮಿಡಲ್ ಪೊಸಿಷನ್ನಲ್ಲಿದ್ರೆ ಸಾಕಪ್ಪ ಅನ್ನೋ ಲೆವೆಲ್ನಲ್ಲಿದ್ದಾರೆ. ಯಾಕಂದ್ರೆ ಆಡಿರೋ 9 ಪಂದ್ಯಗಳಲ್ಲಿ ಗೆದ್ದಿರೋದೇ 2 ಪಂದ್ಯ. 7ರಲ್ಲಿ ಸೋಲು ಕಂಡಿದ್ದಾರೆ. ಉಳ್ದಿರೋ 5 ಮ್ಯಾಚ್ಗಳನ್ನ ಗೆದ್ರೂ 14 ಪಾಯಿಂಟ್ಸ್ ಅಷ್ಟೇ ಆಗುತ್ತೆ. ಹೀಗಿದ್ರೂ ಪ್ಲೇ ಆಫ್ಸ್ ಗ್ಯಾರಂಟಿ ಇಲ್ಲ. ಹೀಗಾಗಿ ಗುರುವಾರದ ಮ್ಯಾಚಲ್ಲಿ ಎಲ್ಎಸ್ಜಿ ವಿರುದ್ಧ ಬೆಂಗಳೂರು ತಂಡವೇ ಗೆಲ್ಲುವಂಥ ಫೇವರೆಟ್ ಟೀಂ ಆಗುತ್ತೆ.
ಬೆಂಗಳೂರು ಸ್ಟ್ರೆಂಥ್ ಏನು?
ಡಿಫೆಂಡಿಂಗ್ ಚಾಂಪಿಯನ್ಸ್ ಆರಂಭದಿಂದಲೂ ಸ್ಥಿರ ಪ್ರದರ್ಶನ
9 ಪಂದ್ಯಗಳ ಪೈಕಿ 5 ಬಾರಿ 200+ ಸ್ಕೋರ್.. ಒಂದು ಸಲ ಸೋಲು
ಬ್ಯಾಟಿಂಗ್ ನಲ್ಲಿ 250 ಹೈಯೆಸ್ಟ್.. ಬೌಲಿಂಗ್ ನಲ್ಲಿ 75ಕ್ಕೆ ಆಲೌಟ್ ಬೆಸ್ಟ್
ವಿರಾಟ್ ಕೊಹ್ಲಿ, ಪಡಿಕ್ಕಲ್, ಪಾಟಿದಾರ್ ಕಡೆಯಿಂದ ಅದ್ಭುತ ಬ್ಯಾಟಿಂಗ್
ಭುವನೇಶ್ವರ್, ಜೋಶ್, ಸುಯಾಶ್, ಕೃನಾಲ್ ಒಳ್ಳೆ ಬೌಲಿಂಗ್ ಪ್ರದರ್ಶನ
3 ಪಂದ್ಯಗಳನ್ನ ಸೋತಿದ್ರೂ ಬ್ಯಾಕ್ ಟು ಬ್ಯಾಕ್ ಪಂದ್ಯಗಳನ್ನ ಸೋತಿಲ್ಲ
ಚೇಸಿಂಗ್ ಮಾಡಿರುವಂಥ 4 ಪಂದ್ಯಗಳನ್ನೂ ಗೆದ್ದಿರುವ ಬೆಂಗಳೂರು
ಚೆನ್ನೈ ಮತ್ತು ಮುಂಬೈ ವಿರುದ್ಧ ಫಸ್ಟ್ ಬ್ಯಾಟಿಂಗ್ ಮಾಡಿ ಡಿಫೆಂಡಿಂಗ್
ಆರ್ ಸಿಬಿ ಮೈನಸ್ ಅಂದ್ರೆ 3 ಸಲವೂ ಡಿಫೆಂಡಿಂಗ್ ನಲ್ಲಿ ಸೋಲು
ಜಿತೇಶ್ ಶರ್ಮಾ ಕಡೆಯಿಂದ ರನ್ಸ್ ಬಂದಿಲ್ಲ, 7 ಮ್ಯಾಚ್ 63 ರನ್ಸ್
ಬೆಥೆಲ್ ಗೆ ಚಾನ್ಸ್ ಕೊಟ್ಟಿದ್ರೂ ಕಳೆದ ಮೂರು ಪಂದ್ಯಗಳಿಂದ ರನ್ಸ್ ಇಲ್ಲ
ಇದಿಷ್ಟು ಆರ್ಸಿಬಿಯ ಪ್ಲಸ್ ಌಂಡ್ ಮೈನಸ್. ಸದ್ಯ ಏಪ್ರಿಲ್ 30ರಂದು ನಡೆದಿದ್ದ ಗುಜರಾತ್ ವಿರುದ್ಧದ ಕೊನೇ ಮ್ಯಾಚಲ್ಲಿ ಸೋತಿರೋ ಆರ್ಸಿಬಿ ಈಗ ಲಕ್ನೋ ವಿರುದ್ಧ ಗೆದ್ದು ಕಂ ಬ್ಯಾಕ್ ಮಾಡೋಕೆ ಕಾಯ್ತಿದೆ. ಒಂದು ಸಲ ಎಡವಿದ್ರೂ ನೆಕ್ಸ್ಟ್ ಕಂ ಬ್ಯಾಕ್ ಮಾಡೋದ್ರಿಂದ ಅಂತಾ ದೊಡ್ಡ ಟೆನ್ಷನ್ ಏನಿಲ್ಲ. ಆದ್ರೆ ಲಕ್ನೋ ತಂಡದ ಸ್ಥಿತಿ ಹೀಗಿಲ್ಲ. ಸೋಲಿನ ಸುಳಿಯಲ್ಲೇ ಬಿದ್ದು ಒದ್ದಾಡ್ತಿದ್ದಾರೆ. ಕಳೆದ 6 ಪಂದ್ಯಗಳಲ್ಲಿ 5ರಲ್ಲಿ ಸೋತಿದ್ದಾರೆ. ಆರ್ಸಿಬಿ ವಿರುದ್ಧದ ಫೈಟ್ಗೆ ರೆಡಿಯಾಗಿರೋ ಲಕ್ನೋ ಪ್ಲಸ್ ಌಂಡ್ ಮೈನಸ್ ಏನು?
ಲಕ್ನೋ ಪ್ಲಸ್ & ಮೈನಸ್!
ಮುಂಬೈ ವಿರುದ್ಧ 228 ರನ್ಸ್ ಹೊಡೆದಿದ್ದಕ್ಕೆ ಕಾನ್ಫಿಡೆನ್ಸ್ ಹೆಚ್ಚಳ
ಸೀಸನ್ ಉದ್ದಕ್ಕೂ ಸತತ ಸೋಲುಗಳಿಂದ ಕಂಗೆಟ್ಟಿರುವ ತಂಡ
9 ಪಂದ್ಯಗಳ ಪೈಕಿ 2 ಸಲ 200+ ಸ್ಕೋರ್.. 2 ಸಲವೂ ಸೋಲು
ಸೂಪರ್ ಓವರ್ ಗೆಲ್ಲೋ ಅವಕಾಶ ಇದ್ರೂ ಅಸಡ್ಡೆಯಿಂದ ಸೋಲು
ಟಾಪ್ ಆರ್ಡರ್ ಬ್ಯಾಟಿಂಗ್ ನಿಂದ ಬಿಗ್ ಸ್ಕೋರ್ ಬರ್ತಿಲ್ಲ
ಗೆದ್ದಿರೋ 2 ಪಂದ್ಯಗಳೂ ಕ್ಲೋಸ್ ಗೇಮ್ ಆಗಿ ಲಾಸ್ಟ್ ಬಾಲ್ ವಿನ್
ನಾಯಕ ರಿಷಭ್ ಪಂತ್ ಕಳಪೆ ಫಾರ್ಮ್ ನಿಂದ ಒದ್ದಾಟ
ಡೆತ್ ಓವರ್ ಗಳಲ್ಲಿ ಬೌಲಿಂಗ್ ತುಂಬಾನೇ ಎಕ್ಸ್ ಪೆನ್ಸಿವ್
ಹೀಗೆ ಲಕ್ನೋ ತಂಡ ಹೆಜ್ಜೆ ಹೆಜ್ಜೆಗೂ ಸಮಸ್ಯೆಗಳ ಸುಳಿಯಲ್ಲೇ ಸಿಕ್ಕಿ ಒದ್ದಾಡ್ತಿದೆ. ಸದ್ಯಕ್ಕೆ ಪಂತ್ ಪಡೆಯಲ್ಲಿ ಸೂಪರ್ ಅನ್ನಿಸೋ ಯಾವ ಮೂಮೆಂಟ್ಸ್ ಕೂಡ ಇಲ್ಲ. ಕ್ಯಾಪ್ಟನ್ಸಿಯಾಗ್ಲಿ, ಪರ್ಫಾಮೆನ್ಸ್ ಆಗ್ಲಿ ಅಥವಾ ಡಿಸಿಷನ್ಸ್ ಮೇಕಿಂಗ್ ಆಗ್ಲಿ ಹೋಪ್ ಲೆಸ್ ಆಗಿದೆ. ಹೀಗಾಗಿ ಟಾಪ್ ರೇಸ್ನಲ್ಲಿ ರೆಡ್ ಅಲರ್ಟ್ನಂತಿರೋ ರೆಡ್ ಆರ್ಮಿಯ ಸವಾಲನ್ನ ಲಕ್ನೋ ಬಾಯ್ಸ್ ಹೇಗೆ ಗೆಲ್ತಾರೆ ಅನ್ನೋದೇ ಈಗಿರೋ ಪ್ರಶ್ನೆ.

ನೋಡಿರಿ

