ಒಂದೇ ಬಾಲ್‌ನಲ್ಲಿ ಎರಡು ಬಾರಿ ಔಟಾದ ನಿತೀಶ್ ರಾಣಾ! – ನಿಯಮ ಏನು ಹೇಳುತ್ತೆ? OUT Or ‌ಡೆಡ್ ಬಾಲ್?

ಒಂದೇ ಬಾಲ್‌ನಲ್ಲಿ ಎರಡು ಬಾರಿ ಔಟಾದ ನಿತೀಶ್ ರಾಣಾ! – ನಿಯಮ ಏನು ಹೇಳುತ್ತೆ? OUT Or ‌ಡೆಡ್ ಬಾಲ್?

CSK  ಹಾಗೂ DC  ವಿರುದ್ದದ ನಡೆದ ಹೈವೋಲ್ಟೇಜ್ ಮ್ಯಾಚ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ 8 ವಿಕೆಟ್‌ಗಳಿಂದ ಗೆದ್ದು ಬೀಗಿದೆ. ಆದ್ರೀಗ ಈ ಪಂದ್ಯದಲ್ಲಿ ಅಚ್ಚರಿಯ ಘಟನೆ ನಡೆದಿದೆ. ನಿತೀಶ್‌ ರಾಣಾ ಒಂದೇ ಚೆಂಡಿನಲ್ಲಿ 2 ಬಾರಿ ಔಟ್‌ ಆಗಿದ್ದಾರೆ. ಇದು ಭಾರಿ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: ತುತ್ತು ಅನ್ನಕ್ಕೂ ಗತಿಯಿಲ್ಲದೆ ಕೇಡಿ ಜೆಡಿ ವಿಲ ವಿಲ! – ಹಳೇ ಸಾಮ್ರಾಜ್ಯ ಮರಳಿ ಪಡೆದ ಗೌತಮ್‌ ದಿವಾನ್‌!

ನಿನ್ನೆಯ ಮ್ಯಾಚ್‌ನಲ್ಲಿ ಡೆಲ್ಲಿ ಪತ 3 ನೇ ಕ್ರಮಾಂಕಕ್ಕೆ ಬ್ಯಾಟಿಂಗ್‌ಗೆ ಬಂದ ರಾಣಾ, ಕೆಲವು ಉತ್ತಮ ಹೊಡೆತಗಳನ್ನು ಆಡಿದರು, ಆದರೆ ಅವರ ಇನ್ನಿಂಗ್ಸ್ ಹೆಚ್ಚು ಕಾಲ ಉಳಿಯಲಿಲ್ಲ. ಈ ಅವಧಿಯಲ್ಲಿ ಅವರು 13 ಎಸೆತಗಳಲ್ಲಿ ಕೇವಲ 15 ರನ್ ಗಳಿಸಿ ಔಟ್‌ ಆಗಿದ್ದಾರೆ ಅದೂ ಕೂಡ ಒಂದೇ ಬಾಲ್‌ನಲ್ಲಿ 2 ಬಾರಿ ಔಟ್‌ ಆಗಿದ್ದು ಅಚ್ಚರಿಗೆ ಕಾರಣವಾಗಿದೆ.

ನೂರ್ ಅಹ್ಮದ್ ಎಸೆತದಲ್ಲಿ ಶಾಟ್ ಹೊಡೆಯಲು ಪ್ರಯತ್ನಿಸುತ್ತಿದ್ದಾಗ, ಸ್ಪಂಪ್ಸ್‌ನಿಂದ ಬೇಲ್ಸ್ ಬಿದ್ದಿದೆ. ಮತ್ತೊಂದೆಡೆ ಚೆಂಡು ಗಾಳಿಯಲ್ಲಿ ಹಾರಿ ಕಾರ್ತಿಕ್ ಶರ್ಮಾಗೆ ಕ್ಯಾಚ್ ಸಿಕ್ಕಿದೆ.  ಬ್ಯಾಟ್ ಸ್ಟಂಪ್ಸ್‌ಗೆ ತಗುಲಿ ಹಿಟ್ ವಿಕೆಟ್ ಆಗಿ ಔಟ್ ಆದ್ರೋ  ಅಥವಾ ಅವರ ಕಾಲು ವಿಕೆಟ್​ಗೆ ತಾಗಿದೆಯೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ನಿತೀಶ್ ಔಟಾದ ಸ್ವಲ್ಪ ಸಮಯದ ನಂತರ, ಘಟನೆಯ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಲು ಪ್ರಾರಂಭಿಸಿದವು, ನಿತೀಶ್ ರಾಣಾ ಯಾವರೀತಿ ಔಟ್ ಆದರು ಎಂಬ ಪ್ರಶ್ನೆಗಳು ಹುಟ್ಟುಕೊಂಡಿವೆ.

ಇನ್ನು ಬ್ಯಾಟ್ ಮತ್ತು ಚೆಂಡು ಸಂಪರ್ಕಕ್ಕೆ ಬರುವ ಮೊದಲೇ ಬೇಲ್ಸ್ ಬಿದ್ದಿದ್ರೆ, ಅಂಪೈರ್ ‌ಡೆಡ್ ಬಾಲ್ ಎಂದು ಘೋಷಿಸಬೇಕಿತ್ತು, ಆದ್ರೆ ಅವರು ಹಾಗೆ ಮಾಡಿಲ್ಲ. ‌ ಇತ್ತ ನಿತೀಶ್‌ ರಾನಾ ಆಗ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಕೂಡ  ಡಿಆರ್‌ಎಸ್‌ ತೆಗೆದುಕೊಂಡಿಲ್ಲ. ಆದ್ರೆ  ಅಧಿಕೃತವಾಗಿ ಅಲ್ಲದಿದ್ದರೂ, ನಿತೀಶ್ ರಾಣಾ ಒಂದೇ ಚೆಂಡಿನಲ್ಲಿ ಎರಡು ಬಾರಿ ಔಟಾದ ಮೊದಲ ಐಪಿಎಲ್ ಬ್ಯಾಟ್ಸ್‌ಮನ್ ಆಗಿದ್ದಾರೆ. ಮೊದಲು, ಅವರು ಹಿಟ್ ವಿಕೆಟ್ ಪಡೆದು ನಂತರ ಕ್ಯಾಚ್ ಔಟ್ ಆದರು. ಇದು ಹಿಂದೆಂದೂ ಕ್ರಿಕೆಟ್ ಲೋಕದಲ್ಲಿ ನಡೆದಿಲ್ಲ.

ರೂಲ್ಸ್‌ನಲ್ಲಿ ಏನಿದೆ?

ಎಸೆತವನ್ನು ಡೆಡ್ ಬಾಲ್ ಎಂದು ಘೋಷಿಸಬೇಕೇ ಅಥವಾ ಬೇಡವೇ ಎಂಬುದು ಎಸೆತಕ್ಕೆ ಹೋಲಿಸಿದರೆ ಬೇಲ್ಸ್ ಬಿದ್ದ ನಿಖರವಾದ ಸಮಯವನ್ನು ಅವಲಂಬಿಸಿರುತ್ತದೆ. ಎಂಸಿಸಿ ನಿಯಮ 20 ರ ಅಡಿಯಲ್ಲಿ, ಗಮನಾರ್ಹವಾದ ಗೊಂದಲ ಉಂಟಾದರೆ ಅಥವಾ “ಬೌಲರ್ ಚೆಂಡನ್ನು ಬೀಳಿಸಿದರೆ ಅಥವಾ ಅದನ್ನು ತಲುಪಿಸದಿದ್ದರೆ” ಅಂಪೈರ್ ಡೆಡ್ ಬಾಲ್ ಎಂದು ಕರೆಯಬಹುದು. ಕಾನೂನು 20.4.2.6 ರ ಪ್ರಕಾರ, “ಸ್ಟ್ರೈಕರ್ ಎಸೆತವನ್ನು ಸ್ವೀಕರಿಸಲು ಅಥವಾ ಸ್ವೀಕರಿಸಲು ತಯಾರಿ ನಡೆಸುವಾಗ ಯಾವುದೇ ಶಬ್ದ ಅಥವಾ ಚಲನೆಯಿಂದ ಅಥವಾ ಇನ್ನಾವುದೇ ರೀತಿಯಲ್ಲಿ ವಿಚಲಿತನಾದಾಗ” ಅಂಪೈರ್ ಡೆಡ್ ಬಾಲ್ ಅನ್ನು ಕರೆ ಮಾಡಿ ಸಂಕೇತಿಸಬೇಕು. ಘಟನೆಯ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಲು ಪ್ರಾರಂಭಿಸಿದವು, ನಿತೀಶ್ ರಾಣಾ ಯಾವರೀತಿ ಔಟ್ ಆದರು ಎಂಬ ಪ್ರಶ್ನೆಗಳು ಹುಟ್ಟುಕೊಂಡಿವೆ.

Shwetha M