ಚೇಟಾ ಏಟಿಗೆ ಡೆಲ್ಲಿ ಅಪ್ಪಚ್ಚಿ – CSK ಪ್ಲೇ ಆಫ್ ಹಾದಿ ಸುಲಭ!
KL ತಲೆ ಮೇಲೆ ಆರೆಂಜ್ ಕಿರೀಟ

ಚೇಟಾ ಏಟಿಗೆ ಡೆಲ್ಲಿ ಅಪ್ಪಚ್ಚಿ – CSK ಪ್ಲೇ ಆಫ್ ಹಾದಿ ಸುಲಭ!KL ತಲೆ ಮೇಲೆ ಆರೆಂಜ್ ಕಿರೀಟ

ಚೆನ್ನೈ ಮತ್ತು ಡೆಲ್ಲಿ ನಡುವಿನ ಮಾಚಲ್ಲಿ ಚೆನ್ನೈ ವಿನ್ ಆಗಿದೆ. ಪ್ಲೇ ಆಫ್ ರೇಸ್ ಹಿನ್ನೆಲೆ ಎರಡು ತಂಡಗಳಿಗೆ ಈ ಪಂದ್ಯ ತುಂಬಾನೇ ಮುಖ್ಯ ಆಗಿತ್ತು. ಆದ್ರೆ ಡೆಲ್ಲಿ ಆಟಗಾರರು ಯಾವ ಮೂಮೆಂಟ್ ನಲ್ಲೂ ಫೈಟ್ ಕೊಡದೆ ಕೊನೆಗೆ ಸೋಲೊಪ್ಪಿಕೊಂಡಿದ್ದಾರೆ.

ಇದನ್ನೂ ಓದಿ : ಡಿಸಿಗೆ ಕೈ ಕೊಟ್ಟ ಆರಂಭಿಕ ದಾಂಡಿಗರು – ಸಿಎಸ್ಕೆಗೆ ಸುಲಭ ಜಯ ತಂದುಕೊಟ್ಟ ಸಂಜು ಸ್ಯಾಮ್ಸನ್

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಡಿಸಿ ವರ್ಸಸ್ ಸಿಎಸ್​ಕೆ ನಡುವಿನ ಮ್ಯಾಚಲ್ಲಿ ಟಾಸ್ ಗೆದ್ದ ಅಕ್ಷರ್ ಪಟೇಲ್ ಫಸ್ಟ್ ಬ್ಯಾಟಿಂಗ್ ಚೂಸ್ ಮಾಡಿಕೊಳ್ತಾರೆ. ಆದ್ರೆ ಅಂದುಕೊಂಡಂತ ಸ್ಕೋರ್ ಬರಲ್ಲ. ಸ್ಟಬ್ಸ್ ಮತ್ತು ರಿಜ್ವಿ ಹಂಗೂ ಹಿಂಗೂ ಒದ್ದಾಡಿ 150ರ ಗಡಿ ದಾಟಿಸಿದ್ರು. 156 ರನ್​ಗಳ ಟಾರ್ಗೆಟ್ ಬೆನ್ನತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ ಆರಂಭದಲ್ಲಿ ಸ್ವಲ್ಪ ಎಡವಿದ್ರೂ ಆ ನಂತ್ರ ಜವಾಬ್ದಾರಿಯುತವಾಗಿ ಆಡಿ ಪಂದ್ಯ ಗೆದ್ರು.

ಡೆಲ್ಲಿ ಸೋಲಿಗೆ ಕಾರಣಗಳು!

ಟಾಸ್ ಗೆದ್ರೂ ಫಸ್ಟ್ ಬ್ಯಾಟಿಂಗ್ ಚೂಸ್ ಮಾಡಿದ ಅಕ್ಷರ್ ಪಟೇಲ್

ಟಾಪ್ ಆರ್ಡರ್ ಬ್ಯಾಟಿಂಗ್ ಫೇಲ್.. ಐವರು 20ರ ಒಳಗೇ ಔಟ್

ಸಮೀರ್ ರಿಜ್ವಿ (40) ಮತ್ತು ಸ್ಟಬ್ಸ್ (38) ನೆರವಿನಿಂದ ಮಿನಿಮಂ ಸ್ಕೋರ್

ಡೆಲ್ಲಿ ಪರ ಬಿಗ್ ಸ್ಕೋರ್ ಬರದಂತೆ ಚೆನ್ನೈ ಬೌಲರ್ ಅದ್ಭುತ ಬೌಲಿಂಗ್

ಅಂತಿಮವಾಗಿ 156 ರನ್ಸ್ ಟಾರ್ಗೆಟ್ ಡಿಫೆಂಡಿಂಗ್ ಸ್ಕೋರ್ ಆಗಿರಲಿಲ್ಲ

ಬೌಲಿಂಗ್ ಗೆ ಬಂದ ಡೆಲ್ಲಿಗೆ ಆರಂಭದಲಿ ವಿಕೆಟ್ಸ್ ಸಿಕ್ರೂ ಆಮೇಲೆ ಸಿಗಲಿಲ್ಲ

ಚೆನ್ನೈ ಪರ ಸಂಜು ಸ್ಯಾಮ್ಸನ್ 87(52) ಜವಾಬ್ದಾರಿಯುತ ಬ್ಯಾಟಿಂಗ್

ಸಂಜು & ಕಾರ್ತಿಕ್ ಶತಕದ ಜೊತೆಯಾಟ, 17.3 ಓವರ್ ಗಳಲ್ಲೇ ಗೆಲುವು

ಫಸ್ಟ್ ಇನ್ನಿಂಗ್ಸ್ ಹಾಗೇ ಸೆಕೆಂಡ್ ಇನ್ನಿಂಗ್ಸ್ ಎಲ್ಲಿಯೂ ಕೂಡ ಡೆಲ್ಲಿ ಆಟಗಾರರು ಟಫ್ ಫೈಟ್ ಕೊಡಲೇಇಲ್ಲ. ಚೆನ್ನೈ ಪ್ಲೇಯರ್ಸ್ ಒನ್ ಸೈಡೆಡ್ ಆಗಿ ವಿನ್ ಆದ್ರು. ಈ ಮೂಲಕ ಚೆನ್ನೂ 10 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದಾರೆ. 8 ಅಂಕದಲ್ಲಿರೋ ಡಿಸಿ 7ನೇ ಸ್ಥಾನದಲ್ಲಿದೆ. ಈ ಗೆಲುವಿನ ಮೂಲಕ ಚೆನ್ನೈ ಪ್ಲೇ ಆಫ್ ಹಾದಿ ಸುಲಭವಾಗಿದೆ. ಇನ್ನು ಡೆಲ್ಲಿ ತಂಡಕ್ಕೆ ಇನ್ನೂ 4 ಪಂದ್ಯಗಳು ಬಾಕಿ ಇದ್ದು ಎಲ್ಲಾ ಪಂದ್ಯಗಳನ್ನ ಗೆದ್ರೆ ಮಾತ್ರವೇ ಪ್ಲೇ ಆಫ್ ಹಾದಿ ಇರುತ್ತೆ. ನಿನ್ನೆ ಮ್ಯಾಚಲ್ಲಿ ಡೆಲ್ಲಿ ಸೋತ್ರೂ ಕೂಡ ಕನ್ನಡಿಗ ಕೆಎಲ್ ರಾಹುಲ್ ಆರೆಂಜ್ ಕ್ಯಾಪ್ ಹೋಲ್ಡರ್ ಆಗಿದ್ದಾರೆ. ರಾಹುಲ್ ಇದುವರೆಗೆ 10 ಪಂದ್ಯಗಳಲ್ಲಿ 180.89 ಸ್ಟ್ರೈಕ್ ರೇಟ್‌ನಲ್ಲಿ ಶತಕ ಮತ್ತು 3 ಅರ್ಧಶತಕಗಳ ನೆರವಿನಿಂದ 445 ರನ್ ಗಳಿಸಿ ಹೈಯೆಸ್ಟ್ ರನ್ ಸ್ಕೋರರ್ ಆಗಿ ಆರೆಂಜ್ ಕ್ಯಾಪ್ ಸದ್ಯ ಅವ್ರ ತಲೆಮೇಲಿದೆ. ಇನ್ನು ಸೆಕೆಂಡ್ ಪ್ಲೇಸ್​ನಲ್ಲಿ ಅಭಿಷೇಕ್ ಶರ್ಮಾ ಇದ್ದು 440 ರನ್ಸ್ ಇದೆ. ಇವತ್ತು ಪಂಜಾಬ್ ಮತ್ತು ಹೈದ್ರಾಬಾದ್ ಪಂದ್ಯ ಇದ್ದು ಇವತ್ತಿನ ಪಂದ್ಯದಲ್ಲಿ ಅಭಿಷೇಕ್ ಮತ್ತೆ ಟಾಪ್​ಗೇರೋ ಸಾಧ್ಯತೆಗಳಿವೆ.

Shantha Kumari