ಕೈತುಂಬಾ ಕಾಸು.. ಆಟದಲ್ಲಿ ಲಾಸು  – ತಂಡಗಳಿಗೇ ಹೊರೆಯಾದ ಸ್ಟಾರ್ಸ್!

ಕೈತುಂಬಾ ಕಾಸು.. ಆಟದಲ್ಲಿ ಲಾಸು  – ತಂಡಗಳಿಗೇ ಹೊರೆಯಾದ ಸ್ಟಾರ್ಸ್!

2026ರ ಐಪಿಎಲ್​ ಸಾಕಷ್ಟು ಇಂಟ್ರೆಸ್ಟಿಂಗ್ ಆಗಿದೆ. ಪ್ಲೇ ಆಫ್ ಲೆಕ್ಕಾಚಾರಗಳು ಸ್ಟಾರ್ಟ್ ಆಗಿದೆ. ಒಂದಷ್ಟು ಟೀಮ್ಸ್​ ಟಾಪ್​ನಲ್ಲಿದ್ರೆ ಮತ್ತೊಂದಷ್ಟು ತಂಡಗಳು ಬಾಟಮ್​ನಲ್ಲಿವೆ. ಸದ್ಯಕ್ಕಂತೂ ಮ್ಯಾಥಮೆಟಿಕಲಿ ಎಲ್ರಿಗೂ ಪ್ಲೇ ಆಫ್ ರೇಸ್​ನಲ್ಲಿ ಚಾನ್ಸ್ ಇದೆ. ಬಟ್ ಫೈನಲ್ ಆಗೋಕೆ ಇನ್ನೆರಡು ವಾರ ಬೇಕು. ಸೋ ಇಂಥಾ ಟೈಮಲ್ಲಿ ಡು ಆರ್ ಡೈ ಥರನೇ ಪ್ರತೀ ಪಂದ್ಯ ಆಡ್ಬೇಕಾಗುತ್ತೆ. ಆದ್ರೆ ಮಸ್ಟ್ ವಿನ್ ಟಾರ್ಗೆಟ್​ನಲ್ಲಿ ಫೀಲ್ಡಿಗಿಳಿತಿರೋ ತಂಡಗಳಿಗೆ ದುಬಾರಿ ಆಟಗಾರರೇ ಹೊರೆಯಾಗ್ತಿದ್ದಾರೆ. ಕೈತುಂಬಾ ಕಾಸು ಎಣಿಸೋರು ಆಟದಲ್ಲಿ ಮಾತ್ರ ಲಾಸ್ ಎನ್ನುವಂತಿದ್ದಾರೆ.

ಇದನ್ನೂ ಓದಿ : CSK ಪರ ತಲಾ ಆಡೋದೇ ಇಲ್ವಾ? – ದೆಹಲಿ ವಿರುದ್ಧದ ಪಂದ್ಯದಲ್ಲೂ ಧೋನಿ OUT

ಐಪಿಎಲ್​ನಲ್ಲಿ ಆಡ್ತಿರೋ 10 ಫ್ರಾಂಚೈಸಿಗಳಲ್ಲೂ ಸ್ಟಾರ್ ಆಟಗಾರರ ದಂಡೇ ಇದೆ. ಕೋಟಿ ಕೋಟಿಗಳ ಲೆಕ್ಕದಲ್ಲಿ ಸಂಭಾವನೆಯನ್ನೂ ಜೇಬಿಸಿಗಿಳಿಸಿಕೊಳ್ತಾರೆ. ಇದ್ರಲ್ಲಿ ಒಂದಷ್ಟು ಆಟಗಾರರು ಕಾಸಿಗೆ ತಕ್ಕಂತೆ ಪರ್ಫಾಮೆನ್ಸ್ ಕೊಟ್ಟಿದ್ದಾರೆ. ಬಟ್ ಇನ್ನೂ ಕೆಲವ್ರು ಕೊಟ್ಟ ಕಾಸಿಗೆ ದಂಡ ಎನ್ನುವಂತಿದ್ದಾರೆ. ಸ್ಟಾರ್ ಪ್ಲೇಯರ್ಸ್ ಎನಿಸಿಕೊಂಡವ್ರೇ ಪಲ್ಟಿ ಹೊಡೀತಿದ್ದಾರೆ.

ದುಬಾರಿ ದುಡ್ಡು.. ತಂಡಕ್ಕೆ ಭಾರ!

ಆಟಗಾರ                                         ತಂಡ                  ಸಂಭಾವನೆ                     ರನ್ಸ್

ರಿಷಭ್ ಪಂತ್                                 ಲಕ್ನೋ                ₹27 ಕೋಟಿ                   204

ಸೂರ್ಯಕುಮಾರ್ ಯಾದವ್      ಮುಂಬೈ                ₹16.35 ಕೋಟಿ              195

ಕ್ಯಾಮರೋನ್ ಗ್ರೀನ್                      ಕೊಲ್ಕತ್ತಾ               ₹25.20 ಕೋಟಿ              199

ನಿಕೋಲಸ್ ಪೂರನ್                      ಲಕ್ನೋ                    ₹21 ಕೋಟಿ                  145

ಹಾರ್ದಿಕ್ ಪಾಂಡ್ಯ                          ಮುಂಬೈ                ₹16.35 ಕೋಟಿ              146

ರುತುರಾಜ್ ಗಾಯಕ್ವಾಡ್                    ಚೆನ್ನೈ                   ₹18 ಕೋಟಿ                 245

ರಿಯಾನ್ ಪರಾಗ್                              ರಾಜಸ್ಥಾನ               ₹14 ಕೋಟಿ                 207

ಹೀಗೆ ಸೀಸನ್​ವೊಂದಕ್ಕೆ ಕೋಟಿ ಕೋಟಿ ಸಂಭಾವನೆ ಪಡೆಯೋರು ಆನ್​ಫೀಲ್ಡ್​ನಲ್ಲಿ ಮಾತ್ರ ಸದ್ದು ಮಾಡ್ತಿಲ್ಲ. ಪ್ಲೇಯಿಂಗ್ 11ನಿಂದಲೂ ಹೊರಗಿಡೋಕೆ ಆಗ್ತಿಲ್ಲ. ಸ್ಟಾರ್ ಆಟಗಾರರ ಫೇಲ್ಯೂರ್ ಫ್ರಾಂಚೈಸಿಗಳಿಗೂ ದೊಡ್ಡ ಹೊಡೆತ ನೀಡ್ತಿದೆ. ರಿಸಲ್ಟ್​ನಲ್ಲೂ ಪರಿಣಾಮ ಬೀರ್ತಿದೆ.

Shantha Kumari