ಸತತ ಸೋಲು ತಪ್ಪಿಸುತ್ತಾ RCB – LSG ಪಂದ್ಯಕ್ಕಿರೋ ಸವಾಲುಗಳೇನು?
REVENGEಗೆ ರೆಡಿಯಾದ್ರಾ ಪಂತ್?

2026ರ ಐಪಿಎಲ್ ಸೀಸನ್ನಲ್ಲಿ ಸದ್ಯ 9 ಪಂದ್ಯಗಳನ್ನ ಆಡಿರೋ ಆರ್ಸಿಬಿಗೆ ಇನ್ನು ಲೀಗ್ ಹಂತದಲ್ಲಿ 5 ಪಂದ್ಯಗಳು ಬಾಕಿ ಇದೆ. ಈಗ 10ನೇ ಪಂದ್ಯ ಲಕ್ನೋ ಸೂಪರ್ ಜೇಂಟ್ಸ್ ವಿರುದ್ಧ ಗುರುವಾರ ಏಕನಾ ಸ್ಟೇಡಿಯಮ್ನಲ್ಲಿ ಶೆಡ್ಯೂಲ್ ಆಗಿದೆ. ಈ ಪಂದ್ಯದ ಸೋಲು ಗೆಲುವು ಎಲ್ಎಸ್ಜಿ ಪ್ಲೇ ಆಫ್ ರೇಸ್ ನಲ್ಲಿ ಉಳಿಯುತ್ತಾ ಉರುಳುತ್ತಾ ಅನ್ನೋದನ್ನ ನಿರ್ಧಾರ ಮಾಡುತ್ತೆ. ಹಾಗೇ ಬೆಂಗಳೂರಿಗಂತೂ ಮಸ್ಟ್ ವಿನ್ ಮ್ಯಾಚ್ ಆಗುತ್ತೆ.
ಇದನ್ನೂ ಓದಿ : ರೋಹಿತ್ SUPER HIT ಶೋ – ಲಕ್ನೋ ಆಟಗಾರರ ಪ್ರಾಬ್ಲಂ ಏನು?
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೇಂಟ್ಸ್ ತಂಡಗಳು ಈ ಸೀಸನ್ನ 50ನೇ ಪಂದ್ಯದಲ್ಲಿ ಮುಖಾಮುಖಿ ಆಗ್ತಾರೆ. ಒಂದ್ಕಡೆ ಸತತ ಸೋಲುಗಳಿಂದ ಕಂಗೆಟ್ಟು ಪಾಯಿಂಟ್ಸ್ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿರೋ ಲಕ್ನೋ ಪ್ಲೇಆಫ್ ಆಸೆ ಇದೆಯಾದ್ರೂ ತಲುಪೋದು ಕಷ್ಟ ಸಾಧ್ಯ. ಅಟ್ಲೀಸ್ಟ್ ಪಾಯಿಂಟ್ಸ್ ಪಟ್ಟಿಯಲ್ಲಿ ಮಿಡಲ್ ಪೊಸೀಷನ್ನಲ್ಲಿ ಎಂಡ್ ಮಾಡೋಕೆ ನೋಡ್ತಾರೆ. ಆದ್ರೆ ಆರ್ಸಿಬಿ ಪ್ಲೇಆಫ್ಗೆ ಆಲ್ಮೋಸ್ಟ್ ಹತ್ತಿರದಲ್ಲೇ ಇದ್ದು ಟಾಪ್ 1 ಅಥವಾ ಟಾಪ್ 2 ಟಾರ್ಗೆಟ್ನಲ್ಲಿ ಮುಂದಿನ ಪಂದ್ಯಗಳನ್ನ ಆಡ್ತಾರೆ. ಹೀಗಾಗಿ ಲಕ್ನೋ ವಿರುದ್ಧದ ಮ್ಯಾಚ್ ಆರ್ಸಿಬಿಗೆ ಒಂದು ರೀತಿ ಮಸ್ಟ್ ವಿನ್ ಮ್ಯಾಚ್ ಆಗುತ್ತೆ. ಹಾಗಂತ ಲಕ್ನೋ ತಂಡವನ್ನ ಅಷ್ಟು ಈಸಿಯಾಗಿ ತಗೊಳ್ಳೋಕೂ ಆಗಲ್ಲ.
ಲಕ್ನೋಗೆ ಲಗಾಮು ಹಾಕಲೇಬೇಕು!
ಟಾಪ್ 2 ಟಾರ್ಗೆಟ್ ನಲ್ಲಿರೋ ಆರ್ ಸಿಬಿಗೆ ಪ್ರತೀ ಪಂದ್ಯವೂ ಮುಖ್ಯ
9 ಪಂದ್ಯ ಆಡಿರೋ ಆರ್ ಸಿಬಿ ಬ್ಯಾಕ್ ಟು ಬ್ಯಾಕ್ ಪಂದ್ಯ ಸೋತಿಲ್ಲ
ಪಂಜಾಬ್ 13 ಅಂಕ ಪಡೆದಿದ್ರೆ ನಾಲ್ಕು ತಂಡಗಳು 12 ಅಂಕ
ಆರ್ ಸಿಬಿ ಸ್ವಲ್ಪ ಯಾಮಾರಿದ್ರೆ ಬೇರೆ ತಂಡಗಳು ಮೇಲೆ ಜಂಪ್
ಲಕ್ನೋ ಕಳಪೆ ಫಾರ್ಮ್ ನಲ್ಲಿ ಇರೋದ್ರಿಂದ ಸೋಲಿಸಲು ಅವಕಾಶ
ಮುಂಬೈ ವಿರುದ್ಧ 228 ರನ್ಸ್ ಹೊಡೆದ್ರೂ ಡಿಫೆಂಡ್ ಮಾಡುವಲ್ಲಿ ಫೇಲ್
ಈ ಪಂದ್ಯ ಲಕ್ನೋ ಸೂಪರ್ ಜೇಂಟ್ಸ್ ಪಾಲಿಗೆ ರಿವೇಂಜ್ ಮ್ಯಾಚ್
ಬೆಂಗಳೂರಲ್ಲಿ ಸೋತು ಹೋಂ ಗ್ರೌಂಡ್ ನಲ್ಲಿ ಗೆದ್ದು ಸೇಡಿನ ಗುರಿ
ಪ್ಲೇ ಆಫ್ ಸಿಗದೇ ಇದ್ರೂ ಮಿಡಲ್ ಪೊಸಿಷನ್ ನಲ್ಲಿ ಎಂಡ್ ಟಾರ್ಗೆಟ್
ಈ ಪಂದ್ಯದಲ್ಲಿ ಲಕ್ನೋ ವಿರುದ್ಧ ಆರ್ಸಿಬಿಯೇ ಗೆಲ್ಲುವಂಥ ಟೀಂ ಆಗಿ ಕಂಡ್ರೂ ಕೂಡ ಗೆಲುವು ಈಸಿಯಾಗಿ ದಕ್ಕಲ್ಲ. ಯಾಕಂದ್ರೆ ಮುಂಬೈ ವಿರುದ್ಧ 228 ರನ್ಸ್ ಹೊಡೆದಿದ್ದಾರೆ. ಈ ಸೀಸನ್ನಲ್ಲಿ ಹೈಯೆಸ್ಟ್ ರನ್ಸ್ ಅವ್ರದ್ದು. ಸೋ ಬ್ಯಾಟಿಂಗ್ ಒಂದ್ ರೇಂಜ್ಗೆ ಪಿಕಪ್ ಆಗಿದೆ. ಇನ್ನು ಬೌಲಿಂಗ್ ಕೂಡ ಚೆನ್ನಾಗಿದೆ. ಹೋಂ ಗ್ರೌಂಡ್ ಬೇರೆ. ಹೀಗಾಗಿ ಆರ್ಸಿಬಿ ಕೂಡ ಅಷ್ಟೇ ಎಚ್ಚರಿಕೆಯಿಂದ ಆಡ್ಬೇಕಾಗುತ್ತೆ. ಗುಜರಾತ್ ವಿರುದ್ಧದ ಮ್ಯಾಚಲ್ಲಿ 155 ರನ್ಗಳಿಗೆ ಆಲೌಟ್ ಆಗಿದ್ರು. ಸೋ ಓವರ್ ಕಾನ್ಫಿಡೆನ್ಸ್ ಇರ್ಬಾರ್ದು ಅಷ್ಟೇ.
ಆರ್ ಸಿಬಿ ಮ್ಯಾಚ್ ವಿನ್ನರ್ಸ್!
ವಿರಾಟ್ ಕೊಹ್ಲಿ ಬ್ಯಾಟಿಂಗ್ ಬೆನ್ನೆಲುಬು, 9 ಪಂದ್ಯಗಳಲ್ಲಿ 379 ರನ್ಸ್
ದೇವದತ್ ಪಡಿಕ್ಕಲ್ ಇದುವರೆಗೆ 9 ಪಂದ್ಯಗಳಲ್ಲಿ 282 ರನ್ಸ್
ರಜತ್ ಪಟಿದಾರ್ 257 ರನ್ ಗಳಿಸಿ 24 ಸಿಕ್ಸರ್ ಬಾರಿಸಿದ್ದಾರೆ
ಟಿಮ್ ಡೇವಿಡ್ ಫಿನಿಷರ್ ಪಾತ್ರ 8 ಇನ್ನಿಂಗ್ಸ್ ಗಳಲ್ಲಿ 192 ರನ್
ಭುವನೇಶ್ವರ್ ಕುಮಾರ್ 9 ಪಂದ್ಯಗಳಲ್ಲಿ 17 ವಿಕೆಟ್ ಗಳನ್ನು ಗಳಿಸಿದ್ದಾರೆ
ಜೋಶ್ ಹ್ಯಾಜಲ್‌ವುಡ್ 6 ಪಂದ್ಯಗಳಲ್ಲಿ 8 ವಿಕೆಟ್‌ಗಳನ್ನು ಪಡೆದಿದ್ದಾರೆ
ಕೃನಾಲ್ ಪಾಂಡ್ಯ 9, ಸುಯಾಶ್ ಶರ್ಮಾ 7 ವಿಕೆಟ್ ಗಳನ್ನು ಪಡೆದು ಸದ್ದು

ನೋಡಿರಿ

