ಲವ ಮತ್ತು ಕುಶ ವಯನಾಡ್ನ ಅಳಿಯಂದಿರು – ಏನಿದು ಚೆಟ್ಟಿ ಸಮುದಾಯದ ರಾಮಾಯಣದ ಕಥೆ?

vನಮ್ಮ ಈ ಭಾರತದ ನಾಡು ಸಂಸ್ಕೃತಿಯ ತವರು. ಇಲ್ಲಿ ಕಲೆಯ ಸಾಕಷ್ಟು ಕಥೆಗಳು ನಮ್ಮನ್ನ ಸೆಳೆಯುತ್ತೆ. ಈ ನೆಲದ ಬುಡಕಟ್ಟು ಸಮುದಾಯಗಳೂ ಸೇರಿದಂತೆ ಒಂದೊಂದು ಸಮುದಾಯಗಳಲ್ಲಿ ರಾಮಾಯಣದ ಬಗ್ಗೆ ವಿಶಿಷ್ಟ ಮತ್ತು ಅಪರೂಪದ ಕಥೆಗಳಿವೆ. ಜನಪದರು ತಮ್ಮ ಕಲ್ಪನೆಗೆ ನಿಲುಕಿದಂತೆ ರಾಮಾಯಣದ ಕಥೆಗೆ ಹೊಸ ಬಣ್ಣ ಹಚ್ಚಿದ್ದಾರೆ. ಆ ಪೈಕಿ ಕೇರಳದ ವಯನಾಡ್ ಜಿಲ್ಲೆಯ ದಲಿತ ಸಮುದಾಯಗಳಲ್ಲಿ ಒಂದಾದ ವಯನಾಡನ್ ಚೆಟ್ಟಿ ಸಮುದಾಯದಲ್ಲಿ ಕಂಡುಬರುವ ರಾಮಾಯಣದ ಮೌಖಿಕ ಕಥೆ ಕೂಡ ಬಲು ಅಪರೂಪದ್ದು.
ಕೇರಳದ ವಯನಾಡ್ ಜಿಲ್ಲೆಯ ವಯನಾಡನ್ ಚೆಟ್ಟಿ ಸಮುದಾಯದ ಜನರು ರಾಮಾಯಣದ ಸ್ಥಳೀಯ ಮೌಖಿಕ ಜಾನಪದ ಕಥೆಗಳನ್ನು ನಂಬುತ್ತಾರೆ ಮತ್ತು ಗೌರವಿಸುತ್ತಾರೆ. ಅದರ ಜೊತೆಜೊತೆಗೆ ಅವರ ಸಾಂಸ್ಕೃತಿಕ ಪರಂಪರೆಯ ಬಗ್ಗೆ ಹೆಮ್ಮೆಪಡುತ್ತಾರೆ. ಹೆಸರಾಂತ ಇತಿಹಾಸಕಾರ ರಾವ್ ಬಹದ್ದೂರ್ ಗೋಪಾಲನ್ ನಾಯರ್ ಅವರು ತಮಿಳುನಾಡು ಮತ್ತು ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ತಮ್ಮ ವಂಶಾವಳಿಯ ಬೇರನ್ನು ಹರಡಿಸಿದವರು. ಅವರು ತಮ್ಮ ಪೂರ್ವಜರ ನಂಬಿಕೆಯಿಂದ ಬಂದಂತಹ ರಾಮಾಯಣದ ಮೌಖಿಕ ಕಥೆಗಳನ್ನು ವಯನಾಡಿನ ಮಣ್ಣಿನಲ್ಲಿ ದಾಖಲಿಸಿಟ್ಟು ಹೋಗಿದ್ದಾರೆ.
ಆದಿ ರಾಮಾಯಣದಂತೆಯೇ, ವಯನಾಡನ್ ಚೆಟ್ಟಿ ರಾಮಾಯಣದಲ್ಲಿಯೂ ಸಹ ಸೀತೆಯೇ ನಾಯಕಿ. ಇಲ್ಲಿಯ ಅವಧಿಯು ನಿಖರವಾಗಿ ತ್ರೇತಾಯುಗವಾಗಿದ್ದರೂ ಸಹ, ಒಂದೊಂದು ಘಟನೆಗಳು ವಯನಾಡ್ನ ದೂರದ ಹುಲ್ಲುಗಾವಲುಗಳಲ್ಲಿ ಸಂಭವಿಸುತ್ತವೆ, ಸಮಯ ಮತ್ತು ಜನಪದರ ಮೌಖಿಕ ಸಾಹಿತ್ಯದಲ್ಲಿ ಉಲ್ಲೇಖವಾದ ಸ್ಥಳದ ನಿಖರತೆಯೊಂದಿಗೆ, ವಯನಾಡಿನ ಹಳ್ಳಿಗಳನ್ನು ಚೆಟ್ಟಿಗಳ ರಾಮಾಯಣ ಕಲ್ಪನೆಗಳಲ್ಲಿ ಅಳವಡಿಸಲಾಗಿದೆ.

ನೋಡಿರಿ

