ರೋಹಿತ್ SUPER HIT ಶೋ – ಲಕ್ನೋ ಆಟಗಾರರ ಪ್ರಾಬ್ಲಂ ಏನು?
LSGಗೂ ಗೇಟ್ ಪಾಸ್ ಕೊಟ್ಟ MI

ಲಕ್ನೋ ಸೂಪರ್ ಜೇಂಟ್ಸ್ ತಂಡದಲ್ಲಿ ಸ್ಟಾರ್ ಆಟಗಾರರ ದಂಡೇ ಇದೆ. ಆದ್ರೆ ಪರ್ಫಾಮೆನ್ಸ್ ಅಂತಾ ಬಂದಾಗ ಬ್ಯಾಟರ್ಸ್ ಆಡಿದ್ರೆ ಬೌಲರ್ಸ್ ಸಾಥ್ ಕೊಡಲ್ಲ. ಬೌಲಿಂಗ್ ಚೆನ್ನಾಗಿದ್ರೆ ಬ್ಯಾಟರ್ಸ್ ಆಡಲ್ಲ. ಈಗ ಪ್ಲೇ ಆಫ್ ಚಾನ್ಸ್ನೂ ಕೂಡ ಕಳ್ಕೊಂಡಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ಸೋಲು ದೊಡ್ಡ ಹೊಡೆತ ನೀಡಿದೆ. ಒಂದ್ಕಡೆ ಮುಂಬೈ ಗೆದ್ದು ಟ್ರ್ಯಾಕ್ಗೆ ಬಂದಿದ್ರೆ ಅತ್ತ ಲಕ್ನೋ ಮತ್ತೆ ಮಕಾಡೆ ಮಲಗಿದೆ.
ಇದನ್ನೂ ಓದಿ : ಸಾಲ್ಟ್ ಇಲ್ಲ.. ಬೆಥೆಲ್ ಸಪ್ಪೆ – RCBಗೆ ಹೊರೆಯಾಗುತ್ತಾ ಇಂಜುರಿ?
ವಾಂಖೆಡೆ ಸ್ಟೇಡಿಯಮ್ನಲ್ಲಿ ನಡೆದ ಲಕ್ನೋ ಮತ್ತು ಮುಂಬೈ ನಡುವಿನ ಪಂದ್ಯದಲ್ಲಿ ಮುಂಬೈ ಗೆದ್ದು ಬೀಗಿದೆ. ಐಪಿಎಲ್ ಇತಿಹಾಸದಲ್ಲಿ ತಮ್ಮ ಹೈಯೆಸ್ಟ್ ಚೇಸಿಂಗ್ ದಾಖಲೆ ಮಾಡಿದ್ದಾರೆ. ರಿಕಲ್ಟನ್ ಮತ್ತು ರೋಹಿತ್ ಶರ್ಮಾ ಅಬ್ಬರದ ಬ್ಯಾಟಿಂಗ್ನಿಂದ ಮುಂಬೈ ಕಂ ಬ್ಯಾಕ್ ಮಾಡಿದೆ. ಸದ್ಯ ಈ ಸೀಸನ್ನಲ್ಲಿ ಮುಂಬೈಗೆ ಇದು ಮೂರನೇ ಗೆಲುವಾಗಿದ್ರೆ ಲಕ್ನೋಗೆ 7ನೇ ಸೋಲಾಗಿದೆ. ಅಲ್ಲಿಗೆ ಆಲ್ಮೋಸ್ಟ್ ಎರಡೂ ತಂಡಗಳ ಪ್ಲೇ ಆಫ್ ಕನಸು ಭಗ್ನವಾಗಿದೆ. ಮುಂಬೈ ತಾನು ಗೆಲ್ಲೋದ್ರ ಮೂಲಕ ಲಕ್ನೋ ತಂಡವನ್ನೂ ಪ್ಲೇ ಆಫ್ ರೇಸ್ ನಿಂದ ಗೇಟ್ ಪಾಸ್ ಕೊಟ್ಟಿದೆ. ಇನ್ನು ನಿನ್ನೆ ಮ್ಯಾಚಲ್ಲಿ ಫಸ್ಟ್ ಬ್ಯಾಟಿಂಗ್ ಮಾಡಿದ ಲಕ್ನೋಗೆ ಒಳ್ಳೆ ಓಪನಿಂಗ್ ಏನು ಸಿಕ್ಕಿರಲಿಲ್ಲ. ಜೋಶ್ ಇಂಗ್ಲಿಸ್ 15 ರನ್ಗಳಿಗೆ ಔಟ್ ಆಗಿದ್ರು. ಆದ್ರೆ ನಿಕೋಲಸ್ ಪೂರನ್ 21 ಬಾಲಲ್ಲೇ 63 ರನ್ಸ್ ಕಲೆ ಹಾಕಿದ್ರು. ಮಾರ್ಷ್ 44 ರನ್ಸ್ ಗಳಿಸಿದ್ರು. ಅಂತಿಮವಾಗಿ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 228 ರನ್ಗಳನ್ನ ಕಲೆ ಹಾಕಿದ್ರು. ಈ ಗುರಿ ಬೆನ್ನಟ್ಟಿದ ಮುಂಬೈಗೆ ರೋಹಿತ್ ಶರ್ಮಾ ಮತ್ತು ರಯಾನ್ ರಿಕಲ್ಟನ್ ಒಳ್ಳೆ ಜೊತೆಯಾಟವಾಡಿದ್ರು. 10.4 ಓವರ್‌ಗಳಲ್ಲೇ 143 ರನ್‌ಗಳ ಜೊತೆಯಾಟವಾಡಿದ್ರು. ರಿಕಲ್ಟನ್ 83 ರನ್ಸ್ ಮತ್ತು ರೋಹಿತ್ 84 ರನ್ ಬಾರಿಸಿ ಔಟಾದರು. ನಂತರ ಬಂದ ತಿಲಕ್ ಮತ್ತು ಸೂರ್ಯ ಇಂಪ್ಯಾಪ್ಟ್ ಮಾಡ್ಲಿಲ್ಲ. 5ನೇ ಸ್ಲಾಟಲ್ಲಿ ಬಂದ ನಮನ್ ಧೀರ್ 12 ಬಾಲಲ್ಲೇ 23 ರನ್ ಬಾರಿಸಿ, ವಿಲ್ ಜಾಕ್ಸ್ 4 ಬಾಲಲ್ಲೇ 10 ರನ್ ಸಿಡಿಸಿ ಗೆಲುವಿನ ದಡ ಸೇರಿಸಿದ್ರು. ಇಂಟ್ರೆಸ್ಟಿಂಗ್ ಏನಂದ್ರೆ ಇಲ್ಲಿ ಮುಂಬೈ ಗೆಲ್ಲೋದ್ರ ಮೂಲಕ ಲಕ್ನೋ ತಂಡವನ್ನೂ ಪ್ಲೇ ಆಫ್ನಿಂದ ಹೊರಹಾಕಿದೆ.
ಪ್ಲೇ ಆಫ್ ರೇಸ್ ನಿಂದ ಹೊರಬಿದ್ದ ಮುಂಬೈ ಮತ್ತು ಲಕ್ನೋ!
ಪ್ರಸ್ತುತ ಪಾಯಿಂಟ್ಸ್ ಪಟ್ಟಿಯಲ್ಲಿ ಮುಂಬೈ 9ನೇ ಸ್ಥಾನದಲ್ಲಿದ್ರೆ ಲಕ್ನೋ 10ನೇ ಸ್ಥಾನದಲ್ಲಿವೆ. ಮುಂಬೈ 10 ಪಂದ್ಯ ಆಡಿ 3ರಲ್ಲಿ ಗೆದ್ದಿದೆ. ಇನ್ನು ನಾಲ್ಕು ಪಂದ್ಯ ಬಾಕಿ ಇವೆ. ಅತ್ತ ಲಕ್ನೋ 9ರಲ್ಲಿ 2 ಅಷ್ಟೇ ಗೆದ್ದಿದೆ. 5 ಪಂದ್ಯ ಬಾಕಿ ಇವೆ. ಅಲ್ಲಿಗೆ ಎರಡೂ ತಂಡಗಳು ಮುಂದಿನ ಎಲ್ಲಾ ಪಂದ್ಯಗಳನ್ನ ಗೆದ್ರೂ 14 ಅಂಕ ಅಷ್ಟೇ ಆಗುತ್ತೆ.ಅ ಲ್ದೇ ಮೈನಸ್ ನೆಟ್ ರನ್ ರೇಟ್ ಇರೋದ್ರಿಂದ ಪ್ಲೇಆಫ್ಗೆ ಅವಕಾಶ ಪಡೆಯೋದು ಕಷ್ಟ ಇದೆ. ಒಟ್ನಲ್ಲಿ 10 ತಂಡಗಳ ಪ್ಲೇ ಆಫ್ ರೇಸ್ ಈಗ 8ಕ್ಕೆ ಬಂದಿದೆ. ಲಕ್ನೋ ಮತ್ತು ಮುಂಬೈ ಹೊರಬೀಳೋದು ಪಕ್ಕಾ ಆಗಿದೆ. ಆದ್ರೆ ಮುಂಬೈ ಇಂಡಿಯನ್ಸ್ನಲ್ಲಿ ರೋಹಿತ್ ಕಂ ಬ್ಯಾಕ್ ಮತ್ತು ಅಬ್ಬರದ ಬ್ಯಾಟಿಂಗ್ ಅಭಿಮಾನಿಗಳಿಗಂತೂ ಖುಷಿ ಕೊಟ್ಟಿದೆ.

ನೋಡಿರಿ

