CSK ಪರ ತಲಾ ಆಡೋದೇ ಇಲ್ವಾ? – ದೆಹಲಿ ವಿರುದ್ಧದ ಪಂದ್ಯದಲ್ಲೂ ಧೋನಿ OUT

ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಸೀಸನ್‌ನಲ್ಲಿ ತೋರಿಸಿರುವ ಪ್ರದರ್ಶನ ಅಷ್ಟಕಷ್ಟೇ. ತಂಡ ಗೆಲ್ಲುವ ಕಡೆ ಗಮನ ಹರಿಸುವುದಕ್ಕಿಂತ ತಂಡದಲ್ಲಿರುವ ಇಂಜುರಿ ಸಮಸ್ಯೆ, ಕಳಪೆ ಪ್ರದರ್ಶನವೇ ದೊಡ್ಡ ತಲೆನೋವಾಗಿದೆ. ಇದರ ಮಧ್ಯೆ ತಂಡದ ಸ್ಟಾರ್ ಆಟಗಾರ ಧೋನಿ ಅಲಭ್ಯರಾಗಿರುವುದು ಕೂಡಾ ತಂಡಕ್ಕೆ ಹೊಡೆತ ನೀಡಿದೆ.
ಇದನ್ನೂ ಓದಿ:ಪ್ಲೇ ಆಫ್ ರೇಸ್.. RCB ಸೇಫ್ – TOP & MIDನಲ್ಲಿ ಪ್ಲಸ್ ಏನು?
ಚೆನ್ನೈ ತಂಡದ ಸ್ಟಾರ್ ಆಟಗಾರ ಎಂಎಸ್ ಧೋನಿ ಇನ್ನೂ ಕೂಡಾ ಕಣಕ್ಕಿಳಿದಿಲ್ಲ. ಇದೀಗ ದೆಹಲಿ ವಿರುದ್ಧದ ಪಂದ್ಯದಿಂದಲೂ ಧೋನಿ ಹೊರಗುಳಿದಿರುವುದು ಅಭಿಮಾನಿಗಳಿಗೆ ನಿರಾಶೆ ಮೂಡಿಸಿದೆ. ಮಂಗಳವಾರ ಸಿಎಸ್ಕೆ ತಂಡಕ್ಕೆ ಡೆಲ್ಲಿ ಎದುರಾಳಿ. ಈ ಪಂದ್ಯದಲ್ಲಾದರೂ ಎಂಎಸ್ ಧೋನಿ ಸಿಎಸ್ಕೆ ಪರ ಕಣಕ್ಕಿಳಿಯಬಹುದು ಎಂದು ಅಂದಾಜಿಸಲಾಗಿತ್ತು. ಇದೀಗ ಡಿಸಿ ವಿರುದ್ಧದ ಪಂದ್ಯದಲ್ಲೂ ಧೋನಿ ಆಡುತ್ತಿಲ್ಲ. ಗಾಯದಿಂದಾಗಿ ಈ ಅವೃತ್ತಿಯಲ್ಲಿ ಒಂದೇ ಒಂದು ಪಂದ್ಯವನ್ನಾಡದ ಧೋನಿ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧವೂ ಆಡುವುದಿಲ್ಲ. ಧೋನಿ ತಂಡದೊಂದಿಗೆ ದೆಹಲಿಗೆ ಪ್ರಯಾಣ ಬೆಳೆಸಿಲ್ಲ ಎಂದು ವರದಿಯಾಗಿದೆ.
ಮೇ 5 ರ ಮಂಗಳವಾರ ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯಲಿದೆ. ಈ ಪಂದ್ಯಕ್ಕಾಗಿ ಇಡೀ ಚೆನ್ನೈ ತಂಡ ದೆಹಲಿಗೆ ಆಗಮಿಸಿದೆ. ಆದರೆ ಕ್ರಿಕ್‌ಬಜ್ ವರದಿಯ ಪ್ರಕಾರ, ಎಂಎಸ್ ಧೋನಿ ಈ ಬಾರಿಯೂ ತಂಡದೊಂದಿಗೆ ಪ್ರಯಾಣಿಸಲಿಲ್ಲ. ವರದಿಗಳ ಪ್ರಕಾರ, ಧೋನಿ ಇನ್ನೂ ಚೆನ್ನೈನಲ್ಲಿದ್ದು, ಚೇತರಿಕೆ ಕಾಣುತ್ತಿದ್ದಾರೆ. ಐಪಿಎಲ್ ಆರಂಭಕ್ಕೂ ಮುನ್ನವೇ ಗಾಯಕ್ಕೆ ತುತ್ತಾದ ಧೋನಿ, ಮೂರ್ನಾಲ್ಕು ಪಂದ್ಯಗಳನ್ನು ಆಡುವುದಿಲ್ಲ ಎಂದು ಆರಂಭದಲ್ಲಿ ಹೇಳಲಾಗಿತ್ತು. ಆದರೆ ಸಿಎಸ್ಕೆ ಇದುವರೆಗೆ 9 ಪಂದ್ಯಗಳನ್ನಾಡಿದೆ. ಹೀಗಿರುವಾಗ ಉಳಿದ ಪಂದ್ಯಗಳಲ್ಲಿ ಧೋನಿ ಆಡುವುದು ಅನುಮಾನವಾಗಿದೆ. ಸಿಎಸ್ಕೆ ಪ್ರದರ್ಶನವನ್ನು ನೋಡಿದರೆ ಅದು ಪ್ಲೇಆಫ್ಗೇರುವುದು ಅನುಮಾನವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಧೋನಿ ಆಟವನ್ನು ಕಣ್ತುಂಬಿಕೊಳ್ಳಲು ಕಾದುಕುಳಿತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ.

ನೋಡಿರಿ

