ಮುಂಬೈ ಅಬ್ಬರಕ್ಕೆ ಲಕ್ ಕಳೆದುಕೊಂಡ ಲಕ್ನೋ – 229 ರನ್ ಚೇಸ್ ಮಾಡಿ ಗೆದ್ದ ಮುಂಬೈ

ಮುಂಬೈ ಅಬ್ಬರಕ್ಕೆ ಲಕ್ ಕಳೆದುಕೊಂಡ ಲಕ್ನೋ – 229 ರನ್ ಚೇಸ್ ಮಾಡಿ ಗೆದ್ದ ಮುಂಬೈ

ಮಾಡು ಇಲ್ಲವೇ ಮಡಿ ಪಂದ್ಯವಾಗಿತ್ತು. ಲಕ್ನೋ ಮತ್ತು ಮುಂಬೈ ತಂಡಗಳಿಗೆ ಪಂದ್ಯ ಮಹತ್ವದ್ದಾಗಿತ್ತು. ಹೀಗಾಗಿಯೇ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಟೀಮ್ 228 ಸ್ಕೋರ್ ಕಲೆ ಹಾಕಿ ಗೆಲ್ಲುವ ಉತ್ಸಾಹದಲ್ಲಿಯೇ ಇತ್ತು. ಆದರೆ, ರಿಕಲ್ಟನ್ ಮತ್ತು ರೋಹಿತ್ ಅಬ್ಬರಕ್ಕೆ ಲಕ್ನೋ 10ನೇ ಸ್ಥಾನದಲ್ಲಿಯೇ ಉಳಿದುಕೊಂಡಿತು.

ಇದನ್ನೂ ಓದಿ:PBKS ಪಂಕ್ಚರ್.. SRH ಶೇಪ್ ಔಟ್ – ಗುಜರಾತ್ ಗೇಮ್ ಪ್ಲ್ಯಾನ್ ಸಕ್ಸಸ್

ವಾಂಖೆಡೆ ಮೈದಾನದಲ್ಲಿ ಲಖನೌ ಸೂಪರ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ಮುಂಬೈ ಗೆದ್ದು ಬೀಗಿದೆ. ತವರಿನಲ್ಲಿ ಆದ ಅವಮಾನವನ್ನು ತನ್ನ ಬ್ಯಾಟಿಂಗ್ ಶಕ್ತಿ ಮೂಲಕ, ಅಭಿಮಾನಿಗಳ ಅಭಿಮಾನವನ್ನು ಮತ್ತೆ ಪಡೆದಿದೆ. ಹಿಟ್‌ಮ್ಯಾನ್ ಅಬ್ಬರಕ್ಕೆ ಮುಂಬೈ ಫ್ಯಾನ್ಸ್ ಜೋಶ್ ಎದ್ದು ಕಾಣುತ್ತಿತ್ತು. ತವರಿನಲ್ಲಿ ಟಾಸ್​ ಗೆದ್ದ ಮುಂಬೈ ತಂಡ ಲಖನೌ ತಂಡಕ್ಕೆ ಬ್ಯಾಟಿಂಗ್ ನೀಡಿತು. ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಎಲ್​ಎಸ್​ಜಿ ತಂಡ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 228 ರನ್​ಗಳಿಸಿತ್ತು. ನಿಕೋಲಸ್ ಪೂರನ್ 21 ಎಸೆತಗಳಲ್ಲಿ 1 ಬೌಂಡರಿ, 8 ಸಿಕ್ಸರ್​ಗಳ ಸಹಿತ 63 ರನ್ ಗಳಿಸಿ ತನ್ನ ಬ್ಯಾಟ್‌ನಲ್ಲೂ ರನ್ ಗಳಿಸಬಹುದು ಅಂತಾ ಕೊನೆಗೂ ತೋರಿಸಿಕೊಟ್ಟರು.  ಮಿಚೆಲ್ ಮಾರ್ಷ್ 25 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್​ಗಳ ಸಹಿತ 44 ರನ್​ಗಳಿಸಿ ಮಿಂಚಿದರು. ಐಡೆನ್ ಮಾರ್ಕ್ರಮ್ 25 ಎಸೆತಗಳಲ್ಲಿ 31, ಹಿಮ್ಮತ್ ಸಿಂಗ್ 31 ಎಸೆತಗಳಲ್ಲಿ ತಲಾ 2 ಬೌಂಡರಿ, 2 ಸಿಕ್ಸರ್​ಗಳ ಸಹಿತ ಅಜೇಯ 40 ರನ್​ಗಳಿಸಿ ಲಖನೌ ತಂಡ 228 ರನ್​ಗಳಿಸಿದರು.

229 ರನ್ ಗಳ ಟಾರ್ಗೆಟ್ ಪಡೆದ ಮುಂಬೈ ಆರಂಭದಲ್ಲೇ ಹೊಡಿಬಡಿ ಆಟಕ್ಕೆ ಮುಂದಾಯಿತು. ರೋಹಿತ್ ಶರ್ಮಾ ವಾಂಖೆಡೆಯ ಮೂಲೆ ಮೂಲೆಗೂ ಸಿಕ್ಸ್, ಫೋರ್ ಹೊಡೆದು ಫ್ಯಾನ್ಸ್‌ಗೆ ಜೋಶ್ ನೀಡಿದರು. ರೋಹಿತ್ ಶರ್ಮಾ 84 ರನ್ ಸಿಡಿಸಿದರು. ಜೊತೆಗೆ ರಯಾನ್ ರಿಕಲ್ಟನ್ ಕೂಡಾ ಭರ್ಜರಿ 83 ರನ್ ಹೊಡೆದರು. ತಿಲಕ್ ವರ್ಮಾ 13 ಎಸೆತಗಳನ್ನಾಡಿ 11 ರನ್​ಗಳಿಸಿ ಸಿದ್ಧಾರ್ಥ್​ಗೆ ಎರಡನೇ ಬಲಿಯಾದರು. ನಾಯಕ ಸೂರ್ಯಕುಮಾರ್ ಯಾದವ್ 7 ಎಸೆತಗಳಲ್ಲಿ 12 ರನ್​ಗಳಿಸಿ ಶಮಿ ಬೌಲಿಂಗ್​​ನಲ್ಲಿ ನಿಕೋಲಸ್​ ಪೂರನ್​ಗೆ ಕ್ಯಾಚ್​ ನೀಡಿ ಔಟ್ ಆದರು. ಆದರೆ ನಮನ್ ಧೀರ್ 12 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್​ ಸಹಿತ ಅಜೇಯ 23 ಹಾಗೂ ವಿಲ್ ಜಾಕ್ಸ್​ 4 ಎಸೆತಗಳಲ್ಲಿ 1 ಬೌಂಡರಿ ಸಹಿತ ಅಜೇಯ 10 ರನ್ ಗಳಿಸಿ ತಂಡವನ್ನ ಗೆಲುವಿನ ಗಡಿ ದಾಟಿಸಿದರು.

ಮುಂಬೈ ತಂಡ ಇನ್ನೂ 8 ಎಸೆತಗಳಿರುವಂತೆಯೇ ಯಶಸ್ವಿಯಾಗಿ ಗುರಿ ಬೆನ್ನಟ್ಟಿ ಗೆಲುವು ಸಾಧಿಸಿತು. ಇದು ಮುಂಬೈ ತಂಡಕ್ಕೆ ಟೂರ್ನಿಯಲ್ಲಿ ಸಿಕ್ಕ 3ನೇ ಗೆಲುವಾಗಿದೆ.

Sulekha